ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಮುಸ್ಲಿಂ ಕುಟುಂಬದಲ್ಲಿ 30ನೇ ಕೃಷ್ಣ ಜನ್ಮಾಷ್ಟಮಿ ಸಂಭ್ರಮ

By Mahesh
|
Google Oneindia Kannada News

ಕಾನ್ಪುರ್, ಆಗಸ್ಟ್ 25: ಉತ್ತರಪ್ರದೇಶದ ಕಾನ್ಪುರ ನಿವಾಸಿ ಡಾ. ಎಸ್. ಅಹ್ಮದ್ ಅವರ ಕುಟುಂಬದಲ್ಲಿ ಇಂದು 30ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚಾಣೆ. ಹಿಂದೂಗಳ ಪಾಲಿನ ಪರಮ ದೈವ ಕೃಷ್ಣನ ಆರಾಧನೆಯಿಂದ ಸಂತೃಪ್ತಿ ಸಿಕ್ಕಿದೆ ಎಂಡು ಡಾ. ಅಹ್ಮದ್ ಹೇಳಿದ್ದಾರೆ.

ವಸುದೈವ ಕುಟುಂಬಕಂ ಎಂಬ ಶ್ರೀ ಕೃಷ್ಣನ ತತ್ವದಿಂದ ಪ್ರಭಾವಿತವಾದ ಮುಸ್ಲಿಂ ಕುಟುಂಬ ಕಳೆದ 29 ವರ್ಷದಿಂದ ಕೃಷ್ಣಜನ್ಮಾಷ್ಟಮಿಯನ್ನು ನಿರಂತವಾಗಿ ಆಚರಿಸುತ್ತಾ ಬಂದಿದೆ. [ಜನ್ಮಾಷ್ಟಮಿ ವಿಶೇಷ: ಭಕ್ತಾದಿಗಳ ಮನೆ ಮನಗಳಲ್ಲಿ ಕೃಷ್ಣನಾಮ]

This Muslim Family From Kanpur Celebrate Janmashtami For The 30th Year Today

ನನಗೆ ಮತಾಂಧತೆಯಲ್ಲಿ ನಮಗೆ ನಂಬಿಕೆ ಇಲ್ಲ. ಆದ್ದರಿಂದ ಕುಟುಂಬ ಸದಸ್ಯರೊಡನೆ ಸಂತೋಷದಿಂದ ಶ್ರೀ ಕೃಷ್ಣನನ್ನು ಆರಾಧಿಸುತ್ತಾ ಬಂದಿದ್ದೇವೆ. ಈ ಕಾರ್ಯಕ್ಕೆ ಸ್ನೇಹಿತರು, ಬಂಧುಗಳು ಹಾಗೂ ನೆರೆ ಹೊರೆಯವರು ಮೆಚ್ಚುಗೆ ವ್ಯಕ್ತಪಡಿಸಿ, ತಾವೂ ಈ ಸಂತೋಷದಲ್ಲಿ ಕೈ ಜೋಡಿಸಿದ್ದಾರೆ. ಈ ಸಲ 30ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ. ಕೃಷ್ಣ ಪರಮಾತ್ಮ ಸಂತೋಷ, ಸಮೃದ್ಧಿಯ ಜೊತೆಗೆ ಸಮಸ್ತರಿಗೂ ಪ್ರೀತಿ, ಶಾಂತಿ ಹಾಗೂ ಭ್ರಾತೃತ್ವ ಭಾವನೆಯನ್ನು ಕರುಣಿಸಲು ಎಂದು ನಾವು ಪ್ರಾರ್ಥಿಸುತ್ತೇವೆ ಎಂದು ತಿಳಿಸಿದ್ದಾರೆ.[Exclusive : ಮೊಬೈಲಿನಲ್ಲೇ ಓದಿ ದಾಸ ವರೇಣ್ಯರ ಸಾಹಿತ್ಯ]

ಮಂದಿರ, ಮಸೀದಿ, ಗುರುದ್ವಾರಗಳು ದೇವರನ್ನು ವಿಂಗಡಿಸಿಬಿಟ್ಟಿವೆ. ನನಗೆ ಮತ್ತು ನನ್ನ ಕುಟುಂಬದವರಿಗೆ ಕೃಷ್ಣನಲ್ಲಿ ಶ್ರದ್ಧೆ, ಭಕ್ತಿ ಇದೆ. ನನ್ನ ಕುಟುಂಬದ ಸಂತೋಷ ನೆಮ್ಮದಿಯ ಜೊತೆಗೆ ನೆರೆಹೊರೆಯಲ್ಲೂ ಪ್ರೀತಿ, ಶಾಂತಿ ಹಾಗೂ ಸೌಹಾರ್ದತೆ ನೆಲೆಸಲಿ ಅನ್ನೋ ಸಂದೇಶ ಸಾರುವುದಕ್ಕಾಗಿ ಜನ್ಮಾಷ್ಟಮಿ ಆಚರಿಸುತ್ತೇವೆ ಎಂದು ಅಹ್ಮದ್ ಹೇಳಿದ್ದಾರೆ.

ಮಥುರಾದ ಸ್ಥಳೀಯ ಮುಸ್ಲಿಂ ನಿವಾಸಿಗಳು ಕೂಡಾ ಕೃಷ್ಣ ಜನ್ಮಾಷ್ಟಮಿ ಆಚರಿಸುತ್ತಾರೆ. ನಾವು ಮತ್ತು ಹಿಂದೂ ಬಾಂಧವರು ಸೋದರರಂತೆ ಇರುತ್ತೇವೆ. ಕೋಮು ಗಲಭೆಗೆ ಕಾರಣರಾಗುವುದು ರಾಜಕಾರಿಣಿಗಳು. ದೇಶದ ಯಾವುದೇ ಭಾಗದಲ್ಲೂ ಕೋಮು ಗಲಭೆ ನಡೆದರೂ ನಮ್ಮ ಸಂಬಂಧದ ನಡುವೆ ಯಾವುದೇ ಒಡಕು ಉಂಟಾಗುವುದಿಲ್ಲ ಎನ್ನುತ್ತಾರೆ.

English summary
A Muslim family in Kanpur, Uttar Pradesh, has become an epitome of communal harmony as they have been celebrating Krishna Janmashtami for the last 29 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X