ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಷದಲ್ಲಿ ದಲಿತರ ಮೇಲೆ 47,064 ಸಾರಿ ದೌರ್ಜನ್ಯ!

|
Google Oneindia Kannada News

ಬೆಂಗಳೂರು, ಅಕ್ಟೋಬರ್. 30: ದೇಶದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕೊನೆಯೇ ಇಲ್ಲ. ಆದರೆ ವರದಿಯೊಂದು ಬಿಚ್ಚಿಡುವ ಮಾಹಿತಿ ನಮ್ಮನ್ನು ಒಂದು ಕ್ಷಣ ಮೌನವಾಗಿಸುತ್ತದೆ. ಒಂದು ವರ್ಷದ ಅವಧಿಯಲ್ಲಿ ದಲಿತರ ಮೇಲೆ 47,064 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ.

ಹೌದು ಈ ಸತ್ಯವನ್ನು ಒಪ್ಪಿಕೊಳ್ಳಲೇಬೇಕು. ದೇಶದ ಜನಸಂಖ್ಯೆಯಲ್ಲಿ 26 ನೇ ಸ್ಥಾನದಲ್ಲಿರುವ ಗೋವಾ ಪರಿಶಿಷ್ಟ ಜಾತಿಯವವರ ಮೇಲಿನ ದೌರ್ಜನ್ಯದ ಶೇಕಡಾವಾರು ಲೆಕ್ಕದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ.[ಹುಷಾರ್.. ಹಿಂದೂ ವಿರೋಧಿ ಬರಹ ಬರದ್ರೆ ಬೆರಳು ಕಟ್]

rape

ನ್ಯಾಶನಲ್ ಕ್ರೈಮ್ ರೆಕಾರ್ಡ್ 2014 ರ ಅಂತ್ಯಕ್ಕೆ ಸಂಬಂಧಿಸಿ ವರದಿ ನೀಡಿದೆ. ವರದಿಯ ಹೈ ಲೈಟ್ಸ್ ಇಲ್ಲಿದೆ.
* ಗೋವಾದಲ್ಲಿ ಅತಿ ಹೆಚ್ಚು ಅಂದರೆ 67 ಪ್ರಕರಣಗಳು ದಾಖಲಾಗಿದೆ. ನಂತರ ಸ್ಥಾನವನ್ನು ರಾಜಸ್ಥಾನ(66), ಆಂಧ್ರ ಪ್ರದೇಶ(49) ಪಡೆದುಕೊಂಡಿದೆ.
* ಮಹಿಳೆಯರ ಮೇಲೆ ದಾಳಿಗೆ ಸಂಬಂಧಿಸಿ ಅತಿ ಹೆಚ್ಚಿನ ಪ್ರಕರಣ ದಾಖಲಾಗಿದೆ.
* ಲೈಂಗಿಕ ದೌರ್ಜನ್ಯ, ಖಾಸಗಿತನ ಹಾಳು ಆರೋಪಗಳು ಎರಡನೇ ಸ್ಥಾನ ಪಡೆದುಕೊಂಡಿವೆ. [ಇಬ್ಬರು ದಲಿತ ಮಕ್ಕಳ ಹತ್ಯೆಗೆ ಕಾರಣವಾಗಿದ್ದೊಂದು ಮೊಬೈಲ್!]
* 5 ವರ್ಷದ ಅವಧಿಯಲ್ಲಿ ಶೇ. 44 ರಷ್ಟು ಅಪರಾಧ ಪ್ರಕರಣಗಳು ಪರಿಶಿಷ್ಟ ಜಾತಿಯವರ ಮೇಲೆ ಹೆಚ್ಚಿದೆ.
* ಕರ್ನಾಟಕದಲ್ಲಿ ದಲಿತ ಬರಹಗಾರನ ಮೇಲೆ ಹಲ್ಲೆ ನಡೆದ ಪ್ರಕರಣವನ್ನು ಇಲ್ಲಿ ಉಲ್ಲೇಖ ಮಾಡಬಹುದು.
* ಹರ್ಯಾಣದಲ್ಲಿ ರಜಪೂರತರು ಮತ್ತು ದಲಿತರ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಮಕ್ಕಳು ಹತರಾಗಿದ್ದರು.
* ಉತ್ತರ ಪ್ರದೇಶ(8,075), ರಾಜಸ್ಥಾನ(8.028), ಬಿಹಾರ(7.893), ಮಧ್ಯ ಪ್ರದೇಶ(4,151) ಮತ್ತು ಆಂಧ್ರ ಪ್ರದೇಶದಲ್ಲಿ (4,114) ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ.
* ಕೊಲೆಗೆ ಸಂಬಂಧಿಸಿದ ಅಪರಾಧ ಪ್ರಕರಣಗಳು ಆರನೇ ಸ್ಥಾನದಲ್ಲಿ ನಿಲ್ಲುತ್ತವೆ.
* 2014 ರಲ್ಲಿ ಪರಿಶಿಷ್ಟ ಜಾತಿಯವರ ಮೇಲೆ ಒಟ್ಟು 47,064 ದೌರ್ಜನ್ಯ ಪ್ರಕರಣಗಳು ದೇಶಾದ್ಯಂತ ದಾಖಲಾಗಿವೆ.

English summary
Total 47,064 crimes happened against scheduled caste in 2014, The National Crime Records Bureau (NCRB) report said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X