• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿತ್ರಗಳಲ್ಲಿ: ಪಿತೃಪಕ್ಷದಲ್ಲಿ ಪಿಂಡ ಪ್ರದಾನ

By Mahesh
|

ಬೆಂಗಳೂರು, ಸೆ.20: ಗಯಾದಲ್ಲಿ ಭೋಪಾಲ್ ಸೇರಿದಂತೆ ದೇಶದೆಲ್ಲೆಡೆ ಪಿತೃಪಕ್ಷದ ಅಂಗವಾಗಿ ಪಿತೃಗಳ ಕಾರ್ಯ ಸಾಂಗವಾಗಿ ನಡೆದಿದೆ, ಗಯಾದಲ್ಲಿ ಫಲ್ಗು ನದಿ ತೀರದಲ್ಲಿ ಜನರು ತಮ್ಮ ಪಿತೃಗಳಿಗೆ ಪಿಂಡ ಪ್ರದಾನ ಮಾಡಿ ಧನ್ಯತೆ ಅನುಭವಿಸಿದ್ದಾರೆ.

ಭಾದ್ರಪದ ಮಾಸದಲ್ಲಿ ಬರುವ ಕೃಷ್ಣ ಪಕ್ಷವನ್ನು ಪಿತೃಪಕ್ಷ ಎಂದೂ ಕರೆಯಲಾಗುತ್ತದೆ. ಪಾಡ್ಯ ತಿಥಿಯಿಂದ ಮಹಾಲಯ ಅಮಾವಾಸ್ಯೆಯ ದಿನದವರೆಗಿನ ಈ 15 ದಿನಗಳಲ್ಲಿ ಮದುವೆ, ಉಪನಯನ, ಚೂಡಾಕರ್ಮ ಮುಂತಾದ ದೇವತಾ ಕಾರ್ಯಗಳನ್ನು ಮಾಡುವುದಿಲ್ಲ. ಏಕೆಂದರೆ ಈ ದಿನ ಪಿತೃಗಳ ಕಾರ್ಯಕ್ಕಾಗಿ ಮೀಸಲಿಡಲಾಗಿದೆ. ಈ ಶ್ರಾದ್ಧ ಕರ್ಮವನ್ನು ಹಿಂದೂಗಳಲ್ಲದೆ ದೇಶದ ಎಲ್ಲ ಧರ್ಮ, ಜಾತಿ, ಮತದವರೂ ಸಹ ಅವರವರ ಧರ್ಮಕ್ಕೆ ಅನುಗುಣವಾಗಿ ಆಚರಿಸುತ್ತಾರೆ.

ಉಳಿದಂತೆ, ಹೈದರಾಬಾದಿನಲ್ಲಿ ವಿಸರ್ಜನೆಗೆ ಹೊರಟ ಗಣೇಶ ಮೂರ್ತಿ ಸಾಲು, ಭಾರತ ಎ ತಂಡವನ್ನು ಮಣಿಸಿದ ಕಿರಾನ್ ಪವೆಲ್ ನಾಯಕತ್ವದ ವಿಂಡೀಸ್ ಎ ತಂಡ, ಚಾಂಪಿಯನ್ಸ್ ಲೀಗ್ ಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ತಯಾರಿ, ಚೆನ್ನೈನಲ್ಲಿ ಚಿತ್ರರಂಗದ ನೂರು ವರ್ಷದ ಸಂಭ್ರಮ, ಗಾಂಧಿನಗರದಲ್ಲಿ ನರೇಂದ್ರ ಮೋದಿ ಜತೆ ನಟ ಜಾನ್ ಅಬ್ರಹಾಂ, ಜಮ್ಮುವಿನಲ್ಲಿ ಈರುಳ್ಳಿ ಸಂಗ್ರಹಣಾ ಘಟಕ, ಕೊಚ್ಚಿಯಲ್ಲಿ ಡ್ರಮ್ ಬಾರಿಸಿದ ಸಚಿವ ಚಿರಂಜೀವಿ,ತ್ರಿಸ್ಸೂರಿನಲ್ಲಿ ಹುಲಿವೇಷ, ಮುಂತಾದ ಚಿತ್ರಗಳು ಇಲ್ಲಿವೆ...

