• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿತ್ರಗಳಲ್ಲಿ: ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ

By Mahesh
|

ಚಂಡೀಗಢ, ಅ.1: ರಕ್ತದಾನ ಮಹಾದಾನ ಸ್ವಯಂ ಪ್ರೇರಿತ ರಕ್ತದಾನ ಮಾಡಿ ಒಂದಲ್ಲ ನಾಲ್ಕು ಜೀವಗಳನ್ನು ಉಳಿಸಿ ಎಂಬ ಜಾಹೀರಾತುಗಳನ್ನು ನೋಡಿರುತ್ತೀರಾ. ರಕ್ತದಾನದ ಬಗ್ಗೆ ಇಂದಿಗೂ ಅನೇಕ ತಪ್ಪು ಕಲ್ಪನೆ ಇದ್ದೇ ಇದೆ.

ಭಾರತದಲ್ಲಿ ಸ್ವಯಂಪ್ರೇರಿತ ರಕ್ತದಾನ ದಿನವಾದ ಇಂದು (ಅ.1) ರಕ್ತದಾನ ಮಹತ್ವದ ಬಗ್ಗೆ ಸಾರಲು ರೋಟರಿ, ರೆಡ್ ಕ್ರಾಸ್ ಸಂಸ್ಥೆಗಳು ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಜೂ.14ರಂದು ವಿಶ್ವ ರಕ್ತದಾನ ದಿನ ಆಚರಿಸಲಾಗುತ್ತದೆ.

ರಕ್ತ ದಾನ ಮಾಡಿದರೆ ನನಗೆ ವೀಕ್ ನೆಸ್ ಉಂಟಾಗಬಹುದು, ಕಾಯಿಲೆ ಬರಬಹುದು ಎಂಬ ಭಯ ಅನೇಕರಲ್ಲಿದೆ. ರಕ್ತದಾನ ದೇಹದಲ್ಲಿನ ಕಬ್ಬಿಣಾಂಶ ಸಮಪ್ರಮಾಣದಲ್ಲಿರುವಂತೆ ಮಾಡಿ ಹೊಸ ರಕ್ತಕಣಗಳ ಉತ್ಪತ್ತಿಗೆ ಸಹಕಾರಿಯಾಗುತ್ತದೆ. ದೇಹದಲ್ಲಿ ಹೊಸ ಚೈತನ್ಯ ತುಂಬುತ್ತದೆ.

ಉಳಿದಂತೆ ಚಿತ್ರಗಳಲ್ಲಿ ಪ್ರಣಬ್ ಮುಖರ್ಜಿ ಅವರಿಗೆ 'ಚರಕ' ನೀಡಿದ ಕರ್ನಾಟಕದ ಮುಖಂಡ ಕೆಎಚ್ ಮುನಿಯಪ್ಪ, ಗುಪ್ತಕಾಶಿಯಲ್ಲಿ ಮತ್ತೆ ಪ್ರವಾಹ, ಜಮ್ಮು ಸೇರಿದಂತೆ ಅನೇಕ ಕಡೆ ಮಹಾತ್ಮಾ ಗಾಂಧಿ ಜಯಂತಿಗೆ ತಯಾರಿ, ಮಂಡ್ಯಕ್ಕೆ ಬಂದಿದ್ದ ಸೋನಿಯಾ ಗಾಂಧಿ, ಮುಂಬೈನಲ್ಲಿ ಮೋದಿ ಮೋಡಿ, ಅಮೇಥಿಯಲ್ಲಿ ರಾಹುಲ್ -ಪ್ರಿಯಾಂಕಾ ಜೋಡಿ, ಟಿಟಿಕೆ ಉತ್ಪನ್ನಗಳ ರಾಯಭಾರಿಯಾದ ಐಶ್ವರ್ಯಾ ರೈ ಬಚ್ಚನ್, ಗುಲಾಂ ನಬಿ ಅಜಾದ್ ಜತೆ ಭುವನ ಸುಂದರಿ ಮುಂತಾದ ಚಿತ್ರಗಳು ಇಂದಿನ ಪ್ಯಾಕೇಜಿನಲ್ಲಿದೆ ತಪ್ಪದೇ ನೋಡಿ..

