ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪ್ಪಳಿಸಿದ ತಿತ್ಲಿ ಚಂಡಮಾರುತ: ಒಡಿಶಾ-ಆಂಧ್ರದಲ್ಲಿ ಹೈಅಲರ್ಟ್

|
Google Oneindia Kannada News

ಭುವನೇಶ್ವರ, ಅಕ್ಟೋಬರ್ 11: ಒಡಿಶಾ ಮತ್ತು ಆಂಧ್ರಪ್ರದೇಶಕ್ಕೆ ಅಪ್ಪಳಿಸಿರುವ ತಿತ್ಲಿ ಸೈಕ್ಲೋನ್ ನಿಂದಾಗಿ 3 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ವಾಯುಭಾರ ಕುಸಿತ: ಆಂಧ್ರ, ಒಡಿಶಾಗೆ ಚಂಡಮಾರುತ ಭೀತಿವಾಯುಭಾರ ಕುಸಿತ: ಆಂಧ್ರ, ಒಡಿಶಾಗೆ ಚಂಡಮಾರುತ ಭೀತಿ

ಗಂಟೆಗೆ 126 ಕಿಮೀ ವೇಗದಲ್ಲಿ ಚಲಿಸುವ ತಿತ್ಲಿ ಚಂಡಮಾರುತ ಉಭಯ ರಾಜ್ಯಗಳ ಜನರಲ್ಲೂ ಭೀತಿ ಹುಟ್ಟಿಸಿದೆ. ಒಡಿಶಾದ ಗೋಪಾಲ್ಪುರ ಮತ್ತು ಆಂಧ್ರಪ್ರದೇಶದ ಕಳಿಂಗಪಟ್ಟಣಂ ನಡುವೆ ಗುರುವಾರ ಬೆಳಿಗ್ಗೆ ಗಂಟೆಗೆ 126 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ಇದರೊಟ್ಟಿಗೆ ಮಳೆಯೂ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಂಗಳೂರಿನಲ್ಲಿ ಏಕಾಏಕಿ ಪ್ರಕ್ಷುಬ್ಧಗೊಂಡ ಕಡಲು: ತಿತ್ಲಿ ಪ್ರಭಾವ?ಮಂಗಳೂರಿನಲ್ಲಿ ಏಕಾಏಕಿ ಪ್ರಕ್ಷುಬ್ಧಗೊಂಡ ಕಡಲು: ತಿತ್ಲಿ ಪ್ರಭಾವ?

Titli cyclone hits Odisha and Andhra Pradesh, 3 lakh people evacuated

ಮುಂದಿನ 18 ಗಂಟೆಗಳ ಕಾಲವೂ ಚಂಡಮಾರುತದ ಹಾವಳಿ ಮುಂದುವರಿಯುವ ಸಾಧ್ಯತೆ ಇದೆ. ತಿತ್ಲಿಯಿಂದಾಗಿ ಹಲವೆಡೆ ಭೂಕುಸಿತವೂ ಉಂಟಾಗುವ ಸಾಧ್ಯತೆ ಇದ್ದು, ಜನರಿಗೆ ಈಗಾಗಲೇ ಮುನ್ನೆಚ್ಚರಿಕೆ ವಹಿಸಲು ಕೋರಲಾಗಿದೆ. ಒಡಿಶಾದ ಹಲವು ಜಿಲ್ಲೆಗಳಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ತಿತ್ಲಿ ಚಂಡಮಾರುತ: ವೈರಲ್ ಆಯ್ತು ಭಯಂಕರ ವಿಡಿಯೋ ತಿತ್ಲಿ ಚಂಡಮಾರುತ: ವೈರಲ್ ಆಯ್ತು ಭಯಂಕರ ವಿಡಿಯೋ

ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಈ ಸೈಕ್ಲೋನ್ ಸಂಭಿಸಿದೆ. ಅರಬ್ಬೀ ಸಮುದ್ರದಲ್ಲಿ ಲುಬಾನ್ ಎಂಬ ಚಂಡಮಾರುತವೂ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

English summary
The India Meteorological Department (IMD) said, The process of landfall of the very severe cyclone Titli started early Thursday with surface wind reaching speeds of 126 kmph at Gopalpur in Odisha's Ganjam district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X