• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿತ್ರಗಳಲ್ಲಿ: ರಷ್ಯಾದಲ್ಲಿ ಪ್ರಧಾನಿ, ಇಸ್ಕಾನ್ ಪ್ರತಿಭಟನೆ

By Mahesh
|

ಮಾಸ್ಕೋ, ಅ.21: ಐದು ದಿನಗಳ ರಷ್ಯಾ ಮತ್ತು ಚೀನಾ ಪ್ರವಾಸ ಕೈಗೊಂಡಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮಾಸ್ಕೋದಲ್ಲಿ ಆತ್ಮೀಯ ಸ್ವಾಗತ ಸಿಕ್ಕಿದೆ. ಇತ್ತ ಕೋಲ್ಕತ್ತಾದಲ್ಲಿ ರಷ್ಯಾ ರಾಯಭಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.

ಸೋಮವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟೀನ್ ಅವರನ್ನು ಪ್ರಧಾನಿ ಸಿಂಗ್ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಬಳಿಕ ಪ್ರಧಾನಿ ಅವರಿಗೆ ಮಾಸ್ಕೋ ಸ್ಟೇಟ್ ಇನ್ಸ್ಟಿಟ್ಯೂಟ್ ಆಫ್ ಇಂಟರ್ ನ್ಯಾಷನಲ್ ರಿಲೇಶನ್ಸ್ ವತಿಯಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಸನ್ಮಾನಿಸಲಾಗುವುದು.

ರಕ್ಷಣೆ, ಅಣುಶಕ್ತಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ರಷ್ಯಾ ಭಾರತಕ್ಕೆ ಅಪಾರವಾಗಿ ಸಹಕಾರ ನೀಡುತ್ತಿದೆ. ಜಾಗತಿಕ ಮತ್ತು ಧಾರ್ಮಿಕ ವಿಷಯಗಳಲ್ಲಿ ಎರಡು ದೇಶಗಳ ದೃಷ್ಟಿಕೋನ ಒಂದೇ ಆಗಿದೆ. ಅಂತಾರಾಷ್ಟ್ರೀಯ ವಿಷಯಗಳಿಗೆ ಸಂಬಂಧಿಸಿದಂತೆ ಭಾರತಕ್ಕೆ ರಷ್ಯಾ ಸಂಪೂರ್ಣ ಸಹಕಾರ ನೀಡುವ ಭರವಸೆ ಇದೆ ಎಂದು ಪ್ರಧಾನಿ ಸಿಂಗ್ ಭರವಸೆ ವ್ಯಕ್ತಪಡಿಸಿದ್ದಾರೆ.

ಆದರೆ, ಮಾಸ್ಕೋದಲ್ಲಿ ಇತ್ತೀಚೆಗೆ ಹಿಂದೂ ದೇಗುಲ ಧ್ವಂಸಗೊಳಿಸಿರುವ ಘಟನೆಯನ್ನು ಖಂಡಿಸಿ ಇಸ್ಕಾನ್ ಭಕ್ತರು ಕೋಲ್ಕತ್ತಾದಲ್ಲಿ ರಸ್ತೆಗಿಳಿದು ದೇವರ ಸಂಕೀರ್ತನೆಗಳನ್ನು ಹಾಡಿ, ಕುಣಿದು ಪ್ರತಿಭಟನೆ ನಡೆಸಿದ್ದಾರೆ.

ಉಳಿದಂತೆ, ಮೊರಾದಾಬಾದಿನಲ್ಲಿ ದೀಪಾವಳಿ ಹಬ್ಬದ ತಯಾರಿ ಜೋರಾಗಿ ನಡೆದಿದೆ. ಜಮ್ಮುವಿನಲ್ಲಿ ಮಹಿಳೆಯರು ಕರ್ವಾ ಚೌತ್ ಹಬ್ಬದ ತಯಾರಿಯಲ್ಲಿದ್ದಾರೆ. ಜೋಧಪುರದಲ್ಲಿ ಇಂಡೋ ರಷ್ಯಾ ಜಂಟಿ ಮಿಲಿಟರಿ ಅಭ್ಯಾಸ, ಜಮ್ಮುವಿನಲ್ಲಿ ಆರೆಸ್ಸೆಸ್ ಪಥ ಸಂಚಲನ, ಜೋಧಪುರ್ ದಲ್ಲಿ ರವಿಶಂಕರ್ ಗುರೂಜಿ ಮುಂತಾದ ಚಿತ್ರಗಳಿವೆ...

