ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿಮ್ಮಪ್ಪನಿಗೆ ಮುಡಿಕೊಟ್ಟ ಕೂದಲಿಂದ 78 ಕೋಟಿ ಆದಾಯ

By Srinath
|
Google Oneindia Kannada News

Tirupati temple TTD sells hair online earns Rs 77.72 cr profit
ತಿರುಪತಿ, ಫೆ. 1: ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಮುಟ್ಟಿದ್ದೆಲ್ಲಾ ಚಿನ್ನವೇ! ಇನ್ನು ಲಕ್ಷಾಂತರ ಭಕ್ತರು ವೆಂಕಟೇಶ್ವರನಿಗೆ ಮುಡಿಪಾಗಿ ನೀಡುವ ತಲೆಗೂದಲು 77.72 ಕೋಟಿ ರೂ. ಗಳಿಸಿದೆ.

ಆನ್ ಲೈನ್ ಮೂಲಕ ಗುರುವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ (e-auction) ತಿಮ್ಮಪ್ಪನ ಭಕ್ತರಿಂದ ಸಂಗ್ರಹವಾದ ತಲೆಗೂದಲು ದೇವಸ್ಥಾನದ ಆಡಳಿತ ಮಂಡಳಿಗೆ (Tirumala Tirupati Devasthanams -TTD) ಭಾರಿ ಆದಾಯವನ್ನೇ ತಂದಿದೆ. ಈ ಬಾರಿ ಒಟ್ಟಾರೆ ಸುಮಾರು 100 ಟನ್ ಕೂದಲು ಸಂಗ್ರಹವಾಗಿತ್ತು.

31 ಅಂಗುಲ ಉದ್ದದ ಮೊದಲ ಶ್ರೇಣಿಯ ತಲೆಗೂದಲು 229.37 ಲಕ್ಷ ರೂ. ತಂದಿದೆ. ಇನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗುವ, 2ನೇ ಶ್ರೇಣಿಯೆದ್ದೆಂದು ಪರಿಗಣಿತವಾಗುವ 16 ರಿಂದ 30 ಇಂಚು ಉದ್ದದ ತಲೆಗೂದಲು 4,720.55 ಲಕ್ಷ ರೂ. ತಂದಿದೆ.
[e-commerce ವಹಿವಾಟು 63000 ಕೋಟಿ ರೂ. ಗೆ]

ಮೂರನೆಯ ಶ್ರೇಣಿಯ 10 ರಿಂದ 15 ಇಂಚು ಉದ್ದದ ತಲೆಗೂದಲು 2,686.14 ಲಕ್ಷ ರೂ. ಆದಾಯ ಕಂಡಿದೆ. 5 ರಿಂದ 9 ಇಂಚು ಉದ್ದದ ತಲೆಗೂದಲು 38.19 ಲಕ್ಷ ರೂ. ಆದಾಯ ಕಂಡಿದೆ. ಕೊನೆಯ ಶ್ರೇಣಿಯ 5 ಅಂಗುಲಕ್ಕಿಂತ ಕಡಿಮೆ ಉದ್ದದ ತಲೆಗೂದಲು 13.69 ಲಕ್ಷ ರೂ. ಆದಾಯ ತಂದಿದೆ.

ಕುತೂಹಲದ ಸಂಗತಿಯೆಂದರೆ ಬಿಳಿಗೂದಲು 84.28 ಆದಾಯ ತಂದುಕೊಟ್ಟಿದೆ. (ಮುಂದಿನದು ಮೊಬೈಲ್ internet ಬಳಕೆದಾರರ ಯುಗ)

English summary
Tirupati temple TTD sells hair online earns Rs 77.72 cr profit. Tirumala Tirupati Devasthanams netted Rs 77.72 crore on Thursday (Jan 31) through the online sale of human hair. The devotees hairs were segregated into varieties depending on the length and put up for e-auction. Interestingly the grey hair also fetched Rs 84.28 lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X