ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರದ ಕೋವಿಡ್ ಪ್ಯಾನೆಲ್ ತೊರೆದ ವೈರಾಣು ಶಾಸ್ತ್ರಜ್ಞ ಶಾಹಿದ್ ಜಮೀಲ್

|
Google Oneindia Kannada News

ನವದೆಹಲಿ, ಮೇ 17: ಪ್ರಸಿದ್ಧ ವೈರಾಣು ಶಾಸ್ತ್ರಜ್ಞ ಶಾಹಿದ್ ಜಮೀಲ್ ಅವರು ಕೇಂದ್ರದ ಕೋವಿಡ್ ಪ್ಯಾನೆಲ್ ತೊರೆದು ಹೊರಬಂದಿದ್ದಾರೆ.

ಕೊರೊನಾ ರೂಪಾಂತರಿ ಸೋಂಕು ಪತ್ತೆ ಹಚ್ಚುವ ಹಾಗೂ ಸಂಶೋಧಿಸುವ ಕಾರ್ಯವನ್ನು ಈ ಕೋವಿಡ್ 19 ಜಿನೋಮ್ ಅಧ್ಯಯನ ಕೇಂದ್ರ ನಡೆಸುತ್ತಿತ್ತು.

ಕೋವಿಡ್ ನಂತರದ ಸೋಂಕನ್ನು ಬ್ಲ್ಯಾಕ್‌ ಫಂಗಸ್ ಎಂದು ತಪ್ಪಾಗಿ ಕರೆಯಲಾಗುತ್ತಿದೆ: ತಜ್ಞರುಕೋವಿಡ್ ನಂತರದ ಸೋಂಕನ್ನು ಬ್ಲ್ಯಾಕ್‌ ಫಂಗಸ್ ಎಂದು ತಪ್ಪಾಗಿ ಕರೆಯಲಾಗುತ್ತಿದೆ: ತಜ್ಞರು

ವೈರಾಣು ವಂಶವಾಹಿ, ರೂಪಾಂತರಿ ವೈರಸ್ ಕುರಿತು ಅಧ್ಯಯನ ಹಾಗೂ ಸಂಶೋಧನೆ ನಡೆಸಲು ಇಂಡಿಯನ್ ಸಾರ್ಸ್ ಕೋವ್ 2 ಜಿನೋಮಿಕ್ಸ್ ಒಕ್ಕೂಟವನ್ನು ಸರ್ಕಾರ ರಚನೆ ಮಾಡಿತ್ತು. ಈ ತಂಡದಲ್ಲಿ ಶಾಹೀದ್ ಪ್ರಮುಖ ಸದಸ್ಯರಾಗಿದ್ದರು.

Top Virologist Quits Covid-19 Panel After Airing Differences With Govt

ಸರ್ಕಾರವು ಕೊರೊನಾ ಸೋಂಕನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಹೇಳುವ ಮೂಲಕ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ಅಧ್ಯಯನ ಕೇಂದ್ರದ ಸದಸ್ಯರು ಹಾಗೂ ಸರ್ಕಾರದ ಒತ್ತಡವೇ ರಾಜೀನಾಮೆಗೆ ಕಾರಣ ಎಂದು ಹೇಳಲಾಗುತ್ತಿದೆ. ಅಶೋಕ ವಿಶ್ವವಿದ್ಯಾಲಯದ ತ್ರಿವೇದಿ ಸ್ಕೂಲ್ ಆಫ್ ಬಯೋಸೈನ್ಸ್‌ನ ನಿರ್ದೇಶಕರಾಗಿರುವ ಜಮೀಲ್ ಇತ್ತೀಚೆಗಷ್ಟೇ ಸಾಂಕ್ರಾಮಿಕ ರೋಗ ಹಾಗೂ ಸರ್ಕಾರ ನಿರ್ವಹಿಸುತ್ತಿರುವ ರೀತಿ ಕುರಿತು ಟೀಕೆ ವ್ಯಕ್ತಪಡಿಸಿದ್ದರು.

ಕೋವಿಡ್-19 ಏರಿಕೆಯಾಗುತ್ತಿರುವ ಸಂದರ್ಭದಲ್ಲಿ ವೈರಾಣು ಶಾಸ್ತ್ರಜ್ಞ ಶಾಹಿದ್ ಜಮೀಲ್ ರಾಜೀನಾಮೆ ನೀಡಿರುವುದು ಕೇಂದ್ರಕ್ಕೆ ತೀವ್ರ ಮುಜುಗರ ಉಂಟುಮಾಡಿದೆ.

Recommended Video

ಜೀವ ಇರೋ ವರೆಗೂ ಹೋರಾಟ ಮಾಡ್ತೀವಿ, ಮಹಾಯುದ್ಧ ಪ್ರಾರಂಭ ಮಾಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ | Oneindia Kannada

ಕೋವಿಡ್-19 ವೈರಾಣುಗಳ ವಂಶವಾಹಿ ಹಾಗೂ ರೂಪಾಂತರಗಳನ್ನು ಅಧ್ಯಯನ ಮಾಡುವ ಸಂಬಂಧ ಕಳೆದ ವರ್ಷ ಡಿಸೆಂಬರ್ ನಲ್ಲಿ ಕೇಂದ್ರ ಸರ್ಕಾರ ಇಂಡಿಯನ್ SARS-CoV-2 ಜಿನೋಮಿಕ್ಸ್ ಒಕ್ಕೂಟ (INSACOG)ವನ್ನು ರಚಿಸಿತ್ತು.

English summary
A top Indian virologist has resigned from a forum of scientific advisers set up by the government to detect variants of the coronavirus, he told Reuters on Sunday, weeks after questioning the authorities' handling of the pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X