ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕು ಯುವಕರಿಗೆ ಹೆಚ್ಚು ತಗುಲಿದೆ :ಊಹೆ ತಳ್ಳಿ ಹಾಕಿದ ಕೇಂದ್ರ

|
Google Oneindia Kannada News

ನವದೆಹಲಿ, ಜೂನ್ 16: ಕೊರೊನಾ ಮೊದಲ ಅಲೆಯಲ್ಲಿ ಹಿರಿಯರಿಗೆ ಹೆಚ್ಚಿನ ಸೋಂಕು ತಗುಲಿದ್ದು, ಎರಡನೇ ಅಲೆಯಲ್ಲಿ ಯುವಕರಿಗೆ ಹೆಚ್ಚಿನ ಸೋಂಕು ತಗುಲಿದೆ ಎನ್ನುವ ಊಹೆಯನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದೆ.

ಎರಡೂ ಅಲೆಗಳಲ್ಲಿ 1-20 ವಯಸ್ಸಿನ ಶೇ.12 ಮಂದಿಗಿಂತ ಕಡಿಮೆ ಜನರಲ್ಲಿ ಕೊರೊನಾ ಸೋಂಕು ವರದಿಯಾಗಿದೆ ಎಂದು ಹೇಳಿದೆ.

ಕೊರೊನಾ ಲಸಿಕೆ ಡೋಸ್‌ಗಳ ನಡುವಿನ ಅಂತರ: ವಿಜ್ಞಾನಿಗಳ ಶಿಫಾರಸು ಏನಾಗಿತ್ತು?ಕೊರೊನಾ ಲಸಿಕೆ ಡೋಸ್‌ಗಳ ನಡುವಿನ ಅಂತರ: ವಿಜ್ಞಾನಿಗಳ ಶಿಫಾರಸು ಏನಾಗಿತ್ತು?

ಮೇ.10 ರಂದು ದೇಶಾದ್ಯಂತ ವರದಿಯಾಗಿದ್ದ ಅತಿ ಹೆಚ್ಚು ಕೊರೊನಾ ಪ್ರಕರಣಗಳ ಪೈಕಿ ಸಕ್ರಿಯ ಪ್ರಕರಣಗಳಲ್ಲಿ ಶೇ.75.6 ರಷ್ಟು ಕುಸಿತ ಕಂಡಿದೆ ಎಂದು ಸರ್ಕಾರ ಹೇಳಿದೆ.

 ಎರಡನೇ ಅಲೆಯಲ್ಲಿ ಎಷ್ಟು ಮಂದಿಗೆ ಸೋಂಕು

ಎರಡನೇ ಅಲೆಯಲ್ಲಿ ಎಷ್ಟು ಮಂದಿಗೆ ಸೋಂಕು

ಕೊರೊನಾ ಎರಡನೇ ಅಲೆಯಲ್ಲಿ 1-20 ವರ್ಷದ ಶೇ.11.62 ಮಂದಿಗೆ ಸೋಂಕು ತಗುಲಿದ್ದರೆ (ಮಾರ್ಚ್ 15- ಮೇ 25 ವರೆಗೆ) ಮೊದಲ ಅಲೆಯಲ್ಲಿ (ಜುಲೈ 1-ಡಿಸೆಂಬರ್-31) ವರೆಗೆ ಇದೇ ವಯಸ್ಸಿನ ಶೇ.11.31 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಎರಡೂ ಅಲೆಯಲ್ಲಿ ಈ ವಯಸ್ಸಿನ ಗುಂಪಿನ ಜನರಿಗೆ ಸೋಂಕು ತಗುಲಿರುವ ಪ್ರಮಾಣದಲ್ಲಿ ಹೆಚ್ಚಿನ ಅಂತರವಿಲ್ಲ ಎಂದು ಸರ್ಕಾರ ಅಂಕಿ-ಅಂಶ ಸಹಿತವಾಗಿ ಮಾಹಿತಿ ನೀಡಿದೆ.

