ಸುದ್ದಿ ಅಂಗಳ: ಮಾರ್ಚ್ 13ರ ಟಾಪ್ 10 ಸುದ್ದಿಗಳು

Posted By:
Subscribe to Oneindia Kannada

ಮಾರ್ಚ್ 13ರಂದು ಬೆಳಗ್ಗೆ ಬಂದು ಅಪ್ಪಳಿಸಿದ ಸುದ್ದಿ, ಕನ್ನಡದ ಶಾಯರಿ ಸಾಹಿತಿ ಇಟಗಿ ಈರಣ್ಣ ಅವರ ನಿಧನ ವಾರ್ತೆ.

ಇದರ ಜತೆಗೆ, ಕೇಂದ್ರ ರಕ್ಷಣಾ ಸಚಿವರ ಸ್ಥಾನಕ್ಕೆ ಮನೋಹರ್ ಪಾರಿಕ್ಕರ್ ರಾಜಿನಾಮೆ, ವಿತ್ತ ಸಚಿವ ಅರುಣ್ ಜೇಟ್ಲಿಯವರಿಗೆ ಹೆಚ್ಚವರಿಯಾಗಿ ರಕ್ಷಣಾ ಖಾತೆ ನೀಡಲಾಗಿರುವುದು, ಮಣಿಪುರದಲ್ಲಿ ಬಿಜೆಪಿ ಅಧಿಕಾರ ಗದ್ದುಗೆಯೇರಿದಂಥ ಸುದ್ದಿಗಳು ಹರಿದಾಡಿದವು.

ಆದರೆ, ಸಂಜೆ ವೇಳೆಗೆ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಪಟ್ಟ ಸುದ್ದಿ ಸೇರಿದಂತೆ ರಸವತ್ತಾದ ಸುದ್ದಿಗಳು ಬಂದವು. ಅವುಗಳಲ್ಲಿ ಕರ್ನಾಟಕದ ಹಾಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಗೆ ಕೆಪಿಸಿಸಿ ಪಟ್ಟ ಸಿಗುವುದು ಬಹುತೇಕ ಖಚಿತ ಹಾಗೂ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿಯವರ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಅಕ್ರಮ ಗಣಿಗಾರಿಕೆ ಪ್ರಕರಣ ರದ್ದು ಹಾಗೂ ಇಡಿಯಿಂದ ಜಪ್ತಿಯಾಗಿದ್ದ ಸುಮಾರು 900 ಕೋಟಿ ರು. ಆಸ್ತಿ ಹಿಂದಿರುಗಿಸಲು ರಾಜ್ಯ ಹೈಕೋರ್ಟ್ ಆದೇಶ ಸುದ್ದಿ ಬಂದವು.

ಅದರ ಜತೆಯಲ್ಲೇ ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಸುದ್ದಿಯೂ ಬಂತು. ಇದು ಮಾರ್ಚ್ 13ರ ದಿನದ ಹೈಲೈಟ್.

ಇವೂ ಸೇರಿದಂತೆ ಆಸಕ್ತರ ಓದಿಗಾಗಿ, ಮಾರ್ಚ್ 13ರ ಟಾಪ್ 10 ಸುದ್ದಿಗಳನ್ನು ಕೊಡಲಾಗಿದೆ. ಆಸಕ್ತರು ಹೆಡ್ ಲೈನ್ ಮೇಲೆ ಕ್ಲಿಕ್ಕಿಸಿ ಓದಬಹುದು. ದಿನದ ಸುದ್ದಿ ಸಾರವನ್ನು ತಂದಿಲ್ಲಿ ಹರಡುವಲ್ಲಿ ನಮ್ಮ ಈ ಪ್ರಯತ್ನ.

Exclusive: ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್, ಘೋಷಣೆ ಬಾಕಿ

ಜನಾರ್ದನ ರೆಡ್ಡಿ ವಿರುದ್ಧದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

ಇಂದಿರಾ ಗಾಂಧಿಗೆ ಇಬ್ರಾಹಿಂ ಕೆಟ್ಟ ಭಾಷೆಯಲ್ಲಿ ಹೀಯಾಳಿಸುತ್ತಿದ್ದರು - ಸುರೇಶ್ ಕುಮಾರ್

ಮೋದಿಯನ್ನು ಹುಚ್ಚನಿಗೆ ಹೋಲಿಸಿದ ಸಿಎಂ ಇಬ್ರಾಹಿಂ ಮೇಲೆ ಎಫ್ಐಆರ್

ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ವಿದ್ಯಾರ್ಥಿ ಆತ್ಮಹತ್ಯೆ!!

ಓದುಗರ ಆಯ್ಕೆ: ರವಿಚಂದ್ರನ್ ಗೆ 'ಫಿಲ್ಮಿಬೀಟ್ ಕನ್ನಡ'ದಿಂದ ಪ್ರೀತಿಯ ಸನ್ಮಾನ

Breaking: ಭಾರತದ ನೂತನ ರಕ್ಷಣಾ ಸಚಿವರಾಗಿ ಅರುಣ್ ಜೇಟ್ಲಿ

'ಚಂದಕ್ಕಿಂತ ಚೆಂದ ನೀನೇ ಸುಂದರ' ಹಾಡು ಬರೆದ ಇಟಗಿ ಈರಣ್ಣ ಇನ್ನಿಲ್ಲ

ಮತ್ತೊಂದು 'ಭಕ್ತಿಗೀತೆ' ಹಾಡಿ ವಿವಾದಕ್ಕೆ ತೆರೆ ಎಳೆದ ಸುಹಾನ ಸೈಯದ್!

ಇಡೀ ಸ್ಯಾಂಡಲ್ ವುಡ್ ತಲೆ ತಗ್ಗಿಸುವಂತೆ ಮಾಡಿದ ನಿರ್ಮಾಪಕ ಈತ.!

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a stream of news of March 14, Parikkar resigned as Defence Minister to become Goa CM, calcellation of illigal mining case against Gali Janardhana Reddy by Karnataka high Court were important among them.
Please Wait while comments are loading...