ಗಯಾದಲ್ಲಿ

ಗಯಾದಲ್ಲಿ

ಗಯಾದಲ್ಲಿ ಫಲ್ಗು ನದಿ ತೀರದಲ್ಲಿ ಜನರು ತಮ್ಮ ಪಿತೃಗಳಿಗೆ ಪಿಂಡ ಪ್ರದಾನ ಮಾಡಿ ಧನ್ಯತೆ ಅನುಭವಿಸಿದ್ದಾರೆ.

ಗಯಾದಲ್ಲಿ

ಗಯಾದಲ್ಲಿ

ಗಯಾ, ಭೋಪಾಲ್ ಸೇರಿದಂತೆ ದೇಶದೆಲ್ಲೆಡೆ ಪಿತೃಪಕ್ಷದ ಅಂಗವಾಗಿ ಪಿತೃಗಳ ಕಾರ್ಯ ಸಾಂಗವಾಗಿ ನಡೆದಿದೆ, ಗಯಾದಲ್ಲಿ ಫಲ್ಗು ನದಿ ತೀರದಲ್ಲಿ ಜನರು ತಮ್ಮ ಪಿತೃಗಳಿಗೆ ಪಿಂಡ ಪ್ರದಾನ ಮಾಡಿ ಧನ್ಯತೆ ಅನುಭವಿಸಿದ್ದಾರೆ.

ಭೋಪಾಲ್ ನಲ್ಲಿ

ಭೋಪಾಲ್ ನಲ್ಲಿ

ಭಾದ್ರಪದ ಮಾಸದಲ್ಲಿ ಬರುವ ಕೃಷ್ಣ ಪಕ್ಷವನ್ನು ಪಿತೃಪಕ್ಷ ಎಂದೂ ಕರೆಯಲಾಗುತ್ತದೆ. ಗಯಾದಲ್ಲಿ ಭೋಪಾಲ್ ಸೇರಿದಂತೆ ದೇಶದೆಲ್ಲೆಡೆ ಪಿತೃಪಕ್ಷದ ಅಂಗವಾಗಿ ಪಿತೃಗಳ ಕಾರ್ಯ ಸಾಂಗವಾಗಿ ನಡೆದಿದೆ,

ಈರುಳ್ಳಿ ಸಂಗ್ರಹಣಾ ಘಟಕ

ಈರುಳ್ಳಿ ಸಂಗ್ರಹಣಾ ಘಟಕ

ಜಮ್ಮು : ಹೋಲ್ ಸೇಲ್ ಮಾರುಕಟ್ಟೆಯಲ್ಲಿ ಈರುಳ್ಳಿ ಸಂಗ್ರಹಣಾ ಘಟಕದಲ್ಲಿ ಈರುಳ್ಳಿ ಪ್ಯಾಕ್ ಮಾಡಲಾಗುತ್ತಿದೆ. ಹೋಲ್ ಸೇಲ್ ಹಾಗೂ ರೀಟೇಲ್ ಮಾರುಕಟ್ಟೆ ಎರಡರಲ್ಲೂ ಈರುಳ್ಳಿ ಬೆಲೆ ಏರಿಕೆ ಕಂಡಿದೆ.

ಹೈದರಾಬಾದಿನಲ್ಲಿ

ಹೈದರಾಬಾದಿನಲ್ಲಿ

ಹೈದರಾಬಾದಿನಲ್ಲಿ ವಿಸರ್ಜನೆಗೆ ಹೊರಟ ಗಣೇಶ ಮೂರ್ತಿ ಸಾಲು

ಬೆಂಗಳೂರಿನಲ್ಲಿ

ಬೆಂಗಳೂರಿನಲ್ಲಿ

ವೆಸ್ಟ್ ಇಂಡೀಸ್ ಎ ತಂಡ ವಿಜಯೋತ್ಸವ. ಏಕದಿನ ಪಂದ್ಯ ಸರಣಿಯಲ್ಲಿ ಯುವರಾಜ್ ಸಿಂಗ್ ನೇತೃತ್ವದ ಭಾರತ ಎ ತಂಡವನ್ನು 1-2 ಅಂತರದಿಂದ ಸೋಲಿಸಿದ ಕಿರನ್ ಪೊಲ್ಲಾರ್ಡ್ ಅವರ ವಿಂಡೀಸ್ ಎ ತಂಡ PTI Photo by Shailendra Bhojak