 ಎರಡೂ ಅಲೆಗಳಲ್ಲಿ ತೊಂದರೆ ಅನುಭವಿಸಿದವರು

ಎರಡೂ ಅಲೆಗಳಲ್ಲಿ ತೊಂದರೆ ಅನುಭವಿಸಿದವರು

ಸರ್ಕಾರಿ ಅಂಕಿ-ಅಂಶಗಳ ಪ್ರಕಾರ 21-50 ವಯಸ್ಸಿನವರೇ ಎರಡೂ ಅಲೆಗಳಲ್ಲಿ ಅತಿ ಹೆಚ್ಚು ಬಾಧಿತರು ಎಂದು ತಿಳಿದುಬಂದಿದ್ದು ಈ ವಯಸ್ಸಿನ ಶೇ.59.74 ರಷ್ಟು ಮಂದಿಗೆ ಮೊದಲ ಅಲೆಯಲ್ಲಿ ಸೋಂಕು ತಗುಲಿತ್ತು, ಎರಡನೇ ಅಲೆಯಲ್ಲಿ ಇದೇ ವಯಸ್ಸಿನ ಶೇ.62.45 ರಷ್ಟು ಮಂದಿಗೆ ಸೋಂಕು ತಗುಲಿದೆ. 61 ರ ವಯಸ್ಸಿನ ಮೇಲ್ಪಟ್ಟ ಜನರಲ್ಲಿ ಶೇ.13.89 ರಷ್ಟು ಮಂದಿಗೆ ಮೊದಲ ಅಲೆಯಲ್ಲಿ ಸೋಂಕು ಬಾಧಿಸಿದ್ದರೆ ಶೇ.12.58 ರಷ್ಟು ಮಂದಿಗೆ ಎರಡನೇ ಅಲೆಯಲ್ಲಿ ಕೊರೊನಾ ಸೋಂಕು ತಗುಲಿದೆ.

 ಮಕ್ಕಳಿಗೆ ಸೋಂಕು ತಗುಲುವ ಬಗ್ಗೆ ಸಾಕ್ಷ್ಯಾಧಾರಗಳಿಲ್ಲ

ಮಕ್ಕಳಿಗೆ ಸೋಂಕು ತಗುಲುವ ಬಗ್ಗೆ ಸಾಕ್ಷ್ಯಾಧಾರಗಳಿಲ್ಲ

ಮೂರನೇ ಅಲೆಯಲ್ಲಿ ಮಕ್ಕಳು ಅತಿ ಹೆಚ್ಚು ಕೊರೊನಾ ಸೋಂಕಿಗೆ ಗುರಿಯಾಗಲಿದ್ದಾರೆ ಎಂಬ ಭೀತಿಯ ಬಗ್ಗೆ ಮಾಹಿತಿ ನೀಡಿರುವ ಲವ್ ಅಗರ್ವಾಲ್, ''ಇದಕ್ಕೆ ಯಾವುದೇ ಸೂಕ್ತ ಸಾಕ್ಷ್ಯಾಧಾರಗಳೂ ಇಲ್ಲ'' ಎಂದು ಹೇಳಿದ್ದಾರೆ. ಆದರೆ ಎಲ್ಲಾ ವಯಸ್ಸಿನವರೂ ಮೂರನೇ ಅಲೆಯ ಬಗ್ಗೆ ಎಚ್ಚರದಿಂದ ಇರಬೇಕೆಂದು ಹೇಳಿದ್ದಾರೆ. ಇನ್ನು ದೇಶದಲ್ಲಿ ಕೋವಿಡ್-19 ಪರಿಸ್ಥಿತಿ ಸುಧಾರಣೆಯಾಗುತ್ತಿದ್ದು, ದಿನನಿತ್ಯದ ಪ್ರಕರಣಗಳಲ್ಲಿ ಶೇ.85 ರಷ್ಟು ಇಳಿಕೆ ಕಂಡಿದೆ.

 11-20ವರ್ಷದವರು ಎಷ್ಟು ಮಂದಿಗೆ ಸೋಂಕು ತಗುಲಿದೆ

11-20ವರ್ಷದವರು ಎಷ್ಟು ಮಂದಿಗೆ ಸೋಂಕು ತಗುಲಿದೆ

ಇನ್ನು 11-20 ವಯಸ್ಸಿನ ಶೇ.8.03 ಮಂದಿ ಮೊದಲ ಅಲೆಯಲ್ಲಿ ಕೊರೊನಾ ಪೀಡಿತರಾಗಿದ್ದರೆ, ಎರಡನೇ ಅಲೆಯಲ್ಲಿ ಶೇ.8.57 ರಷ್ಟು ಮಂದಿ ಕೊರೊನಾ ಪೀಡಿತರಾಗಿದ್ದಾರೆ.

 ಕೊರೊನಾ ಎರಡನೇ ಅಲೆ

ಕೊರೊನಾ ಎರಡನೇ ಅಲೆ

ಮೊದಲ ಹಾಗೂ ಎರಡನೇ ಅಲೆಯಲ್ಲಿ ಸೋಂಕಿಗೆ ಗುರಿಯಾದವರ ವಯಸ್ಸಿನ ಅಂಕಿ-ಅಂಶಗಳನ್ನು ವಿಶ್ಲೇಷಿಸಿರುವ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್, ''1-10 ವರ್ಷದ ಶೇ.3.28 ರಷ್ಟು ಮಂದಿಗೆ ಮೊದಲ ಅಲೆಯಲ್ಲಿ ಕೊರೊನಾ ಬಂದಿತ್ತು, ಎರಡನೇ ಅಲೆಯಲ್ಲಿ ಈ ವಿಭಾಗದ ಶೇ.3.05 ಮಂದಿಗೆ ಕೊರೊನಾ ಬಂದಿದೆ'' ಎಂದು ಹೇಳಿದ್ದಾರೆ.

English summary
Dismissing assumptions that children and the younger population were more affected in the second wave of Covid, the government on Tuesday said those in the 1-20 age group accounted for less than 12 per cent of the cases recorded during both the waves.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X