ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತಮ ಸೌಲಭ್ಯ ನೀಡಿದರೆ ರೈಲ್ವೆ ಪ್ರಯಾಣಿಕರು ಮಾಡಿದ್ದು ಇದು....

|
Google Oneindia Kannada News

ಮುಂಬೈ, ಫೆಬ್ರವರಿ 25: ಸುದೀರ್ಘ ಪ್ರಯಾಣ ಬೆಳೆಸುವ ರೈಲ್ವೆ ಪ್ರಯಾಣಿಕರಿಗೆ ಉತ್ತಮ ಪ್ರಯಾಣ ಅನುಭವ, ಸ್ವಚ್ಛತೆ ಮತ್ತು ಆರೋಗ್ಯಯುತ ವಾತಾವರಣ ಕಲ್ಪಿಸುವ ಸಲುವಾಗಿ ಭಾರತೀಯ ರೈಲ್ವೆ 2018ರ ಅಕ್ಟೋಬರ್‌ನಲ್ಲಿ 'ಉತ್ಕೃಷ್ಟ ಯೋಜನೆ'ಯನ್ನು ಪರಿಚಯಿಸಿತ್ತು.

ಆದರೆ, ಪ್ರಯಾಣಿಕರು ಈ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಂಡು ರೈಲ್ವೆಯ ಅಭಿವೃದ್ಧಿಗೆ ಸಹಕರಿಸುತ್ತಿಲ್ಲ. ಬದಲಾಗಿ ಇಲಾಖೆ ಒದಗಿಸುವ ಸೌಲಭ್ಯಗಳನ್ನೇ ಹೊತ್ತೊಯ್ಯುತ್ತಿದ್ದಾರೆ. ಸಾರ್ವಜನಿಕರ ಅನುಕೂಲಕ್ಕಾಗಿ ಇರಿಸಿರುವ ಬೆಲೆಬಾಳುವ ಉಪಕರಣಗಳನ್ನು ಕಳವು ಮಾಡುತ್ತಿದ್ದಾರೆ.

ಬಸ್ಕಿ ಹೊಡೆಯಿರಿ ಉಚಿತವಾಗಿ ಫ್ಲಾಟ್‌ಫಾರ್ಮ್ ಟಿಕೆಟ್ ಪಡೆಯಿರಿ ಬಸ್ಕಿ ಹೊಡೆಯಿರಿ ಉಚಿತವಾಗಿ ಫ್ಲಾಟ್‌ಫಾರ್ಮ್ ಟಿಕೆಟ್ ಪಡೆಯಿರಿ

ದೂರ ಸಂಚಾರ ಕ್ರಮಿಸುವ ರೈಲುಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ಹಂತ ಹಂತವಾಗಿ ರೈಲುಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯ ಮಾಡಿತ್ತು. ಇದಕ್ಕಾಗಿ ಸುಮಾರು 400 ಕೋಟಿ ರೂ. ಅನ್ನು ವಿನಿಯೋಗಿಸಿದೆ. ಉತ್ಕೃಷ್ಟ ಯೋಜನೆ ಜಾರಿಗೆ ಬಂದು ಒಂದೂವರೆ ವರ್ಷದಲ್ಲಿ ರೈಲ್ವೆ ಇಲಾಖೆಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.

ನಲ್ಲಿ, ಕನ್ನಡಿ, ಫ್ಲಶ್ ವಾಲ್ ಕಳ್ಳತನ

ನಲ್ಲಿ, ಕನ್ನಡಿ, ಫ್ಲಶ್ ವಾಲ್ ಕಳ್ಳತನ

ಸುಮಾರು 80 ಉತ್ಕೃಷ್ಟ ರೈಲ್ವೆ ಬೋಗಿಗಳ ಶೌಚಾಲಯಗಳು ಮತ್ತು ವಾಶ್ ಬೇಸಿನ್‌ಗಳಲ್ಲಿನ 5,000ಕ್ಕೂ ಅಧಿಕ ಸ್ಟೈನ್‌ಲೆಸ್ ಸ್ಟೀಲ್ ನಲ್ಲಿಗಳನ್ನು ಕಳವು ಮಾಡಲಾಗಿದೆ. ಹಾಗೆಯೇ 2000ಕ್ಕೂ ಹೆಚ್ಚು ಸ್ಟೈನ್‌ಲೆನ್ ಸ್ಟೀಲ್ ಚೌಕಟ್ಟಿನ ಕನ್ನಡಿಗಳನ್ನು, ಸುಮಾರು 500 ಲಿಕ್ವಿಡ್ ಸೋಪ್ ಡಿಸ್ಪೆನ್ಸರಿಗಳನ್ನು, ಅಂದಾಜು 3,000 ಶೌಚಾಲಯ ಫ್ಲಶ್ ವಾಲ್ವ್‌ಗಳನ್ನು ಹೊತ್ತೊಯ್ಯಲಾಗಿದೆ ಎಂದು ರೈಲ್ವೆ ಇಲಾಖೆಯ ಮಾಹಿತಿ ತಿಳಿಸಿದೆ.

