ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ 2 ವರ್ಷದ ಬಾಲಕಿ ನಿಮ್ಮ ನೆರವಿನಿಂದ ಮಾತ್ರ ಬದುಕಬಲ್ಲಳು

|
Google Oneindia Kannada News

"ಡಾಕ್ಟರ್ ಅಂಕಲ್, ನನಗೆ ಇವತ್ತು ಚಾಕೊಲೇಟ್, ಹಾಲು ಕೊಡ್ತೀರಾ ಪ್ಲೀಸ್", ನನ್ನ ಎರಡು ವರ್ಷದ ಮಗಳು ನಿರ್ವಿ ತನ್ನ ಮುಖದ ಮೇಲೊಂದು ನಗು ತಂದುಕೊಂಡು ವೈದ್ಯರನ್ನು ಕೇಳಿದಳು. ಅವರು ಹೂಂ ಅನ್ನಬಹುದೇನೋ ಎಂಬ ಆಸೆ ಅವಳದು. ಅವಳಿಗೆ ಬಹಳ ಇಷ್ಟದ ನಾಷ್ತಾದ ಜತೆಗೆ ದಿನ ಆರಂಭಿಸುತ್ತಿದ್ದ ಅವಳು, ಈಗ ಆ ತಿಂಡಿಯನ್ನು ಪದೇಪದೇ ನೆನಪಿಸಿಕೊಳ್ಳುತ್ತಾಳೆ.

ಕಳೆದ ಒಂದು ತಿಂಗಳಿಂದ ನನ್ನ ಮಗಳು ಆಸ್ಪತ್ರೆಗೆ ದಾಖಲಾಗಿದ್ದಾಳೆ. ಅವಳಿಗೆ ಗಂಭೀರವಾದ ಕಾಯಿಲೆ. ಅದರ ಹೆಸರು ನೆಕ್ರೊಟೈಸಿಂಗ್ ನ್ಯುಮೋನಿಯಾ ಎಂಪಿಮಿಯಾ. ಈ ಪರಿಸ್ಥಿತಿಯಿಂದ ನಮ್ಮ ಜಗತ್ತು ಛಿದ್ರವಾಗಿ ಹೋಯಿತು. ವೈದ್ಯರು ನನ್ನ ಮಗಳ ಸ್ಥಿತಿಯನ್ನು ವಿವರಿಸಿದರು.

ಸಾಮಾನ್ಯ ನ್ಯುಮೋನಿಯಾದ ಲಕ್ಷಣಗಳೇ ಇವಾದರೂ ನನ್ನ ಮಗಳು ಬಲಹೀನವಾಗಿದ್ದಾಳೆ. ಏಕೆಂದರೆ ಆಕೆಯ ದೇಹ ರೋಗನಿರೋಧಕ ಔಷಧಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಅತಿಯಾದ ನೀರಿನ ಪ್ರಮಾಣ ಮತ್ತು ರಕ್ತ ಆಕೆಯ ಶ್ವಾಸಕೋಶದ ಗೋಡೆಯ ಮೇಲೆ ಸಂಗ್ರಹವಾಗುತ್ತಿದೆ.

ಅವಳ ಚಿಕಿತ್ಸೆಯ ಮೊದಲ ಭಾಗವಾಗಿ ವ್ಯಾಟ್ಸ್ ಮಾಡಲಾಯಿತು. ವ್ಯಾಟ್ಸ್ ಅಂದರೆ ವಿಡಿಯೋ ಅಸಿಸ್ಟೆಡ್ ಥೋರಸ್ಕೋಪಿಕ್ ಸರ್ಜರಿ. ವೈದ್ಯರು ಹೇಳುವ ಪ್ರಕಾರ ಸದ್ಯದಲ್ಲೇ ಮತ್ತೊಂದು ಶಸ್ತ್ರಚಿಕಿತ್ಸೆ ಆಗಬೇಕು. ನನ್ನ ಮಗಳು ಮತ್ತೆ ಸಾಮಾನ್ಯವಾದ ಜೀವನ ನಡೆಸಬೇಕು ಅಂದರೆ ಇನ್ನೂ ಕನಿಷ್ಠ ಮೂರು ವಾರ ಆಸ್ಪತ್ರೆಯಲ್ಲೇ ಇರಬೇಕು. ಚಿಕಿತ್ಸೆಯ ಒಟ್ಟು ವೆಚ್ಚ 15 ಲಕ್ಷ ರುಪಾಯಿ ಆಗಬಹುದು.

