ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಬಂಗಾಲದಲ್ಲಿ ಸೇನೆ ಟೋಲ್ ಸಂಗ್ರಹಿಸಿಲ್ಲ, ಆರೋಪ ಆಧಾರರಹಿತ

By ಅನುಷಾ ರವಿ
|
Google Oneindia Kannada News

ಕೋಲ್ಕತ್ತಾ, ಡಿಸೆಂಬರ್ 2: ಪಶ್ಚಿಮ ಬಂಗಾಲದ ಹೆದ್ದಾರಿ ಟೋಲ್ ಗಳಲ್ಲಿ ನಡೆಯುತ್ತಿರುವ ಕಾರ್ಯಾಚರಣೆ ಬಗ್ಗೆ ಸೇನೆ ಶುಕ್ರವಾರ ಸ್ಪಷ್ಟನೆ ನೀಡಿದೆ. ಆದರೆ ಇದೇ ವಿಚಾರವಾಗಿ ಸಂಸತ್ ನ ಉಭಯ ಸದನಗಳಲ್ಲಿ ದೊಡ್ಡ ದನಿಯ ಮಾತುಕತೆಗೆ ಕಾರಣವಾಯಿತು. ಸೇನೆಯು ಟೋಲ್ ಗಳಲ್ಲಿ ಹಣ ಸಂಗ್ರಹಿಸುತ್ತಿದೆ ಎಂಬ ಆರೋಪವನ್ನು ಸ್ಪಷ್ಟವಾಗಿ ನಿರಾಕರಿಸಲಾಯಿತು.

ಈ ಪ್ರದೇಶದ ಜನರಲ್ ಆಫೀಸರ್ ಇನ್ ಕಮ್ಯಾಂಡ್ ಮೇಜರ್ ಜನರಲ್ ಸುನೀಲ್ ಯಾದವ್ ಮಾತನಾಡಿ, ಸೇನೆಯು ಕಾರ್ಯಾಚರಣೆ ಭಾಗವಾಗಿಯಷ್ಟೇ ಈ ತಾಲೀಮು ನಡೆಸಿದೆ. ಟೋಲ್ ಕೌಂಟರ್ ಗಳಲ್ಲಿ ಸೇನೆಯು ಹಣ ಸಂಗ್ರಹಿಸುತ್ತಿದೆ ಎಂಬ ಆರೋಪ ಆಧಾರರಹಿತವಾದದ್ದು. ಅಂಥ ಯಾವ ಹಣ ಸಂಗ್ರಹವನ್ನು ಮಾಡಿಲ್ಲ ಎಂದು ತಿಳಿಸಿದರು.

TMC cries coup over deployment, Army deems it routine

ಕೋಲ್ಕತ್ತಾದಲ್ಲಿ ಮಾಧ್ಯಮದವರ ಜತೆಗೆ ಮಾತನಾಡಿದ ಅವರು, ಸೇನೆಯು ವಾರ್ಷಿಕ ದತ್ತಾಂಶಗಳನ್ನು ಸಂಗ್ರಹಿಸುವ ತಾಲೀಮಿನಲ್ಲಿ ತೊಡಗಿದೆ. ವಿವಿಧ ರಾಜ್ಯಗಳ ಪ್ರಮುಖ ಪ್ರವೇಶಗಳಲ್ಲಿ ದೊರೆಯುವ ಸರಕು ಸಾಗಣೆ ವಾಹನಗಳ ಮಾಹಿತಿಯನ್ನು ಸಂಗ್ರಹಿಸುವುದು ನಮ್ಮ ಉದ್ದೇಶ. ಈ ಎಲ್ಲವನ್ನೂ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿಯೇ ಮಾಡಿದ್ದೇವೆ ಎಂದು ಸುನೀಲ್ ಯಾದವ್ ವಿವರಿಸಿದ್ದಾರೆ.

English summary
The Army on Friday clarified on its operations along tolls in West Bengal. Even as the issue led to uproar in both houses of the parliament. The Army denied charges of their personnel collecting toll.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X