• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿತ್ರಗಳಲ್ಲಿ:ಹ್ಯಾಟ್ರಿಕ್ ವೀರ, ಮಾಸ್ಟರ್ ಬ್ಲಾಸ್ಟರ್

By Mahesh
|

ಬೆಂಗಳೂರು, ಅ.28 : ಗೇಟರ್ ನೋಯ್ಡಾದಲ್ಲಿ ನಡೆದ ಇಂಡಿಯನ್ ಗ್ರ್ಯಾನ್ ಪ್ರೀ ಫಾರ್ಮ್ಯೂಲಾ ಒನ್ ರೇಸ್ ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡ ಸೆಬಾಸ್ಟಿಯನ್ ವೆಟಲ್, ಸತತ 4ನೇ ಬಾರಿಗೆ ವಿಶ್ವ ಚಾಂಪಿಯನ್ ಆಗುವ ಮೂಲಕ ಹೊಸ ಇತಿಹಾಸ ರಚಿಸಿದ್ದಾರೆ. ಸತತ ಮೂರನೇ ಬಾರಿಗೆ ವೆಟಲ್ ಇಂಡಿಯನ್ ಗ್ರ್ಯಾನ್ ಪ್ರಿ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.

ರೆಡ್ ಬುಲ ತಂಡದ 26 ವರ್ಷದ ಜರ್ಮನಿಯ ಚಾಲಕ ವೆಟಲ್ ಸತತ 4ನೇ ಬಾರಿಗೆ ವಿಶ್ವ ಚಾಂಪಿಯನ್ ಎನಿಸಿದ ಕಿರಿಯ ಚಾಲಕರಾಗಿದ್ದಾರೆ. ಈ ಎಫ್ 1 ಋತುವಿನಲ್ಲಿ ಇನ್ನು ಮೂರು ರೇಸ್ ಗಳು ಬಾಕಿ ಉಳಿದಿದ್ದು, ಅಲ್ಲಿ ಗೆದ್ದರೆ ವೆಟಲ್ ಸತತ 9 ಬಾರಿ ಪ್ರಶಸ್ತಿ ಗೆದ್ದ ಚಾಲಕ ಎನಿಸಿಕೊಳ್ಳಲಿದ್ದಾರೆ.

ವೆಟೆಲ್ ಗಿಂತ ಮೊದಲು ಇಬ್ಬರು ಚಾಲಕರು ಮಾತ್ರ ಸತತ ನಾಲ್ಕು ಬಾರಿ ವಿಶ್ವ ಚಾಂಪಿಯನ್ ಎನಿಸಿದ್ದಾರೆ. ಅರ್ಜೆಂಟೀನಾದ ಜೂವಾನ್ ಮಾನೂಯಲ್ ಫಾಂಗಿಯೋ ಮತ್ತು ಜರ್ಮನಿಯ ಮೈಕೆಲ್ ಶುಮಾಕರ್ ಅವರು ಸತತ 4 ಬಾರಿ ಚಾಂಪಿಯನ್ ಎನಿಸಿದ ಚಾಲಕರಾಗಿದ್ದಾರೆ. ಫ್ರಾನ್ಸಿನ ಅಲೈನ್ ಪ್ರೊಸ್ಟ್ ಸಹ ನಾಲ್ಕು ಬಾರಿ ಚಾಂಪಿಯನ್ ಎನಿಸಿದ್ದಾರೆ. ಆದರೆ, ಅವರು ಸತತ 4 ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿರಲಿಲ್ಲ.

ರಣಜಿಯಲ್ಲಿ ಸಚಿನ್ : ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಮುಂಬೈ ತಂಡ ಆತಿಥೇಯ ಹರಿಯಾಣ ತಂಡವನ್ನು ಸಮರ್ಥವಾಗಿ ಎದುರಿಸಿದೆ. ಬನ್ಸಿ ಲಾಲ್ ಕ್ರೀಡಾಂಗಣದಲ್ಲಿ ಭಾನುವಾರ ಆರಂಭವಾದ ನಾಲ್ಕು ದಿನಗಳ ರಣಜಿ ಟ್ರೋಫಿ 'ಎ' ಗುಂಪಿನ ಪೈಪೋಟಿಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ತಮ್ಮ ಕಟ್ಟಕಡೆಯ ರಣಜಿ ಟ್ರೋಫಿ ಪಂದ್ಯವಾಡುತ್ತಿದ್ದಾರೆ. ಸಚಿನ್ ವಿದಾಯ ಪಂದ್ಯದ ಚಿತ್ರಗಳು ಹಾಗೂ ಇನ್ನಷ್ಟು ಕುತೂಹಲಕಾರಿ ಚಿತ್ರಗಳು ಇಲ್ಲಿವೆ ತಪ್ಪದೇ ನೋಡಿ

