ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

IPL 2020: ಈ ಐವರು ಬ್ಯಾಟ್ಸ್‌ಮನ್‌ಗಳು ಬಲು ಡೇಂಜರಸ್

|
Google Oneindia Kannada News

ದುಬೈ, ಸೆಪ್ಟೆಂಬರ್ 21: ಐಪಿಎಲ್ ಜ್ವರ ಶುರುವಾಗಿ ಅದಾಗಲೇ ಎರಡು ಪಂದ್ಯ ಮುಗಿದೇ ಬಿಟ್ಟಿದೆ. ಮರಳುಗಾಡಿನ ನಗರಿಯಲ್ಲಿ ತಾಪಮಾನದ ಬಿಸಿ ಹೆಚ್ಚಿರುವಂತೆ ಅಭಿಮಾನಿಗಳ ಹೃದಯದಲ್ಲಿ ಚುಟುಕು ಕ್ರಿಕೆಟ್‌ನ ಕ್ರೇಜ್‌ ಹೆಚ್ಚಾಗಿದೆ.

ಟಿ20 ಅಂದಾಕ್ಷಣ ಹೊಡಿಬಡಿ ಆಟವೇ ಅಭಿಮಾನಿಗಳ ಫೇವರಿಟ್. ಅದರಲ್ಲೂ ಐಪಿಎಲ್‌ನಲ್ಲಿ ಕೆಲ ಬ್ಯಾಟ್ಸ್‌ಮನ್‌ಗಳಿಗಂತೂ ಭಾರೀ ಮಟ್ಟದ ಫಾಲೋವರ್ಸ್‌ಗಳಿದ್ದಾರೆ. ಏಕೆಂದರೆ ಈ ಆಟಗಾರರ ತೋಳ್ಬಲವೇ ಅಂತಹುದು. ಕ್ಷಣಮಾತ್ರದಲ್ಲಿ ಪಂದ್ಯದ ದಿಕ್ಕನ್ನೇ ಬದಲಿಸುವ ತಾಕತ್ತು ಇವರಿಗಿದೆ.

IPL 2020: ಆರ್‌ಸಿಬಿ ಆಂಥೆಮ್‌ಗಿಂತಲೂ ಪಂಜಾಬ್‌ ತಂಡದಲ್ಲೇ ಕನ್ನಡ ಹೆಚ್ಚು!IPL 2020: ಆರ್‌ಸಿಬಿ ಆಂಥೆಮ್‌ಗಿಂತಲೂ ಪಂಜಾಬ್‌ ತಂಡದಲ್ಲೇ ಕನ್ನಡ ಹೆಚ್ಚು!

ಈ ಬಾರಿಯ ಐಪಿಎಲ್ ಸೀಸನ್ ನಲ್ಲಿ ಈ ಐವರು ಡೇಂಜರಸ್ ಬ್ಯಾಟ್ಸ್ ಮನ್‌ಗಳು ಎದುರಾಳಿಗಳಿಗೆ ನಡುಕ ಹುಟ್ಟಿಸಿದ್ದಾರೆ.

IPL ಜೊತೆಗೆ ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್‌ ಆಡಿ ಬಹುಮಾನ ಗೆಲ್ಲಿ IPL ಜೊತೆಗೆ ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್‌ ಆಡಿ ಬಹುಮಾನ ಗೆಲ್ಲಿ

ಆಂಡ್ರ್ಯೂ ರಸ್ಸೆಲ್

ಆಂಡ್ರ್ಯೂ ರಸ್ಸೆಲ್

ಐಪಿಎಲ್‌ನ ಡೇಂಜರಸ್ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಕೆಕೆಆರ್ ತಂಡದ ಆಲ್ ರೌಂಡರ್ ಆಂಡ್ರ್ಯೂ ರಸ್ಸೆಲ್ ಗೆ ಅಗ್ರಸ್ಥಾನ. ರಸ್ಸೆಲ್ ಮಸಲ್ ಪವರ್ ಗೆ, ಬ್ರೇಕ್ ಹಾಕಲು ಯಾವ ತಂಡದ ಬೌಲರ್ ಗಳಿಂದಲೂ ಸುಲಭವಾಗಂತೂ ಸಾಧ್ಯವಿಲ್ಲ.

