ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ: ಭಗತ್ ಸಿಂಗ್ ನೆನಪಿನ ದಿನ

By Mahesh
|
Google Oneindia Kannada News

ಬೆಂಗಳೂರು, ಸೆ.27 : 'ದೇಶಕ್ಕಾಗಿ ನಾವೇನೂ ಮಾಡಬೇಕಿಲ್ಲ. ನನ್ನ ಹಳ್ಳಿ, ನನ್ನ ಊರು, ನನ್ನ ಜನ, ನನ್ನ ಸುತ್ತಮುತ್ತಲಿನ ಸಮಾಜಕ್ಕಾಗಿ ಸ್ಪಂದಿಸುವುದೇ, ತುಡಿಯುವುದೇ, ಸಮಾಜದ ಒಳಿತಿಗೆ ಶ್ರಮಿಸುವುದೇ ನಾವಿಂದು ಮಾಡಬೇಕಾದ ಕಾರ್ಯ. ಅದೇ ದೇಶ ಕಟ್ಟುವ ಕೆಲಸ" ಇದು ಇಂದಿನ ಯಾವುದೇ ಮಹಾನ್ ರಾಜಕಾರಣಿ ಆಡಿದ ಹೇಳಿಕೆಯಲ್ಲ. ನಮ್ಮ ಇಂದಿಗಾಗಿ ತಮ್ಮ ನಾಳೆಗಳನ್ನು ಬಲಿಕೊಟ್ಟ ಹುತಾತ್ಮ ಭಗತ್ ಸಿಂಗ್ ಕೊನೆ ಗಳಿಗೆಯಲ್ಲಿ ನೀಡಿದ ಅದ್ಭುತ ಸಾಲುಗಳು.

ಒಟ್ಟಿನಲ್ಲಿ ದೇಶ ಕಂಡ ಅಪ್ರತಿಮ ಕಾಂತ್ರಿಕಾರರಲ್ಲಿ ರಾಜ್ ಗುರು, ಸುಖದೇವ್, ಚಂದ್ರಶೇಖರ್ ಅಜಾದ್ ಹಾಗೂ ಭಗತ್ ಸಿಂಗ್ ಇಂದಿಗೂ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ತೀರಾ ತಡವಾಗಿಯಾದರೂ ಭಗತ್ ಅವರ ಊರಲ್ಲಿ ಸ್ಮಾರಕ ನಿರ್ಮಾಣವಾಗಿದೆ. ಹತ್ತಾರು ಸಿನಿಮಾಗಳು, ನಾಟಕಗಳು ಯಶಸ್ವಿ ಪ್ರದರ್ಶನ ಕಂಡಿವೆ. ದೇಶದ ಸ್ವಾತಂತ್ರ್ಯಕ್ಕಾಗಿ ಭಗತ್ ಮತ್ತು ಸಹಚರರು ಜೀವದ ಹಂಗು ತೊರೆದು ಮಾಡಿದ ಹೋರಾಟ, ತ್ಯಾಗ, ಬಲಿದಾನ ಚಿರಸ್ಮರಣೀಯ. ಸೆ.28ರಂದು ಜನಿಸಿದ ಭಗತ್ ಸಿಂಗ್ ಅವರ ಜನ್ಮದಿನಾಚರಣೆಯನ್ನು ಅಹಮದಾಬಾದಿನಲ್ಲಿ ಇಂದೇ ಆಚರಿಸಲಾಗಿದೆ.

ಉಳಿದಂತೆ, ಭಾರತೀಯ ಮೂಲದ ಶ್ರೀನಿವಾಸನ್ ಅಮೆರಿಕದ ನ್ಯಾಯಾಲಯದ ಜಡ್ಜ್ ಆಗಿದ್ದು, ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿಯಲ್ಲಿ ಮೃತರಾದ ಸೈನಿಕರಿಗೆ ನಮನ ಹಾಗೂ ಉಗ್ರರ ಹತ್ಯೆ ಚಿತ್ರ, ಮುಂಬೈನಲ್ಲಿ ಕಟ್ಟಡ ಕುಸಿತ, ನಕಾರಾತ್ಮಕ ಮತದಾನದ ವಿವರವುಳ್ಳ ಗ್ರಾಫಿಕ್ಸ್ ಚಿತ್ರ ಎಲ್ಲವೂ ಇಂದಿನ ಪ್ಯಾಕೇಜಿನಲ್ಲಿದೆ ತಪ್ಪದೇ ನೋಡಿ..

ಭಗತ್ ಸಿಂಗ್ ಸ್ಮರಣೆ

ಭಗತ್ ಸಿಂಗ್ ಸ್ಮರಣೆ

ಅಲಹಾಬಾದ್ : ಹುತಾತ್ಮ ಭಗತ್ ಸಿಂಗ್ ಅವರ ಜನ್ಮದಿನ ವಾರ್ಷಿಕೋತ್ಸವ ಆಚರಿಸಲಾಗಿದೆ.