ರಣಜಿಯಲ್ಲಿ ಸಚಿನ್

ರಣಜಿಯಲ್ಲಿ ಸಚಿನ್

ರೋಹ್ಟಕ್: ಸಚಿನ್ ತೆಂಡೂಲ್ಕರ್ ಅವರಿಗೆ ಹರ್ಯಾಣ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಅವರು ಸ್ಮರಣಿಕೆ ನೀಡುತ್ತಿದ್ದಾರೆ. PTI Photo Shirish Shete

ನಿರಾಶೆಗೊಳಿಸಿದ ಸಚಿನ್

ನಿರಾಶೆಗೊಳಿಸಿದ ಸಚಿನ್

ರೋಹ್ಟಕ್: ಹರ್ಯಾಣ ವಿರುದ್ಧದ ಪಂದ್ಯದಲ್ಲಿ ಕ್ರಮಾಂಕದಲ್ಲಿ ಸಚಿನ್ ಬ್ಯಾಟಿಂಗ್ ಮಾಡಲು ಮೈದಾನ ಪ್ರವೇಶಿಸುತ್ತಿದ್ದಂತೆಯೇ ಪ್ರೇಕ್ಷಕರು ಎದ್ದುನಿಂತು ಚಪ್ಪಾಳೆ ಮೂಲಕ ಆತನನ್ನು ಸ್ವಾಗತಿಸಿದರು. ಆದರೆ, ಸಚಿನ್ ತಾವು ಎದುರಿಸಿದ ಏಳನೇ ಎಸೆತಲ್ಲಿಯೇ ಮೋಹಿತ್ ಶರ್ಮಾ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್ ಆಗುವುದರೊಂದಿಗೆ ಕೇವಲ 5 ರನ್ ಗಳಿಸಿ ಹೊರನಡೆದರು. PTI Photo by Shirish Shete

ಎಫ್ 1ನಲ್ಲಿ ಭಾರತ ತಂಡ

ಎಫ್ 1ನಲ್ಲಿ ಭಾರತ ತಂಡ

ಸಹಾರಾ ಫೋರ್ಸ್ ಇಂಡಿಯಾ ತಂಡದ ಚಾಲಕರಾದ ಪೌಲ್ ಡಿ ರೆಸ್ಟಾ ಅವರು 8ನೇ ಸ್ಥಾನ ಪಡೆಯುವ ಮೂಲಕ 4 ಅಂಕ ಗಳಿಸಿದರು. ಇನ್ನು 9ನೇ ಸ್ಥಾನ ಪಡೆದ ಆಂಡ್ರಿಯನ್ ಸುಟಿಲ್ ಅವರು 2 ಅಂಕ ಪಡೆದರು.

ಚಾಂಪಿಯನ್ ವೆಟ್ಟೆಲ್

ಚಾಂಪಿಯನ್ ವೆಟ್ಟೆಲ್

ರೆಡ್ ಬುಲ್ ತಂಡದ 26 ವರ್ಷದ ಜರ್ಮನಿಯ ಚಾಲಕ ವೆಟಲ್ ಸತತ 4ನೇ ಬಾರಿಗೆ ವಿಶ್ವ ಚಾಂಪಿಯನ್ ಎನಿಸಿದ ಕಿರಿಯ ಚಾಲಕರಾಗಿದ್ದಾರೆ.

ಅಂದ ಹಾಗೆ ವೆಟ್ಟೆಲ್ ಮುತ್ತಿಕ್ಕುತ್ತಿರುವ ಆಕರ್ಷಕ ಟ್ರೋಫಿಯನ್ನು ವಿನ್ಯಾಸಗೊಳಿಸಿದ್ದು ಬೆಂಗಳೂರು ಮೂಲದ ವ್ಯಕ್ತಿ ಮೈಕಲ್ ಫೊಲೆ. ವಿನ್ಯಾಸಕ್ಕೆ ಸ್ಪೂರ್ತಿ ನೀಡಿದ್ದು ಅಶೋಕ ಚಕ್ರ

ಬೆಲ್ಲಿ ಡ್ಯಾನ್ಸ್

ಬೆಲ್ಲಿ ಡ್ಯಾನ್ಸ್

ಬೆಂಗಳೂರು : ನಗರದಲ್ಲಿ hip nosis 2013 ಹೆಸರಿನಲ್ಲಿ 5ನೇ ಬೆಲ್ಲಿ ಡ್ಯಾನ್ಸ್ ಹಬ್ಬ ನಡೆದಿದೆ. PTI Photo by Shailendra Bhojak