ಕಳೆದ ಐಪಿಎಲ್ ಸೀಸನ್‌ನಲ್ಲಿ ಆಡಿದ 14 ಪಂದ್ಯಗಳಲ್ಲಿ 204.81 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದ ರಸ್ಸೆಲ್ 52 ಭರ್ಜರಿ ಸಿಕ್ಸರ್ ಸಿಡಿಸಿದ್ರು. ನಾಲ್ಕು ಸ್ಫೋಟಕ ಅರ್ಧಶತಕ ಸಿಡಿಸಿರುವ ರಸ್ಸೆಲ್ ಒಟ್ಟಾರೆ ಐಪಿಎಲ್ ಸೀಸನ್‌ನಲ್ಲಿ 120 ಬಾರಿ ಚೆಂಡನ್ನ ಗೆರೆ ದಾಟಿಸಿದ್ದಾರೆ.

ಕ್ರಿಸ್ ಗೇಲ್

ಕ್ರಿಸ್ ಗೇಲ್

ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್‌ಗೇಲ್ ಆರ್ಭಟದ ಬಗ್ಗೆ ಹೆಚ್ಚು ಹೇಳಲು ಏನು ಇಲ್ಲ. ಟಿ೨೦ ಕ್ರಿಕೆಟ್‌ನ ದೊರೆ ಎಂದೇ ಬಿಂಬಿತವಾಗಿರುವ ಕೆರಿಬಿಯನ್ ಬ್ಯಾಟ್ಸ್‌ಮನ್ ಐಪಿಎಲ್ ನಲ್ಲಿ 326 ಸಿಕ್ಸರ್ ಸಿಡಿಸಿದ್ದಾರೆ. ಗೇಲ್ ಬಿರುಗಾಳಿ ಎಬ್ಬಿಸಿದ್ರೆ ಎದುರಾಳಿ ಟೀಮ್ ಧೂಳೀಪಟವಾಗಿರುವ ಉದಾಹರಣೆ ಸಾಕಷ್ಟಿದೆ.

ಐಪಿಎಲ್‌ನಲ್ಲಿ ಆರು ಶತಕ, 28 ಅರ್ಧಶತಕ ದಾಖಲಿಸಿರುವ ಕ್ರಿಸ್‌ಗೇಲ್ 151ರ ಸ್ಟ್ರೈಕ್‌ರೇಟ್‌ ರೆಕಾರ್ಡ್ ಹೊಂದಿದ್ದಾರೆ. ಈತ ಕಿಂಗ್ಸ್‌ ಇಲೆವೆನ್ ಪಂಜಾಬ್‌ ತಂಡಕ್ಕೆ ನೂರಾನೆ ಬಲ ತಂದುಕೊಡಬಲ್ಲರು.

ರೋಹಿತ್ ಶರ್ಮಾ

ರೋಹಿತ್ ಶರ್ಮಾ

ನೋಡೋಕೆ ಶಾಂತರೂಪದಲ್ಲಿ ಕಾಣುವ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅಬ್ಬರಿಸೋಕೆ ನಿಂತರೆ ಬಿಗ್‌ ಸ್ಕೋರ್ ಕಲೆ ಹಾಕುವುದರಲ್ಲಿ ನಿಸ್ಸೀಮ. ನಾಯಕನಾಗಿ ನಾಲ್ಕು ಬಾರಿ ತಂಡಕ್ಕೆ ಕಪ್ ಗೆದ್ದುಕೊಟ್ಟಿರುವ ರೋಹಿತ್ ಕ್ರೀಸ್‌ನಲ್ಲಿದ್ದಷ್ಟು ಕಾಲ ಎದುರಾಳಿಗೆ ಟೆನ್ಷನ್ ಗ್ಯಾರೆಂಟಿ.

ಕಳೆದ ಐಪಿಎಲ್ ಸೀಸನ್ ನಲ್ಲಿ 405ರನ್ ಗಳಿಸಿದ್ದ ರೋಹಿತ್, ಈ ಬಾರಿಯೂ ಸ್ಫೋಟಕ ಬ್ಯಾಟಿಂಗ್ ಮಾಡುವುದರಲ್ಲಿ ಅನುಮಾನವಿಲ್ಲ. 189 ಪಂದ್ಯಗಳಲ್ಲಿ 36 ಅರ್ಧಶತಕ, 1 ಶತಕ ಸೇರಿದಂತೆ ಒಟ್ಟಾರೆ 4910 ರನ್‌ ದಾಖಲಿಸಿದ್ದಾರೆ.

