ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ: ಜಯಲಲಿತಾ ಕೈಲಿ ಚದುರಂಗದ ಕಾಯಿ

By Mahesh
|
Google Oneindia Kannada News

ಬೆಂಗಳೂರು, ನ.7: ಬಹು ನೀರಿಕ್ಷಿತ ವಿಶ್ವ ಚಾಂಪಿಯನ್‌ಶಿಪ್ ಪಂದ್ಯಾವಳಿ ನ.9 ರಿಂದ ಚೆನ್ನೈನಲ್ಲಿ ಆರಂಭವಾಗಲಿದ್ದು ಭಾರತದ ಹಿರಿಯ ಚೆಸ್ ಆಟಗಾರ ವಿಶ್ವನಾಥನ್ ಆನಂದ್ ತಮ್ಮ ವಿಶ್ವ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲು ವಿಶ್ವದ ನಂಬರ್ ಒನ್ ಆಟಗಾರ ಮ್ಯಾಗ್ನಸ್ ಕಾರ್ಲ್ ಸೆನ್ ಜತೆ ಸೆಣೆಸಲಿದ್ದಾರೆ.

ಐದು ಬಾರಿ ವಿಶ್ವ ಚಾಂಪಿಯನ್ ಪಟ್ಟಕ್ಕೇರಿರುವ ವಿಶ್ವನಾಥನ್ ಆನಂದ್, ಯುವ ಆಟಗಾರ ಕಾರ್ಲ್‌ಸೆನ್ ವಿರುದ್ಧ ಮೊದಲ ಪಂದ್ಯದಲ್ಲಿ ಕಪ್ಪು ಕಾಯಿಗಳನ್ನು ಮುನ್ನಡೆಸಲಿದ್ದಾರೆ.ಈ ಪಂದ್ಯಾವಳಿಯಲ್ಲಿ ಒಟ್ಟು 12 ಪಂದ್ಯಗಳು ಕ್ಲಾಸಿಕಲ್ ಸಿಸ್ಟಮ್ ಮಾದರಿಯಲ್ಲಿ ನಡೆಯಲಿವೆ.

ಈ ವಿಶ್ವ ಚೆಸ್ ಚಾಂಪಿಯನ್ ಶಿಪ್ ಗೆ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಗುರುವಾರ ಚಾಲನೆ ನೀಡಿದ್ದಾರೆ. ಈ ಪಂದ್ಯಾವಳಿಗೆ ತಮಿಳುನಾಡು ಸರ್ಕಾರ ಅಧಿಕೃತ ಪ್ರಾಯೋಜಕರಾಗಿದ್ದು, ಪಂದ್ಯಾವಳಿಗೆ 29 ಕೋಟಿ ಮೀಸಲಿಟ್ಟಿದೆ.

ಪಂದ್ಯಾವಳಿಯ ಪ್ರಶಸ್ತಿ ಮೊತ್ತವನ್ನು ರು. 14 ಕೋಟಿ ನಿಗದಿ ಪಡಿಸಲಾಗಿದ್ದು, ಗೆಲವು ಸಾಧಿಸುವವರು ಪ್ರಶಸ್ತಿ ಮೊತ್ತದಲ್ಲಿ ಶೇ.60ರಷ್ಟನ್ನು ಬಹುಮಾನವಾಗಿ ಪಡೆಯಲಿದ್ದಾರೆ. ಸೋಲನುಭವಿಸುವ ಆಟಗಾರ ಉಳಿದ ಶೇ.40ರಷ್ಟು ಮೊತ್ತವನ್ನು ಬಹುಮಾನವಾಗಿ ಪಡೆಯಲಿದ್ದಾರೆ.

12 ಪಂದ್ಯಗಳ ನಂತರ ಉಭಯ ಆಟಗಾರರು ಸಮಬಲ ಸಾಧಿಸಿದರೆ, ಅತಿ ಕಡಿಮೆ ಸಮಯದಲ್ಲಿ ಪಂದ್ಯವನ್ನುಗೆದ್ದವರನ್ನು ಜಯಶಾಲಿಯನ್ನಾಗಿ ಘೋಷಿಸಲಾಗುವುದು. ಈ ರೀತಿಯಾಗಿ ಟೈಬ್ರೇಕರ್ ಮುಖಾಂತರ ಗೆಲವು ಸಾಧಿಸಿದ ಆಟಗಾರ ಬಹುಮಾನ ಮೊತ್ತದಲ್ಲಿ ಶೇ.55 ರಷ್ಟು ಹಣವನ್ನು ಬಹುಮಾನವಾಗಿ ಪಡೆಯಲಿದ್ದಾರೆ.

ಪ್ರತಿ ಪಂದ್ಯದ ಆರಂಭಿಕ 40 ಚಲನೆಗಳಿಗೆ ಪ್ರತಿ ಆಟಗಾರರು 120 ನಿಮಿಷಗಳನ್ನು ಪಡೆದಿದ್ದು, ನಂತರದ 20 ಚಲನೆಗಳಿಗೆ 60 ನಿಮಿಷ ನೀಡಲಾಗುವುದು. ಆನಂತರ 61ನೇ ಚಲನೆವರೆಗೂ ಪ್ರತಿ ಚಲನೆಗೆ 30 ಸೆಕೆಂಡ್ ಕಾಲಾವಕಾಶ ಹೆಚ್ಚಾಗಲಿದ್ದು 15 ನಿಮಿಷ ನೀಡಲಾಗಿದೆ. ಈ ಪಂದ್ಯಗಳಲ್ಲಿ ಮೊದಲು 6.5 ಅಂಕಗಳನ್ನು ಪಡೆಯುವವರು ಪಂದ್ಯದಲ್ಲಿ ಚಾಂಪಿಯನ್ ಆಗಲಿದ್ದಾರೆ. ಇದೇ ಮಾದರಿಯಲ್ಲಿ ಪಂದ್ಯಾವಳಿಯ 12 ಪಂದ್ಯಗಳು ನಡೆಯಲಿದೆ. ಇನ್ನಷ್ಟು ಚಿತ್ರಗಳು ಇಲ್ಲಿವೆ ತಪ್ಪದೇ ನೋಡಿ

