ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿರುವ 5 ರಾಜ್ಯಗಳಿವು...

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 2: ದೇಶದಲ್ಲಿ ಗುರುವಾರ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏಕಾಏಕಿ ಏರಿಕೆಯಾಗಿದೆ. ಎರಡು ತಿಂಗಳ ನಂತರ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಪ್ರಕರಣ ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 47,092 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 3,89,583ಕ್ಕೆ ಏರಿಕೆಯಾಗಿದೆ. 30 ಸಾವಿರದ ಆಚೀಚೆಯಲ್ಲಿದ್ದ ದಿನನಿತ್ಯದ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದೆ.

ಕೇರಳದಲ್ಲಿ ಕೊರೊನಾ ಏರಿಕೆ; ಕರ್ನಾಟಕ, ತಮಿಳುನಾಡಿಗೆ ಕೇಂದ್ರದ ಸೂಚನೆಕೇರಳದಲ್ಲಿ ಕೊರೊನಾ ಏರಿಕೆ; ಕರ್ನಾಟಕ, ತಮಿಳುನಾಡಿಗೆ ಕೇಂದ್ರದ ಸೂಚನೆ

ಒಂದು ದಿನದಲ್ಲಿ 35,181 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 4,39,529 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

Top 5 States Registered Maximum Number of New Covid Cases

ಇದರೊಂದಿಗೆ ಬುಧವಾರ 509 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, ದೇಶದಲ್ಲಿ ಒಟ್ಟು 4,39,529 ಮಂದಿ ಸೋಂಕಿನಿಂದ ಜೀವ ಕಳೆದುಕೊಂಡಿದ್ದಾರೆ. ಒಂದೇ ದಿನದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 11,000ರಷ್ಟು ಏರಿಕೆ ಕಂಡಿದೆ.

ಕೆಲವು ರಾಜ್ಯಗಳಲ್ಲಿ ಹೊಸ ಕೊರೊನಾ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿರುವುದು ದೇಶದ ಒಟ್ಟಾರೆ ಪ್ರಕರಣಗಳ ಸಂಖ್ಯೆ ಏರಿಕೆಯಾಗಲು ಕಾರಣವಾಗಿದೆ. ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿರುವ ಐದು ಪ್ರಮುಖ ರಾಜ್ಯಗಳಾವುವು? ಮುಂದಿದೆ ವಿವರ...

ಮಕ್ಕಳಿಗೆ ಲಸಿಕೆ ನೀಡಲು 9 ತಿಂಗಳ ಕಾಲಾವಧಿ ಅವಶ್ಯವಿದೆ; ಏಮ್ಸ್‌ ನಿರ್ದೇಶಕಮಕ್ಕಳಿಗೆ ಲಸಿಕೆ ನೀಡಲು 9 ತಿಂಗಳ ಕಾಲಾವಧಿ ಅವಶ್ಯವಿದೆ; ಏಮ್ಸ್‌ ನಿರ್ದೇಶಕ

ದೇಶದ ಕೊರೊನಾ ಪ್ರಕರಣಗಳಲ್ಲಿ ಕೇರಳದ್ದು ಸಿಂಹಪಾಲು:
ದೇಶದ ಒಟ್ಟು ಕೊರೊನಾ ಪ್ರಕರಣಗಳಲ್ಲಿ ಕೇರಳದ್ದು ಸಿಂಹಪಾಲಾಗಿದ್ದು, 70% ಪ್ರಕರಣಗಳು ಕೇರಳ ರಾಜ್ಯವೊಂದರದ್ದೇ ಆಗಿದೆ. ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆಯೂ ಕೇರಳದಲ್ಲಿ ಹೆಚ್ಚಿದೆ. ಕೇರಳದಲ್ಲಿ 32,803 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು ಒಟ್ಟಾರೆ ಪ್ರಕರಣಗಳ ಸಂಖ್ಯೆ 40,90,036 ಆಗಿದೆ. ಬುಧವಾರ ಸೋಂಕಿನಿಂದ 173 ಮಂದಿ ಸಾವನ್ನಪ್ಪಿದ್ದು, ಒಟ್ಟು ಮರಣ ಸಂಖ್ಯೆ 20,961 ಆಗಿದೆ.

Top 5 States Registered Maximum Number of New Covid Cases

ಮಹಾರಾಷ್ಟ್ರದಲ್ಲಿಯೂ ಏರಿಕೆಯಾಗುತ್ತಿರುವ ಕೊರೊನಾ
ಮಹಾರಾಷ್ಟ್ರದಲ್ಲಿ 4,456 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ ರಾಜ್ಯದಲ್ಲಿ 64,69,332 ಆಗಿದೆ. ಒಂದು ದಿನದಲ್ಲಿ 183 ಮಂದಿ ಸಾವನ್ನಪ್ಪಿದ್ದು, ಇದುವರೆಗೂ 137496 ಮಂದಿ ಸಾವನ್ನಪ್ಪಿದ್ದಾರೆ. 4,430 ಕೊರೊನಾ ರೋಗಿಗಳು ಗುಣಮುಖರಾಗಿದ್ದಾರೆ. ಇದುವರೆಗೂ 62,77,230 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಚೇತರಿಕೆ ಪ್ರಮಾಣವೂ ಹೆಚ್ಚಿದ್ದು, 97.3% ಆಗಿದೆ.