ಎಬಿ ಡಿವಿಲಿಯರ್ಸ್

ಎಬಿ ಡಿವಿಲಿಯರ್ಸ್

vo : ಮಿಸ್ಟರ್ 360ಎಬಿ ಡಿವಿಲಿಯರ್ಸ್, ರೌದ್ರಾವತಾರ ತಾಳಿದ್ರೆ ಸಿಕ್ಸರ್ ಗಳ ಸುರಿಮಳೆ ಸುರಿಯೋದು ಪಕ್ಕಾ. ಈ ಬಾರಿ ಆರ್‌ಸಿಬಿ ಪರ ಕಪ್ ಗೆಲ್ಲೋದಕ್ಕಾಗಿ ಎಬಿಡಿ ಪರಾಕ್ರಮ ತೋರಿಸದೇ ಸುಮ್ಮನೇ ಇರುವ ಜಾಯಮಾನ ಇವರದ್ದಲ್ಲ.

ಕ್ರೀಡಾಂಗಣದ ಯಾವುದೇ ಮೂಲೆಗೆ ಚೆಂಡನ್ನು ಅಟ್ಟುವ ಸಾಮರ್ಥ್ಯ ಹೊಂದಿರುವ ಎಬಿಡಿಗೆ ವಿಶ್ವದ ಶ್ರೇಷ್ಟ ಬೌಲರ್‌ಗಳು ಬೌಲ್ ಮಾಡೋಕು ಮೊದಲು ಒಮ್ಮೆ ಯೋಚಿಸಲೇಬೇಕು. ಕಳೆದ ಸೀಸನಸ್‌ನಲ್ಲಿ ಐದು ಅರ್ಧಶತಕ ದಾಖಲಿಸಿದ್ದ ಎಬಿಡಿ ಒಟ್ಟಾರೆ ಐಪಿಎಲ್‌ನಲ್ಲಿ 212 ಭರ್ಜರಿ ಸಿಕ್ಸರ್ ಸಿಡಿಸಿದ್ದಾರೆ. ಈ ಬಾರಿಯು ಆರ್‌ಸಿಬಿ ಪರ ಕೊಹ್ಲಿ ಜೊತೆಗೆ 360 ಆಟ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.

ಹಾರ್ದಿಕ್ ಪಾಂಡ್ಯಾ

ಹಾರ್ದಿಕ್ ಪಾಂಡ್ಯಾ

ಹಾರ್ದಿಕ್ ಪಾಂಡ್ಯಾ ಮುಂಬೈ ಇಂಡಿಯನ್ಸ್ ತಂಡದ ಬಿಗ್ ಹಿಟ್ಟರ್. ಇನ್ನೇನು ತಂಡ ಸೋಲುತ್ತೆ ಅನ್ನುವ ಸಮಯದಲ್ಲೂ, ಸ್ಫೋಟಕ ಬ್ಯಾಟಿಂಗ್ ನಿಂದ ರನ್ ಮಳೆಯನ್ನ ಹರಿಸಿ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾನೆ.

ಐಪಿಎಲ್‌ನಲ್ಲಿ 1,000ಕ್ಕೂ ಹೆಚ್ಚು ರನ್ ಮತ್ತು 42 ವಿಕೆಟ್ ಕಬಳಿಸಿರುವ ಹಾರ್ದಿಕ್ 154.57 ಸ್ಟ್ರೈಕ್‌ರೇಟ್‌ ಹೊಂದಿದ್ದಾರೆ. ಬೌಂಡರಿಗಳಿಗೆ ಸಮವಾಗಿ 72 ಸಿಕ್ಸರ್ ಸಿಡಿಸಿದ್ದಾನೆ.

ಹೀಗೆ ಈ ಬಾರಿಯ ಕಲರ್ ಫುಲ್ ಟೂರ್ನಿಯಲ್ಲಿ ಅಬ್ಬರಿಸಿ ಬೊಬ್ಬಿರಿಯೋಕೆ ರೆಡಿಯಾಗ್ತೀರೋ ಈ ಐವರು ಆಟಗಾರರನ್ನ ಕಟ್ಟಿಹಾಕಲು, ಎದುರಾಳಿ ತಂಡಗಳು ರಣತಂತ್ರ ಹಣೆಯುತ್ತಿವೆ.

English summary
In this article explained top five dangerous batsman in the 13th ipl season.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X