ರಾಂಚಿಯಲ್ಲಿ

ರಾಂಚಿಯಲ್ಲಿ

ಚೆನ್ನೈ ಸೂಪರ್ ಕಿಂಗ್ಸ್ ನ ಆಟಗಾರರಾದ ಎಂಎಸ್ ಧೋನಿ, ರವೀಂದ್ರ ಜಡೇಜ, ಸುರೇಶ್ ರೈನಾ ಅವರು ಚಾಂಪಿಯನ್ಸ್ ಲೀಗ್ ಟಿ 20 ಪಂದ್ಯಕ್ಕಾಗಿ ಜಾರ್ಖಂಡ್ ನಲ್ಲಿ ಅಭ್ಯಾಸ ನಡೆಸಿದ್ದಾರೆ.

ಚೆನ್ನೈನಲ್ಲಿ

ಚೆನ್ನೈನಲ್ಲಿ

ಭಾರತೀಯ ಸಿನಿಮಾ 100 ಕಾರ್ಯಕ್ರಮಕ್ಕೆ ತಯಾರಿ ಜೋರಾಗಿ ನಡೆದಿದೆ. ಎಂಜಿ ರಾಮಚಂದ್ರನ್ ಅವರ ಆಡಿಮೈ ಪೆಣ್ ಚಿತ್ರ ಮರು ಪ್ರದರ್ಶನದ ಖುಷಿಯಲಿ ಅಭಿಮಾನಿಗಳು.

ಮೋದಿ ಜತೆ ಜಾನ್

ಮೋದಿ ಜತೆ ಜಾನ್

ಗಾಂಧಿನಗರ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಬಾಲಿವುಡ್ ನಟ ಜಾನ್ ಅಬ್ರಹಾಂ ಆವರು ಭೇಟಿ ಮಾಡಿ ಮಾತುಕತೆ ನಡೆಸಿದರು.

ಕೊಚ್ಚಿಯಲ್ಲಿ

ಕೊಚ್ಚಿಯಲ್ಲಿ

ಕೇಂದ್ರ ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಕೆ ಚಿರಂಜೀವಿ ಅವರು Federation of Hotel and Restaurant Associations of India (FHRAI) ಸಮಾರಂಭದಲಿ ಡ್ರಮ್ಸ್ ಬಾರಿಸಿದರು.

ತ್ರಿಸ್ಸೂರಿನಲ್ಲಿ ಹುಲಿವೇಷ

ತ್ರಿಸ್ಸೂರಿನಲ್ಲಿ ಹುಲಿವೇಷ

ತ್ರಿಸ್ಸೂರ್ : ಓಣಂ ಅಂಗವಾಗಿ ಹುಲಿ ವೇಷಧಾರಿಗಳಿಂದ ಸಾಂಪ್ರದಾಯಿಕ ನರ್ತನ

ಜೋಧ್ ಪುರದಲ್ಲಿ

ಜೋಧ್ ಪುರದಲ್ಲಿ

ಶರದ್ ಹುಣ್ಣಿಮೆ ಅಂಗವಾಗಿ ಅಸಾರಾಮ್ ಬಾಪು ದರ್ಶನಕ್ಕಾಗಿ ಬಂದ ಭಕ್ತರು ಸೆಂಟ್ರಲ್ ಜೈಲಿನ ಹೊರಗಡೆ ಕಣ್ಣೀರಿಟ್ಟರು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Todays news stories in pics : Gaya: People perform 'Pinda Daan' rituals on the banks of river Phalgu at Gaya on the first day of Pitrapaksha Mela in Biharand many more news in pics

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more