ನನ್ನ ಹೆಸರು ಮನೋಜ್ ಪವಾರ್. ನನ್ನ ಹೆಂಡತಿ, ತಾಯಿ, ಸೋದರ ಹಾಗೂ ನಿರ್ವಿ ಜತೆಗೆ ಐರೋಲಿಯಲ್ಲಿ ವಾಸಿಸುತ್ತೀನಿ. ಪಶ್ಚಿಮ ರೈಲ್ವೆಯಲ್ಲಿ ಟೆಕ್ನಿಷಿಯನ್ ಆಗಿ ಕೆಲಸ ಮಾಡ್ತೀನಿ. ತಿಂಗಳಿಗೆ 20 ಸಾವಿರ ರುಪಾಯಿ ಸಂಬಳ ಬರುತ್ತದೆ. ಈವರೆಗೆ 4.5 ಲಕ್ಷ ರುಪಾಯಿ ಖರ್ಚು ಮಾಡಿದ್ದು ಇನ್ನು ನನ್ನ ಮಗಳ ಚಿಕಿತ್ಸೆಗೆ ಖರ್ಚು ಮಾಡಲು ಏನೂ ಉಳಿದಿಲ್ಲ.

3 ಲಕ್ಷ ರುಪಾಯಿ ಮೆಡಿಕ್ಲೇಮ್ ನಿಂದ ಬಂದಿತು. ಬಾಕಿ 1.5 ಲಕ್ಷ ರುಪಾಯಿಗೆ ನನ್ನ ಕಾರು ಮಾರಿದೆ. ಆದರೆ ಈಗೇನು ಮಾಡಲಿ? ಬಾಕಿ ಬಿಲ್ ನ ಪಾವತಿಸುವುದಕ್ಕೆ ಹಣಕ್ಕಾಗಿ ಏನು ಮಾಡಲಿ? ಹಣಕ್ಕೆ ಕೊಡಲಾರೆ ಎಂಬ ಕಾರಣಕ್ಕೆ ಅವಲ ಚಿಕಿತ್ಸೆಯನೇ ನಿಲ್ಲಿಸಿಬಿಟ್ಟರೆ ಎಂಬ ಭಯದಲ್ಲಿ ಊಟ ಸೇರುತ್ತಿಲ್ಲ, ನಿದ್ದೆ ಬರುತ್ತಿಲ್ಲ.

ನಿರ್ವಿಯ ಜೀವ ಉಳಿಸಲು ಬೇಕಾದ ಚಿಕಿತ್ಸೆಗೆ ಹಣ ಪಾವತಿಸಲು ಮನೋಜ್ ಹೋರಾಡುತ್ತಿದ್ದಾರೆ. ಇಲ್ಲಿ ದೇಣಿಗೆ ನೀಡುವ ಮೂಲಕ ಅವರಿಗೆ ನೀವು ನೆರವಾಗಬಹುದು.

