ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೈಮ್ಸ್ ನೌ ಸಮೀಕ್ಷೆ: ಈಗ ಚುನಾವಣೆ ನಡೆದರೆ ಬಿಜೆಪಿಗೆ ಭರ್ಜರಿ ಬಹುಮತ

By Sachhidananda Acharya
|
Google Oneindia Kannada News

ನವದೆಹಲಿ, ಮೇ 25: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ನಾಳೆ ಅಂದರೆ ಮೇ 26ಕ್ಕೆ 4 ವರ್ಷ ತುಂಬಲಿದೆ. ಇದೀಗ ಮೋದಿ ತಮ್ಮ ಅಧಿಕಾರಾವಧಿಯ ಕೊನೆಯ 12 ತಿಂಗಳನ್ನಷ್ಟೇ ಹೊಂದಿದ್ದಾರೆ.

ಈ ಸಂದರ್ಭದಲ್ಲಿ ದೇಶದ ಜನರ ಮನಸ್ಥಿತಿ ಹೇಗಿದೆ ಎಂಬುದನ್ನು ಅರಿತುಕೊಳ್ಳಲು 'ಕ್ರೋಮಾ ಡೇಟಾ ಅನಾಲಿಟಿಕ್ಸ್ - ಟೈಮ್ಸ್ ನೌ ವಾಹಿನಿ' ಜಂಟಿಯಾಗಿ 'ನಮೋ ಜನಪ್ರಿಯತೆಯ ಸಮೀಕ್ಷೆ' ನಡೆಸಿದೆ.

ಇಂಡಿಯಾ ಟುಡೇ ಸಮೀಕ್ಷೆ : ಯುಪಿಯಲ್ಲಿ ಎನ್‌ಡಿಎ ಮತಗಳಿಕೆ ಕಡಿಮೆ!ಇಂಡಿಯಾ ಟುಡೇ ಸಮೀಕ್ಷೆ : ಯುಪಿಯಲ್ಲಿ ಎನ್‌ಡಿಎ ಮತಗಳಿಕೆ ಕಡಿಮೆ!

4 ವರ್ಷಗಳ ಆಡಳಿತದ ನಂತರ ಮೋದಿ ಅವರ ಜನಪ್ರಿಯತೆ ಹೇಗಿದೆ? 2019ರಲ್ಲಿ ಮತ್ತೆ ಅವರು ಅಧಿಕಾರಕ್ಕೇರುತ್ತಾರಾ? ಭಾರತೀಯರ ಕಣ್ಣಲ್ಲಿ ಮೋದಿ ಸರಕಾರದ ಬಗೆಗಿನ಻ ಅಭಿಪ್ರಾಯವೇನು? ಈ ಎಲ್ಲಾ ಪ್ರಶ್ನೆಗಳಿಗೆ ಈ ಸಮೀಕ್ಷೆ ಕನ್ನಡಿ ಹಿಡಿದಿದೆ.

 ಈಗ ಚುನಾವಣೆ ನಡೆದರೆ ಸೀಟು ಎಷ್ಟು?

ಈಗ ಚುನಾವಣೆ ನಡೆದರೆ ಸೀಟು ಎಷ್ಟು?

ಒಟ್ಟು 543 ಲೋಕಸಭಾ ಸ್ಥಾನಗಳಿವೆ. 2014ರಲ್ಲಿ ಚುನಾವಣೆ ನಡೆದಾಗ ಬಿಜೆಪಿ 282 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಒಂದೊಮ್ಮೆ ಈಗ ಚುನಾವಣೆ ನಡೆದರೆ ಬಿಜೆಪಿ ಬರೋಬ್ಬರಿ 318 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆಯು ಅಂದಾಜಿಸಿದೆ.

 2019ರಲ್ಲಿ ಯಾರನ್ನೂ ಪ್ರಧಾನಿ ಸ್ಥಾನದಲ್ಲಿ ನೋಡಲು ಇಚ್ಛಿಸುತ್ತೀರಿ?

2019ರಲ್ಲಿ ಯಾರನ್ನೂ ಪ್ರಧಾನಿ ಸ್ಥಾನದಲ್ಲಿ ನೋಡಲು ಇಚ್ಛಿಸುತ್ತೀರಿ?

