ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್19: ಟಾಪ್ 10 ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಭಾರಿ ಜಿಗಿತ

|
Google Oneindia Kannada News

ದೆಹಲಿ, ಜುಲೈ 16: ಕೇಂದ್ರ ಆರೋಗ್ಯ ಇಲಾಖೆ ನೀಡಿರುವ ವರದಿ ಪ್ರಕಾರ ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,68,876ಕ್ಕೆ ಏರಿಕೆಯಾಗಿದೆ. ಈ ಪೈಕಿ 6,12,815 ಜನರು ಸೋಂಕಿನಿಂದ ಚೇತರಿಕೆ ಕಂಡಿದ್ದಾರೆ. 3,31,146 ಇನ್ನು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದುವರೆಗೂ ದೇಶದಲ್ಲಿ 24,915 ಜನರು ಕೊರೊನಾದಿಂದ ಮೃತಪಟ್ಟಿದ್ದಾರೆ.

Recommended Video

Obama , Musk , Apple , Uber and may Twitter account Hacked | Oneindia Kannada

ಅತಿ ಹೆಚ್ಚು ಸೋಂಕು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಈಗಲೂ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಎರಡನೇ ಸ್ಥಾನದಲ್ಲಿ ತಮಿಳುನಾಡು ಸಾಗುತ್ತಿದೆ. ಮೂರನೇ ಸ್ಥಾನದಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ಇದ್ದರೆ, ನಾಲ್ಕನೇ ಸ್ಥಾನಕ್ಕೆ ಕರ್ನಾಟಕ ಏರಿದೆ.

IISc study: ಭಾರತದಲ್ಲಿ ಮಾರ್ಚ್ ಅಂತ್ಯದೊಳಗೆ 6 ಕೋಟಿ ಕೊವಿಡ್ ಕೇಸ್ ಪತ್ತೆ!IISc study: ಭಾರತದಲ್ಲಿ ಮಾರ್ಚ್ ಅಂತ್ಯದೊಳಗೆ 6 ಕೋಟಿ ಕೊವಿಡ್ ಕೇಸ್ ಪತ್ತೆ!

ದೈನಂದಿನ ವರದಿಯಲ್ಲೂ ಈಗ ಲೆಕ್ಕಾಚಾರ ಉಲ್ಟಾಪಲ್ಟ ಆಗಿದೆ. ಪ್ರತಿದಿನದ ಸೋಂಕಿತರಲ್ಲಿ ದಕ್ಷಿಣ ರಾಜ್ಯಗಳಲ್ಲಿ ಹೆಚ್ಚು ಕೇಸ್ ದಾಖಲಾಗುತ್ತಿದೆ. ಟಾಪ್ ಹತ್ತರ ಪಟ್ಟಿಯಲ್ಲಿ ಕರ್ನಾಟಕ ಭಾರಿ ಏರಿಕೆ ಕಂಡಿದೆ. ಹಾಗಿದ್ರೆ, ಜುಲೈ 15ರ ವರದಿಯಲ್ಲಿ ಯಾವ ರಾಜ್ಯಗಳು ಎಷ್ಟನೇ ಸ್ಥಾನದಲ್ಲಿದೆ? ಮುಂದೆ ಓದಿ....