ತಮಿಳುನಾಡಿನಲ್ಲಿ ಸೋಂಕು ಹೆಚ್ಚಳದ ಸಾಧ್ಯತೆ
ಹಿಂದಿನ ದಿನಕ್ಕೆ ಹೋಲಿಸಿದರೆ, ತಮಿಳುನಾಡಿನಲ್ಲಿ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ತಗ್ಗಿದೆ. 1509 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, 1719 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಒಂದು ದಿನದಲ್ಲಿ 20 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, ಇದುವರೆಗೂ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 34,941 ಆಗಿದೆ.

ಆಂಧ್ರ ಪ್ರದೇಶದಲ್ಲಿ 14,473 ಸಕ್ರಿಯ ಪ್ರಕರಣ
ಆಂಧ್ರ ಪ್ರದೇಶದಲ್ಲಿ 1186 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ರಾಜ್ಯದ ಒಟ್ಟಾರೆ ಪ್ರಕರಣಗಳ ಸಂಖ್ಯೆ 20,15,302 ಆಗಿದೆ. ರಾಜ್ಯದಲ್ಲಿ ಇದುವರೆಗೂ 13,867 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 14,473 ಸಕ್ರಿಯ ಪ್ರಕರಣಗಳಿವೆ. 19,86,962 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಕರ್ನಾಟಕದ ಕೊರೊನಾ ಪ್ರಕರಣ
ಕರ್ನಾಟಕದಲ್ಲಿ 1159 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಇದುವರೆಗೂ ದಾಖಲಾದ ಕೊರೊನಾ ಪ್ರಕರಣಗಳ ಸಂಖ್ಯೆ 29,50,604 ಆಗಿದೆ. ಬುಧವಾರ 21 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು ಒಟ್ಟಾರೆ ಮರಣ ಸಂಖ್ಯೆ 37,339 ಆಗಿದೆ. ಸದ್ಯಕ್ಕೆ ರಾಜ್ಯದಲ್ಲಿ 18412 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ 0.66% ಇದೆ.

Recommended Video

ಸಿಎಂ ಬೊಮ್ಮಾಯಿಯನ್ನ ಹಾಡಿಹೊಗಳಿದ ಅಮಿತ್ ಶಾ | Oneindia Kannada

ಕೇರಳದಲ್ಲಿ ಕೊರೊನಾ ಏರಿಕೆ; ಕರ್ನಾಟಕ, ತಮಿಳುನಾಡಿಗೆ ಕೇಂದ್ರದ ಸೂಚನೆ
ಕೇರಳದಲ್ಲಿ ಕೊರೊನಾ ಪ್ರಕರಣಗಳ ಏರಿಕೆಯಾಗುತ್ತಿದ್ದಂತೆ, ನೆರೆ ರಾಜ್ಯಗಳಾದ ಕರ್ನಾಟಕ, ತಮಿಳುನಾಡಿನ ಗಡಿ ಜಿಲ್ಲೆಗಳಲ್ಲಿ ಕೊರೊನಾ ಲಸಿಕೆ ನೀಡುವ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಕೇಂದ್ರ ಸೂಚನೆ ನೀಡಿದೆ. ಬುಧವಾರ ಈ ಕುರಿತು ಮಾತನಾಡಿರುವ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಕೇರಳ ನೆರೆ ರಾಜ್ಯಗಳಾದ ಕರ್ನಾಟಕ, ತಮಿಳುನಾಡಿನ ಗಡಿ ಜಿಲ್ಲೆಗಳಲ್ಲಿ ಲಸಿಕಾ ಪ್ರಕ್ರಿಯೆಯನ್ನು ಚುರುಕುಗೊಳಿಸಿ ಎಂದು ತಿಳಿಸಿದ್ದಾರೆ. ಎರಡು ನೆರೆ ರಾಜ್ಯಗಳಲ್ಲಿ ಕೊರೊನಾ ಸೋಂಕಿನ ಅಂತರರಾಜ್ಯ ಹರಡುವಿಕೆ ತಡೆಗಟ್ಟಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯತೆ ಕುರಿತು ಮಾಂಡವಿಯಾ ಒತ್ತಿ ಹೇಳಿದ್ದಾರೆ.

English summary
Five states registering maximum number of new corona cases. Here is list...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X