• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿತ್ರಗಳಲ್ಲಿ: ತಾರೆಗಳ ಜತೆಯಲ್ಲಿ ಲತಾ ಮಂಗೇಶ್ಕರ್ ಗೆ ಪ್ರಶಸ್ತಿ

By Mahesh
|

ಬೆಂಗಳೂರು, ಅ. 20: ಹಿಂದಿ ಚಿತ್ರರಂಗದ ಜನಪ್ರಿಯ ಚಿತ್ರಕರ್ಮಿ ದಿವಂಗತ ಯಶ್ ಛೋಪ್ರಾ ಹೆಸರಿನ ಚೊಚ್ಚಲ ಪ್ರಶಸ್ತಿ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರಿಗೆ ಸಂದಿದೆ. ಮುಂಬೈನ ವರ್ಣರಂಜಿತ ಕಾರ್ಯಕ್ರಮದಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಮನೀಶ್ ತಿವಾರಿ ಅವರು ಪ್ರತಿಷ್ಠಿತ ಪ್ರಶಸ್ತಿಯನ್ನು ಲತಾ ಮಂಗೇಶ್ವರ್ ಆವರಿಗೆ ಪ್ರದಾನ ಮಾಡಿದರು.

ಈ ಸಮಾರಂಭದಲ್ಲಿ ಯಶ್ ಛೋಪ್ರಾ ಅವರ ಪತ್ನಿ ಪಮೇಲಾ, ಕೇಂದ್ರ ಕೈಗಾರಿಕಾ ಸಚಿವ ಪ್ರಫುಲ್ ಪಟೇಲ್, ಅನಿಲ್ ಕಪೂರ್, ಹೇಮ ಮಾಲಿನಿ, ಸಿಮಿ ಗರೆವಾಲ್, ಟಿ ಸುಬ್ಬಿರಾಮಿ ರೆಡ್ಡಿ, ಸುಭಾಷ್ ಘಾಯ್, ಬೋನಿ ಕಪೂರ್, ಶ್ರೀದೇವಿ, ಅಕ್ಷಯ್ ಕುಮಾರ್, ರಾಣಿ ಮುಖರ್ಜಿ, ಅಲ್ಕಾ ಯಾಜ್ಞಿಕ್ ಮುಂತಾದವರು ಉಪಸ್ಥಿತರಿದ್ದರು.

ಉಳಿದಂತೆ ನವದೆಹಲಿಯಲ್ಲಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು 'ವಾಕ್ ಫಾರ್ ಹೆಲ್ತ್' ವಾಕಾಥಾನ್ ಗೆ ಚಾಲನೆ ನೀಡಿದರು. ಮೋಟೋಜಿಪಿ ಕ್ರೀಡೆಯಲ್ಲಿ ಪ್ರಶಸ್ತಿ ಗೆದ್ದವರ ಸಂಭ್ರಮ, ಜಾರಿ ಬಿದ್ದವರ ನೋವು, ಬೆಲ್ಜಿಯಂನಲ್ಲಿ ಪ್ಯಾರಾಚ್ಯೂಟ್ ದುರಂತ, ಜೋಧಪುರದಲ್ಲಿ ದೀಪಾವಳಿಗಾಗಿ ಮಡಿಕೆ ತಯಾರಿ, ಕೊಯಮತ್ತೂರಿನಲ್ಲಿ ಶ್ರೀಲಂಕಾ ವಿರುದ್ಧ ಪ್ರತಿಭಟನೆ, ಮುಂಬೈನ ಸುಂದರ ಕಟ್ಟಡ, ಕುಲ್ಲು ಉತ್ಸವ, ಜಲಮಯವಾದ ಹೌರಾ ಮುಂದಿನ ಚಿತ್ರಗಳಿವೆ ತಪ್ಪದೇ ನೋಡಿ...

ಲತಾ ಮಂಗೇಶ್ಕರ್ ಗೆ ಪ್ರಶಸ್ತಿ

ಲತಾ ಮಂಗೇಶ್ಕರ್ ಗೆ ಪ್ರಶಸ್ತಿ

ಹಿಂದಿ ಚಿತ್ರರಂಗದ ಜನಪ್ರಿಯ ಚಿತ್ರಕರ್ಮಿ ದಿವಂಗತ ಯಶ್ ಛೋಪ್ರಾ ಹೆಸರಿನ ಚೊಚ್ಚಲ ಪ್ರಶಸ್ತಿ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರಿಗೆ ಸಂದಿದೆ.

