ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೋಗಿ ಎಫೆಕ್ಟ್: ಮಾಂಸ ಮಾರಾಟಕ್ಕೆ ಬೈ, ಚಹಾದಂಗಡಿಗೆ ಸೈ!

|
Google Oneindia Kannada News

ಮುಜಾಫರ್ ನಗರ ಮಾರ್ಚ್ 30 : ಯೋಗಿ ಆದಿತ್ಯಾನಾಥ್ ಅವರು ಮುಖ್ಯಮಂತ್ರಿಯಾದ ಬಳಿಕ ಉತ್ತರ ಪ್ರದೇಶದಲ್ಲಿ ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಿಸಲಾಗಿದ್ದರಿಂದ ಮಾಂಸ ಮಾರಾಟಗಾರರು ಜೀವನ ಸಾಗಿಸಲು ಬೇರೆ ಉದ್ಯಮಗಳತ್ತ ಮುಖ ಮಾಡಿದ್ದಾರೆ.

ಕಸಾಯಿಖಾನೆಗಳನ್ನು ಬಂದ್ ಮಾಡಿದ್ದರಿಂದ ತಮ್ಮ ಜೀವನ ಸಾಗಿಸಲು ಮುಜಾಫರ್ ನಗರದ ಮೂವರು ಮಾಂಸ ಮಾರಾಟಗಾರರು ಚಹಾ ಅಂಗಡಿಯ ವ್ಯಾಪಾರ ಶುರು ಮಾಡಿಕೊಂಡಿದ್ದಾರೆ. [ಯೋಗಿ ವಿರುದ್ಧ ಉತ್ತರ ಪ್ರದೇಶದಲ್ಲಿ ಮಾಂಸ ಮಾರಾಟಗಾರರ ಮುಷ್ಕರ]

Three meat sellers in Muzaffarnagar turn to tea business

ರಾಜ್ಯದಲ್ಲಿ ಅಕ್ರಮ ಕಸಾಯಿಖಾನೆಗಳನ್ನು ತಕ್ಷಣವೇ ಮುಚ್ಚಬೇಕೆಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಂಗಳವಾರ (ಮಾರ್ಚ್ 28) ಆದೇಶ ಹೊರಡಿಸಿದ್ದರು.

ಇದರಿಂದ ಮಾಂಸ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಇಲ್ಲಿನ ಜನರು ಅನಿವಾರ್ಯವಾಗಿ ಬೇರೆ ಉದ್ಯೋಗಗಳಲ್ಲಿ ತೊಡಿಗಿಕೊಳ್ಳುತ್ತಿದ್ದಾರೆ.

ಹೊಸದಾಗಿ ಬಂದಿರುವ ಬಿಜೆಪಿ ಸರ್ಕಾರವು ತಮ್ಮನ್ನು ಗುರಿಯಾಗಿಸಿ ತಮ್ಮ ಮೇಲೆ ದರ್ಪ ಪ್ರದರ್ಶಿಸುತ್ತಿದೆ ಎಂದು ಆರೋಪಿಸಿ ಮುಸ್ಕರ ಸಹ ನಡೆಸಿದ್ದರು.

ಏನೇ ಆಗಲಿ ಯೋಗಿ ಆದಿತ್ಯನಾಥ್ ಅಧಿಕಾರ ಸ್ವೀಕರಿಸದ ಬಳಿಕ ಎಲ್ಲಾ ಅಕ್ರಮಗಳಿಗೆ ಕಡಿವಾಣ ಬೀಳುತ್ತಿರುವುದರಂತೂ ಸತ್ಯ.

English summary
Uttar Pradesh chief minister Yogi Adityanath effect, three meat sellers in Muzaffarnagar turn to tea business.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X