ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಸುದ್ದಿ : ಸಲಿಂಗಿಗಳಿಗೆ ಹಿನ್ನಡೆ ರಸ್ತೆಗಿಳಿದು ಹೋರಾಟ

By Mahesh
|
Google Oneindia Kannada News

ಬೆಂಗಳೂರು, ಜ.29: ಸಲಿಂಗ ಕಾಮ ಅಪರಾಧ ಎಂಬ ತೀರ್ಪನ್ನು ಮರು ಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ತಳ್ಳಿ ಹಾಕಿದ ಬೆನ್ನಲ್ಲೇ ಸಾವಿರಾರು ಎಲ್ ಜಿಬಿಟಿ ಸಮುದಾಯದವರು ಪ್ರತಿಭಟನೆ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಲೆಸ್ಬಿಯನ್ ಗೇ ಬೈ ಸೆಕ್ಸುವಲ್, ಟ್ರಾನ್ಸ್ ಸೆಕ್ಸುವಲ್(LGBT) ಸಮುದಾಯಕ್ಕೆ ಸೇರಿದವರು ಹಾಗೂ ಈ ಸಮುದಾಯದ ಹಕ್ಕಿಗಾಗಿ ಹೋರಾಟ ನಡೆಸುತ್ತಿರುವ ಸರ್ಕಾರೇತರ ಸಂಘ ಸಂಸ್ಥೆಗಳ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಮೊಂಬತ್ತಿ ಹಚ್ಚಿಕೊಂಡು ಗೇ ಸೆಕ್ಸ್ ಅಪರಾಧವಲ್ಲ ನಮ್ಮನ್ನು ಬದುಕಲು ಬಿಡಿ ಎಂದು ಘೋಷಿಸಿದರು.

ಸಲಿಂಗ ಕಾಮ ಶಿಕ್ಷಾರ್ಹ ಅಪರಾಧವಾಗಿದ್ದು, ಈ ತಪ್ಪಿಗೆ ಜೀವಾವಧಿ ಶಿಕ್ಷೆ ವಿಧಿಸಬಹುದಾಗಿದೆ ಎಂದು ನ್ಯಾ. ಮೂರ್ತಿ ಎಚ್ ಎಲ್ ದತ್ತು ಹಾಗೂ ಎಸ್ ಜೆ ಮುಖ್ಯೋಪಾಧ್ಯಾಯ ಅವರು ಐಪಿಸಿ ಸೆಕ್ಷನ್ 377 ಸೆಕ್ಷನ್ (ಅಸಹಜ ಲೈಂಗಿಕತೆ ಅಪರಾಧಗಳು) ವಿಧಿಯನ್ನು ಎತ್ತಿ ಹಿಡಿದಿದ್ದನ್ನು ಇಲ್ಲಿ ಸ್ಮರಿಸಬಹುದು. [ವಿವರ ಇಲ್ಲಿ ಓದಿ]

ಉಳಿದಂತೆ ಸುದ್ದಿ ಚಿತ್ರಗಳಲ್ಲಿ ಮುಂಬೈಗೆ ಬಂದಿರುವ ಫ್ರಾನ್ಸಿನ ಅತಿಥಿ, ಪನ್ ವೇಲ್ ನಲ್ಲಿ ಅರ್ಜುನ ಪ್ರಶಸ್ತಿ ವಿಜೇತ ಕೊಡವ ಕ್ರೀಡಾಪಟು, ಶಿಕಾಗೋದಲ್ಲಿನ ಹಿಮರಾಶಿ ಮುಂತಾದ ಚಿತ್ರಗಳಿವೆ...

 ಸಲಿಂಗಿಗಳಿಗೆ ಹಿನ್ನಡೆ ರಸ್ತೆಗಿಳಿದು ಹೋರಾಟ

ಸಲಿಂಗಿಗಳಿಗೆ ಹಿನ್ನಡೆ ರಸ್ತೆಗಿಳಿದು ಹೋರಾಟ

ಸಲಿಂಗ ಕಾಮ ಅಪರಾಧ ಎಂಬ ತೀರ್ಪನ್ನು ಮರು ಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ತಳ್ಳಿ ಹಾಕಿದ ಬೆನ್ನಲ್ಲೇ ಸಾವಿರಾರು ಎಲ್ ಜಿಬಿಟಿ ಸಮುದಾಯದವರು ಪ್ರತಿಭಟನೆ ನಡೆಸಿದ್ದಾರೆ.