ತಿರುಮಲದಲ್ಲಿ ವಿಜ್ಞಾನಿ

ತಿರುಮಲದಲ್ಲಿ ವಿಜ್ಞಾನಿ

ಮಂಗಳಯಾನ ಉಡಾವಣೆ ಯಶಸ್ವಿಯಾದ ನಂತರ ತಿರುಮಲ ತಿರುಪತಿ ದೇಗುಲಕ್ಕೆ ಭೇಟಿ ಕೊಟ್ಟ ಇಸ್ರೋ ಅಧ್ಯಕ್ಷ ಕೆ ರಾಧಾಕೃಷ್ಣನ್

ಮಂಜು ಮುಸುಕಿದ ಹಾದಿ

ಮಂಜು ಮುಸುಕಿದ ಹಾದಿ

ಗುರುವಾರ ಬೆಳಗ್ಗೆ ನವದೆಹಲಿಯಲ್ಲಿ ಮಂಜು ಮುಸುಕಿದ ಹಾದಿ

ಕಾಫಿ ರಫ್ತು

ಕಾಫಿ ರಫ್ತು

ಯಾವ ಯಾವ ದೇಶಕ್ಕೆ ಎಷ್ಟು ಪ್ರಮಾಣದಲ್ಲಿ ಕಾಫಿ ರಫ್ತಾಗಿದೆ ಎಂಬುದರ ವಿವರ ಪಿಟಿಐ ಗ್ರಾಫಿಕ್ಸ್ ನಲ್ಲಿದೆ

ಕೃಷಿಮೇಳ

ಕೃಷಿಮೇಳ

ಬೆಂಗಳೂರು: ಜಿಕೆವಿಕೆ ಕ್ಯಾಂಪಸ್ಸಿನಲ್ಲಿ ಅಂತಾರಾಷ್ಟ್ರೀಯ ಕೃಷಿಮೇಳ ಉದ್ಘಾಟನೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಯಲ್ಲಿ ಕೃಷಿ ಸಚಿವ ಕೃಷ್ಣಭೈರೇಗೌಡPTI Photo by Shailendra Bhojak

ಚೆನ್ನೈನಲ್ಲಿ

ಚೆನ್ನೈನಲ್ಲಿ

ತಮಿಳುನಾಡಿನ ಮುಖ್ಯಮಂತ್ರಿ ಜೆ ಜಯಲಲಿತಾ ಅವರು ಬಿಳಿ ಚೆಸ್ ಕಾಯಿ ಎತ್ತಿ ತೋರಿಸುವ ಮೂಲಕ ಫಿಡೆ ವಿಶ್ವ ಚಾಂಪಿಯನ್ ಶಿಪ್ ಗೆ ಇಲ್ಲಿನ ಜವಹರಲಾಲ್ ನೆಹರೂ ಸ್ಟೇಡಿಯಂನಲ್ಲಿ ಚಾಲನೆ ನೀಡಿದರು.

ಶುಭ ಹಾರೈಕೆ

ಶುಭ ಹಾರೈಕೆ

ನಾರ್ವೆಯ ಮ್ಯಾಗ್ನಸ್ ಕಾರ್ಲ್ ಸೆನ್ ಅವರಿಗೆ ಶುಭ ಹಾರೈಸಿದ ಮುಖ್ಯಮಂತ್ರಿ ಜಯಲಲಿತಾ

ಕಾಶ್ಮೀರದಲ್ಲಿ

ಕಾಶ್ಮೀರದಲ್ಲಿ

ಪುಲ್ವಾಮಾ:; ಏಷ್ಯದ ಅತಿದೊಡ್ಡ ಶಿಥೀಲಕರಣ ಘಟಕ ಉದ್ಘಾಟನೆಗೆ ಬಂದಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬೇಲಿ ಹಾರಿದ್ದು ಹೀಗೆ

ಇತ್ತೀಚಿನ ಸುದ್ದಿಗಳು

ಇತ್ತೀಚಿನ ಸುದ್ದಿಗಳು

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

ಇತ್ತೀಚಿನ ಸುದ್ದಿಗಳು

ಇತ್ತೀಚಿನ ಸುದ್ದಿಗಳು

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

ಇತ್ತೀಚಿನ ಸುದ್ದಿಗಳು

ಇತ್ತೀಚಿನ ಸುದ್ದಿಗಳು

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

ಇತ್ತೀಚಿನ ಸುದ್ದಿಗಳು

ಇತ್ತೀಚಿನ ಸುದ್ದಿಗಳು

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

ಇತ್ತೀಚಿನ ಸುದ್ದಿಗಳು

ಇತ್ತೀಚಿನ ಸುದ್ದಿಗಳು

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

English summary
Todays news stories in pics : Chennai: Tamil Nadu Chief Minister J Jayalalithaa shows white piece after pick from the second bowl during the inauguration function of 'FIDE World Championship Match-2013' at Jawaharlal Nehru Indoor Stadium in Chennai on Thursday.and many more pics
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X