ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರಬ್ಬಿ ಸಮುದ್ರದಲ್ಲಿ ಭಾರತ-ಜಪಾನ್ ಜಂಟಿ ಸಮರಾಭ್ಯಾಸ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 26: ಭಾರತ ಮತ್ತು ಜಪಾನ್ ನಡುವಿನ ದ್ವಿಪಕ್ಷೀಯ ಸಾಗರ ಸಮರಾಭ್ಯಾಸ ಜಿಮೆಕ್ಸ್‌ನ ನಾಲ್ಕನೆಯ ಆವೃತ್ತಿಯು ಸೆ. 26 ರಿಂದ 28ವರೆಗೆ ನಡೆಯುತ್ತಿದೆ. ಭಾರತೀಯ ನೌಕಾ ಪಡೆ ಮತ್ತು ಜಪಾನ್ ಸಾಗರ ಸ್ವಯಂ ರಕ್ಷಣಾ ದಳ (ಜೆಐಎಂಎಸ್‌ಡಿಎಫ್) ಜತೆಗೂಡಿ ಉತ್ತರ ಅರಬ್ಬಿ ಸಮುದ್ರದಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ಈ ಜಂಟಿ ಸಾಗರ ಸಮರಾಭ್ಯಾಸ ನಡೆಸುತ್ತವೆ.

ಕಡಲ ಭದ್ರತಾ ಸಹಕಾರದ ಮೇಲೆ ವಿಶೇಷ ಗಮನ ಹರಿಸುವ ಸಲುವಾಗಿ 2012ರ ಜನವರಿಯಲ್ಲಿ ಜಿಮೆಕ್ಸ್ ಸರಣಿಯ ಸಮರಾಭ್ಯಾಸವನ್ನು ಆರಂಭಿಸಲಾಗಿತ್ತು. ಕಳೆದ ಆವೃತ್ತಿಯು 2018ರ ಅಕ್ಟೋಬರ್‌ನಲ್ಲಿ ವಿಶಾಖಪಟ್ಟಣದಲ್ಲಿ ನಡೆದಿತ್ತು.

ಚೀನಾದ ವಿರುದ್ಧ ಯುದ್ಧದ ರಣ ತಂತ್ರಕ್ಕೆ ಭಾರತದ ಜತೆ ನಿಂತ ಜಪಾನ್ ಚೀನಾದ ವಿರುದ್ಧ ಯುದ್ಧದ ರಣ ತಂತ್ರಕ್ಕೆ ಭಾರತದ ಜತೆ ನಿಂತ ಜಪಾನ್

ಭಾರತ ಮತ್ತು ಜಪಾನ್ ನಡುವೆ ನೌಕಾ ಸಹಕಾರವು ಕಳೆದ ಕೆಲವು ವರ್ಷಗಳಿಂದ ಪ್ರಗತಿ ಕಂಡಿದೆ. ಜಿಮೆಕ್ಸ್-20 ವೇಳೆ ಅತ್ಯಾಧುನಿಕ ಮಟ್ಟದ ಕಾರ್ಯಾಚರಣೆ ಹಾಗೂ ಸಮರಾಭ್ಯಾಸವನ್ನು ಯೋಜಿಸಲಾಗಿದೆ. ಈ ಮೂಲಕ ಭಾರತ-ಜಪಾನ್ ರಕ್ಷಣಾ ಸಂಬಂಧವನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ. ಅಂತಾರಾಷ್ಟ್ರೀಯ ನಿಯಮಾವಳಿಗೆ ಅನುಗುಣವಾಗಿ ಮತ್ತಷ್ಟು ಭದ್ರ, ಮುಕ್ತ ಹಾಗೂ ಜಾಗತಿಕ ಸಮುದಾಯವನ್ನು ಒಳಗೊಳ್ಳುವ ಸಲುವಾಗಿ ಉಭಯ ಸರ್ಕಾರಗಳು ಹತ್ತಿರದಿಂದ ಕೆಲಸ ಮಾಡುವ ಪ್ರಯತ್ನಗಳನ್ನು ನಡೆಸುತ್ತಿವೆ ಎಂದು ನೌಕಾಪಡೆ ಹೇಳಿಕೆ ತಿಳಿಸಿದೆ.

