ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್ 06ರ ಹತ್ತು ಪ್ರಮುಖ ಸುದ್ದಿಗಳ ಸಂಗ್ರಹ

ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ, ಈ ಸಮಯದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ.ಪ್ರಮುಖ ಸುದ್ದಿಗಳಲ್ಲಿ ಹಾರ್ದಿಕ್ ಪಾಂಡ್ಯ, ವಿಜಯ್ ಮಲ್ಯ, ನರೇಂದ್ರ ಮೋದಿ, ಗಾಲಿ ಜನಾರ್ದನ ರೆಡ್ಡಿ ಇದ್ದಾರೆ.

By Mahesh
|
Google Oneindia Kannada News

ಬೆಂಗಳೂರು, ಜೂನ್ 06: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ, ಈ ಸಮಯದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ.

ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

Today's Top News, Breaking News | News in Brief June 06

ಪ್ರಮುಖ ಸುದ್ದಿಗಳಲ್ಲಿ #ಹಾರ್ದಿಕ್ ಪಾಂಡ್ಯ, #ವಿಜಯ್ ಮಲ್ಯ, #ನರೇಂದ್ರ ಮೋದಿ, #ಗಾಲಿ ಜನಾರ್ದನ ರೆಡ್ಡಿ ಇದ್ದಾರೆ.

1. ಹಾರ್ದಿಕ್ ಪಾಂಡ್ಯಗೆ ಬ್ಯಾಟಿಂಗ್ ಬಡ್ತಿ, ಕುಂಬ್ಳೆ ನಡೆಗೆ ಯಶಸ್ಸು
ಚಾಂಪಿಯನ್ಸ್ ಟ್ರೋಫಿ 2017ರ ಭಾರತ ಹಾಗೂ ಪಾಕಿಸ್ತಾನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯಗೆ ಬ್ಯಾಟಿಂಗ್ ನಲ್ಲಿ ಬಡ್ತಿ ಸಿಕ್ಕಿದ್ದು, ಆ ಸಮಯಕ್ಕೆ ಅಚ್ಚರಿ ಮೂಡಿಸಿದರೂ, ಕೋಚ್ ಅನಿಲ್ ಕುಂಬ್ಳೆ ತೆಗೆದುಕೊಂಡ ಕ್ರಮ ಎಲ್ಲರ ಮೆಚ್ಚುಗೆ ಪಡೆದಿದೆ. [ಈ ಬಗ್ಗೆ ಇನ್ನಷ್ಟು ಓದಿ...]

UGC, AICTE ಬರಖಾಸ್ತುಗೊಳಿಸಲು ಕೇಂದ್ರ ಸರ್ಕಾರ ನಿರ್ಧಾರUGC, AICTE ಬರಖಾಸ್ತುಗೊಳಿಸಲು ಕೇಂದ್ರ ಸರ್ಕಾರ ನಿರ್ಧಾರ

ಉನ್ನತ ಶಿಕ್ಷಣಕ್ಕೆ ದೇಶದಲ್ಲಿ ಒಂದೇ ಆಡಳಿತ ಮಂಡಳಿ ಇರಬೇಕೆಂದು ಸಂಕಲ್ಪ ಮಾಡಿರುವ ಕೇಂದ್ರ ಸರ್ಕಾರ, ಈಗ ಉನ್ನತ ಶಿಕ್ಷಣದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಯುಜಿಸಿ (ವಿಶ್ವವಿದ್ಯಾಲಯ ಅನುದಾನ ಆಯೋಗ) ಹಾಗೂ ಎಐಸಿಟಿಇ (ಅಖಿಲ ಭಾರತ ತಾಂತ್ರಿಕ ಶಿಕ್ಷಣ ಕೌನ್ಸಿಲ್) ಗಳನ್ನು ಬರಖಾಸ್ತುಗೊಳಿಸಿ ಹೊಸ ಮಂಡಳಿಯೊಂದನ್ನು ಅಸ್ತಿತ್ವಕ್ಕೆ ತರಲು ಯೋಜಿಸಿದೆ.[ಈ ಬಗ್ಗೆ ಇನ್ನಷ್ಟು ಓದಿ...]