ಆಸ್ಟ್ರೇಲಿಯನ್ ಮೋಟೊಜಿಪಿ

ಆಸ್ಟ್ರೇಲಿಯನ್ ಮೋಟೊಜಿಪಿ

ಫಿಲಿಫ್ ಐಲ್ಯಾಂಡ್ : ಪೋರ್ಚುಗಲ್ ನ ಮಿಗ್ಯುಯಲ್ ಒಲಿವಿರಾ ಭಾನುವಾರ ರೇಸ್ ನಡುವೆ ಪಲ್ಟಿ ಹೊಡೆದು ಬಿದ್ದಿದು ಹೀಗೆ

ಆಸ್ಟ್ರೇಲಿಯನ್ ಮೋಟೊಜಿಪಿ

ಆಸ್ಟ್ರೇಲಿಯನ್ ಮೋಟೊಜಿಪಿ

ಫಿಲಿಫ್ ಐಲ್ಯಾಂಡ್ : ಆಸ್ಟ್ರೇಲಿಯನ್ ಮೋಟೊಜಿಪಿ ಗೆದ್ದು ಜಿಗಿದಿರುವ ಸ್ಪೇನಿನ ಜೆ ಲಾರೆನ್ಜೊ ಎಡಭಾಗದ ಸ್ಪೇನಿನ ಡ್ಯಾನಿ ಪೆಡ್ರೋಸಾ ಹಾಗೂ ಬಲಭಾಗದಲ್ಲಿ ಮಾಜಿ ಚಾಂಪಿಯನ್ ಇಟಲಿಯ ವಾಲೆಂಟಿನೋ ರೊಸ್ಸಿ

ಕೊಯಮತ್ತೂರಿನಲ್ಲಿ

ಕೊಯಮತ್ತೂರಿನಲ್ಲಿ

2013ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಶ್ರೀಲಂಕಾ ಪಾಲ್ಗೊಳ್ಳದಂತೆ ತಡೆಗಟ್ಟಬೇಕು ಎಂದು ಅನೇಕ ರಾಜಕೀಯ ಸಂಘಟನೆಗಳು ಮಾನವ ಸರಪಳಿ ರಚಿಸಿಕೊಂಡು ಪ್ರತಿಭಟನೆ ನಡೆಸಿದರು.

ದೆಹಲಿಯಲ್ಲಿ ಸಾನಿಯಾ

ದೆಹಲಿಯಲ್ಲಿ ಸಾನಿಯಾ

ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು 'ವಾಕ್ ಫಾರ್ ಹೆಲ್ತ್' ವಾಕಾಥಾನ್ ಗೆ ಚಾಲನೆ ನೀಡಿದರು. PTI Photo by Shrish Shete

ಹೌರಾದಲ್ಲಿ

ಹೌರಾದಲ್ಲಿ

ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಉದಯನಾರಾಯಣಪುರದಲ್ಲಿ ಪ್ರವಾಹದ ನಡುವೆ ಮಕ್ಕಳ ಪ್ರಯಾಣ

ದೆಹಲಿಯಲ್ಲಿ ಸಾನಿಯಾ

ದೆಹಲಿಯಲ್ಲಿ ಸಾನಿಯಾ

ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು 'ವಾಕ್ ಫಾರ್ ಹೆಲ್ತ್' ವಾಕಾಥಾನ್ ಗೆ ಚಾಲನೆ ನೀಡಿದರು. PTI Photo by Shrish Shete

ಜೋಧಪುರದಲ್ಲಿ

ಜೋಧಪುರದಲ್ಲಿ

ಜೋಧಪುರದಲ್ಲಿ ದೀಪಾವಳಿಗಾಗಿ ಮಡಿಕೆ ತಯಾರಿ ಜೋರಾಗಿ ನಡೆದಿದೆ

ಬೆಲ್ಜಿಯಂನಲ್ಲಿ

ಬೆಲ್ಜಿಯಂನಲ್ಲಿ

Marchovelette : ಸ್ಕೈ ಡೈವಿಂಗ್ ಮಾಡಲು ಹೊರಟ ಸಾಹಸಿಗಳನ್ನು ಹೊತ್ತೊಯ್ಯುತ್ತಿದ್ದ ವಿಮಾನ ಮಾರ್ಗ ಮಧ್ಯದಲ್ಲಿ ಅಪಘಾತಕ್ಕೀಡಾ ನೆಲಕ್ಕುರುಳಿದೆ. ವಿಮಾನದಲ್ಲಿದ್ದ ಎಲ್ಲಾ 11 ಜನ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Todays news stories in pics :In a tribute to the legendary filmmaker Yash Chopra on the eve of his first death anniversary, melody queen Lata Mangeshkar was conferred the first Yash Chopra Memorial Award at a glittering function in Mumbai and many more pics
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more