ಮೋದಿ ನಿರ್ಧಾರಗಳಿಂದ ಚೀನಾಕ್ಕೆ ಲಾಭ: ಮನಮೋಹನ್ ಸಿಂಗ್ ಟೀಕೆ

Subscribe to Oneindia Kannada

ಸೂರತ್, ಡಿಸೆಂಬರ್ 2: ವಿಧಾನಸಭೆ ಚುನಾವಣೆ ಎದುರಿಸಲಿರುವ ಗುಜರಾತ್ ನಲ್ಲಿ ಇಂದು ಮನಮೋಹನ್ ಸಿಂಗ್ ವೃತ್ತಿಪರರು ಮತ್ತು ಉದ್ಯಮಿಗಳನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮೋದಿ ಸರಕಾರವನ್ನು ಅವರು ಹಿಗ್ಗಾ ಮುಗ್ಗಾ ಟೀಕಿಸಿದರು.

"ಖೋಟಾ ನೋಟು ನಿರ್ಮೂಲನೆ, ಕಪ್ಪು ಹಣ ಪತ್ತೆ ಸೇರಿದಂತೆ ಅಪನಗದೀಕರಣದ ಯಾವುದೇ ಉದ್ದೇಶಗಳು ಇಡೇರಿಲ್ಲ. ಇನ್ನೊಂದು ಕಡೆ ಬಡವರು ಸಂಕಷ್ಟ ಅನುಭವಿಸಿದರೆ ಕಪ್ಪು ಹಣ ಉಳ್ಳವರು ಬಿಳಿ ಹಣಕ್ಕೆ ಪರಿವರ್ತನೆ ಮಾಡಿಕೊಂಡರು," ಎಂದು ಕಿಡಿಕಾರಿದರು.

Too early to say low growth trend reversed: Manmohan Singh

"ಕಪ್ಪು ಹಣದಿಂದಾಗಿ ದೇಶದ ಆರ್ಥಿಕತೆಗೆ 1.5 ಲಕ್ಷ ಕೋಟಿ ನಷ್ಟವಾಗಿದೆ. ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರ ಶೇಕಡಾ 5.7ಕ್ಕೆ ಕುಸಿದಿದೆ. ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಶೇಕಡಾ 6.7ಕ್ಕೆ ಏರಿಕೆಯಾದರೂ ಇದು ಯುಪಿಎಯ ಹತ್ತು ವರ್ಷಗಳ ಸರಾಸರಿ ಶೇಕಡಾ 10.6ಕ್ಕಿಂತ ಕಡಿಮೆ," ಎಂದು ಮನಮೋಹನ್ ಸಿಂಗ್ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ಜತೆಗೆ ಕುಸಿಯುತ್ತಿದ್ದ ಅಭಿವೃದ್ಧಿ ದರ ಏರಿಕೆಯತ್ತ ಸಾಗಿದೆ ಎನ್ನಲು ಇದು ಸಕಾಲವಲ್ಲ ಎಂದು ಹಿರಿಯ ಆರ್ಥಿಕ ತಜ್ಞರೂ ಆದ ಸಿಂಗ್ ಹೇಳಿದರು.

ಭಾರತದ ಆರ್ಥಿಕತೆಗಾದ ಈ ಹೊಡೆತದಿಂದ ಚೀನಾಕ್ಕೆ ಲಾಭವಾಗಿದೆ. 2016-17ರ ಮೊದಲ ಭಾಗದಲ್ಲಿ ಚೀನಾದಿಂದ ಆಮದು ಮಾಡಿಕೊಂಡ ವಸ್ತುಗಳ ಪ್ರಮಾಣ ದೊಡ್ಡ ಮಟ್ಟಕ್ಕೆ ಏರಿಕೆಯಾಗಿರುವುದೇ ಇದಕ್ಕೆ ಸಾಕ್ಷಿ ಎಂದು ಅವರು ವಿವರ ನೀಡಿದರು.

ಇದೇ ವೇಳೆ ಅಪನಗದೀಕರಣದ ದುರಂತಗಳ ಬಗ್ಗೆ ಮಾತನಾಡಿದ ಮನಮೋಹನ್ ಸಿಂಗ್, "ಅಪನಗದೀಕರಣದಿಂದ ಬ್ಯಾಂಕ್ ಗಳ ಮುಂದೆ ಸಾಲು ನಿಂತು ಜೀವ ಕಳೆದುಕೊಂಡ 100ಕ್ಕೂ ಹೆಚ್ಚು ಜನರನ್ನು ನಾನು ಮರೆಯಲಾರೆ. ನವೆಂಬರ್ 8 ಭಾರತದ ಆರ್ಥಿಕತೆ ಮತ್ತು ಪ್ರಜಾಪ್ರಭುತ್ವಕ್ಕೆ ಕರಾಳ ದಿನ ಎಂಬುದಾಗಿ ನಾನು ಆಳವಾದ ಜವಾಬ್ದಾರಿ ಮತ್ತು ಗಾಢ ನೋವಿನಿಂದ ಹೇಳುತ್ತಿದ್ದೇನೆ," ಎಂದು ಸಿಂಗ್ ಅಭಿಪ್ರಾಯಪಟ್ಟರು.

ಇದೇ ಸಂದರ್ಭ "ಪಂಡಿತ್ ಜವಾಹರ್ ಲಾಲ್ ನೆಹರೂ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲರ ಮಧ್ಯೆ ವೈಷಮ್ಯ ಸೃಷ್ಟಿಸಿ ಮೋದಿ ಗಿಟ್ಟಿಸಿದ್ದು ಏನೂ ಇಲ್ಲ," ಎಂದು ಮನಮೋಹನ್ ಸಿಂಗ್ ವಾಗ್ದಾಳಿ ನಡೆಸಿದರು.
ನಾನು ನನ್ನ ವಿನಮ್ರತೆಯ ಹಿನ್ನಲೆಯಲ್ಲಿ ಜನರಿಂದ ಕರುಣೆ ಪಡೆಯಲು ಬಯಸುವುದಿಲ್ಲ. ಈ ವಿಷಯದಲ್ಲಿ ನಾನು ಮೋದಿಜೀ ಜತೆ ಸ್ಪರ್ಧೆಗೆ ಇಳಿಯುತ್ತಿಲ್ಲ ಎಂದು ಮನಮೋಹನ್ ಸಿಂಗ್ ಪ್ರಧಾನಿ ಕಾಲೆಳೆದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former Prime Minister Manmohan Singh today welcomed the uptick in the Q2 GDP growth at 6.3 per cent but cautioned that it is too early to say there is a reversal in decline seen in the past five quarters.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