ಪನ್ ವೇಲ್ ನಲ್ಲಿ ಅರ್ಜುನ ಪ್ರಶಸ್ತಿ ವಿಜೇತೆ

ಪನ್ ವೇಲ್ ನಲ್ಲಿ ಅರ್ಜುನ ಪ್ರಶಸ್ತಿ ವಿಜೇತೆ

ಪನ್ ವೇಲ್ ನಲ್ಲಿ ಅರ್ಜುನ ಪ್ರಶಸ್ತಿ ವಿಜೇತೆ, ಕೊಡಗಿನ ಹೆಮ್ಮೆಯ ಪುತ್ರಿ ಅಶ್ವಿನಿ ಪೊನ್ನಪ್ಪಗೆ ಅಲೆಗ್ರಿಯಾ ಫೆಸ್ಟಿವಲ್ ಆಫ್ ಜಾಯ್ ಅಂತರ ಕಾಲೇಜ್ ಹಬ್ಬದಲ್ಲಿ ಪಾಲ್ಗೊಂಡಿದ್ದರು.

ಅಸಾರಾಮ್ ಬಾಪು ಆಶ್ರಮ ನೆಲಸಮ

ಅಸಾರಾಮ್ ಬಾಪು ಆಶ್ರಮ ನೆಲಸಮ

ಜಬಲ್ ಪುರ: ಲೈಂಗಿಕ ಕಿರುಕುಳ, ಸಾಮೂಹಿಕ ಅತ್ಯಾಚಾರ ಆರೋಪ ಹೊತ್ತಿರುವ ಅಸಾರಾಮ್ ಬಾಪು ಅವರ ಆಶ್ರಮ ನೆಲಸಮಗೊಳಿಸಲಾಗಿದೆ.

ಮುಂಬೈ ಕೊಳಗೇರಿಯಲ್ಲಿ ಫ್ರಾನ್ಸಿನ ಅತಿಥಿ

ಮುಂಬೈ ಕೊಳಗೇರಿಯಲ್ಲಿ ಫ್ರಾನ್ಸಿನ ಅತಿಥಿ

ಮುಂಬೈಗೆ ಬಂದಿರುವ ಫ್ರಾನ್ಸಿನ ಮಾಜಿ ಪ್ರಥಮ ಮಹಿಳೆ ಟ್ರೈರ್ ವಿಲರ್ ಅವರು ಸ್ಲಂ ನಲ್ಲಿರುವ ಮಕ್ಕಳೊಡನೆ ಆತ್ಮೀಯವಾಗಿ ಬೆರೆತು ಮಾತುಕತೆ ನಡೆಸಿದರು. PTI Photo by Shashank Parade

ಶಿಕಾಗೋದಲ್ಲಿರುವ ಮಿಚಿಗನ್ ಸರೋವರ

ಶಿಕಾಗೋದಲ್ಲಿರುವ ಮಿಚಿಗನ್ ಸರೋವರ

ಪೋಲಾರ್ ವರ್ಟೆಕ್ಸ್ ಗೆ ತುತ್ತಾಗಿ -40 ಡಿಗ್ರಿಗೆ ವಾತಾವರಣ ಕುಸಿದಿರುವ ಹಿನ್ನೆಲೆಯಲ್ಲಿ ಶಿಕಾಗೋದಲ್ಲಿರುವ ಮಿಚಿಗನ್ ಸರೋವರ ಸಂಪೂರ್ಣ ಹಿಮಾವೃತವಾಗಿದೆ.

ಭಾರ್ತಿ ಏರ್ ಟೆಲ್ ಲಿಮಿಟೆಡ್ ತ್ರೈಮಾಸಿಕ ವರದಿ

ಭಾರ್ತಿ ಏರ್ ಟೆಲ್ ಲಿಮಿಟೆಡ್ ತ್ರೈಮಾಸಿಕ ವರದಿ

ಭಾರ್ತಿ ಏರ್ ಟೆಲ್ ಲಿಮಿಟೆಡ್ ತ್ರೈಮಾಸಿಕ ವರದಿ ಪಿಟಿಐ ಗ್ರಾಫಿಕ್ಸ್

English summary
Todays news stories in pics : Bengaluru : Members and supporters of LGBT Community hold placards and candles during a candle light vigil against the Supreme court, which refused to review verdict on gay sex, in Bengaluru on Tuesday.The Supreme Court on Tuesday refused to review its verdict declaring gay sex
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X