ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರ ಸುದ್ದಿ: ರೋಮಾಂಚನಕಾರಿ ಜಲ್ಲಿಕಟ್ಟು ಆಡಿ ಪೆಟ್ಟು

By Mahesh
|
Google Oneindia Kannada News

ಬೆಂಗಳೂರು, ಜ.16 : ತಮಿಳುನಾಡಿನಲ್ಲಿ ಅತ್ಯಂತ ಸಡಗರದಿಂದ ಆಚರಿಸಲಾಗುವ ಪೊಂಗಲ್(ಸಂಕ್ರಾಂತಿ) ಹಬ್ಬದ ಮುಖ್ಯ ಭಾಗವಾದ "ಜಲ್ಲಿಕಟ್ಟು" ಅಥವಾ "ಮಂಜು ವೀರಟ್ಟು" ಸಾಹಸ ಪ್ರಧಾನ ರೋಮಾಂಚನಕಾರಿ ಆಟಕ್ಕೆ ಮತ್ತೆ ಅನೇಕರು ಗಾಯಗೊಂಡಿದ್ದಾರೆ.

ಮದುರೆಯ ಪಳಮೇಡುವಿನ ಸಮೀಪ ಬುಧವಾರ ಪೊಂಗಲ್ ಹಬ್ಬದ ಭಾಗವಾದ ಜಲ್ಲಿಕಟ್ಟು ಹಬ್ಬದಲ್ಲಿ ಗೂಳಿಯನ್ನು ಪಳಗಿಸಲು ಯತ್ನಿಸಿದ ಹಲವಾರು ಮಂದಿಗೆ ಮಾರಣಾಂತಿಕ ಗಾಯಗಳಾಗಿವೆ. ಗೂಳಿ ತರಬೇತುದಾರರು ಮತ್ತು ಪ್ರೇಕ್ಷಕರು ಸೇರಿದಂತೆ ಕನಿಷ್ಠ 41 ಮಂದಿ ಬುಧವಾರ ಗಾಯಗೊಂಡಿದ್ದಾರೆ. ಈ ಕ್ರೀಡೆಯಲ್ಲಿ 530 ಗೂಳಿಗಳು ಭಾಗವಹಿಸಿದ್ದು, ರಾಜ್ಯದ ನಾನಾ ಜಿಲ್ಲೆಗಳು ಮತ್ತು ವಿದೇಶದಿಂದ ಪ್ರೇಕ್ಷಕರು ಆಗಮಿಸಿದ್ದರು. [ಜಲ್ಲಿಕಟ್ಟು ಆಟದ ಹೆಚ್ಚಿನ ವಿವರ]

ಜಲ್ಲಿಕಟ್ಟು ಕ್ರೀಡೆಯಲ್ಲಿ ಭಾಗವಹಿಸುವ ಗೂಳಿಗಳಿಗೆ ಹಿಂಸೆ ನೀಡಲಾಗುತ್ತದೆ ಎಂದು ಪ್ರಾಣಿ ದಯಾ ಸಂಘಗಳು, ಪೆಟಾ ಆಕ್ಷೇಪ ವ್ಯಕ್ತಪಡಿಸಿತ್ತು. ಕ್ರೀಡೆಯಲ್ಲಿ ಪಾಲ್ಗೊಂಡಿದ್ದ ಗೂಳಿಗಳಿಗೆ ಹಿಂಸೆ ನೀಡಲಾಗಿಲ್ಲ ಮತ್ತು ಮಾದಕ ವಸ್ತು ತಿನ್ನಿಸಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಅಧಿಕಾರಿಗಳು ಅವುಗಳ ಆರೋಗ್ಯ ತಪಾಸಣೆ ನಡೆಸಿ ಸುಪ್ರೀಂ ಕೋರ್ಟ್ ನಿರ್ದೇಶನ ಮತ್ತು ಜಲ್ಲಿಕಟ್ಟು ನಿಯಂತ್ರಣ ಕಾಯಿದೆಯನ್ವಯ ಜಲ್ಲಿಕಟ್ಟು ಸ್ಪರ್ಧೆಗೆ ಚಾಲನೆ ನೀಡಿದರು. ಉಳಿದಂತೆ ಇಂದಿನ ಚಿತ್ರಗಳಲ್ಲಿ ಸುದ್ದಿಯಲ್ಲಿ ಕೌಲಾಲಂಪುರದಲ್ಲಿ ಕಂಡ ಮುರುಗ, ಮುದ್ದಿನ ಮಕ್ಕಳೊಂದಿಗೆ ಸ್ಟಾರ್ ನಟಿ, ಆರ್ಮಿ ದಿನಾಚರಣೆ, ವಾಹ್ ತಾಜ್ ವಾಹ್, ನ್ಯೂಯಾರ್ಕಿನಿಂದ ಬಂದ ನಮ್ಮ ಕಲಾಕೃತಿ ಮುಂತಾದ ಚಿತ್ರಗಳಿವೆ ತಪ್ಪದೇ ನೋಡಿ...

