ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ತಿತ್ಲಿ'ಗೆ ಹೆದರಿ ಗುಹೆಯಲ್ಲಿ ಅಡಗಿದ್ದ 12 ಜನರ ಮೇಲೆ ಎರಗಿದ ಯಮರಾಯ!

|
Google Oneindia Kannada News

ಭುವನೇಶ್ವರ, ಅಕ್ಟೋಬರ್ 13 : ಅತ್ಯುಗ್ರ ರೂಪ ತಾಳಿ ಜನರಲ್ಲಿ ಆತಂಕ ಸೃಷ್ಟಿಸಿದ್ದ 'ತಿತ್ಲಿ' ಚಂಡಮಾರುತ ಒಡಿಶಾದಲ್ಲಿ 12 ಜನರನ್ನು ಬಲಿ ತೆಗೆದುಕೊಂಡಿದೆ.

ಮೈಸೂರು ದಸರಾ - ವಿಶೇಷ ಪುರವಣಿ

ಚಂಡಮಾರುತಕ್ಕೆ ಹೆದರಿ ಗುಹೆಯಂಥ ಪ್ರದೇಶವೊಂದಕ್ಕೆ ತೆರಳಿ ಅಡಗಿ ಕುಳಿತಿದ್ದ ಜನರ ಮೇಲೆ ಆ ಗುಹೆಯೇ ಕುಸಿದು ಬಿದ್ದು 12 ಜನ ಮೃತರಾದರೆ, ನಾಲ್ಕು ಜನ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರನ್ನು ಹುಡುಕುವ ಕಾರ್ಯ ಆರಂಭವಾಗಿದೆ.

ತಿತ್ಲಿ ಚಂಡಮಾರುತದ ಭೀಕರತೆಗೆ ಸಾಕ್ಷಿಯಾಗುವ ಚಿತ್ರಗಳು!ತಿತ್ಲಿ ಚಂಡಮಾರುತದ ಭೀಕರತೆಗೆ ಸಾಕ್ಷಿಯಾಗುವ ಚಿತ್ರಗಳು!

ಚಂಡಮಾರುತದಿಂದ ಉಂಟಾದ ಭೂಕುಸಿತದಿಂದ ಈ ಒಡಿಶಾದ ಗಜಪತಿ ಜಿಲ್ಲೆಯ ರಾಯಗಡ ಎಂಬಲ್ಲಿ ಈ ಘಟನೆ ನಡೆದಿದೆ ಎಂದು ವರದಿಗಳು ತಿಳಿಸಿವೆ. ಎರಡು ದಿನಗಳಿಂದ ಭಾರೀ ಮಳೆ ಮತ್ತು ಗಾಳಿಗೆ ಆಂಧ್ರ ಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ತತ್ತರಿಸಿದ್ದು, ತಿತ್ಲಿ ರೌದ್ರತೆ ಕಡಿಮೆಯಾಗುವ ಸೂಚನೆ ಸಿಕ್ಕರೂ, ಜನರಲ್ಲಿ ಆತಂಕ ಮಾತ್ರ ಕಡಿಮೆಯಾಗಿಲ್ಲ.

ಥಾಯ್ಲೆಂಡ್‌ನ ಮಾಯಾವಿ ಗುಹೆಯ ರೋಚಕ ಕಥೆಗಳನ್ನು ಕೇಳಿದ್ದೀರಾ?ಥಾಯ್ಲೆಂಡ್‌ನ ಮಾಯಾವಿ ಗುಹೆಯ ರೋಚಕ ಕಥೆಗಳನ್ನು ಕೇಳಿದ್ದೀರಾ?

ತಿತ್ಲಿ ಹಾವಳಿಯಿಂದಾಗಿ ಸಿಲುಕಿಕೊಂಡವರನ್ನು ದಕ್ಷಿಣ ಭಾರತಕ್ಕೆ ಕರೆತರಲು ಒರಿಸ್ಸಾದ ಭುವನೇಶ್ವರದಿಂದ ಬೆಂಗಳೂರು ಕ್ಯಾಂಟೋನ್ಮೆಂಟ್ ಗೆ ಅಕ್ಟೋಬರ್ 15ರಂದು ಸೂಪರ್ ಫಾಸ್ಟ್ ತತ್ಕಾಲ್ ವಿಶೇಷ ರೈಲನ್ನು ಬಿಡಲಾಗುತ್ತಿದೆ.

ಆಶ್ರಯ ನೀಡಬೇಕಾದ ಗುಹೆಯೇ ಯಮನಾಗಿ ಬಂದು..!

ಆಶ್ರಯ ನೀಡಬೇಕಾದ ಗುಹೆಯೇ ಯಮನಾಗಿ ಬಂದು..!

ಮಳೆ ಮತ್ತು ಅತಿಯಾದ ಚಂಡಮಾರುತಕ್ಕೆ ಹೆದರಿ ಗುಹೆಯೊಂದರಲ್ಲಿ ಆಶ್ರಯ ಅರಸಿ ತೆರಳಿದ್ದ ಜನರಿಗೆ ಗುಹೆಯೇ ಯಮನಂತೆ ಎರಗಿದ್ದು ನಿಜಕ್ಕೂ ದುರಂತ. ಈ ಘಟನೆಯಲ್ಲಿ ಒಟ್ಟು 16 ಜನರಲ್ಲಿ 12 ಜನ ಮೃತರಾಗಿದ್ದರೆ 4 ಜನರ ಸುಳಿವು ಪತ್ತೆಯಾಗಿಲ್ಲ. ಗುಹೆಯ ಅವಶೇಷದಡಿಯಲ್ಲೇ ಅವರು ಸಿಲುಕಿರಬಹುದು ಎಂದು ಅಂದಾಜಿಸಲಾಗಿದ್ದು, ಮೃತರ ಸಂಖ್ಯೆ ಮತ್ತಷ್ಟು ಏರುವ ಸಾಧ್ಯಯೆ ಇದೆ.

