ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Viral video: ಫರಿದಾಬಾದ್ ಬೀದಿಯಲ್ಲಿ ಈ ಪುಟ್ಟ ಪೋರನ ಫುಡ್ ಭಾರಿ ಫೇಮಸ್

|
Google Oneindia Kannada News

ಫರಿದಾಬಾದ್ ನವೆಂಬರ್ 24: ಫುಡ್ ಸ್ಟ್ರೀಟ್‌ಗಳಲ್ಲಿ ಮಾರಾಟವಾಗುವ ಫುಡ್‌ಗಳು ಯಾವಾಗಲೂ ಚರ್ಚೆಯಲ್ಲಿರುತ್ತವೆ. ಅದರಲ್ಲೂ ಕೆಲ ಸ್ಥಳಗಳಲ್ಲಿ ಸಿಗುವ ತಿನಿಸುಗಳನ್ನು ತಿನ್ನಲು ಜನ ಹುಡುಕಿಕೊಂಡು ಬರ್ತಾರೆ ಅನ್ನೋದು ಮಾತ್ರ ಸುಳ್ಳಲ್ಲ. ಹೀಗೆ ಫರಿದಾಬಾದ್ ಬೀದಿ ಪುಟ್ಟ ವ್ಯಾಪಾರಿಯೊಬ್ಬರು ತಾವು ತಯಾರಿಸುವ ಫುಡ್‌ನಿಂದ ಭಾರೀ ಫೇಮಸ್ ಆಗಿದ್ದಾರೆ. 13 ವರ್ಷದ ಈ ಪುಟ್ಟ ಪೋರ ತಯಾರಿಸುವ ಖಾದ್ಯಕ್ಕೆ ಎಲ್ಲಿಲ್ಲದ ಬೇಡಿಕೆ ಇದೆ. ಜೊತೆಗೆ ಈ ಹುಡುಗನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

13 ವರ್ಷದ ಫರಿದಾಬಾದ್ ಬೀದಿ ವ್ಯಾಪಾರಿ ಹೆಚ್ಚುವರಿ ಮೆಣಸಿನಕಾಯಿದೊಂದಿಗೆ ತಡ್ಕಾ ತಯಾರಿಸುತ್ತಾನೆ. ಈ ವೈರಲ್ ವೀಡಿಯೊ 4 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದೆ. ಮಾತ್ರವಲ್ಲದೆ ಹಲವಾರು ಬಾರಿ ವೀಕ್ಷಿಸಲಾಗಿದೆ. ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಈ ವಿಡಿಯೋಗಳಲ್ಲಿ ನಂಬಲಾಗದ ಕಥೆಗಳನ್ನು ಸಹ ತೋರಿಸುತ್ತದೆ. ಹರಿಯಾಣದ ಫರಿದಾಬಾದ್‌ನ ಈ 13 ವರ್ಷದ ಬೀದಿ ವ್ಯಾಪಾರಿ ಅಂತಹ ಒಂದು ಉತ್ತಮ ಉದಾಹರಣೆ.

ದೀಪೇಶ್ ಎಂಬ ಹುಡುಗ ತನ್ನ ಅದ್ಭುತವಾದ ಅಡುಗೆ ಕೌಶಲ್ಯಕ್ಕಾಗಿ ಈಗ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದಾನೆ. ಈ ಪೋರ ತಯಾರಿಸುವ ಖಾದ್ಯ ಅನುಭವಿ ಬಾಣಸಿಗರನ್ನು ನಾಚಿಕೆಪಡಿಸುತ್ತದೆ. ದೀಪೇಶ್ ಅವರ ಅಡುಗೆ ವಿಡಿಯೋ ಸದ್ಯ ಯೂಟ್ಯೂಬ್ ನಲ್ಲಿ 3ನೇ ಸ್ಥಾನದಲ್ಲಿದೆ.