ನಕಾರಾತ್ಮಕ ಮತದಾನ

ನಕಾರಾತ್ಮಕ ಮತದಾನ

ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ ಮತಯಂತ್ರಗಳಲ್ಲಿ ಅಭ್ಯರ್ಥಿ ತಿರಸ್ಕರಿಸಲು ಒಂದು ಪ್ರತ್ಯೇಕ ಬಟನ್ ವಿನ್ಯಾಸಗೊಳಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶಿಸಲಾಗಿದೆ. ವಿವರ ಇಲ್ಲಿ ಓದಿ

ಇದರ ಜತೆಗೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಹಾಗೂ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ ಅವರು ಆಗ್ರಹಿಸಿರುವ right to reject ಬಗ್ಗೆ ಗೊಂದಲವಿದ್ದರೆ ಅದಕ್ಕೆ ಉತ್ತರ ಪಿಟಿಐ ಗ್ರಾಫಿಕ್ಸ್ ನಲ್ಲಿ ಸಿಗಲಿದೆ ನೋಡಿ
ಜಮ್ಮು ದಾಳಿ- ಹುತಾತ್ಮರು

ಜಮ್ಮು ದಾಳಿ- ಹುತಾತ್ಮರು

ಜಮ್ಮು : ಸಾಂಬಾ ಪಕ್ಕದಲ್ಲಿರುವ ಸೇನಾ ಶಿಬಿರದ ಮೇಲೆ ದಾಳಿ ಮಾಡುವ ಮುನ್ನ ಉಗ್ರರು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ ಪರಿಣಾಮ ಐವರು ಸೈನಿಕರು ಸೇರಿದಂತೆ 12 ಮಂದಿ ಹತರಾಗಿದ್ದರು. ಹುತಾತ್ಮರಿಗೆ ನಮನ ಸಲ್ಲಿಸಲಾಗಿದ್ದು, ದಾಳಿ ನಡೆಸಿದ ಮೂವರು ಉಗ್ರರನ್ನು ಹತ್ಯೆಗೈಯಲಾಗಿದೆ.

ಅಮೆರಿಕದಲ್ಲಿ ಪ್ರಧಾನಿ

ಅಮೆರಿಕದಲ್ಲಿ ಪ್ರಧಾನಿ

ವಾಷಿಂಗ್ಟನ್ ಡಿಸಿ: ಇಲ್ಲಿನ ಆಂಡ್ರ್ಯೂ ಏರ್ ಫೋರ್ಸ್ ಬೇಸ್ ನಲ್ಲಿ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಆವರನ್ನು ಸ್ವಾಗತಿಸಿದ ರಾಯಭಾರಿ ನಿರುಪಮಾ ರಾವ್ ಹಾಗೂ ಇತರೆ ಸಿಬ್ಬಂದಿ

ಅಮೆರಿಕದಲ್ಲಿ ಭಾರತದ ಜಡ್ಜ್ ಶ್ರೀನಿವಾಸನ್

ಅಮೆರಿಕದಲ್ಲಿ ಭಾರತದ ಜಡ್ಜ್ ಶ್ರೀನಿವಾಸನ್

ಅಮೆರಿಕದ ಸುಪ್ರೀಂಕೋರ್ಟ್ ನಂತರ ಎರಡನೆ ಮಹತ್ವದ ಕೋರ್ಟಿಗೆ ಈಗ ಶ್ರೀನಿವಾಸನ್ ಅವರು ಜಡ್ಜ್ ಆಗಿದ್ದಾರೆ.ವಿವರಗಳನ್ನು ಇಲ್ಲಿ ಓದಿ

ಆಸ್ಟ್ರೇಲಿಯಾದ ಚಲನಚಿತ್ರೋತ್ಸವ

ಆಸ್ಟ್ರೇಲಿಯಾದ ಚಲನಚಿತ್ರೋತ್ಸವ

ಮುಂಬೈನಲ್ಲಿ ಆಸ್ಟ್ರೇಲಿಯಾದ ಚಲನಚಿತ್ರೋತ್ಸವ ಬಗ್ಗೆ ವಿವರ ನೀಡಲು ನಿಂತ ಮಲೈಕಾ ಅರೋರಾ ಖಾನ್, ವಿದ್ಯಾಬಾಲನ್ ಕಪೂರ್, ಮಿರು ಬೌಮಿಕ್ ಲಾಂಜ್ ಹಾಗೂ ಆಸ್ಟ್ರೇಲಿಯಾದ ಸಂಸದೆ ಲೌಸಿ ಆಷರ್(ಎಡದಿಂದ ಎರಡನೆಯವರು)

ಮುಂಬೈ ಕಟ್ಟಡ ಕುಸಿತ

ಮುಂಬೈ ಕಟ್ಟಡ ಕುಸಿತ

ಇಲ್ಲಿನ ಡಾಕ್ ಯಾರ್ಡ್ ರಸ್ತೆಯಲ್ಲಿರುವ ಐದು ಅಂತಸ್ತಿನ ಕಟ್ಟಡವೊಂದು ಶುಕ್ರವಾರ ಬೆಳಗ್ಗಿನ ಜಾವ ನೆಲಕ್ಕುರುಳಿದೆ. ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದವರ ಪೈಕಿ ಆರು ಮಂದಿ ಸಾವನ್ನಪ್ಪಿರುವುದು ಪತ್ತೆಯಾಗಿದೆ. ಮೃತಪಟ್ಟವರ ಶವಗಳನ್ನು ಹೊರಕ್ಕೆಳೆಯಲಾಗಿದೆ.

ಸುಮಾರು 25 ಜನ ಇನ್ನೂ ಅವಶೇಷಗಳಡಿ ಇರುವ ಸಾಧ್ಯತೆಯಿದೆ. 15 ಜನರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ವಿವರ ಹಾಗೂ ಚಿತ್ರಗಳನ್ನು ಇಲ್ಲಿ ನೋಡಿ

English summary
Todays news stories in pics : Allahabad: People paying tribute to Shahid Bhagat Singh on the occasion of his birth anniversary in Allahabad and Many more pics
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X