Three Days India-Japan Bilateral Maritime Exercise Jimex 20 In Arabian Sea

ಕಡಲ ಕಾರ್ಯಾಚರಣೆಯಲ್ಲಿ ಉನ್ನತ ಮಟ್ಟದ ಅಂತರ್ ಶಸ್ತ್ರಕ್ರಿಯಾ ಸಾಮರ್ಥ್ಯವನ್ನು ಮತ್ತು ಬಹು ವಿಧದ ಅತ್ಯಾಧುನಿಕ ಅಭ್ಯಾಸದ ಮೂಲಕ ಜಂಟಿ ಕಾರ್ಯಾಚರಣೆಯ ಕೌಶಲವನ್ನು ಪ್ರದರ್ಶಿಸುವ ವೇದಿಕೆಯಾಗಿದೆ. ಉಭಯ ದೇಶಗಳ ನೌಕಾಪಡೆಗಳು ಅಭಿವೃದ್ಧಿಪಡಿಸಿದ ಸಂಯೋಜನೆಯಡಿ ಶಸ್ತ್ರಾಸ್ತ್ರಗಳ ಉಡಾವಣೆ, ಕ್ರಾಸ್ ಡೆಕ್ ಹಲಿಕಾಪ್ಟರ್ ಕಾರ್ಯಾಚರಣೆ, ಜಲಾಂತರ್ಗಾಮಿ ನಿಗ್ರಹ, ವೈಮಾನಿಕ ಯುದ್ಧ ಅಭ್ಯಾಸಗಳು ಜಿಮೆಕ್ಸ್ 20ರಲ್ಲಿ ನಡೆಯಲಿವೆ.

ಚೀನಾದಿಂದ ಭಾರತಕ್ಕೆ ಶಿಫ್ಟ್‌ ಆಗುವ ಕಂಪನಿಗಳಿಗೆ ಜಪಾನ್ ಪ್ರೋತ್ಸಾಹ..!ಚೀನಾದಿಂದ ಭಾರತಕ್ಕೆ ಶಿಫ್ಟ್‌ ಆಗುವ ಕಂಪನಿಗಳಿಗೆ ಜಪಾನ್ ಪ್ರೋತ್ಸಾಹ..!

ಮೂರು ದಿನಗಳ ಕಾಲ ಜಿಮೆಕ್ಸ್ 20 ನಡೆಯಲಿದ್ದು, ಕೊರೊನಾ ವೈರಸ್ ಪಿಡುಗಿನ ಕಾರಣದಿಂದ ಉಭಯ ದೇಶಗಳ ನೌಕಾ ಪಡೆಗಳು ಪರಸ್ಪರ ಸಂಪರ್ಕಕ್ಕೆ ಬಾರದೆ ಸಮುದ್ರದಲ್ಲಿ ಅಭ್ಯಾಸ ನಡೆಸಲಿವೆ.

Recommended Video

ಇದೆ ಕಾರಣಕ್ಕೆ ವಿಶ್ವಸಂಸ್ಥೆಯಲ್ಲಿ ಇಮ್ರಾನ್ ಖಾನ್ ಗೆ ಮುಜುಗರ ಆಗಿದು | Oneindia Kannada

ಸ್ವದೇಶಿ ನಿರ್ಮಿತ ಗುಪ್ತ ನಾಶ ನೌಕೆ ಚೆನ್ನೈ, ತರ್ಕಾಶ್ ಮತ್ತು ದೀಪಕ್ ನೌಕೆಗಳು ರಿಯರ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಯಲಿವೆ. ಜಪಾನ್‌ನ ಜೆಎಂಎಸ್‌ಡಿಎಫ್ ನೌಕೆ ಕಾಗಾ, ಹೆಲಿಕಾಪ್ಟರ್ ವಿಧ್ವಂಸಕ ಇಜುಮೋ ಮತ್ತು ಕ್ಷಿಪಣಿ ವಿಧ್ವಂಸಕ ಇಕಾಜುಚಿ ಪಾಲ್ಗೊಳ್ಳಲಿವೆ.

English summary
India and Japan Navies conducting their fourth bilateral maritime exercise Jimex 20 in North Arabian Sea.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X