ಆಸ್ಪತ್ರೆಯ ಮಂಚದ ಮೇಲೆ ನಿರ್ವಿ ಇಂಥ ಸ್ಥಿತಿಯಲ್ಲಿ ಮಲಗಿರುವುದನ್ನು ನೋಡುವ ಸನ್ನಿವೇಶ ಎದುರಾಗಬಹುದು ಎಂಬುದನ್ನು ನನ್ನ ಕನಸಿನಲ್ಲಿಯೂ ಎಣಿಸಿರಲಿಲ್ಲ. ನಮ್ಮ ಒಬ್ಬಳೇ ಮಗಳು ಜೀವ ಉಳಿಸಿಕೊಳ್ಳುವ ಸಲುವಾಗಿ ಇಂಥ ನೋವಿನ ಪರೀಕ್ಷೆಗಳು ಮತ್ತು ಶಸ್ತ್ರಚಿಕಿತ್ಸೆಗಳು ಮಾಡಿಸಿಕೊಳ್ಳುತ್ತಿದ್ದರೆ ಹೃದಯ ಚೂರಾದಂತೆ ಭಾಸವಾಗುತ್ತದೆ.

ನವೆಂಬರ್ ನ ಆರಂಭದಲ್ಲಿ ನಿರ್ವಿ ಶೀತ ಹಾಗೂ ಕೆಮ್ಮಿನ ಚಿಕಿತ್ಸೆಗಾಗೊ ಸ್ಥಳೀಯ ವೈದ್ಯರ ಬಳಿ ಚಿಕಿತ್ಸೆಗೆ ತೆರಳಿದ್ದಳು. ಅವರು ಸೂಚಿಸಿದ ಔಷಧಿಯನ್ನು, ಹೇಳಿದ ಸಮಯದವರೆಗೆ ತೆಗೆದುಕೊಂಡ ನಂತರವೂ ಆಕೆಯ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಆಗ ಡಾಕ್ಟರ್ ಸೂಚನೆ ಮೇರೆಗೆ ಕೆಲವು ರಕ್ತ ಪರೀಕ್ಷೆಗಳನ್ನು ಮಾಡಿಸಿದೆವು.

ನನ್ನ ಮಗಳ ಆರೋಗ್ಯದಲ್ಲಿನ ಸಮಸ್ಯೆ ಏನು ಎಂಬುದೇ ಒಂದು ತಿಂಗಳ ತನಕ ಗೊತ್ತಾಗಲೇ ಇಲ್ಲ. ಆ ನಂತರದ ಪರೀಕ್ಷೆಯಲ್ಲಿ ರಕ್ತದ ಸೋಂಕು ಎಂಬುದು ಗೊತ್ತಾಯಿತು. ಯಾವ ರೀತಿಯ ಚಿಕಿತ್ಸೆ ಆರಂಭಿಸಬೇಕು ಎಂದು ತೀರ್ಮಾನ ಮಾಡುವುದಾಗಿ ವೈದ್ಯರು ಹೇಳಿದರು. ಅವಳನ್ನು ಮನೆಗೆ ಕರೆದುಕೊಂಡು ಹೋದೆವು. ಮುಂದೆ ಏನು ಮಾಡಬೇಕು ಎಂದು ಕಾಯಲು ಆರಂಭಿಸಿದೆವು.

ಅವಳನ್ನು ಆ ಮುಜುಗರದಿಂದ ಹೊರಗೆ ಕರೆದುಕೊಂಡು ಬರಬೇಕಿತ್ತು. ಅವಳು ಸಾಮಾನ್ಯವಾಗಿ ತನ್ನ ತಾಯಿಯನ್ನು ತಬ್ಬಿ ಮಲಗುತ್ತಾಳೆ. ಆದರೆ ಆಗ ಹಾಸಿಗೆ ಮೇಲೆ ಅತ್ತ ಇತ್ತ ಹೊರಳಾಡುತ್ತಿದ್ದಳು. ಉಸಿರಾಡಲು ಸಾಧ್ಯವಾಗದೆ ಮಧ್ಯರಾತ್ರಿ ಎದ್ದು ಕೂರುತ್ತಿದ್ದಳು. ಭಯದಿಂದ ಹತ್ತಿರದ ಆಸ್ಪತ್ರೆಗೆ ಹೋದೆವು. ಆಗ ಆ ಕಾಯಿಲೆಯ ಕ್ರೂರ ಮುಖ ಬಯಲಾಯಿತು.