ಹೊಸ ಕೇಸ್‌ಗಳ ಪಟ್ಟಿಯಲ್ಲಿ ರಾಜ್ಯಕ್ಕೆ 3ನೇ ಸ್ಥಾನ

ಹೊಸ ಕೇಸ್‌ಗಳ ಪಟ್ಟಿಯಲ್ಲಿ ರಾಜ್ಯಕ್ಕೆ 3ನೇ ಸ್ಥಾನ

ಹೊಸ ಕೇಸ್‌ಗಳ ಪಟ್ಟಿಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ, ತಮಿಳುನಾಡು ಬಳಿಕ ಕರ್ನಾಟಕದಲ್ಲಿ ಅತಿ ಹೆಚ್ಚು ಸೋಂಕು ಕಂಡುಬಂದಿದೆ. ಜುಲೈ 15ರ ಅಂಕಿ ಅಂಶ ಗಮನಿಸಿದರೆ ಮಹಾರಾಷ್ಟ್ರದಲ್ಲಿ 7975 ಕೇಸ್, ತಮಿಳುನಾಡಿನಲ್ಲಿ 4496 ಕೇಸ್ ಹಾಗೂ ಕರ್ನಾಟಕದಲ್ಲಿ 3176 ಕೇಸ್ ವರದಿಯಾಗಿದೆ. ಒಂದು ತಿಂಗಳ ಹಿಂದೆ ಕರ್ನಾಟಕ ಟಾಪ್ 10ರೊಳಗೆ ಇರಲಿಲ್ಲ. ಈಗ ಟಾಪ್ 3ಗೆ ಬಂದಿದೆ.

ಅತಿ ಹೆಚ್ಚು ಸೋಂಕಿನಲ್ಲಿ ನಾಲ್ಕನೇ ಸ್ಥಾನ

ಅತಿ ಹೆಚ್ಚು ಸೋಂಕಿನಲ್ಲಿ ನಾಲ್ಕನೇ ಸ್ಥಾನ

ಒಂದು ಸಮಯದಲ್ಲಿ ಇಡೀ ಭಾರತಕ್ಕೆ ಕರ್ನಾಟಕ ಮಾದರಿಯಾಗಿತ್ತು. ಕೊವಿಡ್ ನಿಯಂತ್ರಣದಲ್ಲಿ ಯಡಿಯೂರಪ್ಪ ಸರ್ಕಾರಕ್ಕೆ ಮೆಚ್ಚುಗೆ ಸಹ ವ್ಯಕ್ತವಾಗಿತ್ತು. ಆದ್ರೀಗ, ದೇಶದಲ್ಲಿ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕರ್ನಾಟಕ ಜಿಗಿದಿದೆ. ನೋಡು ನೋಡುತ್ತಿದ್ದಂತೆ ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಅಂತ ಏರಿದೆ.

ಇದೇ ಮೊದಲ ಬಾರಿಗೆ ಭಾರತದಲ್ಲಿ ಅತಿ ಹೆಚ್ಚು ಕೊರೊನಾ ಕೇಸ್ ಪತ್ತೆಇದೇ ಮೊದಲ ಬಾರಿಗೆ ಭಾರತದಲ್ಲಿ ಅತಿ ಹೆಚ್ಚು ಕೊರೊನಾ ಕೇಸ್ ಪತ್ತೆ

ಯಾವ ರಾಜ್ಯದಲ್ಲಿ ಎಷ್ಟು ಕೇಸ್ ಇದೆ?

ಯಾವ ರಾಜ್ಯದಲ್ಲಿ ಎಷ್ಟು ಕೇಸ್ ಇದೆ?

ಮಹಾರಾಷ್ಟ್ರದಲ್ಲಿ - 2,75,640

ತಮಿಳುನಾಡು - 1,51,820

ದೆಹಲಿ - 1,16,993

ಕರ್ನಾಟಕ - 47,253

ಗುಜರಾತ್ - 44,648

ಉತ್ತರ ಪ್ರದೇಶ - 41,383

ತೆಲಂಗಾಣ - 39,342

ಆಂಧ್ರಪ್ರದೇಶ - 35,451

ಪಶ್ಚಿಮ ಬಂಗಾಳ - 34,427

ರಾಜಸ್ಥಾನ - 26,580

ಆಕ್ಟಿವ್ ಕೇಸ್‌ಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

ಆಕ್ಟಿವ್ ಕೇಸ್‌ಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

ಮಹಾರಾಷ್ಟ್ರದಲ್ಲಿ - 1,11,801

ತಮಿಳುನಾಡು - 47,343

ಕರ್ನಾಟಕ - 27,849

ದೆಹಲಿ - 17,807

ಆಂಧ್ರಪ್ರದೇಶ - 16,621

ಉತ್ತರ ಪ್ರದೇಶ - 14,628

ತೆಲಂಗಾಣ - 12,957

ಪಶ್ಚಿಮ ಬಂಗಾಳ - 12,747

ಗುಜರಾತ್ - 11,222

ಅಸ್ಸಾಂ - 6,810

English summary
Top 10 States with the highest number of coronavirus cases in India till july 15th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X