ಚಂಡೀಗಢ

ಚಂಡೀಗಢ

ಭಾರತದಲ್ಲಿ ಸ್ವಯಂಪ್ರೇರಿತ ರಕ್ತದಾನ ದಿನವಾದ ಇಂದು (ಅ.1) ರಕ್ತದಾನ ಮಹತ್ವದ ಬಗ್ಗೆ ಸಾರಲು ರೋಟರಿ, ರೆಡ್ ಕ್ರಾಸ್ ಸಂಸ್ಥೆಗಳು ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗಿದೆ.

ಭೋಪಾಲ್ ನಲ್ಲಿ

ಭೋಪಾಲ್ ನಲ್ಲಿ

ಮಹಾತ್ಮಾ ಗಾಂಧಿ ಜಯಂತಿ ಮುನ್ನದಿನ ಗಾಂಧಿ ವೇಷಧಾರಿ ಮಕ್ಕಳು ಶಾಲೆಯಲ್ಲಿ ತಾಲೀಮು ನಡೆಸಿದ್ದು ಹೀಗೆ

ಬಾಗ್ದಾದ್ ಬಾಂಬ್

ಬಾಗ್ದಾದ್ ಬಾಂಬ್

ಇರಾಕಿನ ರಾಜಧಾನಿ ಬಾಗ್ದಾದ್ ದಕ್ಷಿಣದಿಂದ 40 ಕಿ.ಮೀ ದೂರದಲ್ಲಿ ಕಾರು ಸರಣಿ ಬಾಂಬ್ ಆತ್ಮಾಹುತಿ ದಾಳಿಗೆ 50ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಮುಸಾಯಿಬ್ ಅಲ್ ಹುಸೇನ್ ಶಿಟ್ ಮಸೀದಿ ಅವಶೇಷಗಳನ್ನು ವೀಕ್ಷಿಸಲಾಗುತ್ತಿದೆ.

ಬಾಪು ಸಹಾಯಕಿ

ಬಾಪು ಸಹಾಯಕಿ

ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪ ಹೊತ್ತು ಜೈಲು ಸೇರಿರುವ ಅಸಾರಾಮ್ ಬಾಪು ಅವರ ಸಹಾಯಕಿ ಶಿಲ್ಪಿಯನ್ನು ಜೈಲಿನಿಂದ ಕೋರ್ಟಿಗೆ ಕರೆದೊಯ್ಯುತ್ತಿರುವ ದೃಶ್ಯ.

ಐಶ್ವರ್ಯಾ ರೈ ಬಚ್ಚನ್

ಐಶ್ವರ್ಯಾ ರೈ ಬಚ್ಚನ್

ಟಿಟಿಕೆ ಉತ್ಪನ್ನಗಳ ರಾಯಭಾರಿಯಾದ ಐಶ್ವರ್ಯಾ ರೈ ಬಚ್ಚನ್ ವಿವರ ಇಲ್ಲಿ ಓದಿ

ಗುಪ್ತಕಾಶಿಯಲ್ಲಿ

ಗುಪ್ತಕಾಶಿಯಲ್ಲಿ

ಕೇದಾರನಾಥ ಬಳಿಯ ಗುಪ್ತಕಾಶಿಯಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದೆ.PTI Photo by Manvender Vashist

ಮಂಡ್ಯದಲ್ಲಿ ಸೋನಿಯಾ

ಮಂಡ್ಯದಲ್ಲಿ ಸೋನಿಯಾ

ಮಂಡ್ಯ: ಕರ್ನಾಟಕದ ಮತದಾರರಿಗೆ ಕೃತಜ್ಞತೆ ಅರ್ಪಿಸಲು ಬಂದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಸ್ವರಣಿಕೆ ನೀಡಿದ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್

ಮಂಡ್ಯದಲ್ಲಿ ಸೋನಿಯಾ

ಮಂಡ್ಯದಲ್ಲಿ ಸೋನಿಯಾ

ಮಂಡ್ಯ: ಕರ್ನಾಟಕದ ಮತದಾರರಿಗೆ ಕೃತಜ್ಞತೆ ಅರ್ಪಿಸಲು ಬಂದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕಾಲಿಗೆರಗಿದ ಡಿಕೆ ಶಿವಕುಮಾರ್

