ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಡ್ ರಿಬ್ಬನ್ ನಲ್ಲಿ ಬಂದಿಯಾದ ಸುಂದರ ಜಗತ್ತು

By Mahesh
|
Google Oneindia Kannada News

ಬೆಂಗಳೂರು, ಡಿ.1: ಎಚ್ ಐವಿ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲು ಡಿ.1ರಂದು ವಿಶ್ವ ಏಡ್ಸ್ ಜಾಗೃತಿ ದಿನ ಎಂದು ಎಲ್ಲೆಡೆ ಆಚರಿಸಲಾಗಿದೆ. ಏಡ್ಸ್ ಮಹಾಮಾರಿ ವಿರುದ್ಧ ಅರಿವು ಮೂಡಿಸಲು ಈ ದಿನ ಮಹತ್ವಪೂರ್ಣವಾಗಿದ್ದು, 1987ರಲ್ಲಿ ಮೊದಲ ಬಾರಿಗೆ ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಕಾರ್ಯಕ್ರಮದಲ್ಲಿ ಏಡ್ಸ್ ಜಾಗೃತಿ ದಿನ ಆಚರಿಸಲಾಗಿತ್ತು. ಬಳಿಕ 1988ರಲ್ಲಿ ಡಿ.1ರಂದು ಏಡ್ಸ್ ದಿನವನ್ನಾಗಿ ಆಚರಿಸುವ ಪರಿಪಾಠ ಬೆಳೆಯಿತು.

ವಿಶ್ವಸಂಸ್ಥೆಯೂ ಈ ದಿನವನ್ನು ಆಚರಿಸುವ ಬಗ್ಗೆ ಘೋಷಣೆ ಮಾಡಿದೆ. ಏಡ್ಸ್ ಜಾಗೃತಿ ದಿನಾಚರಣೆಯಿಂದಾಗಿ ಹೊಸ ಎಚ್ ಐವಿ ಪ್ರಕರಣಗಳು ಜಾಗತಿಕವಾಗಿ ಕುಸಿತವಾಗುತ್ತಿವೆ. ಎಚ್ ಐವಿ ಸೋಂಕಿತರ ಅಂಕಿ ಅಂಶದಂತೆ ಕರ್ನಾಟಕದಲ್ಲಿ ಬಾಗಲಕೋಟೆ ಜಿಲ್ಲೆ ಮೊದಲ ಸ್ಥಾನದಲ್ಲಿದೆ.ಕರ್ನಾಟಕದಲ್ಲಿ ಒಟ್ಟು 2.53 ಮಂದಿ ಎಚ್ ಐವಿ ಸೋಂಕಿತರನ್ನು ಗುರುತಿಸಲಾಗಿದೆ.

ವಿಶ್ವ ಏಡ್ಸ್ ಜಾಗೃತಿ ದಿನಾಚರಣೆ ಅಂಗವಾಗಿ ಸೆಕ್ಸ್ ವರ್ಕರ್ ಗಳು, ಶಾಲಾ ಮಕ್ಕಳು, ರೆಡ್ ಕ್ರಾಸ್, ರೋಟರಿ ಸಂಸ್ಥೆ ಸೇರಿದಂತೆ ವಿವಿಧ ಸರ್ಕಾರೇತರ ಸಂಸ್ಥೆಗಳು ರೆಡ್ ರಿಬ್ಬನ್ ಧರಿಸಿ ಏಡ್ಸ್ ಬಗ್ಗೆ ಜಾಗೃತಿ ಮೂಡಿಸಿವೆ. ಏಡ್ಸ್ ಜಾಗೃತಿ ಜತೆ ಇನ್ನಷ್ಟು ಚಿತ್ರಗಳು ಇಲ್ಲಿವೆ ತಪ್ಪದೇ ನೋಡಿ...

ಮರಳಿನಲ್ಲಿ ರೆಡ್ ರಿಬ್ಬನ್

ಮರಳಿನಲ್ಲಿ ರೆಡ್ ರಿಬ್ಬನ್

ಅಲಹಾಬಾದಿನಲ್ಲಿ ಮರಳುಶಿಲ್ಪಿಯೊಬ್ಬರು ಏಡ್ಸ್ ಜಾಗೃತಿ ಮೂಡಿಸುವ ಕಲಾಕೃತಿ ಗಂಗಾ ನದಿ ತೀರದಲ್ಲಿ ರಚಿಸಿದ್ದಾರೆ.