ಈ ಪ್ರಶ್ನೆಗೆ ಹೆಚ್ಚಿನವರು ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಹೇಳಿದ್ದಾರೆ. ನರೇಂದ್ರ ಮೋದಿಯವರನ್ನು ಪ್ರಧಾನಿ ಸ್ಥಾನದಲ್ಲಿ ನೋಡಲು ಇಚ್ಛಿಸುತ್ತೇವೆ ಎಂದು ಶೇಕಡಾ 53 ಜನರು ಹೇಳಿದ್ದಾರೆ.

ಇನ್ನು ಶೇಕಡಾ 23 ಜನರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಶೇ. 7 ಜನರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಶೇಕಡಾ 6 ಜನರು ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಶೇಕಡಾ 5 ಜನರು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, ಶೇಕಡಾ 1 ಜನರು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಶೇಕಡಾ 3 ಜನರು ಇತರರನ್ನು ಪ್ರಧಾನಿ ಹುದ್ದೆಯಲು ನೋಡಲು ಬಯಸಿದ್ದಾರೆ.

ಜನಪ್ರಿಯತೆ ಕುಗ್ಗಿದರೂ ಭಾರತ ಇನ್ನೂ ಬಿಜೆಪಿಯ ಬಿಗಿ ಹಿಡಿತದಲ್ಲಿ!ಜನಪ್ರಿಯತೆ ಕುಗ್ಗಿದರೂ ಭಾರತ ಇನ್ನೂ ಬಿಜೆಪಿಯ ಬಿಗಿ ಹಿಡಿತದಲ್ಲಿ!

 ಎರಡನೇ ಬಾರಿಗೆ ಎನ್ ಡಿಎ ಅಧಿಕಾರಕ್ಕೆ

ಎರಡನೇ ಬಾರಿಗೆ ಎನ್ ಡಿಎ ಅಧಿಕಾರಕ್ಕೆ

ಎನ್.ಡಿ.ಎ ಎರಡನೇ ಬಾರಿಗೆ ಅಧಿಕಾರಕ್ಕೆ ಬರಲಿದೆಯಾ ಎಂದು ಕೇಳಿದ ಪ್ರಶ್ನೆಗೆ ಶೇಕಡಾ 55 ಜನರು ಹೌದು ಎಂದಿದ್ದಾರೆ. ಇಲ್ಲ ಪ್ರಧಾನಿ ನರೇಂದ್ರ ಮೋದಿ ಸರಕಾರ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದು ಶೇಕಡಾ 45 ಜನರು ಹೇಳಿದ್ದಾರೆ.

ಇನ್ನು ಸರಕಾರದ ಮೇಲಿನ ನಂಬಿಕೆ ಕಳೆದ 4 ವರ್ಷಗಳಲ್ಲಿ ಹೇಗೆ ಬದಲಾಗಿದೆ ಎಂದು ಕೇಳಲಾದ ಪ್ರಶ್ನೆಗೆ, ಇನ್ನೂ ಹೆಚ್ಚಾಗಿದೆ ಎಂದು ಶೇಕಡಾ 30 ಜನರು ಹೇಳಿದ್ದಾರೆ. ಮೊದಲಿನಂತೆಯೇ ಇದೆ ಎಂದು ಶೇ 32, ಅಭಿಪ್ರಾಯ ಕಳೆದುಕೊಂಡಿದ್ದೇವೆ ಎಂದು ಶೇಕಡಾ 23 ಮತ್ತು ಹೇಳಲಾಗದು ಎಂದು ಶೇಕಡಾ 15ರಷ್ಟು ಜನರು ಹೇಳಿದ್ದಾರೆ.

