ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರದಲ್ಲಿ ಹಿಮಪಾತ: ಮೂರು ಸೈನಿಕರು ನಾಪತ್ತೆ

|
Google Oneindia Kannada News

ಬಂಡಿಪೊರ, ಡಿಸೆಂಬರ್ 12: ಕಾಶ್ಮೀರದ ಬಂಡಿಪೊರದಲ್ಲಿ ಹಿಮಪಾತ ಸಂಭವಿಸಿದ್ದು, ಮೂವರು ಸೈನಿಕರು ನಾಪತ್ತೆಯಾಗಿದ್ದಾರೆ. ಮೂವರೂ ಹಿಮದೊಳಗೆ ಸಿಲುಕಿರಬಹುದು ಎಂದು ಶಂಕಿಸಲಾಗಿದೆ.

ಗಡಿನಿಯಂತ್ರಣ ರೇಖೆ ಬಳಿಯ ಬಾಗ್ಟೂರ್ ಗುರೇಜ್ ಸೆಕ್ಟರ್ ಬಳಿ ಹಿಮಪಾತ ಸಂಭವಿಸಿದೆ.

ಇನ್ನೂ ಚಿಂತಾಜನಕ ಸ್ಥಿತಿಯಲ್ಲಿ ಹನುಮಂತಪ್ಪ ಕೊಪ್ಪದ್ ಇನ್ನೂ ಚಿಂತಾಜನಕ ಸ್ಥಿತಿಯಲ್ಲಿ ಹನುಮಂತಪ್ಪ ಕೊಪ್ಪದ್

ಕಳೆದ ರಾತ್ರಿ(ಡಿ.11)ಯಿಂದ ಮೂವರು ಸೈನಿಕರು ನಾಪತ್ತೆಯಾಗಿದ್ದು, ಅವರ ಪತ್ತೆಕಾರ್ಯ ನಡೆಯುತ್ತಿದೆ.

Three jawans missing amid heavy snowfall in Kashmir

ಜಮ್ಮು ಕಾಶ್ಮೀರದ ರಾಜೌರಿ ಮತ್ತು ಶ್ರೀನಗರದಲ್ಲಿ ಹಿಮಮಳೆ ಆರಂಭವಾಗಿರುವ ಕಾರಣ ಇಲ್ಲಿನ ದಾರಿಯನ್ನು ಮುಚ್ಚಲಾಗಿದೆ. ವಾಹನ ಸಂಚಾರಕ್ಕೆ ತಡೆಯೊಡ್ಡಲಾಗಿದೆ. ಹಿಮಾಚಲ ಪ್ರದೇಶದ ಮನಾಲಿಯ ಸೊಲಾಂಗ್ ಕಣಿವೆಯಲ್ಲೂ ಹಿಮಮಳೆಯಾಗಿದೆ. ಇದೇ ವರ್ಷ ಜನವರಿಯಲ್ಲಿ ಸಂಭವಿಸಿದ್ಧ ಭೀಕರ ಹಿಮಪಾತಕ್ಕೆ 15 ಯೋಧರು ಹುತಾತ್ಮರಾಗಿದ್ದರು.

ಹಿಮದಡಿ ಸಿಕ್ಕ ವೀರ ಯೋಧರ ಜೀವಕ್ಕಾಗಿ ಪ್ರಾರ್ಥಿಸಿಹಿಮದಡಿ ಸಿಕ್ಕ ವೀರ ಯೋಧರ ಜೀವಕ್ಕಾಗಿ ಪ್ರಾರ್ಥಿಸಿ

2016 ರ ಫೆಬ್ರವರಿಯಲ್ಲಿ ಸಿಯಾಚಿನ್ ನಲ್ಲಿ ಸಂಭವಿಸಿದ ಹಿಮಪಾತದಲ್ಲಿ 30 ಅಡಿ ಆಳದ ಹಿಮದಡಿಯಲ್ಲಿ, -45 ಡಿಗ್ರಿ ಕೊರೆವ ಚಳಿಯಲ್ಲಿ ಆರು ದಿನಗಳ ಕಾಲ ಬದುಕಿದ್ದು, ನಂತರ ಬಹು ಅಂಗಾಂಗ ವೈಫಲ್ಯದಿಂದ ಫೆಬ್ರವರಿ 11 ರಂದು ದೆಹಲಿಯ ಆಸ್ಪತ್ರೆಯಲ್ಲಿ ಹುತಾತ್ಮರಾದ ಹುಬ್ಬಳ್ಳಿಯ ಲಾನ್ಸ್ ನಾಯಕ್ ಹನುಮಂತಪ್ಪ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು

English summary
Three army jawans went missing at Mani Post Bagtoor Gurez sector of Line of Control (LoC) in Jammu and Kashmir's Bandipora district due to snow avalanche. They went missing after the night temperature at most places in Kashmir division, including Ladakh, dropped last night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X