ಇಸ್ಕಾನ್ ಪ್ರತಿಭಟನೆ

ಇಸ್ಕಾನ್ ಪ್ರತಿಭಟನೆ

ಮಾಸ್ಕೋದಲ್ಲಿ ಇತ್ತೀಚೆಗೆ ಹಿಂದೂ ದೇಗುಲ ಧ್ವಂಸಗೊಳಿಸಿರುವ ಘಟನೆಯನ್ನು ಖಂಡಿಸಿ ಇಸ್ಕಾನ್ ಭಕ್ತರು ಕೋಲ್ಕತ್ತಾದಲ್ಲಿ ರಸ್ತೆಗಿಳಿದು ದೇವರ ಸಂಕೀರ್ತನೆಗಳನ್ನು ಹಾಡಿ, ಕುಣಿದು ಪ್ರತಿಭಟನೆ ನಡೆಸಿದ್ದಾರೆ.

ಮಾಸ್ಕೋದಲ್ಲಿ ಪ್ರಧಾನಿ ಸಿಂಗ್

ಮಾಸ್ಕೋದಲ್ಲಿ ಪ್ರಧಾನಿ ಸಿಂಗ್

ಮಾಸ್ಕೋ: ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮಾಸ್ಕೋ ಹೊರವಲಯದ Vnukovo-2 ವಿಮಾನ ನಿಲ್ದಾಣದಲ್ಲಿ ಸಿಕ್ಕ ಸ್ವಾಗತ ಹೀಗಿತ್ತು. PTI Photo by Subhav Shukla

ಜಮ್ಮುವಿನಲ್ಲಿ

ಜಮ್ಮುವಿನಲ್ಲಿ

ಮಹಿಳೆಯರು ಕರ್ವಾ ಚೌತ್ ಹಬ್ಬದ ಮುನ್ನ ಬಳೆ ಖರೀದಿಯಲ್ಲಿ ತೊಡಗಿದ್ದಾರೆ.

ಮೊರಾದಾಬಾದಿನಲ್ಲಿ

ಮೊರಾದಾಬಾದಿನಲ್ಲಿ

ದೀಪಾವಳಿಗಾಗಿ ತಯಾರಾದ ಮಣ್ಣಿನ ದೀಪಗಳನ್ನು ಒಣಗಿಸಲು ಹೊತ್ತೊಯ್ಯುತ್ತಿರುವ ಮಕ್ಕಳು

ಜೋಧಪುರ್ ದಲ್ಲಿ

ಜೋಧಪುರ್ ದಲ್ಲಿ

ಇಲ್ಲಿನ ಮಹಾಜನ್ ಫೀಲ್ಡ್ ರೇಂಜ್ ನಲ್ಲಿ ಇಂಡೋ ರಷ್ಯಾ ಜಂಟಿ ಮಿಲಿಟರಿ ಅಭ್ಯಾಸ

ವೆಂಕಟರಮಣ ಸ್ವಾಮಿ ದೇವಸ್ಥಾನ

ವೆಂಕಟರಮಣ ಸ್ವಾಮಿ ದೇವಸ್ಥಾನ

ಶ್ರೀ ವೀರವಿಠಲ ವೆಂಕಟರಮಣ ಸ್ವಾಮಿ ದೇವಸ್ಥಾನ ಪಾಣೆಮಂಗಳೂರು ಇದರ ಸ್ವರ್ಣ ಹಿತ್ತಾಳೆಯ ಮಹಾದ್ವಾರವನ್ನು ಶನಿವಾರ (ಅ 19) ದಂದು ಪರಮಪೂಜ್ಯ ಕಾಶೀ ಮಠಾಧೀಶ ಶ್ರೀಮದ್ ಸುಧೀಂದ್ರತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ಸ್ವರ್ಣ ಹಿತ್ತಾಳೆ ದ್ವಾರವನ್ನು ಅನ್ನಪೂರ್ಣ ಆರ್ ಭಂಡಾರ್ ಕಾರ್, ಪಿ ರಘುವೀರ್ ಭಂಡಾರ್ ಕಾರ್ ಸೇವಾ ರೂಪದಲ್ಲಿ ನೀಡಿದರು.

ಶ್ರೀಲಂಕಾದ ಮಾವುತರು

ಶ್ರೀಲಂಕಾದ ಮಾವುತರು

ಕಾಮನ್ ವೆಲ್ತ್ ಕ್ರೀಡಾಜ್ಯೋತಿ ಹಿಡಿದಿರುವ ಶ್ರೀಲಂಕಾದ ಮಾವುತರು. ಕಾಮನ್ ವೆಲ್ತ್ ಗೇಮ್ಸ್ ಸ್ಕಾಟಿಷ್ ನಗರ ಗ್ಲಾಸ್ಗೋನಲ್ಲಿ ಜು.23 ರಿಂದ ಆ.3 ರತನಕ ನಡೆಯಲಿದೆ.

