ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳು : ಗುರುವಾರ ಭಾರತದಲ್ಲಿ ಏನೇನಾಯ್ತು?

|
Google Oneindia Kannada News

ಬೆಂಗಳೂರು, ಜುಲೈ 23 : ಗುರುವಾರದ ಆಯ್ದ ಸುದ್ದಿಗಳ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ. ಪ್ರತಿದಿನ ದೇಶದಲ್ಲಿ ಹಲವಾರು ಘಟನೆಗಳು ನಡೆಯುತ್ತವೆ. ಆದರೆ, ಕೆಲವುಗಳ ಬಗ್ಗೆ ನೂರು ಸಾಲು ಬರೆಯುವುದಕ್ಕಿಂತ ಒಂದು ಚಿತ್ರವನ್ನು ಹಾಕುವುದೇ ಸೂಕ್ತ. ಚಿತ್ರವೇ ಮಾಹಿತಿಯನ್ನು ತಿಳಿಸುತ್ತದೆ.

ಗುರುವಾರ ಭಾರತದಲ್ಲಿ ಹಲವಾರು ಘಟನೆಗಳು ನಡೆದಿವೆ. ಅವುಗಳ ಆಯ್ದ ಕೆಲವು ಚಿತ್ರಗಳನ್ನು ನಿಮಗಾಗಿ ನಾವಿಲ್ಲಿ ನೀಡಿದ್ದೇವೆ. ಚಿತ್ರದ ಜೊತೆ ಸಂಕ್ಷಿಪ್ತವಾದ ಮಾಹಿತಿಯನ್ನು ಒದಗಿಸಲಾಗಿದೆ.

ಮಧ್ಯಪ್ರದೇಶದಲ್ಲಿ ನಡೆದಿರುವ ವ್ಯಾಪಂ ಹಗರಣ ಇದೀಗ ರಾಷ್ಟ್ರ ವ್ಯಾಪ್ತಿ ಚರ್ಚೆ ಹಾಗೂ ಪ್ರತಿಭಟನೆಗೆ ಕಾರಣವಾಗಿದೆ. ಇಂದು ಸಹ ಪ್ರತಿಪಕ್ಷ ಕಾಂಗ್ರೆಸ್ ಮಧ್ಯಪ್ರದೇಶದಲ್ಲಿ ಭಾರೀ ಪ್ರತಿಭಟನೆ ನಡೆಸಿದೆ.

ಇತ್ತ ದೆಹಲಿಯಲ್ಲಿ ಮುಂಗಾರು ಅಧಿವೇಶನ ಆರಂಭವಾಗಿದ್ದು ಆಡಳಿತ ಮತ್ತು ಪ್ರತಿಪಕ್ಷ ನಡುವಿನ ಜಟಾಪಟಿ ಮುಂದುವರೆದಿದೆ. ಇಂತಹ ಇಂದಿನ ಪ್ರಮುಖ ಸುದ್ದಿಗಳ ಸಂಗ್ರಹ ಇಲ್ಲಿದೆ ನೋಡಿ... [ಪಿಟಿಐ ಚಿತ್ರಗಳು]

ಪ್ರತಿಭಟನೆ ಚದುರಿಸಲು ಗಾಳಿಯಲ್ಲಿ ಗುಂಡು

ಪ್ರತಿಭಟನೆ ಚದುರಿಸಲು ಗಾಳಿಯಲ್ಲಿ ಗುಂಡು

ಮಧ್ಯಪ್ರದೇಶದಲ್ಲಿ ನಡೆದಿರುವ ವ್ಯಾಪಂ ಹಗರಣ ಇದೀಗ ರಾಷ್ಟ್ರ ವ್ಯಾಪ್ತಿ ಚರ್ಚೆ ಹಾಗೂ ಪ್ರತಿಭಟನೆಗೆ ಕಾರಣವಾಗಿದೆ. ಇಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಭೋಪಾಲ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಪ್ರತಿಭಟನೆ ಚದುರಿಸಲು ಅಶ್ರುವಾಯು ಪ್ರಯೋಗಿಸಿದರು.

ಸಂಸತ್ ಭವನಕ್ಕೆ ಬಿಗಿ ಭದ್ರತೆ

ಸಂಸತ್ ಭವನಕ್ಕೆ ಬಿಗಿ ಭದ್ರತೆ

ಸಂಸತ್‌ನಲ್ಲಿ ಮುಂಗಾರು ಅಧಿವೇಶನ ನಡೆಯುತ್ತಿದೆ. ಆದ್ದರಿಂದ ಭಾರೀ ಭದ್ರತೆ ಕಲ್ಪಿಸಲಾಗಿದೆ. ಇಂದು ಭದ್ರತಾ ಸಿಬ್ಬಂದಿ ಪಹರೆ ಕಾಯುತ್ತಿದ್ದಾಗ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ.