Today's Top News, Breaking News | News in Brief June 06

ಕ್ರಿಕೆಟ್ : ರನೌಟ್ ನಲ್ಲಿ ಹೊಸ ನಿಯಮಗಳು ಜಾರಿ

ಕ್ರಿಕೆಟ್ ನಲ್ಲಿ ಈವರೆಗಿದ್ದ ರನೌಟ್ ನಿಯಮಗಳನ್ನು ಹಾಗೂ ಆಟಗಾರರ ಬ್ಯಾಟ್ ನ ರೂಪುರೇಷೆಗಳಿಗೆ ಸಂಬಂಧಪಟ್ಟಂತೆ ಈಗಿರುವ ನಿಯಮಗಳನ್ನು ಬದಲಿಸಬೇಕೆಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಗೆ (ಐಸಿಸಿ), ಕ್ರಿಕೆಟ್ ನಿಯಮಗಳನ್ನು ರೂಪಿಸುವ ಮೆರಿಲಿಬೊನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಮನವಿ ಮಾಡಿದೆ. ಇದಕ್ಕೆ ಪೂರಕವಾಗಿ, ಕೆಲವಾರು ಶಿಫಾರಸುಗಳನ್ನು ಅದು ಶಿಫಾರಸು ಮಾಡಿದೆ.[ಈ ಬಗ್ಗೆ ಇನ್ನಷ್ಟು ಓದಿ...]

ಶೀಘ್ರವೇ ದಿನನಿತ್ಯ 'ಇನ್ಸುಲಿನ್' ಇಂಜೆಕ್ಷನ್ ಗೆ ಗುಡ್ ಬೈಶೀಘ್ರವೇ ದಿನನಿತ್ಯ 'ಇನ್ಸುಲಿನ್' ಇಂಜೆಕ್ಷನ್ ಗೆ ಗುಡ್ ಬೈ

ದಿನನಿತ್ಯವೂ ಇನ್ಸುಲಿನ್ ಇಂಜೆಕ್ಷನ್ ಚುಚ್ಚಿಸಿಕೊಳ್ಳಬೇಕಾದ ಮಧುಮೇಹಿಗಳಿಗೊಂದು 'ಸಿಹಿ' ಸುದ್ದಿ ಬಂದಿದೆ. ಮಧುಮೇಹಿಗಳು ತಿಂಗಳಿಗೊಮ್ಮೆ ಮಾತ್ರ ವಿಶೇಷ ಚಿಕಿತ್ಸೆಗೆ ಒಳಗಾಗುವಂಥ ಹೊಸತೊಂದು ಔಷಧಿಯನ್ನು ಅಮೆರಿಕದ ವಿಜ್ಞಾನಿಗಳು ಮಾಡಿದ್ದು, ಇದರಿಂದ ದಿನನಿತ್ಯ ಇನ್ಸುಲಿನ್ ಔಷಧಿಗಳನ್ನು ತೆಗೆದುಕೊಳ್ಳುವ ಪದ್ಧತಿಗೆ ಪೂರ್ಣ ವಿರಾಮ ಬೀಳಲಿದೆ.[ಈ ಬಗ್ಗೆ ಇನ್ನಷ್ಟು ಓದಿ...]

Today's Top News, Breaking News | News in Brief June 06

'ಡಿಡಿ ಮುಂದೆ ಡಲ್ ಹೊಡೆಯಲಿವೆ ಎಲ್ಲ ಖಾಸಗಿ ಚಾನಲ್'!'ಡಿಡಿ ಮುಂದೆ ಡಲ್ ಹೊಡೆಯಲಿವೆ ಎಲ್ಲ ಖಾಸಗಿ ಚಾನಲ್'!

"ಇನ್ನೈದು ವರ್ಷಗಳಲ್ಲಿ ದೂರದರ್ಶನದ ಮುಂದೆ ಖಾಸಗಿ ಚಾನಲ್ಲುಗಳು ಡಲ್ ಹೊಡೆಯುವಂತೆ ಮಾಡುತ್ತೇನೆ" ಎಂದು ಪ್ರಸಾರ ಭಾರತಿಗೆ ಹೊಸದಾಗಿ ಸಿಇಓ ಆಗಿ ನೇಮಕವಾಗಿರುವ ಶಶಿಶೇಖರ್ ವೆಂಪಾಟಿ ಅವರು ಹೇಳಿರುವುದು ಉತ್ಪ್ರೇಕ್ಷೆಯಾಗಿ ಕಂಡರೂ ಅವರಲ್ಲಿನ ಆತ್ಮವಿಶ್ವಾಸಕ್ಕೆ ಈ ಹೇಳಿಕೆ ಕನ್ನಡಿ ಹಿಡಿದಂತಿದೆ.[ಈ ಬಗ್ಗೆ ಇನ್ನಷ್ಟು ಓದಿ...]

1313 ರಾಜ್ಯ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ1313 ರಾಜ್ಯ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಜಿಲ್ಲಾವಾರು ಪೊಲೀಸ್ ಕಾನ್ಸ್ ಟೇಬಲ್ ನಾಗರಿಕ (ಪುರುಷ ಮತ್ತು ಮಹಿಳಾ) ಖಾಲಿ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.[ಈ ಬಗ್ಗೆ ಇನ್ನಷ್ಟು ಓದಿ...]