ಕಾರು ಪಲ್ಟಿ

ಕಾರು ಪಲ್ಟಿ

ತಲ್ಲಡೆಗ: NASCAR ಸ್ಪ್ರಿಂಟ್ ಕಪ್ ಸರಣಿ ಡ್ರೈವರ್ ಆಸ್ಟಿನ್ ದಿಲ್ಲೊನ್ ಕಾರು ಪಲ್ಟಿ ಹೊಡೆದಿದೆ.

ಅಸ್ಸಾಂನಲ್ಲಿ

ಅಸ್ಸಾಂನಲ್ಲಿ

ಟಿನ್ ಸುಕಿಯಾ: ದಿಬ್ರ್ ಸೈಖೊ ರಾಷ್ಟ್ರೀಯ ಪಾರ್ಕ್ ನಲ್ಲಿ ವಲಸೆ ಹಕ್ಕಿಗಳ ಸಮೂಹ

ಮೆಹಂದಿ ರಂಗು

ಮೆಹಂದಿ ರಂಗು

ಕರ್ವ ಚೌತ್ ಅಂಗವಾಗಿ ಮಹಿಳೆಯರು ಮೆಹಂದಿ ರಂಗು ಹಾಕಿಕೊಂಡಿದ್ದಾರೆ

ಎಂಥಾ ಕ್ಯಾಚ್

ಎಂಥಾ ಕ್ಯಾಚ್

ಮರಕುಟುಕ ಪಕ್ಷಿ ತನ್ನ ಬೇಟೆ ಸಿಕ್ಕ ಖುಷಿಯಲ್ಲಿ ಬಾಯ್ತೆರೆದಿದೆ PTI Photo by Kamal Kishore

ಜಲಂಧರ್ ನಲ್ಲಿ

ಜಲಂಧರ್ ನಲ್ಲಿ

ಜಲಂಧರ್ : ಗುರು ಗೋವಿಂದ್ ಸಿಂಗ್ ಸ್ಟೇಡಿಯಂನಲ್ಲಿಆರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿ ಪ್ರವಚನ

ಆರೆಸ್ಸೆಸ್ ಕಾರ್ಯಕರ್ತರು

ಆರೆಸ್ಸೆಸ್ ಕಾರ್ಯಕರ್ತರು

ಜಮ್ಮು : ಆರೆಸ್ಸೆಸ್ ಕಾರ್ಯಕರ್ತರು ವಿಜಯದಶಮಿ ಪಥಸಂಚಲನ ನಡೆಸಿದರು.

ಚೆನ್ನೈನಲ್ಲಿ

ಚೆನ್ನೈನಲ್ಲಿ

ಟೆನಿಸ್ ತಾರೆ ಸೋಮದೇವ್ ದೇವರ್ಮನ್ ನಟ ಅರವಿಂದ ಸ್ವಾಮಿ ಅವರು ಲಾನ್ಸನ್ ಟೋಯೋಟಾ ಕಾರ್ ಫನ್ ಮೆರವಣಿಗೆ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಂಡಿದ್ದು ಹೀಗೆ

ಹೊಸ ಕಾರು

ಹೊಸ ಕಾರು

ಆಟೋಕಾರ್ ಶೋ 2013 ನಲ್ಲಿ ರೂಪದರ್ಶಿಗಳು ಕಾರಿನೊಂದಿಗೆ

 ಮುಂಬೈನಲ್ಲಿ

ಮುಂಬೈನಲ್ಲಿ

ಉದ್ಯಮಿ ಮುಖೇಶ್ ಅಂಬಾನಿ ಅವರು ರಿಲಯನ್ಸ್ ಇಂಡಿಯನ್ ಜ್ಯೂನಿಯರ್ ಹಾಗೂ ಕಾಡೆಟ್ ಓಪನ್ ವಿಜೇತರ ಜತೆ

ಚೆನ್ನೈನಲ್ಲಿ

ಚೆನ್ನೈನಲ್ಲಿ

ಚೆನ್ನೈನ ಬಜಾರ್ ವೊಂದರಲ್ಲಿ ದೀಪಾವಳಿಗೂ ಮುನ್ನ ಭರ್ಜರಿ ವ್ಯಾಪಾರ ನಡೆದಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Todays news stories in pics : Devotees and Members of ISKCON during a protest in front of Russian Consulate over the demolition of Hindu temple in Moscow, in Kolkata and many more pics
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more