ವಿಡಿಯೋ: 'ತಿತ್ಲಿ' ಚಂಡಮಾರುತದ ಉಗ್ರರೂಪ ನೋಡಿವಿಡಿಯೋ: 'ತಿತ್ಲಿ' ಚಂಡಮಾರುತದ ಉಗ್ರರೂಪ ನೋಡಿ

ತಿತ್ಲಿಗೆ ಆಂಧ್ರದಲ್ಲಿ ಎಂಟು ಮಂದಿ ಬಲಿ

ತಿತ್ಲಿಗೆ ಆಂಧ್ರದಲ್ಲಿ ಎಂಟು ಮಂದಿ ಬಲಿ

ಅತ್ಯುಗ್ರ ರೂಪ ತಾಳಿ ಆಂಧ್ರಪ್ರದೇಶದಾದ್ಯಂತ ಆತಂಕ ಸೃಷ್ಟಿಸಿದ್ದ ತಿತ್ಲಿಗೆ ಅಕ್ಟೋಬರ್ 11 ರಂದು 8 ಮಂಡಿ ಬಲಿಯಾಗಿದ್ದರು. ಎಷ್ಟು ಮುನ್ಸೂಚನೆ ಸಿಕ್ಕರೂ, ಮುನ್ನೆಚ್ಚರಿಕೆ ವಹಿಸಿದರೂ ತಿತ್ಲಿಯಿಂದ ಕೆಲವು ಪ್ರಾಣ ಹಾನಿಯನ್ನು ತಪ್ಪಿಸಲಾಗದಿರುವುದು ದುರಂತವೇ ಸರಿ.

ಅತ್ಯುಗ್ರ ತಿತ್ಲಿ ಚಂಡಮಾರುತಕ್ಕೆ ಆಂಧ್ರದಲ್ಲಿ 8 ಮಂದಿ ಬಲಿಅತ್ಯುಗ್ರ ತಿತ್ಲಿ ಚಂಡಮಾರುತಕ್ಕೆ ಆಂಧ್ರದಲ್ಲಿ 8 ಮಂದಿ ಬಲಿ

ಪಶ್ಚಿಮ ಬಂಗಾಳದತ್ತ ತಿತ್ಲಿ ಪಯಣ

ಪಶ್ಚಿಮ ಬಂಗಾಳದತ್ತ ತಿತ್ಲಿ ಪಯಣ

ಆಂಧ್ರ ಪ್ರದೇಶ ಮತ್ತು ಒಡಿಶಾದಲ್ಲಿ ತನ್ನ ರೌದ್ರಾವತಾರವನ್ನು ತೋರಿ, ಇದೀಗ ತಿತ್ಲಿ ಪಶ್ವಿಮ ಬಂಗಾಳದತ್ತ ಪಯಣ ಬೆಳೆಸಿದ್ದು, ಈ ರಾಜ್ಯದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಆಂಧ್ರ ಮತ್ತು ಒಡಿಶಾದಲ್ಲಿ ಸದ್ಯಕ್ಕೆ ತಿತ್ಲಿ ಅಬ್ಬರ ಕೊಂಚ ಕಡಿಮೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಪ್ರಸಿದ್ಧಿ ಪಡೆದ ದಸರಾ ಉತ್ಸವದ ಸಮಯದಲ್ಲಿ ಎದ್ದಿರುವ ತಿತ್ಲಿಯು ಹಬ್ಬದ ಸಂಭ್ರಮವನ್ನೇ ಮರೆಮಾಚಿದೆ.

ಗಂಟೆಗೆ 120 ರಿಂದ140 ಕಿಮೀ.

ಗಂಟೆಗೆ 120 ರಿಂದ140 ಕಿಮೀ.

ತಿತ್ಲಿ ಎಂಬ ಹೆಸರಿನ ಚಂಡಮಾರುತ ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಆರಂಭವಾಗಿದೆ. ಗಂಟೆಗೆ 120 ರಿಂದ140 ಕಿಮೀ. ವೇಗದಲ್ಲಿ ಗಾಳಿ ಚಲಿಸುತ್ತಿದೆ. ಕಳೆದ ಎರಡು ದಿನಗಳಿಂದ ಆಂಧ್ರ ಮತ್ತು ಒಡಿಶಾವನ್ನು ದಾಟಿ ಇದೀಗ ಪಶ್ಚಿಮ ಬಂಗಾಳದತ್ತ ತಿತ್ಲಿ ತೆರಳಿದ್ದು, ಮೂರು ರಾಜ್ಯಗಳಲ್ಲಿ ಹವಾಮಾನ ಇಲಾಖೆ ಹೈ ಅಲರ್ಟ್ ಘೋಷಿಸಿದೆ.

English summary
12 people died and 4 missing after Titli cyclone in Odisha creates Landslide. The incident occurred when some villagers took shelter in a cave structure following very heavy rainfall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X