Today's Top News, Breaking News | News in Brief June 06

ಕೊಹ್ಲಿ ಜತೆ ಮಲ್ಯ ಕಂಡು ಕಿರಿಕಿರಿ ಅನುಭವಿಸಿದ ಆಟಗಾರರು!

ಕೋಹ್ಲಿ ನೇತೃತ್ವದ ಟೀಂ ಇಂಡಿಯಾ ದೇಣಿಗೆ ಕಾರ್ಯಕ್ರಮದಲ್ಲಿ ಉದ್ಯಮಿ ವಿಜಯ್ ಮಲ್ಯ ಅವರ ಆಗಮನವಾಗುತ್ತಿದ್ದಂತೆ ತಂಡದ ಅನೇಕ ಆಟಗಾರರು ಮುಜುಗರದಿಂದ ಅತ್ತಿತ್ತ ನೋಡ ತೊಡಗಿದ್ದಾರಂತೆ.[ಈ ಬಗ್ಗೆ ಇನ್ನಷ್ಟು ಓದಿ...]

ಮಾಜಿ ಮಂತ್ರಿ ಗಾಲಿ ಜನಾರ್ದನ ರೆಡ್ಡಿಯ ಎರಡು ಕನಸುಮಾಜಿ ಮಂತ್ರಿ ಗಾಲಿ ಜನಾರ್ದನ ರೆಡ್ಡಿಯ ಎರಡು ಕನಸು

2019ರ ವೇಳೆಗೆ ಕೇಂದ್ರದಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿ ಹಾಗೂ ರಾಜ್ಯದಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿ ಕಾಣುವುದು ನನ್ನ ಕನಸು ಎಂದು ಗಾಲಿ ರೆಡ್ಡಿ ಹೇಳಿದ್ದಾರೆ.[ಈ ಬಗ್ಗೆ ಇನ್ನಷ್ಟು ಓದಿ...]

Today's Top News, Breaking News | News in Brief June 06

ರಾಷ್ಟ್ರಪತಿ ಸ್ಥಾನಕ್ಕೆ ಸುಮಿತ್ರಾ, ಉಪರಾಷ್ಟ್ರಪತಿಯಾಗಿ ವೆಂಕಯ್ಯ!ರಾಷ್ಟ್ರಪತಿ ಸ್ಥಾನಕ್ಕೆ ಸುಮಿತ್ರಾ, ಉಪರಾಷ್ಟ್ರಪತಿಯಾಗಿ ವೆಂಕಯ್ಯ!

ರಾಷ್ಟ್ರಪತಿ ಸ್ಥಾನಕ್ಕೆ ಬಿಜೆಪಿಯಿಂದ ಅಭ್ಯರ್ಥಿಯಾಗಿ ಜಾರ್ಖಂಡ್ ರಾಜ್ಯಪಾಲೆ ದ್ರೌಪದಿ ಮುರ್ಮು ಅವರು ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ ಎನ್ನುವಷ್ಟರಲ್ಲಿ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಹೆಸರು ಕೇಳಿ ಬಂದಿದೆ.[ಈ ಬಗ್ಗೆ ಇನ್ನಷ್ಟು ಓದಿ...]

ಇದು ನಮ್ಮ ಸಂಸ್ಕೃತಿ ಕಣ್ರೀ, ಟ್ರಂಪ್ ಆರೋಪಕ್ಕೆ ಭಾರತದ ತಿರುಗೇಟುಇದು ನಮ್ಮ ಸಂಸ್ಕೃತಿ ಕಣ್ರೀ, ಟ್ರಂಪ್ ಆರೋಪಕ್ಕೆ ಭಾರತದ ತಿರುಗೇಟು

ಪ್ಯಾರಿಸ್ ನ ಹವಾಮಾನ ಬದಲಾವಣೆ ಒಪ್ಪಂದಕ್ಕೆ ಭಾರತವು ಒಪ್ಪಿಕೊಂಡಿರುವುದು ದೊಡ್ಡ ಮಟ್ಟದ ಹಣಕಾಸು ನೆರವಿಗಾಗಿ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪವನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನಿರಾಕರಿಸಿದ್ದಾರೆ. ಟ್ರಂಪ್ ಆರೋಪದಲ್ಲಿ ಸತ್ಯವಿಲ್ಲ ಎಂದು ಹೇಳಿದ್ದಾರೆ.[ಈ ಬಗ್ಗೆ ಇನ್ನಷ್ಟು ಓದಿ...]

English summary
Top 10 stories for today - June 06 2017 : The reason behind Hardik Pandya's batting promotion against Pakistan in the ICC Champions Trophy 2017, has been revealed this and many more stories from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X