• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿತ್ರಗಳಲ್ಲಿ: ಹೊಸ ನಕ್ಷತ್ರಪುಂಜದ ಕಲರ್ ಫುಲ್ ಚಿತ್ರ

By Mahesh
|

ಬೆಂಗಳೂರು, ಅ.29: ಭಾರತ ಮೂಲದ ವಿಜ್ಞಾನಿಯೊಬ್ಬರನ್ನೊಳಗೊಂಡ ನಾಸಾ ಖಗೋಳ ವಿಜ್ಞಾನಿಗಳ ತಂಡ ಅತ್ಯಂತ ದೂರದ ಆಕಾಶಗಂಗೆಯನ್ನು ಪತ್ತೆ ಹಚ್ಚಿದೆ. ಈ ಆಕಾಶಗಂಗೆ ಭೂಮಿಯಿಂದ 13 ಶತಕೋಟಿ ಜ್ಯೋತಿರ್ವರ್ಷದಷ್ಟು ದೂರದಲ್ಲಿದೆ ಎಂದು ಅಂದಾಜಿಸಲಾಗಿದೆ.

ಇದು ಭೂಮಿ ಮತ್ತು ಇತರ ಆಕಾಶಕಾಯಗಳಿಗಿಂತ ಅತ್ಯಂತ ಹಳೆಯ ಮತ್ತು ಹಿರಿದಾದ ಆಕಾಶ ಗಂಗೆ ಎಂದು ಗೋವಾ ಮೂಲದ ವಿಜ್ಞಾನಿ ತಿಲ್ವಿ ಹೇಳಿದ್ದಾರೆ. ಪ್ರತಿವರ್ಷ 300 ಸೂರ್ಯನಷ್ಟು ಪ್ರಖರವಾಗಿರುವ ನಕ್ಷತ್ರಗಳು ಈ ಆಕಾಶಗಂಗೆ ಯಲ್ಲಿ ಜನ್ಮತೆಳೆಯುತ್ತವೆ ಎನ್ನಲಾಗಿದೆ. ಬಾಹ್ಯಾಕಾಶದಲ್ಲಿ ಅತ್ಯಂತ ದೂರದಲ್ಲಿರುವ ಕ್ಷೀರಪಥವನ್ನು ಹಬಲ್ ವ್ಯೋಮ ದೂರದರ್ಶಕವು ಪತ್ತೆ ಹಚ್ಚಿದೆ.

ಹಬಲ್ ರವಾನಿಸಿರುವ ಚಿತ್ರಗಳನ್ನು ಪರಿವೀಕ್ಷಿಸಿರುವ ಬಾಹ್ಯಾಕಾಶ ವಿಜ್ಞಾನಿಗಳ ತಂಡವು ಸುಮಾರು 13 ಬಿಲಿಯ ಜ್ಯೋತಿರ್ವರ್ಷ ದೂರದಲ್ಲಿರುವ ಈ ಕ್ಷೀರಪಥವನ್ನು ಗುರುತಿಸಿದೆ.

ಉಳಿದಂತೆ ರಾಹುಲ್ ದ್ರಾವಿಡ್ ಗಡ್ಡ ಶೇವಿಂಗ್ ಚಿತ್ರ, ಭಾರತಕ್ಕೆ ಬಂದಿಳಿದ ವಿಂಡೀಸ್ ಪಡೆ, ಟೀಂ ಇಂಡಿಯಾದ ಕಠಿಣ ಅಭ್ಯಾಸ, ರಾಯ್ ಬರೇಲಿಯಲ್ಲಿ ಪ್ರಿಯಾಂಕಾ ಗಾಂಧಿ, ಆಸ್ಟ್ರೇಲಿಯಾದಲ್ಲಿ ದೀಪಾವಳಿ ಸಂಭ್ರಮ ಇವೇ ಮುಂತಾದ ಚಿತ್ರಗಳು ಇಂದಿನ ಪ್ಯಾಕೇಜಿನಲ್ಲಿದೆ ತಪ್ಪದೇ ನೋಡಿ...

ಹೊಸ ಗ್ಯಾಲಕ್ಸಿ

ಹೊಸ ಗ್ಯಾಲಕ್ಸಿ

ಗೋವಾ ಮೂಲದ ವಿಜ್ಞಾನಿ ವಿಠಲ್ ತಿಲ್ವಿ ಅವರು ಸೇರಿದಂತೆ ಬಾಹ್ಯಾಕಾಶ ವಿಜ್ಞಾನಿಗಳ ತಂಡವು ಸುಮಾರು 13 ಬಿಲಿಯ ಜ್ಯೋತಿರ್ವರ್ಷ ದೂರದಲ್ಲಿರುವ ಕ್ಷೀರಪಠ ಗುರುತಿಸಿದ್ದು ಹಬಲ್ ನೀಡಿರುವ ಕಲರ್ ಫುಲ್ ಚಿತ್ರ ಹೀಗಿದೆ

