ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಡಾಕ್ ನಲ್ಲಿ ಹಿಮಪಾತ: ಮೂವರು ಯೋಧರು ಹುತಾತ್ಮ

ಜಮ್ಮು-ಕಾಶ್ಮೀರದ ಲಡಾಕ್ ನ ಬಟಾಲಿಕ್ ಎಂಬಲ್ಲಿ ಸಂಭವಿಸಿದ ಹಿಮಪಾತದಲ್ಲಿ ಮೂವರು ಸೈನಿಕರು ಹುತಾತ್ಮರಾಗಿದ್ದಾರೆ.

|
Google Oneindia Kannada News

ಲಡಾಕ್ , ಏಪ್ರಿಲ್ 7: ಜಮ್ಮು-ಕಾಶ್ಮೀರದ ಲಡಾಕ್ ನ ಬಟಾಲಿಕ್ ಎಂಬಲ್ಲಿ ಸಂಭವಿಸಿದ ಹಿಮಪಾತದಲ್ಲಿ ಮೂವರು ಸೈನಿಕರು ಹುತಾತ್ಮರಾಗಿದ್ದಾರೆ. ಹುತಾತ್ಮರ ದೇಹವನ್ನು ಪತ್ತೆ ಮಾಡಲಾಗಿದ್ದು, ಮೂವರು ಸೈನಿಕರೂ ಬಿಹಾರದವರೆಂದು ತಿಳಿದುಬಂದಿದೆ.

ನಿನ್ನೆ (ಏಪ್ರಿಲ್ 6) ಕರ್ತವ್ಯನಿರತರಾಗಿದ್ದ ವೇಳೆಯಲ್ಲಿ ಸಂಭವಿಸಿದ ಹಿಮಪಾತದಿಂದಾಗಿ ಐವರು ಯೋಧರು ಕಾಣೆಯಾಗಿದ್ದರು. ಅವರಲ್ಲಿ ಇಬ್ಬರನ್ನು ರಕ್ಷಿಸಲಾಗಿದ್ದು, ಮೂವರು ಹಿಮದಡಿಯಲ್ಲಿ ಸಿಲುಕಿ ಹುತಾತ್ಮರಾಗಿದ್ದಾರೆ. [ಒನ್ ಇಂಡಿಯಾ ಅಭಿಯಾನದ ಪರಿಣಾಮ: ಮಹಾದೇವಿಗೆ ಉದ್ಯೋಗ ಭಾಗ್ಯ]

Three soldiers martyred in a avalanche in Ladakh

ಜಮ್ಮು ಕಾಶ್ಮೀರದಲ್ಲಿ ಇಂಥ ಹಿಮಪಾತಗಳು ಇತ್ತೀಚೆಗೆ ಪದೇ ಪದೇ ಸಂಭವಿಸುತ್ತಿದ್ದು, ಈ ವರ್ಷದ ಜನವರಿಯಲ್ಲಿ ಸಂಭವಿಸಿದ ಭೀಕರ ಹಿಮಪಾತದಿಂದಾಗಿ 15 ಯೋಧರು ಹುತಾತ್ಮರಾಗಿದ್ದರು. [ಜಮ್ಮು ಕಾಶ್ಮೀರದಲ್ಲಿ ಭಾರೀ ಹಿಮಪಾತ, ಜವಾನ ಸೇರಿ 5 ಸಾವು]

2016 ರ ಫೆಬ್ರವರಿಯಲ್ಲಿ ಸಿಯಾಚಿನ್ ನಲ್ಲಿ ಸಂಭವಿಸಿದ ಹಿಮಪಾತದಲ್ಲಿ 30 ಅಡಿ ಆಳದ ಹಿಮದಡಿಯಲ್ಲಿ, -45 ಡಿಗ್ರಿ ಕೊರೆವ ಚಳಿಯಲ್ಲಿ ಆರು ದಿನಗಳ ಕಾಲ ಬದುಕಿದ್ದು, ನಂತರ ಬಹು ಅಂಗಾಂಗ ವೈಫಲ್ಯದಿಂದ ಫೆಬ್ರವರಿ 11 ರಂದು ದೆಹಲಿಯ ಆಸ್ಪತ್ರೆಯಲ್ಲಿ ಹುತಾತ್ಮರಾದ ಹುಬ್ಬಳ್ಳಿಯ ಲಾನ್ಸ್ ನಾಯಕ್ ಹನುಮಂತಪ್ಪ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು. [ಹಿಮದಡಿ ಸಿಕ್ಕ ವೀರ ಯೋಧರ ಜೀವಕ್ಕಾಗಿ ಪ್ರಾರ್ಥಿಸಿ]

English summary
Three soldiers martyred in an avalanche, which took place in Batalik region of Ladakh district, Jammu and Kashmir, on 6th April. Both three were from Bihar, sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X