ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮ ಮಂದಿರ ನಿರ್ಮಾಣಕ್ಕೆ ಸಮಯ ಪ್ರಶಸ್ತ : ಶ್ರೀಶ್ರೀ

By Prasad
|
Google Oneindia Kannada News

ಬೆಂಗಳೂರು, ಅಕ್ಟೋಬರ್ 28 : ವಿವಾದಗ್ರಸ್ತ ರಾಮಜನ್ಮ ಭೂಮಿ ಅಯೋಧ್ಯಾದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಹಿಂದೆಂದಿಗಿಂತಲೂ ಸಮಯ ಪ್ರಶಸ್ತವಾಗಿದೆ ಎಂದು ಆರ್ಟ್ ಆಫ್ ಲಿವಿಂಗ್ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಹೇಳಿದ್ದು, ಬೂದಿ ಮುಚ್ಚಿದಂತಿದ್ದ ವಿವಾದವನ್ನು ಮತ್ತೆ ಕೆದಕಿದಂತಾಗಿದೆ.

ರಾಮ ಜನ್ಮಭೂಮಿ ವಿವಾದ : ಡಿ.5ರಿಂದ ಅಂತಿಮ ವಿಚಾರಣೆ ಆರಂಭರಾಮ ಜನ್ಮಭೂಮಿ ವಿವಾದ : ಡಿ.5ರಿಂದ ಅಂತಿಮ ವಿಚಾರಣೆ ಆರಂಭ

ನಾನು ಇದಕ್ಕೆ ಸಂಬಂಧಿಸಿದಂತೆ ಹಲವಾರು ಇಮಾಮ್ ಗಳು, ಸ್ವಾಮೀಜಿಗಳನ್ನು ಭೇಟಿ ಮಾಡಿದ್ದು, ಎಲ್ಲರಿಗೂ ಶಾಂತಿ ಬೇಕಾಗಿದೆ. ನಾನು ನಿರ್ಮೋಹಿ ಅಖಾರದ ಆಚಾರ್ಯ ರಾಮ್ ದಾಸ್ ಅವರನ್ನೂ ಭೇಟಿಯಾಗಿದ್ದು, ನ್ಯಾಯಾಲಯದ ಹೊರಗಡೆ ಪ್ರಕರಣ ಇತ್ಯರ್ಥಪಡಿಸಲು ವೈಯಕ್ತಿಕವಾಗಿ ಎಲ್ಲ ಪ್ರಯತ್ನ ನಡೆಸಿದ್ದೇನೆ ಎಂದಿದ್ದಾರೆ.

Time is rife for construction of Ram Mandir

ಎಲ್ಲ ಪಂಗಡದವರನ್ನು ಒಲಿಸುವ ಪ್ರಯತ್ನ ಕೇಂದ್ರ ಸರಕಾರ ಅಥವಾ ಯಾವುದೇ ಸಂಸ್ಥೆಯ ಅಣತಿಯಂತೆ ಮಾಡುತ್ತಿಲ್ಲ. ಎರಡೂ ಪಂಗಡಗಳ ನಾಯಕರುಗಳನ್ನು ಒಟ್ಟಿಗೆ ಕರೆತಂದು ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸುವುದೊಂದೇ ಮನವೊಲಿಕೆಯ ಮೂಲ ಉದ್ದೇಶವಾಗಿದೆ ಎಂದು ಆರ್ಟ್ ಆಫ್ ಲಿವಿಂಗ್ ಪ್ರಕಟಣೆ ತಿಳಿಸಿದೆ.

'ರಾಮ ಮಂದಿರಕ್ಕೆ ವಿರೋಧಿಸಿದ್ರೆ ಮುಸ್ಲಿಮರಿಗೆ ಹಜ್ ಗೆ ಹೋಗಲು ಬಿಡಲ್ಲ''ರಾಮ ಮಂದಿರಕ್ಕೆ ವಿರೋಧಿಸಿದ್ರೆ ಮುಸ್ಲಿಮರಿಗೆ ಹಜ್ ಗೆ ಹೋಗಲು ಬಿಡಲ್ಲ'

ಆದರೆ, ತಾವು ರವಿಶಂಕರ್ ಗುರೂಜಿ ಅವರೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಅಖಿಲ ಭಾರತ ಮುಸ್ಲಿಂ ಕಾನೂನು ಮಂಡಳಿ, ನಡೆಯುತ್ತಿದೆ ಎನ್ನಲಾದ ಮಾತುಕತೆಯನ್ನು ತಳ್ಳಿಹಾಕಿದೆ.

ಅಯೋಧ್ಯೆಗೆ ಬರುತ್ತಿವೆ ಟನ್ ಗಟ್ಟಲೆ ಕೆತ್ತನೆ ಕಲ್ಲು? ಏಕೆ?ಅಯೋಧ್ಯೆಗೆ ಬರುತ್ತಿವೆ ಟನ್ ಗಟ್ಟಲೆ ಕೆತ್ತನೆ ಕಲ್ಲು? ಏಕೆ?

ವಿವಾದಿತ 2.77 ಎಕರೆ ಜಮೀನು ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾರ ಮತ್ತು ರಾಮ್ ಲಲ್ಲಾ ಪರವಾಗಿ ಮೂರು ಭಾಗಗಗಳನ್ನಾಗಿ ಮಾಡಿ ಅಲಹಾಬಾದ್ ಹೈಕೋರ್ಟ್ 2010ರಲ್ಲಿ ಆದೇಶ ನೀಡಿತ್ತು. ಈ ತೀರ್ಪಿನ ವಿರುದ್ಧ ಹೂಡಲಾಗಿರುವ 13 ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಪರಿಗಣಿಸಿದ್ದು, ಡಿಸೆಂಬರ್ 5ರಿಂದ ವಿಚಾರಣೆ ನಡೆಸಲಿದೆ.

ಏನೇ ಆಗಲಿ, 2018ರ ಡಿಸೆಂಬರ್ 6ರೊಳಗೆ, ಧ್ವಂಸ ಮಾಡಲಾಗಿರುವ ಬಾಬ್ರಿ ಮಸೀದಿ ಸ್ಥಳದಲ್ಲಿ ರಾಮ ಮಂದಿರವನ್ನು ನಿರ್ಮಿಸಿಯೇ ತೀರುತ್ತೇವೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ವಿರೋಧಿಗಳಿಗೆ ಸವಾಲು ಎಸೆದಿದ್ದಾರೆ.

English summary
Time is rife for construction of Ram Mandir at controversial Ayodhya, says Sri Sri Ravishankar Guruji, who has taken initiative to speak to both communities, Hindu and Muslim, to find a amicable settlement out of the court. ರಾಮ ಮಂದಿರ ನಿರ್ಮಾಣಕ್ಕೆ ಸಮಯ ಪ್ರಶಸ್ತ : ಶ್ರೀಶ್ರೀ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X