ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕಿತರು ಹೆಚ್ಚಿರುವ ಟಾಪ್ 5 ರಾಜ್ಯಗಳ ಪಟ್ಟಿ

|
Google Oneindia Kannada News

ನವದೆಹಲಿ, ಡಿಸೆಂಬರ್ 19: ದೇಶದಲ್ಲಿ ಕೊರೊನಾ ಸೋಂಕು ಕಳೆದ ಒಂದು ತಿಂಗಳಿಂದ ಕಡಿಮೆಯಾಗುತ್ತಿದೆ. ಇದರರ್ಥ ಸೋಂಕು ಕಡಿಮೆಯಾಗಿದೆ ಎಂದಲ್ಲ, ಪರೀಕ್ಷೆಗಳನ್ನು ಕೂಡ ಕಡಿಮೆ ಮಾಡಲಾಗಿದೆ.

ಸರ್ಕಾರವೇ ಹೇಳಿರುವ ಮಾಹಿತಿಯಲ್ಲಿ ಒಂದು ಕೊರೊನಾ ಪ್ರಕರಣ ಪತ್ತೆಯಾದರೆ 90 ಪ್ರಕರಣಗಳು ಅಗೋಚರವಾಗಿಯೇ ಉಳಿದಿದೆ ಎನ್ನಲಾಗಿದೆ.

ಚಳಿಗಾಲದಲ್ಲಿ ಕೊರೊನಾ ವೈರಸ್‌ನ ಕಣಗಳು ಸಾಂಕ್ರಾಮಿಕವಾಗಿ ಬಹುಕಾಲ ಉಳಿಯಬಲ್ಲದು ಚಳಿಗಾಲದಲ್ಲಿ ಕೊರೊನಾ ವೈರಸ್‌ನ ಕಣಗಳು ಸಾಂಕ್ರಾಮಿಕವಾಗಿ ಬಹುಕಾಲ ಉಳಿಯಬಲ್ಲದು

ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರಿದ್ದಾರೆ.

ದೇಶದ ಬಹುಪಾಲು ಜಿಲ್ಲೆಗಳಲ್ಲಿ 5,000ಕ್ಕೂ ಕಡಿಮೆ ಪ್ರಕರಣಗಳು ದಾಖಲಾಗಿವೆ. ಕೇವಲ 11 ಜಿಲ್ಲೆಗಳಲ್ಲಿಯೇ ಒಂದು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಈ 11 ಜಿಲ್ಲೆಗಳು ದೇಶದ ಜನಸಂಖ್ಯೆಯ ಶೇ 7.8ರಷ್ಟು ಜನಸಂಖ್ಯೆ ಇವೆ. ಇದುವರೆಗೂ ಖಚಿತವಾದ ಪ್ರಕರಣಗಳಲ್ಲಿ ಸುಮಾರು ಶೇ 28ರಷ್ಟು ಪ್ರಕರಣಗಳು ಇಲ್ಲಿ ವರದಿಯಾಗಿವೆ.