ಅಮೃತಸರದಲ್ಲಿ

ಅಮೃತಸರದಲ್ಲಿ

ಅಮೃತಸರದಲ್ಲಿ ವೈವಾಹಿಕ ಆಭರಣಗಳನ್ನು ಪ್ರದರ್ಶಿಸುತ್ತಾ ಬೆಕ್ಕಿನ ನಡಿಗೆ ಇಡಲು ಸಿದ್ಧರಾದ ರೂಪದರ್ಶಿಗಳು. PTI photo by Deepak Sharma

ನವದೆಹಲಿಯಲ್ಲಿ

ನವದೆಹಲಿಯಲ್ಲಿ

ನವದೆಹಲಿಯ ಮಂಗೊಳ್ ಪುರಿಯಲ್ಲಿ ಸಾರ್ವಜನಿಕ ಸಭೆ ಸಂದರ್ಭದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ

ಪಾಟ್ನದಲ್ಲಿ

ಪಾಟ್ನದಲ್ಲಿ

ಹೂಂಕಾರ್ ಸಾರ್ವಜನಿಕ ಸಭೆಯ ವೈಮಾನಿಕ ದೃಶ್ಯ

ಗೇಟರ್ ನೋಯ್ಡಾದಲ್ಲಿ

ಗೇಟರ್ ನೋಯ್ಡಾದಲ್ಲಿ

ಗೇಟರ್ ನೋಯ್ಡಾದಲ್ಲಿ ನಡೆದ ಇಂಡಿಯನ್ ಗ್ರ್ಯಾನ್ ಪ್ರೀ ಫಾರ್ಮ್ಯೂಲಾ ಒನ್ ರೇಸ್

ಇತ್ತೀಚಿನ ಸುದ್ದಿಗಳು

ಇತ್ತೀಚಿನ ಸುದ್ದಿಗಳು

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

ಗೇಟರ್ ನೋಯ್ಡಾದಲ್ಲಿ

ಗೇಟರ್ ನೋಯ್ಡಾದಲ್ಲಿ

ಗೇಟರ್ ನೋಯ್ಡಾದಲ್ಲಿ ನಡೆದ ಇಂಡಿಯನ್ ಗ್ರ್ಯಾನ್ ಪ್ರೀ ಫಾರ್ಮ್ಯೂಲಾ ಒನ್ ರೇಸ್ ಗೂ ಮುನ್ನ ಸಾಂಪ್ರದಾಯಿಕ ನೃತ್ಯ ಪ್ರದರ್ಶನ

ವೆಟಲ್ ವಿಕ್ಟರಿ

ವೆಟಲ್ ವಿಕ್ಟರಿ

ರೆಡ್ ಬುಲ್ ತಂಡದ 26 ವರ್ಷದ ಜರ್ಮನಿಯ ಚಾಲಕ ವೆಟಲ್(ಮಧ್ಯೆ) ಜತೆಗ್ ನಿಕೋ ರೋಸ್ ಬರ್ಗ್ ಹಾಗೂ ರೊಮಾನಿಯಾದ ಗ್ರೊಸಿಯಾನ್ ಪ್ರಶಸ್ತಿ ಸ್ವೀಕಾರ ವೇದಿಕೆಯಲ್ಲಿ

ವೆಟೆಲ್ ವಿಕ್ಟರಿ

ವೆಟೆಲ್ ವಿಕ್ಟರಿ

ರೆಡ್ ಬುಲ್ ತಂಡದ 26 ವರ್ಷದ ಜರ್ಮನಿಯ ಚಾಲಕ ವೆಟಲ್ ಗೆಲುವಿನ ಕ್ಷಣ

ಫಾರ್ಮ್ಯೂಲಾ ಒನ್ ರೇಸ್

ಫಾರ್ಮ್ಯೂಲಾ ಒನ್ ರೇಸ್

ಗೇಟರ್ ನೋಯ್ಡಾದಲ್ಲಿ ನಡೆದ ಇಂಡಿಯನ್ ಗ್ರ್ಯಾನ್ ಪ್ರೀ ಫಾರ್ಮ್ಯೂಲಾ ಒನ್ ರೇಸ್ ವೀಕ್ಷಿಸಲು ಬಂದಿದ್ದ ಜನ ಸಮೂಹ

hip nosis 2013

hip nosis 2013

ಬೆಂಗಳೂರು : ನಗರದಲ್ಲಿ hip nosis 2013 ಹೆಸರಿನಲ್ಲಿ 5ನೇ ಬೆಲ್ಲಿ ಡ್ಯಾನ್ಸ್ ಹಬ್ಬ ನಡೆದಿದೆ. PTI Photo by Shailendra Bhojak

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Todays news stories in pics : Red Bull driver Sebastian Vettel celebrates with the trophy after winning the Indian Formula One Grand Prix at the Buddh International Circuit in Noida and many more pics
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more