 ಉದ್ಯೋಗ ಮತ್ತು ಆದಾಯ ಹೆಚ್ಚಾಗಿದೆ

ಉದ್ಯೋಗ ಮತ್ತು ಆದಾಯ ಹೆಚ್ಚಾಗಿದೆ

ನಿಮ್ಮ ಉದ್ಯೋಗ ಮತ್ತು ಆದಾಯವನ್ನು ಈಗ ಹೇಗೆ ನೋಡಲು ಇಚ್ಛಿಸುತ್ತೀರಿ? ಎಂದು ಕೇಳಿದಾಗ ಶೇಕಡಾ 31 ಜನರು ಐದು ವರ್ಷ ಹಿಂದೆ ಹೇಗಿತ್ತೋ ಹಾಗೆಯೇ ಇದ್ದೇವೆ ಎಂದಿದ್ದಾರೆ. ಶೇಕಡಾ 37 ಜನರು ಆದಾಯ ಮತ್ತು ಉದ್ಯೋಗದಲ್ಲಿ ಅಭಿವೃದ್ಧಿಯಾಗಿದೆ ಎಂದಿದ್ದಾರೆ. ಇದೇ ವೇಳೆ ಶೇಕಡಾ 32 ಜನರು ಹಿಂದೆಂದಿಗಿಂತಲೂ ಕುಲಗೆಟ್ಟು ಹೋಗಿದೆ ಎಂದು ಹೇಳಿದ್ದಾರೆ.

ಇನ್ನು ನಿಮ್ಮ ಜೀವನ ಮಟ್ಟದ ಮೇಲೆ ಕಳೆದ ನಾಲ್ಕು ವರ್ಷಗಳು ಯಾವ ಪರಿಣಾಮವನ್ನು ಬೀರಿವೆ ಎಂದು ಕೇಳಲಾದ ಪ್ರಶ್ನೆಗೆ, ಜೀವನ ಮಟ್ಟ ತುಂಬಾ ಸುಧಾರಿಸಿದೆ ಎಂದು ಶೇಕಡಾ 19, ಪರವಾಗಿಲ್ಲ ಸುಧಾರಣೆಯಾಗಿದೆ ಎಂದು ಶೇಕಡಾ 28, ಹಾಗೆಯೇ ಇದೆ ಎಂದು ಶೇಕಡಾ 23, ಇನ್ನೂ ಕೆಟ್ಟದಾಗಿದೆ ಎಂದು ಶೇಕಡಾ 14, ತುಂಬಾ ಕೆಟ್ಟದಾಗಿ ಹೋಗಿದೆ ಎಂದು ಶೇಕಡಾ 11 ಜನರು ಮತ್ತು ಯಾವುದೇ ಅಭಿಪ್ರಾಯ ಇಲ್ಲ ಎಂದು ಶೇಕಡಾ 5 ಜನರು ಹೇಳಿದ್ದಾರೆ.

 ಮೋದಿ ಸರಕಾರಕ್ಕೆ ರೇಟಿಂಗ್

ಮೋದಿ ಸರಕಾರಕ್ಕೆ ರೇಟಿಂಗ್

ನಾಲ್ಕು ವರ್ಷಗಳ ಮೋದಿ ಸರಕಾರಕ್ಕೆ ನೀವು ನೀಡುವ ಶ್ರೇಯಂಕ ಏನು ಎಂದು ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ಜನರು ಮೋದಿ ಸರಕಾರ ಅತ್ಯುತ್ತಮವಾಗಿದೆ ಎಂದು ಶೇಕಡಾ 23 ಜನರು ಹೇಳಿದ್ದಾರೆ. ಪರವಾಗಿಲ್ಲ ಒಳ್ಳೆಯದಾಗಿದೆ ಎಂದು ಶೇಕಡಾ 26 ಜನರು ಪ್ರತಿಕ್ರಿಯೆ ನೀಡಿದ್ದಾರೆ. ಸಾಧಾರಣ ಎಂದು ಶೇಕಡಾ 27 ಜನರು ಉತ್ತರಿಸಿದ್ದಾರೆ. ಕಳಪೆ ಎಂಬುದು ಶೇಕಡಾ 24 ಜನರ ಉತ್ತರವಾಗಿದೆ.

English summary
The NDA government at the Centre led by Prime Minister Narendra Modi completes four years in office on May 26. At this point of time Times Now conducted #NaMoPopularitySurvey, in which it says that NDA will win 318 seats if Lok Sabha elections held today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X