ಸುಮಾರು 54 ಲಕ್ಷ ರೂ ನಷ್ಟ

ಸುಮಾರು 54 ಲಕ್ಷ ರೂ ನಷ್ಟ

ರೈಲುಗಳನ್ನು ಮೇಲ್ದರ್ಜೆಗೇರಿಸುವ ಉತ್ಕೃಷ್ಟ ಯೋಜನೆಯಲ್ಲಿ ಅನೇಕ ರೈಲುಗಳಲ್ಲಿ ಹೊಸ ಉಪಕರಣಗಳು ಅಳವಡಿಸಲಾಗಿತ್ತು. ಶೌಚಾಲಯಗಳು ವಾಸನೆರಹಿತವಾಗಿ ಇರುವಂತೆ ನೋಡಿಕೊಳ್ಳಲಾಗಿದೆ. ಶೌಚಾಲಯಗಳಿಗೆ ಎಲ್‌ಇಡಿ ಲೈಟ್‌ಗಳನ್ನು ಅಳವಡಿಸಲಾಗಿದೆ. ಆದರೆ ಶೌಚಾಲಯಗಳಿಂದ ಆಸನಗಳನ್ನೂ ಕದ್ದೊಯ್ದಿದ್ದಾರೆ.

ಈ ಕಳವು ಕೃತ್ಯಗಳಿಂದಾಗಿ ಕೇಂದ್ರ ರೈಲ್ವೆ ಸುಮಾರು 15.25 ಲಕ್ಷ ರೂಪಾಯಿ ನಷ್ಟ ಅನುಭವಿಸಿದ್ದರೆ, ವೆಸ್ಟರ್ನ್ ರೈಲ್ವೇಸ್ 38.58 ಲಕ್ಷ ರೂ ನಷ್ಟ ಅನುಭವಿಸಿರುವುದಾಗಿ ತಿಳಿಸಿದೆ.

ವಿಜಯಪುರ-ದೆಹಲಿ ನಡುವೆ ನೇರ ರೈಲು?ವಿಜಯಪುರ-ದೆಹಲಿ ನಡುವೆ ನೇರ ರೈಲು?

ಎಮರ್ಜೆನ್ಸಿ ಸುತ್ತಿಗೆಯನ್ನೂ ಬಿಟ್ಟಿಲ್ಲ

ಎಮರ್ಜೆನ್ಸಿ ಸುತ್ತಿಗೆಯನ್ನೂ ಬಿಟ್ಟಿಲ್ಲ

ಪ್ರತಿ ಕನ್ನಡಿ ಸುಮಾರು 600 ರೂ ಬೆಲೆಬಾಳುತ್ತವೆ. ಒಂದು ನಲ್ಲಿಗೆ 108 ರೂ. ಇದೆ. ಗುಣಮಟ್ಟದ ಹೊಸ ಸೀಟು ಕವರ್‌ಗಳನ್ನು ಅನೇಕ ಕಡೆ ಹರಿದು ಹಾಕಲಾಗಿದೆ. ಸುತ್ತಿಗೆಯನ್ನು ಒಳಗೊಂಡಿರುವ ಎಮರ್ಜೆನ್ಸಿ ಪೆಟ್ಟಿಗೆಯನ್ನು ಒಡೆದು ಸುಮಾರು 80 ರೈಲುಗಳಿಂದ ಸುತ್ತಿಗೆಗಳನ್ನು ಕಳವು ಮಾಡಲಾಗಿದೆ. ತುರ್ತು ನಿರ್ಗಮನ ದ್ವಾರಗಳ ಬಳಿ ಇರಿಸಿರುವ ಸುತ್ತಿಗೆಗಳನ್ನೂ ಕದ್ದುಕೊಂಡು ಹೋಗಿದ್ದಾರೆ.

ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಶುಲ್ಕ ಕೊನೆಗೂ ಇಳಿಕೆಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಶುಲ್ಕ ಕೊನೆಗೂ ಇಳಿಕೆ

ತೇಜಸ್‌ನಲ್ಲಿ ಹೆಡ್‌ಫೋನ್ ಕಳವು

ತೇಜಸ್‌ನಲ್ಲಿ ಹೆಡ್‌ಫೋನ್ ಕಳವು

ರೈಲುಗಳಲ್ಲಿ ಇಂತಹ ಕಳವು ನಡೆಯುವುದು ಹೊಸತೇನಲ್ಲ. ಹವಾನಿಯಂತ್ರಿತ ಬೋಗಿಗಳಲ್ಲಿ ನೀಡುವ ಬೆಡ್‌ಶೀಟ್‌ಗಳನ್ನು, ಶೌಚಾಲಯದ ಬಕೆಟ್, ಮಗ್‌ಗಳನ್ನು, ಫ್ಯಾನ್‌ಗಳನ್ನು ಕದ್ದೊಯ್ದಿದ್ದು ವರದಿಯಾಗಿತ್ತು. ದೇಶದ ಐಷಾರಾಮಿ ರೈಲು ಎಂದು ಹೆಸರಾಗಿದ್ದ ಮುಂಬೈ-ಗೋವಾ ತೇಜಸ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಸೀಟಿಗೆ ಅವಡಿಸಿದ್ದ ಎಲ್‌ಇಡಿ ಪರದೆಯ ಜತೆಗಿದ್ದ ಹತ್ತಾರು ಹೆಡ್‌ಫೋನ್‌ಗಳನ್ನು ಕಳವು ಮಾಡಿದ್ದರು.

English summary
Passengers stole stainless steep taps, mirrors, toilet covers, fulsh valves and many things from trains which were upgraded by Utkrisht Project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X