ಮಹಾರಾಷ್ಟ್ರದಲ್ಲಿ

ಮಹಾರಾಷ್ಟ್ರದಲ್ಲಿ

ಮಹಾರಾಷ್ಟ್ರದಲ್ಲಿ ಶಾಲಾ ಮಕ್ಕಳು ಮಾನವ ಸರಪಳಿ ರೂಪದಲ್ಲಿ ಏಡ್ಸ್ ಜಾಗೃತಿ ಮೂಡಿಸಿದ್ದಾರೆ

ಏಡ್ಸ್ ಬಗ್ಗೆ ಅರಿವು

ಏಡ್ಸ್ ಬಗ್ಗೆ ಅರಿವು

ವೇಶ್ಯೆಯರಿಗೆ ಏಡ್ಸ್ ಬಗ್ಗೆ ಅರಿವು ಮೂಡಿಸಲು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ನರ್ತನ PTI Photo by Mitesh Bhuvad

ಶಬರಿಮಲೆಯಲ್ಲಿ

ಶಬರಿಮಲೆಯಲ್ಲಿ

ಶನಿವಾರ ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಕಂಡು ಬಂದ ದೃಶ್ಯ

ಜಪಾನ್ ಅತಿಥಿಗಳು

ಜಪಾನ್ ಅತಿಥಿಗಳು

ನವದೆಹಲಿ: ಭಾರತ ಪ್ರವಾಸದಲ್ಲಿರುವ ಜಪಾನಿನ ದೊರೆ ಅಕಿಹಿಟೋ ಹಾಗೂ ಪತ್ನಿ ಮಿಚಿಕೊ ಅವರು ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಅವರ ಪತ್ನಿ ಗುರ್ ಶರಣ್ ಕೌರ್ ಜತೆಯಲ್ಲಿ

ಪ್ರಿನ್ಸ್ ವಿಲಿಯಮ್ಸ್

ಪ್ರಿನ್ಸ್ ವಿಲಿಯಮ್ಸ್

ಕೇಂಬ್ರಿಡ್ಜ್ ನ ಪ್ರಿನ್ಸ್ ವಿಲಿಯಮ್ಸ್ ಅವರು ಬರ್ಮಿಂಗ್ ಹ್ಯಾಂ ನಲ್ಲಿ ಶನಿವಾರ ಬೈಕ್ ಏರಿದ್ದು ಹೀಗೆ

ಕುಂಬ್ಳೆ ನೆನಪಿಸಿದ ಬೌಲರ್

ಕುಂಬ್ಳೆ ನೆನಪಿಸಿದ ಬೌಲರ್

ರೈಲ್ವೇಸ್ ಪರ ಆಡುವ ಕರಣ್ ಠಾಕೂರ್ ಅವರು ಅನಿಲ್ ಕುಂಬ್ಳೆ ನೆನಪಿಸುವ ಸಾಧನೆ ಮಾಡಿದ್ದಾರೆ.ಸಿಕೆ ನಾಯ್ಡು ಟ್ರೋಫಿ ಪಂದ್ಯದಲ್ಲಿ ಠಾಕೂರ್ ಅವರು ಬರೋಡಾ ವಿರುದ್ಧ 10 ವಿಕೆಟ್ ಕಿತ್ತಿದ್ದಾರೆ. ಆಸ್ಟ್ರೇಲಿಯಾದ ಮೆಗ್ ಗ್ರಾಥ್ ಹಾಗೂ ಡೆನ್ನಿಸ್ ಲಿಲ್ಲಿ ಜತೆ ಠಾಕೂರ್

ಫರೂಖ್ ಅಬ್ದುಲ್ಲಾ ಡ್ಯಾನ್ಸ್

ಫರೂಖ್ ಅಬ್ದುಲ್ಲಾ ಡ್ಯಾನ್ಸ್

ಜರ್ಮನ್ ರಾಯಭಾರಿ ಮೈಕಲ್ ಸ್ಟೈನರ್ ಜತೆ ಕಾಶ್ಮೀರಿ ಸಾಂಪ್ರದಾಯಿಕ ನೃತ್ಯ ಮಾಡಿದ ಕೇಂದ್ರ ಸಚಿವ ಫಾರೂಖ್ ಅಬ್ದುಲ್ಲಾ

English summary
Todays news stories in pics : World AIDS Day events – held on 1 December each year – is one of the most globally recognised events of the year. It raises awareness across the world and in the community about the issues surrounding HIV/AIDS. and Many more pics across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X