ಜಲ್ಲಿಕಟ್ಟು ಕ್ರೀಡೆ ಆಡಿದರೆ ಭಾರಿ ಪೆಟ್ಟು

ಜಲ್ಲಿಕಟ್ಟು ಕ್ರೀಡೆ ಆಡಿದರೆ ಭಾರಿ ಪೆಟ್ಟು

ಮದುರೈನ ಪಳಂಮೇಡುನಲ್ಲಿ ಪೊಂಗಲ್ ಭಾಗವಾಗಿ ನಡೆದ ಜಲ್ಲಿಕಟ್ಟು ಕ್ರೀಡೆಯ ರೋಮಾಂಚನಕಾರಿ ದೃಶ್ಯ

ಮದುರೈನ ಜಲ್ಲಿಕಟ್ಟು ಹಬ್ಬದ ಸಂಭ್ರಮ

ಮದುರೈನ ಜಲ್ಲಿಕಟ್ಟು ಹಬ್ಬದ ಸಂಭ್ರಮ

ತಮಿಳುನಾಡಿನ ಮದುರೈನ ಪಳಂಮೇಡುನಲ್ಲಿ ಪೊಂಗಲ್ ಭಾಗವಾಗಿ ನಡೆದ ಜಲ್ಲಿಕಟ್ಟು ಕ್ರೀಡೆಯ ರೋಮಾಂಚನಕಾರಿ ದೃಶ್ಯ

ಕೌಲಾಲಂಪುರದಲ್ಲಿ ಕಂಡ ಮುರುಗನ್

ಕೌಲಾಲಂಪುರದಲ್ಲಿ ಕಂಡ ಮುರುಗನ್

ಮಲೇಷಿಯಾದಲ್ಲಿ ಥೈಪೂಸಂ ಮಾಸದ ಆರಂಭವನ್ನು ಸ್ವಾಗತಿಸುತ್ತಾ ಭಾರತೀಯ ಮೂಲದ ತಮಿಳರು ಮುರುಗನ್ ವೇಷಧಾರಿ ಮಕ್ಕಳ ಮೆರವಣಿಗೆ ನಡೆಸಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಎಚ್ ಸಿಎಲ್ ಟೆಕ್ನಾಲಜೀಸ್ 2ನೇ ತ್ರೈಮಾಸಿಕ ವರದಿ

ಎಚ್ ಸಿಎಲ್ ಟೆಕ್ನಾಲಜೀಸ್ 2ನೇ ತ್ರೈಮಾಸಿಕ ವರದಿ

ಎಚ್ ಸಿಎಲ್ ಟೆಕ್ನಾಲಜೀಸ್ 2ನೇ ತ್ರೈಮಾಸಿಕ ವರದಿಯಂತೆ 1496 ಕೋಟಿ ರುನಂತೆ ಶೇ 58.4ರಷ್ಟು ನಿವ್ವಳ ಲಾಭ ಅಧಿಕಗೊಂಡಿದೆ. ಸಂಸ್ಥೆಯ ಆದಾಯ ಶೇ 30.4 ರಷ್ಟು ಏರಿಕೆ ಕಂಡು 6278 ಕೋಟಿ ರು ಗಳಿಸಿದೆ.

ಅಮ್ಮನೊಂದಿಗೆ ಮುದ್ದಿನ ಮಕ್ಕಳು

ಅಮ್ಮನೊಂದಿಗೆ ಮುದ್ದಿನ ಮಕ್ಕಳು

ಮುಂಬೈ: ಹಿರಿಯ ನಟಿ ತನುಜಾ ಅವರು ತನ್ನ ಮುಂದಿನ ಮಕ್ಕಳಾದ ಕಾಜೋಲ್ ಹಾಗೂ ತನೀಶಾ ಮುಖರ್ಜಿ ಜತೆ ಸ್ಕ್ರೀನ್ ಅವಾರ್ಡ್ 2014 ರೆಡ್ ಕಾರ್ಪೆಟ್ ನಲ್ಲಿ ನಡೆಯುವ ಮುನ್ನ

ವಾಹ್ ಏನಿದು ರಾಜಸ್ಥಾನಿ ಮೀಸೆ

ವಾಹ್ ಏನಿದು ರಾಜಸ್ಥಾನಿ ಮೀಸೆ

ಬಿಕಾನೇರ್: ವಿದೇಶಿ ಪ್ರವಾಸಿಗರು ಉದ್ದುದ್ದಾ ಮೀಸೆ ಬಿಟ್ಟಿರುವ ರಾಜಸ್ಥಾನಿಯ ಮೀಸೆ ಹಿಡಿದು ಪೋಸ್ ಕೊಟ್ಟಿದ್ದಾರೆ. ಅಂತಾರಾಷ್ಟ್ರೀಯ ಒಂಟೆ ಉತ್ಸವಕ್ಕೆ ಅನೇಕ ದೇಶಗಳಿಂದ ಪ್ರವಾಸಿಗರು ಆಗಮಿಸಿದ್ದಾರೆ.

ವಾಹ್ ತಾಜ್ ವಾಹ್ ಎಂದ ಝಾಕೀರ್

ವಾಹ್ ತಾಜ್ ವಾಹ್ ಎಂದ ಝಾಕೀರ್

ಆಗ್ರಾದಲ್ಲಿ ಪ್ರೇಮಸೌಧ ತಾಜಮಹಲ್ ಮುಂದೆ ಉಸ್ತಾದ್ ಝಾಕೀರ್ ಹುಸೇನ್ ಅವರು ತಬಲಾ ವಾದನ.

English summary
Todays news stories in pics : Madurai Jallikattu festival, organised as part of the Pongal festival, at Palamedu near Madurai. Malaysian Hindu devotees celebrated start of Thaipusam and and many more pics
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X