ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆ ವಿಷಯದಲ್ಲಿ ಭಾರತ ಮಾಡಿದ ಎಡವಟ್ಟೇನು?; ಸೋಂಕು ತಜ್ಞರ ಉತ್ತರ

|
Google Oneindia Kannada News

ನವದೆಹಲಿ, ಮೇ 24: ಕೊರೊನಾ ಎರಡನೇ ಅಲೆ ಆರ್ಭಟ ಹೆಚ್ಚಾಗುತ್ತಿದ್ದಂತೆ ದೇಶದಲ್ಲಿ ಕೊರೊನಾ ಲಸಿಕಾ ಅಭಿಯಾನವನ್ನು ಚುರುಕುಗೊಳಿಸಲಾಯಿತು. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ಪ್ರಾರಂಭಿಸಲಾಯಿತು. ಆದರೆ ಹೀಗೆ ಮಾಡುತ್ತಿದ್ದಂತೆ ಲಸಿಕೆಗಳಿಗೆ ತೀವ್ರ ಅಭಾವ ಎದುರಾಗಿ ಹಲವು ರಾಜ್ಯಗಳಲ್ಲಿ ಲಸಿಕೆ ಕಾರ್ಯಕ್ರಮವನ್ನು ಮುಂದೂಡಲಾಗುತ್ತಿದೆ.

ಆದರೆ ದೇಶದಲ್ಲಿ ಲಸಿಕೆ ಅಭಾವಕ್ಕೆ ಕೇಂದ್ರ ಸರ್ಕಾರ ಹೊಣೆ ಎಂದು ಸೂಕ್ಷ್ಮ ರೋಗಾಣು ಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಲಸಿಕೆ ಖರೀದಿ ವಿಷಯದಲ್ಲಿ ಬೇರೆ ದೇಶಗಳಂತೆ ಚುರುಕಾಗಿ ಕೆಲಸ ನಿರ್ವಹಿಸದೇ, ದೂರದೃಷ್ಟಿಯಿಂದ ಕೆಲಸ ಮಾಡದೇ ಭಾರತವು ಲಸಿಕೆಗಳ ಖರೀದಿಯಲ್ಲಿ ವಿಳಂಬ ಮಾಡಿದ್ದು, ಈಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೆಲವೇ ಲಸಿಕೆಗಳ ಆಯ್ಕೆಗಳು ಉಳಿದುಕೊಂಡಿವೆ ಎಂದು ವೈದ್ಯಕೀಯ ಆಮ್ಲಜನಕ ಸರಬರಾಜು ಸಂಬಂಧ ಸುಪ್ರೀಂ ಕೋರ್ಟ್ ನೇಮಿತ ಸಮಿತಿ ಸದಸ್ಯ ಡಾ. ಗಗನ್‌ದಿಪ್ ತಿಳಿಸಿದ್ದಾರೆ. ಮುಂದೆ ಓದಿ...

ವಿಶ್ವ ಆರೋಗ್ಯ ಸಂಸ್ಥೆಯಿಂದ ಕೋವಾಕ್ಸಿನ್‌ಗೆ ಅನುಮೋದನೆ ಪಡೆಯಲು ಭಾರತ ಪ್ರಯತ್ನವಿಶ್ವ ಆರೋಗ್ಯ ಸಂಸ್ಥೆಯಿಂದ ಕೋವಾಕ್ಸಿನ್‌ಗೆ ಅನುಮೋದನೆ ಪಡೆಯಲು ಭಾರತ ಪ್ರಯತ್ನ

 ಲಸಿಕೆ ಖರೀದಿಸಬೇಕೆಂದರೆ ಈಗ ಲಭ್ಯವಿದೆಯೇ?

ಲಸಿಕೆ ಖರೀದಿಸಬೇಕೆಂದರೆ ಈಗ ಲಭ್ಯವಿದೆಯೇ?

ವರ್ಷಗಳ ಲೆಕ್ಕದಲ್ಲಿ ಎಲ್ಲಾ ದೇಶಗಳು ಕೊರೊನಾ ಲಸಿಕೆಗಳಿಗೆ ಬೇಡಿಕೆ ಇಟ್ಟಿವೆ. ಆದರೆ ಭಾರತ ಹೀಗೆ ಮಾಡಿಲ್ಲ. ಈಗ ನಮಗೆ ಲಸಿಕೆ ಖರೀದಿಸಬೇಕೆಂದರೂ ಅವು ಲಭ್ಯ ಎಂದು ಅನಿಸುತ್ತದೆಯೇ ಎಂದು ಕೇಂದ್ರಕ್ಕೆ ಪ್ರಶ್ನಿಸಿದ್ದಾರೆ. ಮಹಾರಾಷ್ಟ್ರ, ಒಡಿಶಾ, ದೆಹಲಿ, ಉತ್ತರ ಪ್ರದೇಶ ಒಳಗೊಂಡಂತೆ ಹಲವು ರಾಜ್ಯಗಳಲ್ಲಿ ಲಸಿಕೆಗಳ ಅಭಾವ ಎದ್ದು ತೋರುತ್ತಿದೆ. ಕೊರೊನಾ ಮೂರನೇ ಅಲೆ ಭೀತಿಯೂ ಎದುರಾಗಿದ್ದು, ಅದಕ್ಕೆ ತಕ್ಕಂತೆ ತಯಾರಿ ನಡೆಸಬೇಕಾದ ಈ ಸಂದರ್ಭದಲ್ಲಿ ಲಸಿಕೆ ಅಭಾವ ತಲೆದೋರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದೆ.

