ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೈಮ್ಸ್‌ ನೌ ಸಮೀಕ್ಷೆ: ರಾಜಸ್ಥಾನದಲ್ಲಿ ಪುಟಿದೇಳಲಿದೆ ಕಾಂಗ್ರೆಸ್‌, ಕುಸಿಯಲಿದೆ ಬಿಜೆಪಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 08: ಟೈಮ್ಸ್‌ ನೌ ನಡೆಸಿರುವ ಸಮೀಕ್ಷೆ ಪ್ರಕಾರ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಭರ್ಜರಿ ಗೆಲುವು ಸಾಧಿಸಿದರೆ. ಪ್ರಸ್ತುತ ಆಡಳಿತದಲ್ಲಿರುವ ಬಿಜೆಪಿ ಮಕಾಡೆ ಮಲಗಲಿದೆ.

ಟೈಮ್ಸ್ ನೌ ಸಮೀಕ್ಷೆ : ಮಧ್ಯಪ್ರದೇಶದಲ್ಲಿ ಶಿವರಾಜ ಮತ್ತೆ ಮಹಾರಾಜ ಟೈಮ್ಸ್ ನೌ ಸಮೀಕ್ಷೆ : ಮಧ್ಯಪ್ರದೇಶದಲ್ಲಿ ಶಿವರಾಜ ಮತ್ತೆ ಮಹಾರಾಜ

200 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷ 115 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದರೆ. ಬಿಜೆಪಿ ಭಾರಿ ಕುಸಿತ ಕಂಡು 75 ಸ್ಥಾನಗಳನ್ನು ಮಾತ್ರವೇ ಗೆಲ್ಲಲಿದೆ ಎಂದಿದೆ ಸಮೀಕ್ಷೆ. ಇತರೆ ಪಕ್ಷ ಹಾಗೂ ಪಕ್ಷೇತರರು 10 ಮಂದಿ ಗೆಲುವು ಸಾಧಿಸಲಿದ್ದಾರೆ ಎಂದಿದೆ ಸಮೀಕ್ಷೆ.

ಟೈಮ್ಸ್‌ನೌ ಸಮೀಕ್ಷೆ : ಛತ್ತೀಸ್‌ಗಢದಲ್ಲಿ ಮತ್ತೆ ಬಿಜೆಪಿ ಸರ್ಕಾರ! ಟೈಮ್ಸ್‌ನೌ ಸಮೀಕ್ಷೆ : ಛತ್ತೀಸ್‌ಗಢದಲ್ಲಿ ಮತ್ತೆ ಬಿಜೆಪಿ ಸರ್ಕಾರ!

2013ರಲ್ಲಿ ನಡೆದಿದ್ದ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು 163 ಸ್ಥಾನಗಳಲ್ಲಿ ವಿಜಯ ಸಾಧಿಸಿ ಸರ್ಕಾರ ರಚಿಸಿತ್ತು. ಆದರೆ ಈ ಬಾರಿ ಅದು ಅರ್ಧಕ್ಕಿಂತಲೂ ಕಡಿಮೆ ಸ್ಥಾನಗಳಿಗೆ ಕುಸಿಯಲಿದೆ ಎಂದು ಸಮೀಕ್ಷೆ ಹೇಳುತ್ತಿದೆ. ಕಳೆದ ಚುನಾವಣೆಯಲ್ಲಿ 21 ಸ್ಥಾನಗಳಲ್ಲಿ ಗೆದ್ದಿದ್ದ ಕಾಂಗ್ರೆಸ್‌ ಈ ಬಾರಿ 115 ಸೀಟುಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ಫಲಿತಾಂಶ ಹೇಳಿದೆ.

ಎಬಿಪಿ ನ್ಯೂಸ್ ಸಮೀಕ್ಷೆ : 3 ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಳ್ಳಲಿದೆ ಬಿಜೆಪಿ! ಎಬಿಪಿ ನ್ಯೂಸ್ ಸಮೀಕ್ಷೆ : 3 ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಳ್ಳಲಿದೆ ಬಿಜೆಪಿ!

