ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲ್ಯದ ಗೆಳತಿಗಾಗಿ ಸನ್ಯಾಸತ್ವ ತೊರೆದ ಬೌದ್ಧಗುರು

ಬಾಲ್ಯದ ಗೆಳತಿಯೊಬ್ಬಳ ಬಗ್ಗೆ ನನ್ನ ಹೃದಯಾಂತರಾಳದಲ್ಲಿ ಇರುವ ಅನುರಾಗವು ನನ್ನನ್ನು ಆಕೆಯತ್ತ ಸೆಳೆದಿದೆ. ಹಾಗಾಗಿ, ಮದುವೆಯಾಗಲು ನಿರ್ಧರಿಸಿದ್ದು, ನನ್ನ ಬೌದ್ಧ ಸನ್ಯಾಸತ್ವವನ್ನು ತೊರೆಯುತ್ತಿದ್ದೇನೆ ಎಂದ ಬೌದ್ಧ ಸನ್ಯಾಸಿ ಥಾಯೆ ದೋರ್ಜೆ.

|
Google Oneindia Kannada News

ನವದೆಹಲಿ, ಮಾರ್ಚ್ 30: ಟಿಬೆಟ್ ನ ಬೌದ್ಧ ಗುರು (ಲಾಮಾ) ಪದವಿಯ ಪ್ರಮುಖ ಆಕಾಂಕ್ಷಿಯಾಗಿದ್ದ ಟಿಬೆಟ್ ನ ಬೌದ್ಧ ಸನ್ಯಾಸಿಯೊಬ್ಬರು, ಭಾರತದಲ್ಲಿರುವ ತಮ್ಮ ಬಾಲ್ಯದ ಗೆಳತಿಯೊಂದಿಗೆ ವಿವಾಹವಾಗಿ ಸನ್ಯಾಸತ್ವ ತೊರೆದಿದ್ದಾರೆಂದು ಮೂಲಗಳು ತಿಳಿಸಿದೆ.

ಹೀಗೆ, ಲಾಮಾ ಪದವಿಯ ರೇಸ್ ನಿಂದ ದೂರ ಸರಿದು ಸಂಸಾರಿಯಾದವರ ಹೆಸರು ಥಾಯೆ ದೋರ್ಜೆ (33).

ಗುರುವಾರ ಅವರ ಕಚೇರಿಯಿಂದ ಈ ಮಾಹಿತಿ ಹೊರಬಿದ್ದಿದೆ. ಈ ಬಗ್ಗೆ ಖುದ್ದು ಥಾಯೆ ಅವರೇ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಬಾಲ್ಯದ ಗೆಳತಿಯೊಬ್ಬಳ ಬಗ್ಗೆ ನನ್ನ ಹೃದಯಾಂತರಾಳದಲ್ಲಿ ಇರುವ ಅನುರಾಗವು ನನ್ನನ್ನು ಆಕೆಯತ್ತ ಸೆಳೆದಿದೆ. ಹಾಗಾಗಿ, ಮದುವೆಯಾಗಲು ನಿರ್ಧರಿಸಿದ್ದು, ನನ್ನ ಬೌದ್ಧ ಸನ್ಯಾಸತ್ವವನ್ನು ತೊರೆಯುತ್ತಿದ್ದೇನೆ ಎಂದು ಹೇಳಿದ್ದಾರೆ.

Top Tibetan Lama Abandons Monkhood To Marry Old Friend In India

ಯಾರು ಈ ಥಾಯೆ ದೋರ್ಜೆ?: ಹಲವಾರು ವರ್ಷಗಳ ಹಿಂದೆ ಜೀವಿಸಿದ್ದ ಕರ್ಮಾಪ ಲಾಮಾ ಎಂಬುವರ ಪುನರ್ಜನ್ಮ ಎಂದು ಚಿಕ್ಕವರಿದ್ದಾಗಿನಿಂದಲೂ ಹೇಳಿಕೊಳ್ಳುತ್ತಿದ್ದರು.

ಈಗ ಟಿಬೆಟ್ ನ ಬೌದ್ಧಗುರುವಾಗಿರುವ ದಲೈಲಾಮಾ ಅವರ ಉತ್ತರಾಧಿಕಾರಿ ಹುಡುಕಾಟ ನಡೆಯುತ್ತಿರುವುದರಿಂದ ಇವರೇ ಲಾಮಾ ಅವರ ಉತ್ತರಾಧಿಕಾರಿ ಎಂದು ಹೇಳಲಾಗುತ್ತಿತ್ತು.

ಆದರೆ, ಇತ್ತೀಚೆಗೆ, ಥಾಯೆ ಅವರ ಆಶ್ರಮದ ಭಕ್ತರಲ್ಲಿ ಹಲವಾರು ಮಂದಿ, ದಲೈಲಾಮಾ ಅವರ ಪದವಿಗೆ ಉತ್ತರಾಧಿಕಾರಿಯಾಗಿ ಉರ್ಜಿನ್ ಟ್ರಿನ್ಲೆ (ಮತ್ತೊಬ್ಬ ಬೌದ್ಧ ಧರ್ಮಗುರು) ಅವರು ಆಯ್ಕೆಯಾಗಬೇಕೆಂದು ಬಯಸಿದ್ದರು. ಇದು, ಆಶ್ರಮದ ಭಕ್ತರು ಹಾಗೂ ಥಾಯೆ ಅವರ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು.

ಇದೆಲ್ಲರ ನಂತರ, ಗುರುವಾರ ಥಾಯೆ ಅವರ ಕಚೇರಿಯು ಅವರ ಮದುವೆಯ ಬಗ್ಗೆ ಅಚ್ಚರಿಯ ಮಾಹಿತಿ ನೀಡಿ ಎಲ್ಲರನ್ನೂ ಚಕಿತಗೊಳಿಸಿದೆ.

English summary
A senior Tibetan lama at the centre of a long-running row over one of Buddhism's most important titles has abandoned monkhood altogether after marrying a childhood friend in India, his office said Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X