ಎರಡು ವರ್ಷದ ಮಗುವಿನ ದೇಹಕ್ಕೆ ಟ್ಯೂಬ್ ಹಾಕಿದ್ದನ್ನು ನೋಡಿದ ಮೇಲೆ ನೇರವಾಗಿ ಏನನ್ನೂ ಯೋಚಿಸಲು ಸಾಧ್ಯವಾಗಲ್ಲ. ಆ ಟ್ಯೂಬ್ ನ ಸಹಾಯದಿಂದಲೇ ಶ್ವಾಸಕೋಶದ ಬಳೆ ಜಮೆಯಾಗುವ ವಿಷಕಾರಿ ದ್ರವವನ್ನು ಹೊರಹಾಕುತ್ತದೆ. ಆ ಟ್ಯೂಬ್ ನಿಂದ ಅವಳು ಪಡುವ ಕಷ್ಟ ನೋಡಿದರೆ ಅದರ ಬಗ್ಗೆ ದ್ವೇಷ ಉಕ್ಕಿಬರುತ್ತದೆ. ಆದರೆ ಆ ನಂತರ ಅವಳು ಸಾಮಾನ್ಯವಾಗಿ ಉಸಿರಾಡುತ್ತಿದ್ದಾಳೆ. ಆದರೆ ಇನ್ನೂ ಅವಳು ಚೇತರಿಸಿಕೊಳ್ಳಬೇಕಿದೆ.

ನಿರ್ವಿಗೆ ಎಲ್ಲ ಆಟವೂ ಇಷ್ಟ. ಅದರಲ್ಲೂ ಕೊಕ್ಕೋ. ಅವಳು ನಡೆಯಲು- ಓಡಲು ಆರಂಭಿಸಿದ ದಿನದಿಂದ ಕೊಕ್ಕೋ ಬಹಳ ಇಷ್ಟಪಡ್ತಾಳೆ. ಅವಳ ಹತ್ತಿರ ಪುಟ್ಟ ಸೈಕಲ್ ಇದೆ. ಅದನ್ನು ಮನೆಯ ಮಹಡಿ ಮೇಲೆ ಓಡಿಸುವುದೆಂದರೆ ತುಂಬ ಇಷ್ಟ ಪಡುತ್ತಾಳೆ. ಪ್ರತಿ ರಾತ್ರಿ ನನ್ನ ಕಾರಿನ ಜತೆಗೆ ಅವಳ ಸೈಕಲ್ ಅನ್ನು ಸಹ ಸ್ವಚ್ಛ ಮಾಡಿ ಎನ್ನುತ್ತಿದ್ದಳು.

ಆಸ್ಪತ್ರೆಯಿಂದ ಮತ್ತೆ ಮನೆಗೆ ಯಾವಾಗ ಹೋಗಬಹುದು ಎಂದು ನನ್ನನ್ನು ಕೇಳ್ತಾಳೆ. ನನ್ನ ಹತ್ತಿರ ಇರುವ ಹಣ ನೋಡಿ, ಅದೇ ಪ್ರಶ್ನೆಯನ್ನೇ ಕೇಳಿಕೊಳ್ತೀನಿ. ದಯವಿಟ್ಟು ನನಗೆ ಸಹಾಯ ಮಾಡಿ. ನನ್ನ ಮಗಳೆಂದರೆ ನನ್ನ ಜಗತ್ತು.

ನೀವು ಮನೋಜ್ ಗೆ ನೆರವಾಗಬಹುದು. ದೇಣಿಗೆ ಸಂಗ್ರಹಿಸುತ್ತಿರುವ ಕೆಟ್ಟೋ ಮೂಲಕ ಸಹಾಯ ಮಾಡಬಹುದು.

English summary
My name is Manoj Pawar. I live in Airoli with my wife, mother, brother and Nirvi. I’m a technician in Western Railways. I make Rs. 20,000 per month. After spending Rs. 4.5 lakhs so far, I’ve got absolutely nothing to support my daughter’s treatment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X