ಸೋನಿಯಾಗೆ ಧಿಕ್ಕಾರ

ಸೋನಿಯಾಗೆ ಧಿಕ್ಕಾರ

ಮಂಡ್ಯ: ಕರ್ನಾಟಕದ ಮತದಾರರಿಗೆ ಕೃತಜ್ಞತೆ ಅರ್ಪಿಸಲು ಬಂದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಭಾಷಣಕ್ಕೆ ಅಡ್ಡಿಪಡಿಸಿದ ದಲಿತ ಸಂಘರ್ಷ ಸಮಿತಿ ಸದಸ್ಯನ ಮೂತಿಗೆ ಕಲ್ಲು ಬಡಿದು ರಕ್ತ ಸೋರಿತು. ಸಮಾರಂಭದ ಇನ್ನಷ್ಟು ಚಿತ್ರ ವರದಿ ಇಲ್ಲಿದೆ ಓದಿ

ಮುಂಬೈನಲ್ಲಿ ಮೋದಿ

ಮುಂಬೈನಲ್ಲಿ ಮೋದಿ

ಮುಂಬೈ: ಗುಜರಾತ್ ಸಿಎಂ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಕತ್ತಿ ನೀಡಿ ವಿಮಾನ ನಿಲ್ದಾಣದಲ್ಲಿ ಸ್ವಾಗತ ಕೋರಲಾಯಿತು.

ಅಮೇಥಿಯಲ್ಲಿ ರಾಹುಲ್ ಪ್ರಿಯಾಂಕಾ

ಅಮೇಥಿಯಲ್ಲಿ ರಾಹುಲ್ ಪ್ರಿಯಾಂಕಾ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಸೋದರಿ ಪ್ರಿಯಾಂಕಾ ವದ್ರಾ ಅವರು ಸ್ವಕ್ಷೇತ್ರ ಅಮೇಥಿಗೆ ಸೋಮವಾರ ಭೇಟಿ ನೀಡಿದ್ದರು.

ರಾಷ್ಟ್ರಪತಿಗಳಿಗೆ ಚರಕ

ರಾಷ್ಟ್ರಪತಿಗಳಿಗೆ ಚರಕ

ರಾಷ್ಟ್ರಪತಿಗಳಿಗೆ ಚರಕ ನೀಡಿದ ಕೆಎಚ್ ಮುನಿಯಪ್ಪ

ಎಲ್ ಕೆ ಅಡ್ವಾಣಿ

ಎಲ್ ಕೆ ಅಡ್ವಾಣಿ

ನವದೆಹಲಿ: ಬಾಳ್ ಆಪ್ಟೆ ಅವರ Nation First ಕೃತಿ ಬಿಡುಗಡೆಗೆ ಮುನ್ನ ಎಲ್ ಕೆ ಅಡ್ವಾಣಿ ಸರಸ್ವತಿ ದೇವಿಗೆ ನಮಿಸಿದರು.

ಗ್ರೀಸ್ ನಲ್ಲಿ

ಗ್ರೀಸ್ ನಲ್ಲಿ

ಗ್ರೀಸ್ ನಲ್ಲಿ ಸೋಮವಾರ ಕಂಡ ಫ್ಲೆಮಿಂಗೋಗಳು

ದೆಹಲಿಯಲ್ಲಿ ಸುಂದರಿ

ದೆಹಲಿಯಲ್ಲಿ ಸುಂದರಿ

ಕೇಂದ್ರ ಆರೋಗ್ಯ ಸಚಿವ ಗುಲಾಂ ನಬಿ ಅಜಾದ್ ಅವರು ಭುವನ ಸುಂದರಿ ಒಲಿವಿಯಾ ಕಲ್ಪೋ ಜತೆ ರಕ್ತದಾನ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾತ್ಕಾಲಿಕ ಬಿಡುಗಡೆ

ತಾತ್ಕಾಲಿಕ ಬಿಡುಗಡೆ

ಜೈಲಿನಿಂದ ತಾತ್ಕಾಲಿಕವಾಗಿ ಹೊರ ಬಂದ ನಟ ಸಂಜಯ್ ದತ್

English summary
Todays news stories in pics : Members of the Rotary and Blood Bank Society Resource Centre form a human chain to spread awareness for voluntary blood donation on the occasion of National Voluntary Blood Donation Day in Chandigarh and many more pics
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X