ಭಾರತದಲ್ಲಿ 19.49 ಕೋಟಿ ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆಭಾರತದಲ್ಲಿ 19.49 ಕೋಟಿ ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ

"ಸ್ಥಳೀಯ ಕಂಪನಿಗಳಿಗೆ ಉತ್ತೇಜನ ನೀಡಿ"

ಝೈಡಸ್ ಕ್ಯಾಡಿಲಾ, ಬಯೊಲಾಜಿಕಲ್ ಇ ನಂಥ ಸಂಸ್ಥೆಗಳು ಲಸಿಕೆ ತಯಾರಿಸುತ್ತಿದ್ದು, ಈಗ ಬೇಡಿಕೆ ಇಟ್ಟರೆ ಮುಂದಿನ ವರ್ಷ ಲಸಿಕೆಗಳು ಲಭ್ಯವಾಗಲಿವೆ. ಹೀಗಾಗಿ ಇಂಥ ಕಂಪನಿಗಳಿಗೆ ಉತ್ಪಾದನೆ ಹೆಚ್ಚಿಸುವಂತೆ ಉತ್ತೇಜನ ನೀಡಬೇಕಿದೆ. ನಿಮ್ಮ ಪ್ರಯೋಗಗಳು ಯಶಸ್ವಿಯಾದರೆ ನಿಮ್ಮ ಎಲ್ಲಾ ಲಸಿಕೆಗಳನ್ನೂ ಖರೀದಿಸುತ್ತೇವೆ ಎಂಬ ಭರವಸೆ ನೀಡಬೇಕಾಗಿದೆ. ಹೀಗಾದಾಗ ಹೆಚ್ಚಿನ ಲಸಿಕೆಗಳು ಲಭ್ಯವಾಗಲಿವೆ ಎಂದು ಹೇಳಿದ್ದಾರೆ.

 ಲಸಿಕೆ ವಿಷಯದಲ್ಲಿ ಭಾರತ ಮಾಡಿದ ಎಡವಟ್ಟೇನು?

ಲಸಿಕೆ ವಿಷಯದಲ್ಲಿ ಭಾರತ ಮಾಡಿದ ಎಡವಟ್ಟೇನು?

ಆರ್ಥಿಕ ಪರಿಸ್ಥಿತಿಗಳು ಹದಗೆಟ್ಟಿರುವ ಈ ಸಂದರ್ಭದಲ್ಲಿಯೂ ಇಂಥ ಜವಾಬ್ದಾರಿ ತೆಗೆದುಕೊಳ್ಳುವುದು ಅವಶ್ಯಕವಾಗಿದೆ. ಭಾರತೀಯ ಲಸಿಕಾ ನೀತಿ ಖಂಡನಾರ್ಹವಾಗಿದೆ.ಸ ಅಮೆರಿಕ ಕಳೆದ ಮಾರ್ಚ್‌ನಲ್ಲಿಯೇ ಲಸಿಕೆ ತಯಾರಿಗೆ ಹೆಚ್ಚಿನ ಒತ್ತು ನೀಡಿ ಸಾಕಷ್ಟು ಲಸಿಕೆಗಳಿಗೆ ಬೇಡಿಕೆ ಇಟ್ಟಿತ್ತು. ಆದರೆ ಭಾರತ ಲಸಿಕೆ ಅಭಿವೃದ್ಧಿಗೆ ಯಾವುದೇ ಮುಂಗಡ ಹಣ ನೀಡಿಸಲ್ಲ. ಬೃಹತ್ ಖರೀದಿ ಬೇಡಿಕೆಯೂ ಇಡದೇ ಆದ್ಯತಾ ಗುಂಪುಗಳಿಗೆ ಮಾತ್ರ ಲಸಿಕೆ ನೀಡುವತ್ತ ಗಮನ ನೀಡಿ ಈ ಸಮಸ್ಯೆ ಉಂಟಾಗಿದೆ ಎಂದು ಅಭಿಪ್ರಾಯ ಮುಂದಿಟ್ಟಿದ್ದಾರೆ.

 ದೇಶದಲ್ಲಿ ಇದುವರೆಗೂ ಎಷ್ಟು ಜನರಿಗೆ ಲಸಿಕೆ ನೀಡಲಾಗಿದೆ?

ದೇಶದಲ್ಲಿ ಇದುವರೆಗೂ ಎಷ್ಟು ಜನರಿಗೆ ಲಸಿಕೆ ನೀಡಲಾಗಿದೆ?

ದೇಶದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಆರಂಭವಾಗಿ 125 ದಿನಗಳಲ್ಲಿ 19,49,51,603 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ವಿತರಣೆ ಮಾಡಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಪ್ರತಿನಿತ್ಯ 15 ಲಕ್ಷಕ್ಕಿಂತ ಕಡಿಮೆ ಫಲಾನುಭವಿಗಳಿಗೆ ಕೊವಿಡ್-19 ಲಸಿಕೆ ವಿತರಣೆ ಮಾಡಲಾಗುತ್ತಿದೆ. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಹರಡುವಿಕೆ ವೇಗಕ್ಕೆ ಕಡಿವಾಣ ಹಾಕಲು ಮೂರು ಹಂತಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಮೊದಲ ಶ್ರೇಣಿ ಕಾರ್ಮಿಕರು, ಎರಡನೇ ಹಂತದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಹಾಗೂ ಮೂರನೇ ಹಂತದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ.

ದೇಶದಲ್ಲಿ ಈವರೆಗೂ 45 ವರ್ಷಕ್ಕಿಂತ ಮೇಲ್ಪಟ್ಟ 6,06,73,244 ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು 97,84,465 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. 60 ವರ್ಷ ಮೇಲ್ಪಟ್ಟ 5,65,49,096 ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು, 1,82,42,554 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.

English summary
India delayed the process of bulk-buying vaccines unlike several other nations. This is the main reason behind delay in vaccination process in india says top virologits Dr Gagandeep kang,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X