ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಪ್ರೀಂ ತೀರ್ಪು ಖಾಸಗಿತನದ ಹಕ್ಕಿನ ಕಡೆಗೆ ಮಹತ್ವದ ಹೆಜ್ಜೆ: ರಾಜೀವ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 6 : "ನಾನು ಏನಾಗಿರುತ್ತೇನೋ ಅದೇ ನಾನು. ಆದ್ದರಿಂದ ನಾನು ಏನಾಗಿದ್ದೇನೋ ಅದೇ ರೀತಿಯಾಗಿ ಸ್ವೀಕರಿಸಿ. ಇಂಥದ್ದೊಂದು ಮಹತ್ವದ ಹೋರಾಟದಲ್ಲಿ ಪಾಲ್ಗೊಂಡ ಎಲ್ಲರಿಗೂ ಅಭಿನಂದನೆಗಳು" ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ಏನಿದು 377 ಸೆಕ್ಷನ್? ಎಂಥ ಸಂಭೋಗ ಅಪರಾಧವಾಗುತ್ತದೆ?ಏನಿದು 377 ಸೆಕ್ಷನ್? ಎಂಥ ಸಂಭೋಗ ಅಪರಾಧವಾಗುತ್ತದೆ?

ಸಹಮತದ ಸಲಿಂಗಕಾಮ ಖಾಸಗಿಯಾಗಿದ್ದರೆ ಅದು ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಅದಕ್ಕೆ ರಾಜೀವ್ ಚಂದ್ರಶೇಖರ್ ಪ್ರತಿಕ್ರಿಯೆ ನೀಡಿದ್ದಾರೆ. ಅದೇ ವೇಳೆ, 24ನೇ ತಾರೀಕು ಆಗಸ್ಟ್ 2017ರಂದು ಒಂದು ಬದಲಾವಣೆ ಘಟ್ಟ. ಖಾಸಗಿತನದ ಹಕ್ಕು ಅಧಿಕೃತವಾಗಿ ಭಾರತೀಯ ನಾಗರಿಕರ ಮೂಲಭೂತ ಹಕ್ಕಾದ ದಿನವದು.

ಸಹಮತದ ಸಲಿಂಗಕಾಮ ಅಪರಾಧವಲ್ಲ ಎಂದ ಸುಪ್ರೀಂ ಕೋರ್ಟ್ ಸಹಮತದ ಸಲಿಂಗಕಾಮ ಅಪರಾಧವಲ್ಲ ಎಂದ ಸುಪ್ರೀಂ ಕೋರ್ಟ್

Todays judgement is a step towards accepting people for whom they are

ಒಂಬತ್ತು ನ್ಯಾಯಮೂರ್ತಿಗಳ ಸುಪ್ರೀಂ ಕೋರ್ಟ್ ಪೀಠವು ಆಧಾರ್ ವಿರುದ್ಧದ ಅರ್ಜಿಯನ್ನು ಆಲಿಸಿದ್ದರು. ಅದರಲ್ಲಿ ನಾನು ಅರ್ಜಿದಾರನಾಗಿದ್ದೆ. ಎಲ್ಲ ನ್ಯಾಯಮೂರ್ತಿಗಳು ಒಮ್ಮತದಿಂದ ಖಾಸಗಿತನವು ಮೂಲಭೂತ ಹಕ್ಕು ಎಂದು ಹೇಳಿತ್ತು. ಇಂದಿನ ತೀರ್ಪು ಆಯಾ ವ್ಯಕ್ತಿಗಳು ಯಾರಾಗಿದ್ದಾರೋ ಅವರಾಗಿಯೇ ಒಪ್ಪಿಕೊಳ್ಳುವಂಥ ಮತ್ತು ಖಾಸಗಿತನವನ್ನು ಗೌರವಿಸುವಂಥ ಕಡೆಗೆ ಮತ್ತೊಂದು ಮಹತ್ವದ ಹೆಜ್ಜೆ ಇದು ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

English summary
"Today’s judgment is a step towards accepting people for whom they are and respecting their Privacy. I am what I am. So, take me as I am. Congrats to all those who fought this battle!”, said by BJP Rajyasabha member Rajeev Chandrasekhar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X