• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಸಿಕೆ ಕೊರತೆ; ಭಾರತದಲ್ಲಿ ಇನ್ನೂ ಐದು ಕೊರೊನಾ ಲಸಿಕೆಗಳಿಗೆ ಶೀಘ್ರವೇ ಅನುಮೋದನೆ

|

ನವದೆಹಲಿ, ಏಪ್ರಿಲ್ 12: ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಕಾಣಿಸಿಕೊಂಡಿದ್ದು, ದಿನನಿತ್ಯದ ಕೊರೊನಾ ಪ್ರಕರಣಗಳಲ್ಲಿ ಏರಿಕೆ ಕಾಣುತ್ತಿದೆ. ಸೋಂಕಿನ ನಿಯಂತ್ರಣಕ್ಕೆ ದೇಶಾದ್ಯಂತ ಕೊರೊನಾ ಲಸಿಕೆ ವಿತರಣೆಯನ್ನು ಚುರುಕುಗೊಳಿಸಿದ್ದರೂ ಕೆಲವು ರಾಜ್ಯಗಳಲ್ಲಿ ಕೊರೊನಾ ಲಸಿಕೆಯ ಅಭಾವ ಉಂಟಾಗಿರುವುದಾಗಿ ತಿಳಿದುಬಂದಿದೆ.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಶೀಘ್ರವೇ ಭಾರತದಲ್ಲಿ ಇನ್ನಷ್ಟು ಲಸಿಕೆಗಳಿಗೆ ಅನುಮೋದನೆ ದೊರೆಯಲಿದ್ದು, ಸದ್ಯಕ್ಕೆ ಐದು ಲಸಿಕಾ ಉತ್ಪಾದಕ ಸಂಸ್ಥೆಗಳಿಗೆ ಮೊದಲು ಕೇಂದ್ರ ಸರ್ಕಾರ ಅನುಮೋದನೆ ನೀಡಲಿರುವುದಾಗಿ ತಿಳಿದುಬಂದಿದೆ.

 ಲಸಿಕೆ ವಿತರಣೆಯಲ್ಲಿ ಮೋದಿ 'ರಾಜಕೀಯ' ಆರೋಪ: ಸತ್ಯಾಸತ್ಯತೆಯ ಪರಿಚಯ ಲಸಿಕೆ ವಿತರಣೆಯಲ್ಲಿ ಮೋದಿ 'ರಾಜಕೀಯ' ಆರೋಪ: ಸತ್ಯಾಸತ್ಯತೆಯ ಪರಿಚಯ

ಭಾರತದಲ್ಲಿ ಸದ್ಯಕ್ಕೆ ಎರಡು ಕೊರೊನಾ ಲಸಿಕೆಗಳಿಗೆ ಅನುಮತಿ ಇದೆ. ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳನ್ನು ರಾಷ್ಟ್ರಾದ್ಯಂತ ನೀಡಲಾಗುತ್ತಿದೆ. 2021ರ ಅಂತಿಮದಲ್ಲಿ ಐದು ಹೊಸ ಲಸಿಕೆಗಳಿಗೆ ಅನುಮೋದನೆ ದೊರೆಯಲಿದೆ ಎಂದು ತಿಳಿದುಬಂದಿದೆ. ಸ್ಫುಟ್ನಿಕ್ ವಿ ಲಸಿಕೆ, ಜಾನ್ಸನ್ ಅಂಡ್ ಜಾನ್ಸನ್, ನೋವಾವ್ಯಾಕ್ಸಿನ್ ಲಸಿಕೆ, ಝೈಡಸ್ ಕ್ಯಾಡಿಲಾ ಹಾಗೂ ಭಾರತ್ ಬಯೋಟಕ್‌ನ ನಾಸಿಕ ಲಸಿಕೆಯು ಈ ವರ್ಷಾಂತ್ಯಕ್ಕೆ ಭಾರತದಲ್ಲಿ ಲಭ್ಯವಿರುವುದಾಗಿ ತಿಳಿದುಬಂದಿದೆ.

ಯಾವುದೇ ಲಸಿಕೆಗೆ ಅನುಮೋದನೆ ನೀಡುವ ಮೊದಲು ಸುರಕ್ಷತೆ, ದಕ್ಷತೆಯೇ ಪ್ರಾಥಮಿಕ ಮಾನದಂಡವಾಗಿದೆ ಎಂದು ಕೇಂದ್ರ ತಿಳಿಸಿದೆ. ದೇಶದಲ್ಲಿ ಸುಮಾರು 20 ಕೊರೊನಾ ಲಸಿಕೆಗಳು ವೈದ್ಯಕೀಯ ಪರೀಕ್ಷಾ ಹಂತದಲ್ಲಿವೆ. ಇವುಗಳಲ್ಲಿ ಸ್ಫುಟ್ನಿಕ್ ವಿ ಲಸಿಕೆ ಮೊದಲು ಅನುಮೋದನೆ ಪಡೆಯಲಿದ್ದು, ಮುಂದಿನ ಹತ್ತು ದಿನಗಳಲ್ಲಿ ಅನುಮೋದನೆ ದೊರೆಯಲಿರುವುದಾಗಿ ತಿಳಿದುಬಂದಿದೆ.

ಭಾರತದಲ್ಲಿ ಈವರೆಗೂ 10,45,28,565 ಮಂದಿ ಫಲಾನುಭವಿಗಳಿಗೆ ಕೊರೊನಾ ಲಸಿಕೆಯನ್ನು ನೀಡಲಾಗಿದೆ.

English summary
By end of the third quarter of this year, India will be getting vaccines from five additional manufacturers says government sources,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X