ಹಬ್ಬಲ್ ಟೆಲಿಸ್ಕೋಪ್

ಹಬ್ಬಲ್ ಟೆಲಿಸ್ಕೋಪ್

ವಾಷಿಂಗ್ಟನ್: ಹೊಸ ಗ್ಯಾಲಕ್ಸಿ ಚಿತ್ರ ರವಾನಿಸಿದ ಹಬ್ಬಲ್ ಬಾಹ್ಯಾಕಾಶ ಟೆಲಿಸ್ಕೋಪ್

ರಾಯ್ ಬರೇಲಿಯಲ್ಲಿ

ರಾಯ್ ಬರೇಲಿಯಲ್ಲಿ

ಉತ್ತರಪ್ರದೇಶದ ರಾಯ್ ಬರೇಲಿಯಲ್ಲಿ ಪ್ರಿಯಾಂಕಾ ವಾದ್ರಾ ಅವರು ಗ್ರಾಮವೊಂದರಲ್ಲಿ ಸಂಚರಿಸಿ ಅಲ್ಲಿನ ಜನಗಳ ಕಷ್ಟ ಸುಖ ವಿಚಾರಿಸಿದರು.

ಭಾರತದಲ್ಲಿ ವಿಂಡೀಸ್ ತಂಡ

ಭಾರತದಲ್ಲಿ ವಿಂಡೀಸ್ ತಂಡ

ಮುಂಬರುವ ಟೆಸ್ಟ್ ಸರಣಿ ಆಡಲು ಭಾರತಕ್ಕೆ ಬಂದಿಳಿದಿರುವ ವೆಸ್ಟ್ ಇಂಡೀಸ್ ತಂಡ

ಮೆಲ್ಬೋರ್ನ್ ನಲ್ಲಿ

ಮೆಲ್ಬೋರ್ನ್ ನಲ್ಲಿ

ಆಸ್ಟ್ರೇಲಿಯಾದಲ್ಲಿ ಅನಿವಾಸಿ ಭಾರತೀಯರು ಸೋಮವಾರ ದೀಪಾವಳಿ ಹಬ್ಬದ ಆಚರಣೆ ಅಂಗವಾಗಿ ನಡೆದ ಶೋನಲ್ಲಿ ಭಾರತದ ಯುವತಿ.

ನಾಗಪುರದಲ್ಲಿ

ನಾಗಪುರದಲ್ಲಿ

ಆಸ್ಟ್ರೇಲಿಯಾ ವಿರುದ್ಧದ 6ನೇ ಪಂದ್ಯಕ್ಕಾಗಿ ನಾಗಪುರದವಿಸಿಎ ಕ್ರೀಡಾಂಗಣದಲ್ಲಿ ಭಾರತದ ಯುವರಾಜ್ ಸಿಂಗ್ ಹಾಗೂ ವಿರಾಟ್ ಕೊಹ್ಲಿ ಅವರು ಅಭ್ಯಾಸ ಸಂದರ್ಭದಲ್ಲಿ ಕಂಡು ಬಂದಿದ್ದು ಹೀಗೆ

ದ್ವಿಶತಕ ವೀರ 'ಬಾಬಾ'

ದ್ವಿಶತಕ ವೀರ 'ಬಾಬಾ'

ಪ್ರಸ್ತುತ ರಣಜಿ ಋತುವಿನಲ್ಲಿ ಮೊದಲ ದ್ವಿಶತಕವನ್ನು ತಮಿಳುನಾಡಿನ ಯುವ ಆಟಗಾರ ಬಾಬಾ ಅಪರಾಜಿತ್ ದಾಖಲಿಸಿದ್ದಾರೆ. ಸರ್ವೀಸಸ್ ವಿರುದ್ಧದ ಪಂದ್ಯದಲ್ಲಿ ಬಾಬಾ ದ್ವಿಶತಕ ಸಿಡಿಸಿದ್ದಾರೆ.

ದ್ರಾವಿಡ್ ಶೇವಿಂಗ್

ದ್ರಾವಿಡ್ ಶೇವಿಂಗ್

ಮುಂಬೈ: ಫಾಂಟಮ್ ರೇಜರ್ ಪ್ರಚಾರಕ್ಕಾಗಿ ಬಂದಿದ್ದ ಮಾಜಿ ಕ್ರಿಕೆಟರ್ ರಾಹುಲ್ ದ್ರಾವಿಡ್ ಅವರು ಗಡ್ಡ ಶೇವ್ ಮಾಡಿಕೊಳ್ಳುವುದನ್ನು ಬಾಲಿವುಡ್ ನಟ ಅರ್ಬಾಜ್ ಖಾನ್ ಹಾಗೂ ಜಾಕ್ವಲಿನ್ ಫರ್ನಾಂಡೀಸ್ ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.

English summary
Todays news stories in pics : Washington: A color composite image of the most-distant galaxy in the universe discovered by a team of astronomers including Goa's Vithal Tilvi. The galaxy is said to be 13 billion light years away from the earth and many more pics
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more