This little poorans food on Faridabad Street is a huge Famous

ಫುಡ್ ಬ್ಲಾಗರ್ ವಿಶಾಲ್ ಅವರು ಹಂಚಿಕೊಂಡಿರುವ ವಿಡಿಯೊದಲ್ಲಿ, ದೀಪೇಶ್ ಮೆಣಸಿನಕಾಯಿಯ ರುಚಿಕರವಾದ ತಡ್ಕಾವನ್ನು ತಯಾರಿಸುತ್ತಿರುವುದನ್ನು ತೋರಿಸುತ್ತದೆ. ವೀಡಿಯೊ ಪ್ರಾರಂಭವಾಗುತ್ತಿದ್ದಂತೆ ವಿಶಾಲ್ ಅವರು ಮನೆ, ಪೋಷಕರು, ಶಾಲೆ ಮತ್ತು ಶಿಕ್ಷಣದ ಬಗ್ಗೆ ಕೇಳಲು ಹೋಗುತ್ತಾರೆ. ದೀಪೇಶ್ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುತ್ತಾನೆ. ಆದರೆ ಒಂದು ಸೆಕೆಂಡ್ ಕೂಡ ಅಡುಗೆಯ ಮೇಲೆ ತನ್ನ ಏಕಾಗ್ರತೆಯನ್ನು ಕಳೆದುಕೊಳ್ಳಲಿಲ್ಲ. ವಿಡಿಯೋದಲ್ಲಿ ದೀಪೇಶ್ ಅವರು ನಿಯಮಿತವಾಗಿ ಶಾಲೆಗೆ ಹೋಗುತ್ತಾರೆ ಮತ್ತು ಸಂಜೆ ಮಾತ್ರ ತಮ್ಮ ಸ್ಟಾಲ್ ತೆರೆಯುತ್ತಾರೆಂದು ಹೇಳಿಕೊಂಡಿದ್ದಾರೆ. ರಾತ್ರಿ 8 ಅಥವಾ 9 ರವರೆಗೆ ಅಡುಗೆ ಮಾಡುತ್ತಾರೆ ಎಂದು ದೀಪೇಶ್ ವಿವರಿಸುತ್ತಾರೆ. ಈ ಬಾಲಕ ಮಾಡುವ ಕೆಲಸದಲ್ಲಿ ಬರುವ ಸ್ವಲ್ಪ ಹೆಚ್ಚುವರಿ ಆದಾಯದೊಂದಿಗೆ ತಮ್ಮ ಪೋಷಕರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ವಿವರಿಸುತ್ತಾರೆ.

ಜೊತೆಗೆ ಶಾಲೆಗೆ ಪ್ರತಿ ನಿತ್ಯ ಹೋಗುವುದಾಗಿ ಹೇಳುವ ಬಾಲಕ ತಮ್ಮ ಪೋಷಕರಿಗೆ ಹಣದ ಸಹಾಯ ಮಾಡಲು ಬಯಸುತ್ತಾನೆ. ಅವರು ಅನಾರೋಗ್ಯಕ್ಕೆ ಒಳಗಾಗಿದ್ದು ಅವರಿಗೆ ಸಹಾಯ ಮಾಡಲು ತಾನು ಈ ಕಾರ್ಯ ಮಾಡುತ್ತಿರುವುದಾಗಿ ಬಾಲಕ ಹೇಳಿಕೊಂಡಿದ್ದಾನೆ.

This little poorans food on Faridabad Street is a huge Famous

ಈ ವಿಡಿಯೋ ಶೀರ್ಷಿಕೆಯಲ್ಲಿ "ಮೆಣಸಿನಕಾಯಿ, ಸ್ಪ್ರಿಂಗ್ ರೋಲ್‌ಗಳು, ಮೊಮೊಸ್ ಇತ್ಯಾದಿಗಳನ್ನು ತಯಾರಿಸುವ ಈ ಅದ್ಭುತ 13 ವರ್ಷದ ಮಾಸ್ಟರ್ ಶೆಫ್ ಅನ್ನು ನಾವು ಭೇಟಿಯಾದೆವು. ಅವರು ಬೆಳಿಗ್ಗೆ ಶಾಲೆಗೆ ಹೋಗುತ್ತಾರೆ ಮತ್ತು ಸಂಜೆ ಬಳಿಕ ಅವರು ತಮ್ಮ ಕುಟುಂಬಕ್ಕೆ ಸಹಾಯ ಮಾಡಲು ಫರಿದಾಬಾದ್ ಮುಖ್ಯ ಮಾರುಕಟ್ಟೆಯ ಸ್ಟಾಲ್‌ನಲ್ಲಿ ರುಚಿಯಾದ ತಡ್ಕಾ ತಯಾರಿಸುತ್ತಾರೆ" ಎಂದು ಬರೆಯಲಾಗಿದೆ.

ದೀಪೇಶ್ ಕಾರ್ಯವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಜೊತೆಗೆ ಅವನ ಬಗ್ಗೆ ಶ್ಲಾಘಿಸಿ ಸಂದೇಶಗಳನ್ನು ಕಳುಹಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ದೊಡ್ಡ ಕಾರ್ಯ ಮಾಡುತ್ತಿರುವ ಬಾಲಕನ ಕಾರ್ಯವನ್ನು ಮೆಚ್ಚಿ ಆಶಿಸಿದ್ದಾರೆ. ಕೆಲವರು ಪುಟ್ಟ ಬಾಲಕನಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಇನ್ನೂ ಕೆಲವರು ಬಾಲಕ ತಯಾಋಇಸುವ ಖಾದ್ಯವನ್ನು ತಾವೂ ಕೂಡ ಸವಿಯುವುದಾಗಿ ಹೇಳಿಕೊಂಡಿದ್ದಾರೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಬಾಲಕನ ವಿಡಿಯೋಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

English summary
This 13-year-old street vendor from Faridabad, Haryana is one such great example. The boy named Dipesh has now gone viral on the internet for his incredible cooking skills, which can put a seasoned chef to shame.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X