• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

"ಡೆಲ್ಟಾ ಪ್ಲಸ್ ಒಂದರ ಮೇಲೇ ಕೊರೊನಾ ಮೂರನೇ ಅಲೆ ನಿರ್ಧರಿತವಲ್ಲ"

|
Google Oneindia Kannada News

ನವದೆಹಲಿ, ಜೂನ್ 24: ದೇಶದಲ್ಲಿ ಆತಂಕಕ್ಕೆ ಕಾರಣವಾಗಿರುವ ಹೊಸ ಡೆಲ್ಟಾ ಪ್ಲಸ್ ರೂಪಾಂತರ ಕೊರೊನಾ ಮೂರನೇ ಅಲೆ ಸೃಷ್ಟಿಗೆ ಕಾರಣವಾಗುತ್ತದೆಯೇ ಇಲ್ಲವೇ ಎಂಬುದನ್ನು ಈಗಲೇ ಊಹಿಸುವುದು ಸಾಧ್ಯವಿಲ್ಲ ಎಂದಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ವೈದ್ಯ, ಸಂಭವನೀಯ ಕೊರೊನಾ ಮೂರನೇ ಅಲೆ ಹಲವು ಅಂಶಗಳ ಮೇಲೆ ಅವಲಂಬಿತವಾಗಿದೆ ಎಂದಿದ್ದಾರೆ.

"ದೇಶದಲ್ಲಿ ಕೊರೊನಾ ಎರಡನೇ ಅಲೆ ನಿರ್ವಹಣೆ ಸಾಗುತ್ತಿರುವ ಈ ಸಂದರ್ಭದಲ್ಲಿ ಮೂರನೇ ಅಲೆ ಕುರಿತು ಯಾವುದೇ ಊಹೆ ಮಾಡುವುದು ಸೂಕ್ತವಲ್ಲ. ಕೊರೊನಾ ಮೂರನೇ ಅಲೆ ಈ ರೂಪಾಂತರವೊಂದರಿಂದಲೇ ಸಂಭವಿಸುವುದಲ್ಲ. ಹಲವು ಅಂಶಗಳ ಮೇಲೆ ಅವಲಂಬಿತವಾಗಿದೆ" ಎಂದು ಐಸಿಎಂಆರ್ ಸೋಂಕು ಶಾಸ್ತ್ರ ಹಾಗೂ ಸಾಂಕ್ರಾಮಿಕ ರೋಗ ತಜ್ಞ ಡಾ. ಸುಮಿತ್ ಅಗರ್‌ವಾಲ್ ಹೇಳಿದ್ದಾರೆ.

ಮಧ್ಯಪ್ರದೇಶ: ಮೊದಲ 'ಡೆಲ್ಟಾ ಪ್ಲಸ್' ಸೋಂಕಿತೆ ಸಾವುಮಧ್ಯಪ್ರದೇಶ: ಮೊದಲ 'ಡೆಲ್ಟಾ ಪ್ಲಸ್' ಸೋಂಕಿತೆ ಸಾವು

ಈಚೆಗೆ ದೇಶದಲ್ಲಿ ಪತ್ತೆಯಾಗಿರುವ ಡೆಲ್ಟಾ ಪ್ಲಸ್ ರೂಪಾಂತರವನ್ನು ತಜ್ಞರು ಅತಿ ಅಪಾಯಕಾರಿ ಹಾಗೂ ವೇಗವಾಗಿ ಹರಡುವ ಸೊಂಕು ಎಂದು ಪರಿಗಣಿಸಿದ್ದಾರೆ. ಈ ರೂಪಾಂತರದ ಕುರಿತು ಹಲವು ವೈದ್ಯಕೀಯ ಸಂಸ್ಥೆಗಳು ಅಧ್ಯಯನ ಕೈಗೊಂಡಿವೆ. ಸದ್ಯಕ್ಕೆ ಭಾರತದಲ್ಲಿ ಈ ರೂಪಾಂತರದ 40 ಪ್ರಕರಣಗಳಿದ್ದು, ಮಹಾರಾಷ್ಟ್ರ, ಕೇರಳ, ಮಧ್ಯಪ್ರದೇಶ, ಕರ್ನಾಟಕದಲ್ಲಿ ಪತ್ತೆಯಾಗಿದೆ.

"ಪ್ರತಿ ಸೋಂಕು ರೂಪಾಂತರ ಹೊಂದುವುದು ಒಂದು ಪ್ರವೃತ್ತಿ. ಈ ರೂಪಾಂತರವನ್ನು ನಾವು ತಡೆಯಲು ಸಾಧ್ಯವಿಲ್ಲ. ಸಮಯ ಕಳೆದಂತೆ ಇದರ ಸ್ವರೂಪಗಳು ಗೋಚರಿಸುತ್ತವೆ. ಆನಂತರ ಅವುಗಳ ಲಕ್ಷಣಗಳ ಬಗ್ಗೆ ತಿಳಿಯುತ್ತದೆ. ಪ್ರಾಥಮಿಕ ಅಧ್ಯಯನದಿಂದ, ಈ ಸೋಂಕು ಅತಿ ವೇಗವಾಗಿ ಹರಡುತ್ತದೆ ಎಂಬುದು ತಿಳಿದುಬಂದಿದೆ. ಭವಿಷ್ಯದಲ್ಲಿ ಇನ್ನಷ್ಟು ರೂಪಾಂತರಗಳು ಸೃಷ್ಟಿಯಾಗಲಿವೆ" ಎಂದು ಅವರು ಹೇಳಿದ್ದಾರೆ.

"ಈವರೆಗಿನ ಅಧ್ಯಯನದಲ್ಲಿ ಡೆಲ್ಟಾ ಪ್ಲಸ್ ರೂಪಾಂತರದ ಕುರಿತು ಮೂರು ಅಂಶಗಳು ಕಂಡುಬಂದಿವೆ. ಮೊದಲನೆಯದು, ಈ ಸೋಂಕು ಅತಿ ವೇಗವಾಗಿ ಹರಡುತ್ತದೆ. ಎರಡನೇಯದು ಶ್ವಾಸಕೋಶಕ್ಕೆ ಹಾನಿ ಮಾಡುತ್ತದೆ ಹಾಗೂ ಕೊನೆಯದಾಗಿ ಪ್ರತಿರಕ್ಷಣಾ ಚಿಕಿತ್ಸೆಗೆ ಪ್ರಬಲವಾಗಿದೆ" ಎಂದು ಮಾಹಿತಿ ನೀಡಿದ್ದಾರೆ.

English summary
It is too early to predict if delta plus variant will trigger corona 3rd wave in country, says ICMR Dr Sumit Aggarwal
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X