ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಏನು ಮಾಡಬಹುದು?

|
Google Oneindia Kannada News

ಪ್ರತಿ ವರ್ಷ ಅಂತಾರಾಷ್ಟ್ರೀಯ ಬಾಲ ಕಾರ್ಮಿಕ ವಿರೋಧಿ ದಿನ ಬರುತ್ತದೆ. ನಾವು ಆ ಬಗ್ಗೆ ಮಾತನಾಡುತ್ತೇವೆ'. ನಂತರ ಸುಮ್ಮನಾಗುತ್ತೇವೆ. ಸಮಾಜ ಬದಲಾವಣೆ ಆಗಬೇಕು ಎಂದು ಭಾಷಣ ಮಾಡಲು ಸಾಧ್ಯವಾಗದಿದ್ದರೂ ಸ್ನೇಹಿತರ ಜತೆಯಾದರೂ ಹಲುಬುತ್ತೇವೆ.

ಗ್ಯಾರೇಜ್, ಹೋಟೆಲ್, ಬೀಡಾ ಅಂಗಡಿ, ಬಟ್ಟೆ ಅಂಗಡಿ, ಸಿನಿಮಾ ನಿರ್ಮಾಣ ಹೀಗೆ ನೂರಾರು ಜಾಗಗಳಲ್ಲಿ ಬಾಲಕಾರ್ಮಿಕರು ಕೆಲಸ ಮಾಡುತ್ತಲೇ ಇದ್ದಾರೆ. ಸರ್ಕಾರಗಳು ನಿಯಂತ್ರಣ ಮಾಡುತ್ತೇನೆ ಎಂದು ಹೇಳಿ ಕಾನೂನು ಜಾರಿ ಮಾಡಿದ್ದರೂ ಯಾವ ಪ್ರಯೋಜನವೂ ಆಗಿಲ್ಲ.[ಮಕ್ಕಳಿಗೆ ಸ್ವಾವಲಂಬನೆ ಕಲಿಸಿಕೊಟ್ಟ ಸತ್ಯಾರ್ಥಿ]

child

ಒಬ್ಬ ಸಾಮಾನ್ಯ ನಾಗರಿಕ ಬಾಲಕಾರ್ಮಿಕ ಪದ್ಧತಿ ತಡೆಗೆ ಯಾವ ರೀತಿ ಕೈಜೋಡಿಸಬಹುದು ಎಂಬುದು ಸಮಸ್ಯೆಯ ಒಂದು ಮುಖವಾದರೆ, ಬಾಲ ಕಾರ್ಮಿಕರು ಹುಟ್ಟಿಕೊಳ್ಳಲು ಕಾರಣವೇನು? ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಕೆಲಸ ಮಾಡುವಂತೆ ಮಾಡಿದ ಸಮಾಜ ನಮ್ಮದೇ ಅಲ್ಲವೇ? ಎಂಬುದು ಇನ್ನೊಂದು ಮುಖ.

ಹೊಟೆಲ್ ಗೆ ತಿಂಡಿ ತಿನ್ನಲು ಹೋದ ನಾವೇ ಟೇಬಲ್ ಮೇಲಿದ್ದ ಬಟ್ಟಲನ್ನು ತೆಗೆಯದ ಹುಡುಗನನ್ನು ಗದರಿಸುತ್ತೇವೆ. ಮನೆಗೆ ಬಂದು ಬಾಲಕಾರ್ಮಿಕ ವಿರೋಧಿ ದಿನ ಆಚರಣೆ ಸುದ್ದಿ ಓದಿ ಮಲಗುತ್ತೇವೆ. ಹಾಗಾದರೆ ಬಾಲಕಾರ್ಮಿಕ ಪದ್ಧತಿ ಸಂಪೂರ್ಣ ನಿರ್ಮೂಲನೆಗೆ ಮದ್ದು ಯಾವುದು? ಉತ್ತರ ಸರಳವಾಗಿಲ್ಲ.[ಹಳ್ಳಿಮನೆ ಹೋಟೆಲ್ ನಿಂದ ಬಾಲ ಕಾರ್ಮಿಕರಿಗೆ ಮುಕ್ತಿ]

ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರದಲ್ಲೇ (1948) ರಲ್ಲೇ ಬಾಲಕಾರ್ಮಿಕ ವಿರೋದಿ ಕಾನೂನು ಜಾರಿ ಮಾಡಲಾಯಿತು. 14 ವರ್ಷದ ಒಳಗಿನ ಮಕ್ಕಳನ್ನು ದುಡಿಸಿಕೊಳ್ಳುವುದು ಅಪರಾಧ ಎಂದು ಪರಿಗಣಿಸಲಾಯಿತು. ನಂತರ ಕಾಲಕಾಲಕ್ಕೆ ಕಾನೂನಿನಲ್ಲಿ ಇದ್ದ ಲೋಪಗಳನ್ನು ತಿದ್ದುಪಡಿ ಮಾಡಲಾಯಿತು. ಇವೆಲ್ಲದರ ಅನುಷ್ಠಾನ ಹೇಗಿದೆ ಎಂಬುದನ್ನು ಸಮಾಜ ಕಲ್ಯಾಣ ಇಲಾಖೆ ಮತ್ತು ಕಾರ್ಮಿಕ ಇಲಾಖೆಯೇ ಹೇಳಬೇಕು.

ಕೇವಲ ಆಚರಣೆ ಮಾಡಿ ಸಾಗಹಾಕಿದರೆ ಸಮಸ್ಯೆಗಳ ಪರಿಹಾರ ಸಾಧ್ಯವೇ ಇಲ್ಲ. ಆಚರಣೆ ಮಾಡಿ ಜಾಹೀರಾತಿಗಳನ್ನು ನೀಡಿದರೆ ಸಮಸ್ಯೆ ಬಗೆ ಹರಿದಂತೆ ಆಗುವುದಿಲ್ಲ.

ಇವುಗಳನ್ನು ಒಮ್ಮೆ ಓದಿ
* 14 ವರ್ಷದ ಒಳಗಿನ ಮಕ್ಕಳಿಂದ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ
* ಶಿಕ್ಷಣ ಮಕ್ಕಳ ಹಕ್ಕು, ಕಡ್ಡಾಯವಾಗಿ ಶಾಲೆಗೆ ಕಳಿಸಿ
* 14 ವರ್ಷದ ಒಳಗಿನ ಮಕ್ಕಳಿಂದ ದುಡಿಸಿಕೊಂಡರೆ 20 ಸಾವಿರ ರೂ. ದಂಡ ಮತ್ತು ಒಂದು ವರ್ಷ ಜೈಲು ಶಿಕ್ಷೆ ವಿಧಿಸಬಹುದು.
* ಹೆಲ್ಪ್ ಲೈನ್- 1098,
* ದುಡಿಯುವ ಮಕ್ಕಳನ್ನು ಕಂಡರೆ ದೂರು ನೀಡಿ: 080 22453549, 080 26541348 ಮತ್ತು ವೆಬ್ ತಾಣ https://www.karnataka.gov.in/karnatakachildlabour/home.aspx ಇ ಮೇಲ್ [email protected] ಗೆ ಸಂಪರ್ಕ ಮಾಡಿ ದೂರು ದಾಖಲಿಸಬಹುದು. ಜತೆಗೆ ಆಯಾ ವಿಭಾಗದ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಬಹುದು.

English summary
Children are the hope of the future. Let us all play our part to make our children labour free and a place where every child has a chance to go to school and be educated, so that they can achieve their full potential in decent work, when they come of age. Childhood is a time to grow. At this tender age, the body is developing and requires proper nutrition and exercise to grow. This is necessary to become productive adults. We need to ensure that every child has a full childhood and not one burdened by adult activities, such as employment and taking care of the family. A common man how to oppose child labour system?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X