94% ಮತಗಳನ್ನು ಹೆಚ್ಚಿಸಿಕೊಳ್ಳಲಿದೆ ಕಾಂಗ್ರೆಸ್‌

94% ಮತಗಳನ್ನು ಹೆಚ್ಚಿಸಿಕೊಳ್ಳಲಿದೆ ಕಾಂಗ್ರೆಸ್‌

ಸಮೀಕ್ಷೆ ಪ್ರಕಾರ ಬಿಜೆಪಿಯು ಕಳೆದ ಬಾರಿ ಗಳಿಸಿದ ಮತಗಳಲ್ಲಿ 88% ಮತಗಳನ್ನು ಕಳೆದುಕೊಳ್ಳಲಿದೆ. ಕಾಂಗ್ರೆಸ್‌ ಪಕ್ಷವು 94% ಗಿಂತಲೂ ಹೆಚ್ಚು ಮತಗಳನ್ನು ಗಳಿಸಿಕೊಳ್ಳಲಿದೆ. ಟೈಮ್ಸ್‌ ನೌ ಪ್ರಕಾರ ಸಮೀಕ್ಷೆಯ ಫಲಿತಾಂಶದಲ್ಲಿ 3% ಮತಗಳಷ್ಟೆ ವ್ಯತ್ಯಾಸವಾಗಬಹುದು ಎಂದಿದೆ.

ಸಿ-ವೋಟರ್‌, ಎಬಿಪಿ ಸಮೀಕ್ಷೆಗಳ ಸರಾಸರಿ

ಸಿ-ವೋಟರ್‌, ಎಬಿಪಿ ಸಮೀಕ್ಷೆಗಳ ಸರಾಸರಿ

'ಸಿ-ವೋಟರ್' ಮತ್ತು 'ವಾರ್‌ ರೂಮ್‌ ಸ್ಟ್ರಾಟಜಿ' ಎರಡೂ ಸಮೀಕ್ಷೆಗಳ ಫಲಿತಾಂಶವನ್ನು ಆಧಾರವಾಗಿಟ್ಟುಕೊಂಡು ಅವುಗಳ ಸರಾಸರಿ ಆಧರಿಸಿ ಟೈಮ್ಸ್‌ ನೌ ಅವರು 'ಪೋಲ್ಸ್‌ ಆಫ್‌ ಪೋಲ್ಸ್‌' ಸಮೀಕ್ಷೆಯ ವರದಿಯನ್ನು ಪ್ರಕಟಿಸಿದ್ದಾರೆ.

ಪ್ರತಿಬಾರಿ ಸರ್ಕಾರ ಬದಲಾವಣೆ

ಪ್ರತಿಬಾರಿ ಸರ್ಕಾರ ಬದಲಾವಣೆ

ರಾಜಸ್ಥಾನವು ಸಾಮಾನ್ಯವಾಗಿ ಪ್ರತಿ ವಿಧಾನಸಭೆ ಚುನಾವಣೆಯಲ್ಲೂ ಹೊಸ ಪಕ್ಷವನ್ನು ಆರಿಸುವುದು ಅಲ್ಲಿಯ ಮತದಾರರ ರೂಢಿ. ಸತತ ಐದು ಚುನಾವಣೆಯಲ್ಲಿ ಪ್ರತಿಬಾರಿಯೂ ಹೊಸ ಪಕ್ಷ ಅಧಿಕಾರಕ್ಕೆ ಬರುತ್ತದೆ.

ಟೈಮ್ಸ್‌ ನೌ ಪಂಚ ರಾಜ್ಯ ಸಮೀಕ್ಷೆ

ಟೈಮ್ಸ್‌ ನೌ ಪಂಚ ರಾಜ್ಯ ಸಮೀಕ್ಷೆ

ಟೈಮ್ಸ್‌ ನೌ ಖಾಸಗಿ ಚಾನೆಲ್‌ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯ ಸಮೀಕ್ಷೆ ನಡೆಸಿದ್ದು, ಮಧ್ಯಪ್ರದೇಶ, ಮಿಜೋರಂಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಎಬಿಪಿ ಮಾಡಿದ್ದ ಸಮೀಕ್ಷೆಯಲ್ಲಿ ಐದರಲ್ಲಿ ಮೂರು ರಾಜ್ಯಗಳನ್ನು ಬಿಜೆಪಿ ಕಳೆದುಕೊಳ್ಳಲಿದೆ ಎಂದು ಸಮೀಕ್ಷೆ ಫಲಿತಾಂಶ ಬಂದಿತ್ತು.

English summary
As per the Times now's poll of the poll congress is going to win in upcoming Rajasthan assembly elections. survey report said congress will win 115 seats and BJP will win in 75 seats only.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X