ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಯಾಕೇಜ್‌ನಲ್ಲಿ ಫಾರಿನ್ ಟೂರ್‌ಗೆ ಹೋಗುವವರಿಗೆ ಐಟಿ ಶಾಕ್

|
Google Oneindia Kannada News

ನವದೆಹಲಿ, ಫೆಬ್ರವರಿ 22: ಪ್ಯಾಕೇಜಿನಲ್ಲಿ ವಿದೇಶ ಪ್ರವಾಸ ಹೋಗುವವರಿಗೆ ಐಟಿ ಶಾಕ್ ನೀಡಿದೆ.

ಏಪ್ರಿಲ್ 1ರಿಂದ ಯಾರೇ ವಿದೇಶಕ್ಕೆ ಪ್ಯಾಕೇಜ್ ಟೂರ್ ಹೋದರೂ ಟಿಸಿಎಸ್(ಟ್ಯಾಕ್ಸ್ ಕಲೆಕ್ಷನ್ ಅಟ್ ಸೋರ್ಸ್) ಕಟ್ಟಬೇಕು. ವಾರ್ಷಿಕ ಏಳು ಲಕ್ಷ ರೂ. ವರೆಗೆ ವೆಚ್ಚ ಮಾಡಿ ಪ್ರವಾಸಕ್ಕೆ ಹೋಗುವವರು , ಪ್ಯಾನ್ ಕಾರ್ಡ್ ಹೊಂದಿದ್ದರೆ ಶೇ.5, ಇಲ್ಲದಿದ್ದರೆ ಶೇ.10 ರಷ್ಟು ಟಿಸಿಎಸ್ ಪಾವತಿಸಬೇಕು ಎಂದು ಫೆ.1 ರಂದು ಮಂಡನೆ ಮಾಡಿದ ಬಜೆಟ್‌ನಲ್ಲಿ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಪ್ರಸ್ತಾಪ ಮಾಡಿದ್ದರು.

ಬೆಂಗಳೂರಿಗೆ ಬರುತ್ತಿದ್ದ ಗೋಏರ್ ವಿಮಾನದಲ್ಲಿ ಬೆಂಕಿಬೆಂಗಳೂರಿಗೆ ಬರುತ್ತಿದ್ದ ಗೋಏರ್ ವಿಮಾನದಲ್ಲಿ ಬೆಂಕಿ

 ಪ್ಯಾಕೇಜ್ ಟೂರ್ ಆಯೋಜಿಸುವಾತ ಟಿಸಿಎಸ್ ಸಂಗ್ರಹಿಸಬೇಕು

ಪ್ಯಾಕೇಜ್ ಟೂರ್ ಆಯೋಜಿಸುವಾತ ಟಿಸಿಎಸ್ ಸಂಗ್ರಹಿಸಬೇಕು

ಪ್ಯಾಕೇಜ್ ಟೂರ್ ಆಯೋಜಿಸುವಾತ ಟಿಸಿಎಸ್ ಸಂಗ್ರಹಿಸಬೇಕು ಎಂಬ ಅಂಶ ಬಜೆಟ್‌ನಲ್ಲಿದ್ದು, ತೆರಿಗೆ ಸಲಹೆಗಾರರುಇದನ್ನು ಪತ್ತೆ ಮಾಡಿದ್ದಾರೆ.

ಮೊದಲು, ಹಲವು ಮಂದಿ ಆದಾಯ ತೆರರಿಗೆಯನ್ನೇ ಘೋಷಿಸಿಕೊಳ್ಳುವುದಿಲ್ಲ.
 ತೆರಿಗೆ ಕಟ್ಟುವಷ್ಟು ಆದಾಯವಿಲ್ಲವೆಂಬ ನೆಪ

ತೆರಿಗೆ ಕಟ್ಟುವಷ್ಟು ಆದಾಯವಿಲ್ಲವೆಂಬ ನೆಪ

ತೆರಿಗೆ ಕಟ್ಟುವಷ್ಟು ಆದಾಯ ಇಲ್ಲ ಎಂಬ ನೆಪ ಹೇಳುತ್ತಾರೆ. ಆದರೆ ಪ್ಯಾಕೇಜ್‌ ಮೇಲೆ ವಿದೇಶ ಪ್ರವಾಸ ಮಾಡುತ್ತಾರೆ. ಇನ್ನುಮುಂದೆ ಅಂಥವರ ವಿವರ ಸರ್ಕಾರಕ್ಕೆ ಸುಲಭವಾಗಿ ಲಭ್ಯವಾಗಲಿದೆ. ಬೇರೆಯವರ ಹಣದಲ್ಲಿ ಪ್ರವಾಸ ಹೋಗುವ ಸರ್ಕಾರಿ ಅಧಿಕಾರಿಗಳು , ಕಂಪನಿಗಳ ಮುಖ್ಯಸ್ಥರು , ವೈದ್ಯರ ವಿವರ ಸರ್ಕಾರಕ್ಕೆ ಲಭ್ಯವಾಗಲಿದೆ.

 ಕಪ್ಪು ಹಣ ಬಳಸಿ ವಿದೇಶ ಪ್ರವಾಸಕ್ಕೆ ತಡೆ

ಕಪ್ಪು ಹಣ ಬಳಸಿ ವಿದೇಶ ಪ್ರವಾಸಕ್ಕೆ ತಡೆ

ಕಪ್ಪುಹಣ ಬಳಸಿ ಬೇರೆಯವರನ್ನು ವಿದೇಶಕ್ಕೆ ಕಳುಹಿಸುವವರೂ ಸಿಕ್ಕಿ ಬೀಳಲಿದ್ದಾರೆ.ವಾರ್ಷಿಕ ಏಳು ಲಕ್ಷ ರೂ. ವರೆಗೆ ವೆಚ್ಚ ಮಾಡಿ ಪ್ರವಾಸಕ್ಕೆ ಹೋಗುವವರು , ಪ್ಯಾನ್ ಕಾರ್ಡ್ ಹೊಂದಿದ್ದರೆ ಶೇ.5, ಇಲ್ಲದಿದ್ದರೆ ಶೇ.10 ರಷ್ಟು ಟಿಸಿಎಸ್ ಪಾವತಿಸಬೇಕು

 ರೀಫಂಡ್ ಆಯ್ಕೆ ಇದೆ

ರೀಫಂಡ್ ಆಯ್ಕೆ ಇದೆ

ಐದು ಲಕ್ಷ ರೂ. ಒಳಗೆ ಆದಾಯ ಇರುವವರು ವಿದೇಶಕ್ಕೆ ಪ್ಯಾಕೇಜ್ ಪ್ರವಾಸ ಹೋಗುವಾಗ ಟಿಸಿಎಸ್ ಪಾವತಿಸಿದರೆ , ಅದನ್ನು ರೀಫಂಡ್ ಪಡೆಯಬಹುದಾಗಿದೆ. ಟಿಸಿಎಸ್ ಸಂಗ್ರಹ ಮಾಡುವುದರಿಂದ ವಿದೇಶ ಪ್ರವಾಸಕ್ಕೆ ಹೋಗಿದ್ದಾತನ ನೈಜ ಆದಾಯ ಹಾಗೂ ಆತನ ಐಷಾರಾಮಿ ಜೀವನದ ಮಾಹಿತಿ ತೆರಿಗೆ ಅಧಿಕಾರಿಗಳಿಗೆ ಸುಲಭವಾಗಿ ಲಭ್ಯವಾಗಲಿದೆ.

English summary
Income Tax Department Given Shock to Those Who travelling Foreing From the packages.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X