ರಾಹುಲ್ ಅವರು ತಂತ್ರಜ್ಞಾನ ಅನಕ್ಷರಸ್ಥ : ಸಂಬಿತ್ ಪಾತ್ರ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 26 : ರಾಹುಲ್ ಗಾಂಧಿಯವರು ತಂತ್ರಜ್ಞಾನ ಅನಕ್ಷರಸ್ಥ. ಡೇಟಾ ಅನಾಲಿಸಿಸ್ ಎಂಬುದು ಬೇಹುಗಾರಿಕೆ ಅಲ್ಲ ಎಂಬುದು ಅವರಿಗೆ ಗೊತ್ತಿಲ್ಲ. ಈ ಹೊಸ ಜಮಾನಾದಲ್ಲಿ ರಾಹುಲ್ ಅವರಿಗೆ ಇದೆಲ್ಲ ಅರ್ಥವಾಗುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಅವರು ವ್ಯಂಗ್ಯವಾಡಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಪ್ರಧಾನಿ ನರೇಂದ್ರ ಮೋದಿ ಅವರು ಕೋಟ್ಯಂತರ ಜನರ ಖಾಸಗಿ ಮಾಹಿತಿಯನ್ನು ತಮ್ಮ ನಮೋ ಆಪ್ ಮೂಲಕ ಸಂಗ್ರಹಿಸಿ ಬೇಹುಗಾರಿಕೆ ನಡೆಸುತ್ತಿದ್ದಾರೆ. ಅವರು 13 ಲಕ್ಷ ಎನ್‌ಸಿಸಿ ವಿದ್ಯಾರ್ಥಿಗಳಿಂದಲೂ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಕ್ಕೆ ಪ್ರತಿಯಾಗಿ ಸಂಬಿತ್ ಅವರು ಮೇಲಿನಂತೆ ವ್ಯಾಖ್ಯಾನ ಮಾಡಿದ್ದಾರೆ.

ವಿಶ್ವೇಶ್ವರಯ್ಯ ಎನ್ನಲು ಬಾರದ ರಾಹುಲ್ ಗಾಂಧಿಗೆ ಟ್ವಿಟ್ಟರ್ ತಪರಾಕಿ!

ನಾಳೆ ರಾಹುಲ್ ಗಾಂಧಿಯವರು ಮತ್ತೊಂದು ಟ್ವೀಟ್ ಮಾಡುತ್ತಾರೆ ನೋಡುತ್ತಿರಿ. ನಮೋ ಆಪ್ ಅನ್ನು ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್(ಇವಿಎಂ)ಗೆ ಜೋಡಿಸಲಾಗಿದೆ, ಮತ್ತು ಈ ಮೂಲಕ ಇವಿಎಂ ಅನ್ನು ತಿರುಚಲಾಗುತ್ತದೆ ಎಂದು ಅವರು ಟ್ವೀಟ್ ಮಾಡುತ್ತಾರೆ ಎಂದು ಸಂಬಿತ್ ಪಾತ್ರ ಮಾತಿನ ಚಾಟಿ ಬೀಸಿದ್ದಾರೆ.

This is classic case of technological illiteracy : Sambit on Rahul

ನಮೋ ಆಪ್ ಎಂಬುದು ಸಂವಾದಿಸುವ ಒಂದು ಮಾಧ್ಯಮ. ನರೇಂದ್ರ ಮೋದಿಯವರು ಈ ಆಪ್ ಮೂಲಕ ಕಾರ್ಯಕರ್ತರು, ಬಿಜೆಪಿ ಬೆಂಬಲಿಗರೊಂದಿಗೆ ಸಂವಾದ ನಡೆಸುತ್ತಾರೆ. ಆದರೆ, ರಾಹುಲ್ ಅವರು ಹೇಳುತ್ತಾರೆ, ನಮೋ ಆಪ್ ಮೂಲಕ ಸಾರ್ವಜನಿಕರ ಮಾಹಿತಿಯನ್ನು ಸಂಗ್ರಹಿಸಿ ಅಮೆರಿಕಾದ ಕಂಪನಿಗೆ ಕಳುಹಿಸುತ್ತಾರಂತೆ. ಇದು ರಾಹುಲ್ ಅವರ ತಾಂತ್ರಿಕ ಅಜ್ಞಾನದ ಕ್ಲಾಸಿಕ್ ಕೇಸ್ ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಹುಲ್ ಗಾಂಧಿಗೆ ರಾಜಕೀಯ ಅನುಭವವಿಲ್ಲ: ದೇವೇಗೌಡ

ರಾಹುಲ್ ಗಾಂಧಿಯವರು ತಂತ್ರಜ್ಞಾನಕ್ಕೆ ಸಂಬಂಧಿಸಿದ ಯಾವ ವಿಷಯವನ್ನೂ ಅರ್ಥ ಮಾಡಿಕೊಳ್ಳುವುದಿಲ್ಲ. ಈ ರಾಹುಲ್ ಅವರೇ ವಿದೇಶಿ ನೆಲದಲ್ಲಿ, ದೇಶದ ಎಲ್ಲ ಎಂಆರ್ಐ ಮಷೀನುಗಳನ್ನು ಜೋಡಿಸಿದರೆ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯನ್ನು ಎಬ್ಬಿಸಬಹುದು ಎಂದು ಹೇಳಿದ್ದರು. ಈ ರಾಹುಲ್ ಅವರೇ ಆಲೂಗಡ್ಡೆ ಮಷೀನಿನ ಬಗ್ಗೆ ಮಾತನಾಡಿದ್ದರು. ಅವರು ತಾಂತ್ರಿಕವಾಗಲಿ, ವೈಜ್ಞಾನಿಕವಾಗಲಿ ತುಂಬಾ ಹಿಂದಿದ್ದಾರೆ ಎಂದು ಸಂಬಿತ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Congress President Rahul Gandhi is technologically illiterate. He does not know that data analysis is not equivalent to spying. This new age is the age of information which Rahul ji will not understand, says Sambit Patra, BJP national spokesperson.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