ಅಯ್ಯೋ ಭಾರೀ ಮಳೆ ಕಂಡ್ರಿ

ಅಯ್ಯೋ ಭಾರೀ ಮಳೆ ಕಂಡ್ರಿ

ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಗುರುವಾರ ಭಾರೀ ಮಳೆ ಸುರಿಯಿತು. ಜಲಾವೃತವಾಗಿರುವ ರಸ್ತೆಯಲ್ಲಿ ಮುಂದೆ ಸಾಗಲು ವಾಹನ ಚಾಲಕನೊಬ್ಬ ಪರದಾಡುತ್ತಿದ್ದಾನೆ.

ಆಜಾದರಿಗೆ ಪುಷ್ಪ ನಮನ

ಆಜಾದರಿಗೆ ಪುಷ್ಪ ನಮನ

ಇಂದು ಸ್ವತಂತ್ರ ಹೋರಾಟಗಾರ ಚಂದ್ರಶೇಖರ ಆಜಾದ್ ಅವರ ಜನ್ಮದಿನ. ಅಲಹಾಬಾದ್‌ನಲ್ಲಿ ಆಜಾದರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಅವರಿಗೆ ಗೌರವ ಸಲ್ಲಿಸಲಾಯಿತು.

ಸಂಸತ್‌ನಿಂದ ಹೊರಬಂದ ಕಾಂಗ್ರೆಸ್ ಯುವರಾಜ

ಸಂಸತ್‌ನಿಂದ ಹೊರಬಂದ ಕಾಂಗ್ರೆಸ್ ಯುವರಾಜ

ಸಂಸತ್ತಿನಲ್ಲಿ ಮುಂಗಾರು ಅಧಿವೇಶನ ನಡೆಯುತ್ತಿದ್ದು ಅಧಿವೇಶನದಲ್ಲಿ ಪಾಲ್ಗೊಂಡು ಹೊರಬಂದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಮಾಧ್ಯಮದವರು ಮುತ್ತಿಕೊಂಡರು.

ತಂಡದ ಪಟ್ಟಿ ಸಿದ್ದ ಮಾಡೋಣವೇ?

ತಂಡದ ಪಟ್ಟಿ ಸಿದ್ದ ಮಾಡೋಣವೇ?

ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡವನ್ನು ಆಯ್ಕೆ ಮಾಡಲು ಗುರುವಾರ ಸಭೆ ನಡೆಸಲಾಯಿತು. ವಿರಾಟ್ ಕೊಹ್ಲಿ, ಬಿಸಿಸಿಐ ಕಾರ್ಯದರ್ಶಿ ಅನುರಾಘ್ ಠಾಕೂರ್ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಎಲ್ಲಿ ಸ್ಪಲ್ಪ ಸೈಡ್ ಬಿಡ್ರಾಪ್ಪ

ಎಲ್ಲಿ ಸ್ಪಲ್ಪ ಸೈಡ್ ಬಿಡ್ರಾಪ್ಪ

ಗುರುವಾರ ಮುಂಗಾರು ಅಧಿವೇಶನದಲ್ಲಿ ಪಾಲ್ಗೊಳ್ಳಲು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಂಸತ್ ಭವನಕ್ಕೆ ಆಗಮಿಸುತ್ತಿರುವಾಗ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ.

ನಮ್ಮ ತಂಡ ಹೀಗಿದೆ ನೋಡಿ

ನಮ್ಮ ತಂಡ ಹೀಗಿದೆ ನೋಡಿ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶ್ರೀಲಂಕಾ ಟೆಸ್ಟ್ ಸರಣಿಗೆ ತೆರಳಲಿರುವ ಟೀಂ ಇಂಡಿಯಾ ತಂಡವನ್ನು ಗುರುವಾರ ಪ್ರಕಟಿಸಿದೆ.

ನಾಗ್ಪುರಕ್ಕೆ ಬಂದ ರಹೀನ್

ನಾಗ್ಪುರಕ್ಕೆ ಬಂದ ರಹೀನ್

1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಅಪರಾಧಿ ಯಾಕೂಬ್ ಮೆನನ್‌ನನ್ನು ನೋಡಲು ಅವರ ಪತ್ನಿ ರಹೀನ್ ಮೆನನ್ ನಾಗ್ಪುರಕ್ಕೆ ಗುರುವಾರ ಬಂದಾಗ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ.

English summary
The news in pictures. A selection of photographs from around the India. Thursday news in pictures.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X