ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಡವರ ಜೀವ ಉಳಿಸಲು ಬರಲಿದೆ ಕಡಿಮೆ ವೆಚ್ಚದ ವೆಂಟಿಲೇಟರ್

|
Google Oneindia Kannada News

ಬೆಂಗಳೂರು, ಏಪ್ರಿಲ್ 02 : ದೇಶಾದ್ಯಂತ ಕೊರೊನಾ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕೊರೊನಾ ಸೋಂಕು ತಗುಲಿದವರಿಗೆ ವೆಂಟಿಲೇಟರ್ ಮೂಲಕ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗುತ್ತದೆ. ಆದ್ದರಿಂದ, ವೆಂಟಿಲೇಟರ್‌ಗೆ ಬೇಡಿಕೆ ಹೆಚ್ಚಿದೆ.

ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡುವುದು ಹೆಚ್ಚು ವೆಚ್ಚದಾಯಕ. ಆದ್ದರಿಂದ, ಬಡವರಿಗೆ ಕಷ್ಟವಾಗುತ್ತಿತ್ತು. ಈಗ ಟೂಸ್ಟರ್ ಸೈಜ್ ವೆಂಟಿಲೇಟರ್ ಪರಿಚಯಿಸಲಾಗಿದ್ದು, ಇದು ಬಡವರಿಗೆ ಹೊಸ ಭರವಸೆಯನ್ನು ಮೂಡಿಸಿದೆ.

ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್ ಇಲ್ಲದೆ ಸಾವನ್ನಪ್ಪಿದ ಗರ್ಭಿಣಿದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್ ಇಲ್ಲದೆ ಸಾವನ್ನಪ್ಪಿದ ಗರ್ಭಿಣಿ

ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದಂತೆ ವೆಂಟಿಲೇಟರ್‌ಗಳಿಗೆ ಬೇಡಿಕೆ ಹೆಚ್ಚಿತ್ತು. ವೆಂಟಿಲೇಟರ್‌ ಉತ್ಪಾದನೆ ಪ್ರತಿ ತಿಂಗಳು 500 ರಿಂದ 20 ಸಾವಿರಕ್ಕೆ ಏರಿಕೆ ಕಂಡಿತು. ಭಾರತ ಸೇರಿದಂತೆ ವಿವಿಧ ದೇಶಗಳು ವೆಂಟಿಲೇಟರ್ ಸಮಸ್ಯೆಯನ್ನು ಎದುರಿಸುತ್ತಿವೆ.

50 ಮಂದಿ ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಸೋಂಕು ದೃಢ50 ಮಂದಿ ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಸೋಂಕು ದೃಢ

Toaster Sized Ventilator Is Offering Hope In India

ಭಾರತ ಸರ್ಕಾರ ವೆಂಟಿಲೇಟರ್‌ಗಳ ರಫ್ತನ್ನು ರದ್ದುಗೊಳಿಸಿದೆ. ದೇಶದಲ್ಲಿಯೇ ವೆಂಟಿಲೇಟರ್ ಕೊರತೆ ಕಾಡುತ್ತಿದೆ. ಆದ್ದರಿಂದ, ಐಐಎಸ್‌ಸಿಯ ಇಂಜಿನಿಯರ್‌ಗಳ ತಂಡ ಭಾರತದಲ್ಲಿಯೇ ತಯಾರಾದ ವಸ್ತುಗಳನ್ನು ಬಳಸಿಕೊಂಡು ವೆಂಟಿಲೇಟರ್ ಅಭಿವೃದ್ಧಿ ಪಡಿಸುತ್ತಿದ್ದಾರೆ.

ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಅಮೆರಿಕಾ ಹೊಸ 'ಅಸ್ತ್ರ'ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಅಮೆರಿಕಾ ಹೊಸ 'ಅಸ್ತ್ರ'

ಬಡವರಿಗೆ ನೆರವಾಗಲಿ ಎಂದು ಎಜಿವಿಎ ವೆಂಟಿಲೇಟರ್ ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಕೇವಲ 3.5 ಕೆಜಿ ತೂಕವಿರುತ್ತದೆ. ಇದನ್ನು ಸುಲಭವಾಗಿ ಸಾಗಣೆ ಮಾಡಬಹುದಾಗಿದ್ದು, ತುರ್ತು ಸಂದರ್ಭದಲ್ಲಿ ಹೋಟೆಲ್‌ಗಳನ್ನು ಆಸ್ಪತ್ರೆಯಾಗಿ ಪರಿವರ್ತನೆ ಮಾಡಿದರೆ ಚಿಕಿತ್ಸೆ ನೀಡಲು ಈ ವೆಂಟಿಲೇಟರ್ ಬಳಕೆ ಮಾಡಬಹುದಾಗಿದೆ.

ಭಾರತ ಸರ್ಕಾರ ವೆಂಟಿಲೇಟರ್ ಉತ್ಪಾದನೆಯಲ್ಲಿ ಎಲ್ಲರೂ ಸಹಕಾರ ನೀಡಬೇಕು ಎಂದು ಕರೆ ನೀಡಿದ ಬಳಿಕ ಮಾರುತಿ ಸುಝುಕಿ ಎಜಿವಿಎ ವೆಂಟಿಲೇಟರ್ ಉತ್ಪಾದನೆಗೆ ಸಹಕಾರ ನೀಡಲಿವೆ.

ಭಾರತದಲ್ಲಿ ಸುಮಾರು 40 ಸಾವಿರ ವೆಂಟಿಲೇಟರ್‌ಗಳು ಮಾತ್ರ ಇವೆ. ಒಂದು ವೇಳೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾದರೆ ಸಾವಿರಾರು ಸಂಖ್ಯೆಯಲ್ಲಿ ವೆಂಟಿಲೇಟರ್‌ಗಳನ್ನು ಉತ್ಪಾದನೆ ಮಾಡಬೇಕಾಗುತ್ತದೆ.

ಕೊರೊನಾ ಸೋಂಕು ತಗುಲಿದರೆ ಶ್ವಾಸಕೋಶಕ್ಕೆ ಹಾನಿ ಆಗುತ್ತದೆ. ಆಗ ರೋಗಿ ಸಹಜವಾಗಿ ಆಮ್ಲಜನಕವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಇಂತಹವರಿಗೆ ವೆಂಟಿಲೇಟರ್ ಅಳವಡಿಕೆ ಮಾಡಿದರೆ ಉಸಿರಾಡಲು ಸಹಾಯಕವಾಗುತ್ತದೆ.

English summary
Toaster-sized ventilator is offering hope in the country's fight against the coronavirus. Demand for ventilator booming in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X