ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧುನೀಕರಣಕ್ಕೆ ಒಗ್ಗಿಕೊಳ್ಳುವತ್ತ RSS: ಈ ಬಾರಿ ಟ್ವಿಟ್ಟರ್ ಲೋಕಕ್ಕೆ

|
Google Oneindia Kannada News

ನಾಗಪುರ, ಜುಲೈ 2: ಕಳೆದ ಎರಡ್ಮೂರು ವರ್ಷಗಳಿಂದ ಆಧುನೀಕರಣಕ್ಕೆ ಒಗ್ಗಿಕೊಳ್ಳುವತ್ತ ಸಾಗುತ್ತಿರುವ ರಾಷ್ಟ್ರೀಯ ಸ್ವಯಂಸೇವಕದ ಇನ್ನೊಂದು ಹೆಜ್ಜೆಯ ಭಾಗವಾಗಿ, ಸಂಘದ ಆರು ಪ್ರಮುಖರು ಮೈಕ್ರೋ ಬ್ಲಾಗ್ಗಿಂಗ್ ಟ್ವಿಟ್ಟರ್ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ.

1.32 ಮಿಲಿಯನ್ ಫಾಲೋವರ್ಸ್ ಅನ್ನು ಹೊಂದಿರುವ ಸಂಘದ ಅಧಿಕೃತ (@RSSorg) ಹ್ಯಾಂಡಲ್ ಮೂಲಕ ಸಾಮಾಜಿಕ ತಾಣದಲ್ಲಿ ಸಂಘಟನೆ ತೊಡಗಿಸಿಕೊಂಡಿತ್ತು. ಈಗ, ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಸೇರಿದಂತೆ, ಆರು ಪ್ರಮುಖರು ಟ್ವಿಟ್ಟರ್ ಖಾತೆಯನ್ನು ತೆರೆದಿದ್ದಾರೆ.

ಮದರಸಾಗಳು ಗೋಡ್ಸೆ, ಪ್ರಗ್ಯಾಸಿಂಗ್ ಅಂತವರನ್ನು ರೂಪಿಸುವುದಿಲ್ಲ: ಅಜಂ ಖಾನ್ಮದರಸಾಗಳು ಗೋಡ್ಸೆ, ಪ್ರಗ್ಯಾಸಿಂಗ್ ಅಂತವರನ್ನು ರೂಪಿಸುವುದಿಲ್ಲ: ಅಜಂ ಖಾನ್

2016ರಲ್ಲಿ ಸಂಘಟನೆಯ ಟ್ರೇಡ್ ಮಾರ್ಕ್ ಸಮವಸ್ತ್ರ ಖಾಕಿ ಚಡ್ಡಿಯಿಂದ ಪ್ಯಾಂಟಿಗೆ ಬದಲಾಯಿಸಲಾಗಿತ್ತು. 1925ರಿಂದ ಅಂದರೆ ಸುಮಾರು ಒಂಬತ್ತು ದಶಕಗಳ ನಂತರ RSS ಈ ಬದಲಾವಣೆಯನ್ನು ಜಾರಿಗೆ ತಂದಿತ್ತು.

Top RSS office bearers including Mohan Bhagwat made their debut to Twitter

ಸಾಮಾಜಿಕ ತಾಣದಿಂದ ವೈಯಕ್ತಿಕವಾಗಿ ದೂರ ಉಳಿದಿದ್ದ ಸಂಘಟನೆಯ ಪ್ರಮುಖರು, ಕೊನೆಗೂ ಟ್ವಿಟ್ಟರ್ ಖಾತೆ ತೆರೆದಿದ್ದಾರೆ. ಮೋಹನ್ ಭಾಗವತ್ ಖಾತೆ ತೆರೆದ ಒಂದೇ ದಿನದಲ್ಲಿ 31.7 ಸಾವಿರ ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಆರು ಪ್ರಮುಖರು ಟ್ವಿಟ್ಟರ್ ಹ್ಯಾಂಡಲ್ ಈ ರೀತಿಯಿದೆ:

ಚುನಾವಣೆ ಗೆಲ್ಲಲು ಆರೆಸ್ಸೆಸ್ ರೀತಿ ಕೆಲಸ ಮಾಡಿ: ಶರದ್ ಪವಾರ್ಚುನಾವಣೆ ಗೆಲ್ಲಲು ಆರೆಸ್ಸೆಸ್ ರೀತಿ ಕೆಲಸ ಮಾಡಿ: ಶರದ್ ಪವಾರ್

1. ಸರಸಂಘಚಾಲಕ - ಮೋಹನ್ ಭಾಗವತ್ - @DrMohanBhagwat

2. ಸರಕಾರ್ಯವಾಹ - ಭಯ್ಯಾಜಿ ಸುರೇಶ್ ಜೋಶಿ - @SureshBJoshi

3. ಪ್ರಚಾರ ಪ್ರಮುಖ - ಅರುಣ್ ಕುಮಾರ್ - @ArunKumRSS

4. ಜಂಟಿ ಪ್ರಧಾನ ಕಾರ್ಯದರ್ಶಿ - ದತ್ತಾತ್ರೇಯ ಹೊಸಬಾಳೆ - @DattaHosabale

5. ಸಹ-ಸಹಕಾರ್ಯವಾಹ - ವಿ ಭಾಗಯ್ಯ - @BhagaiahV

6. ಸಂಪರ್ಕ ಪ್ರಮುಖ - ಅರುಣ್ ಕುಮಾರ್ - @ArunKumRSS

ಫೇಕ್ ಖಾತೆಗಳಿಂದ ಹರಿದಾಡುತ್ತಿರುವ ಸುಳ್ಳುಸುದ್ದಿಗಳಿಗೆ ಕಡಿವಾಣ ಹಾಕಲು, ಟ್ವಿಟ್ಟರ್ ಖಾತೆಯನ್ನು ತೆರೆಯಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

English summary
Top RSS office bearers including its chief Mohan Bhagwat made their debut to microblogging site Twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X