ಕೊರೊನಾ ಸೋಂಕಿತರು ಹೆಚ್ಚಿರುವ ಐದು ರಾಜ್ಯಗಳ ಪಟ್ಟಿ

ಕೊರೊನಾ ಸೋಂಕಿತರು ಹೆಚ್ಚಿರುವ ಐದು ರಾಜ್ಯಗಳ ಪಟ್ಟಿ

ಮಹಾರಾಷ್ಟ್ರ: 18,88.767 ಒಟ್ಟು ಪ್ರಕರಣಗಳಿವೆ, 60,352 ಸಕ್ರಿಯ ಪ್ರಕರಣಗಳಿವೆ. 17,78,722 ಮಂದಿ ಗುಣಮುಖರಾಗಿದ್ದಾರೆ. 1.2 ಕೋಟಿ ಮಂದಿಗೆ ಪರೀಕ್ಷೆ ಮಾಡಿಸಲಾಗಿದೆ.
ಕರ್ನಾಟಕ: 9,07,123 ಪ್ರಕರಣಗಳಿವೆ. 15,380 ಸಕ್ರಿಯ ಪ್ರಕರಣಗಳಿವೆ. 8,79,735 ಮಂದಿ ಗುಣಮುಖರಾಗಿದ್ದಾರೆ. 1.3 ಕೋಟಿ ಮಂದಿ ಪರೀಕ್ಷೆ ಮಾಡಿಸಲಾಗಿದೆ.
ಆಂಧ್ರಪ್ರದೇಶ: 8,77,806 ಪ್ರಕರಣಗಳಿವೆ, 4,377 ಸಕ್ರಿಯ ಪ್ರಕರಣಗಳಿವೆ, 8,66,359 ಮಂದಿ ಗುಣಮುಖರಾಗಿದ್ದಾರೆ. 1.1 ಕೋಟಿ ಮಂದಿಗೆ ಪರೀಕ್ಷೆ ಮಾಡಿಸಲಾಗಿದೆ.
ತಮಿಳುನಾಡು:8,04,650 ಕೊರೊನಾ ಸೋಂಕಿತರಿದ್ದಾರೆ. 9781 ಸಕ್ರಿಯ ಪ್ರಕರಣಗಳಿವೆ, 7,82,915 ಮಂದಿ ಗುಣಮುಖರಾಗಿದ್ದಾರೆ. 1.3 ಕೋಟಿ ಮಂದಿಗೆ ಪರೀಕ್ಷೆ ಮಾಡಿಸಲಾಗಿದೆ.
ಕೇರಳ: 6,93,866 ಕೊರೊನಾ ಸೋಂಕಿತರಿದ್ದಾರೆ.58,895 ಸಕ್ರಿಯ ಪ್ರಕರಣಗಳಿವೆ, 6,32,065 ಮಂದಿ ಗುಣಮುಖರಾಗಿದ್ದಾರೆ. 72.3 ಲಕ್ಷ ಮಂದಿಗೆ ಪರೀಕ್ಷೆ ಮಾಡಿಸಲಾಗಿದೆ.

ಒಂದು ಕೋಟಿ ದಾಟಿದ ಕೊರೊನಾ ಸೋಂಕಿತರು

ಒಂದು ಕೋಟಿ ದಾಟಿದ ಕೊರೊನಾ ಸೋಂಕಿತರು

ಸಿದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1 ಕೋಟಿ ದಾಟಿದೆ. ಭಾರತದ ಕೋವಿಡ್ ಪ್ರಕರಣಗಳ ಸಂಖ್ಯೆ ಒಂದು ಕೋಟಿಯ ಗಡಿ ದಾಟಿದೆ. ದೇಶದಲ್ಲಿ ಮೊದಲ ಸೋಂಕು ಕಾಣಿಸಿಕೊಂಡ ಹತ್ತು ತಿಂಗಳಲ್ಲಿ ಭಾರತ ಈ ಗಡಿ ತಲುಪಿದೆ.

ಒಂದೇ ದಿನದಲ್ಲಿ 25,153 ಕೊರೊನಾ ಸೋಂಕಿತರು ಪತ್ತೆ

ಒಂದೇ ದಿನದಲ್ಲಿ 25,153 ಕೊರೊನಾ ಸೋಂಕಿತರು ಪತ್ತೆ

ಕಳೆದ 24 ಗಂಟೆಗಳಲ್ಲಿ 25,153 ಹೊಸ ಪ್ರಕರಣಗಳು ದೇಶದಲ್ಲಿ ದಾಖಲಾಗಿವೆ. ಇದರಿಂದ ಒಟ್ಟು ಪ್ರಕರಣಗಳ ಸಂಖ್ಯೆ 10,004,599ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಶುಕ್ರವಾರ 347 ಮಂದಿ ಸೋಂಕಿತರು ವೈರಸ್‌ನಿಂದ ಬಲಿಯಾಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ 1,45,136ಕ್ಕೆ ತಲುಪಿದೆ.

ದೇಶದಲ್ಲಿ ಇದುವರೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರು

ದೇಶದಲ್ಲಿ ಇದುವರೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರು

ದೇಶದಲ್ಲಿ ಇದುವರೆಗೂ ಒಟ್ಟು ಬಿಡುಗಡೆಯಾದವರ ಸಂಖ್ಯೆ 95,50,712ಕ್ಕೆ ಏರಿಕೆಯಾಗಿದೆ. ಜತೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 3,08,751ಕ್ಕೆ ತಗ್ಗಿದೆ.

700ಕ್ಕೂ ಅಧಿಕ ಜಿಲ್ಲೆಗಳಿರುವ ಭಾರತದಲ್ಲಿ ಅರ್ಧದಷ್ಟು ಕೋವಿಡ್ ಪ್ರಕರಣಗಳ ಸಂಖ್ಯೆ ಕೇವಲ 47 ಜಿಲ್ಲೆಗಳಲ್ಲಿಯೇ ವರದಿಯಾಗಿವೆ.

English summary
Here is the top 5 Coronavirus Effected States In India, with Numbers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X