ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದ ಪ್ರಸಿದ್ಧ ಶ್ರೀ ಪದ್ಮನಾಭ ಸ್ವಾಮಿಯ ವಜ್ರಗಳು ನಾಪತ್ತೆ

By Mahesh
|
Google Oneindia Kannada News

ತಿರುವನಂತಪುರಂ, ಜುಲೈ 03 :ಕೇರಳದ ಪ್ರಸಿದ್ಧ ಶ್ರೀ ಪದ್ಮನಾಭ ಸ್ವಾಮಿ ದೇವಸ್ಥಾನದ ಸಂಪತ್ತಿನ ಬಗ್ಗೆ ಮತ್ತೊಂದು ಕುತೂಹಲಕಾರಿ ಸಂಗತಿ ಹೊರ ಬಂದಿದೆ. ಲೆಕ್ಕಪರಿಶೋಧನೆಯ ಮೇಲ್ವಿಚಾರಣೆ ನಡೆಸಿ ಸಿಎಜಿ ನೀಡಿರುವ ಇತ್ತೀಚೆಗೆ ನೀಡಿರುವ ವರದಿಯಂತೆ ಸುಮಾರು 8 ವಜ್ರಗಳು ನಾಪತ್ತೆಯಾಗಿವೆ.

ಪದ್ಮನಾಭ ಸ್ವಾಮಿಯ ತಿಲಕದ ಭಾಗವಾಗಿದ್ದ ಈ ವಜ್ರದ ಹರಳುಗಳ ಬೆಲೆ ಸುಮಾರು 21 ಲಕ್ಷ ರುಪಾಯಿ ಎಂದು ಅಂದಾಜಿಸಲಾಗಿದೆ ಎಂದು ಅಮಿಕಸ್ ಕ್ಯುರಿ ಗೋಪಾಲ್ ಸುಬ್ರಮಣಿಯಮ್ ಅವರು ಸುಪ್ರೀಂಕೋರ್ಟಿಗೆ ವರದಿ ಸಲ್ಲಿಕೆ ಮಾಡಿದ್ದಾರೆ.

ಖಜಾನೆ ಮೌಲ್ಯ ಅಂದಾಜು ಒಂದು ಲಕ್ಷ ಕೋಟಿಖಜಾನೆ ಮೌಲ್ಯ ಅಂದಾಜು ಒಂದು ಲಕ್ಷ ಕೋಟಿ

ದಿನ ನಿತ್ಯ ಪೂಜೆಯಲ್ಲಿ ಎದ್ದು ಕಾಣಿಸುತ್ತಿದ್ದ ಈ ವಜ್ರಾಭರಣಗಳು ನಾಪತ್ತೆಯಾಗಿರುವ ಬಗ್ಗೆ ದೇಗುಲದ ಆಡಳಿತ ಅಧಿಕಾರಿ ಕೆಎಸ್ ಸತೀಶ್ ಅವರು ಮೇ ತಿಂಗಳಿನಲ್ಲಿ ದೂರು ನೀಡಿದ್ದರು.

ಈ ಹಿಂದೆ ಕಂಟ್ರೋಲರ್ ಆಡಿಟರ್ ಜನರಲ್ (ಸಿಎಜಿ ) ವಿನೋದ್ ರಾಯ್ ಅವರು ಸಲ್ಲಿಸಿದ್ದ ವರದಿಯಂತೆ, ಸುಮಾರು 186 ಕೋಟಿ ರು ಮೌಲ್ಯ ಹೊಂದಿರುವ 769 ಚಿನ್ನದ ಮಡಿಕೆಗಳು ನಾಪತ್ತೆಯಾಗಿವೆ.

ಸಿಎಜಿ ವರದಿಯ ಪ್ರಮುಖಾಂಶಗಳು

ಸಿಎಜಿ ವರದಿಯ ಪ್ರಮುಖಾಂಶಗಳು

* ಚಿನ್ನವನ್ನು ಪರಿಶುದ್ಧಗೊಳಿಸುವ ಪ್ರಕ್ರಿಯೆಯಲ್ಲಿ ಅನುಪಾತ ಬದಲಾವಣೆಯಿಂದಾಗಿ ಸುಮಾರು 2.5 ಕೋಟಿ ರೂಪಾಯಿ ನಷ್ಟವಾಗಿದೆ.

* 14 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ನಾಪತ್ತೆಯಾಗಿದೆ.

* 14.18 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯನ್ನು ನಾಡವರಾವ್ ರಿಜಿಸ್ಟ್ರಾರ್‌ನಲ್ಲಿ ದಾಖಲಿಸದಿರುವುದು ಕಾನೂನು ಬಾಹಿರ.
* ದೇವಾಲಯ ಟ್ರಸ್ಟ್ ಕಾನೂನು ಬಾಹಿರವಾಗಿ 2.11 ಎಕರೆ ಭೂಮಿಯನ್ನು 1970ರಲ್ಲಿ ಮಾರಾಟ ಮಾಡಿದ್ದು, ಈ ಬಗ್ಗೆ ಯಾವ ದಾಖಲೆಯೂ ಲಭ್ಯವಿಲ್ಲ.

ಸಿಎಜಿ ವರದಿ ತನಕ

ಸಿಎಜಿ ವರದಿ ತನಕ

ಕೇರಳದ ಪದ್ಮನಾಭಸ್ವಾಮಿ ದೇಗುಲದಲ್ಲಿ ಅಪಾರ ಪ್ರಮಾಣದ ನಿಧಿ ಇದೆ. ಆದರೆ, ದೇಗುಲದಲ್ಲಿ ಅನುಮಾನಾಸ್ಪದ ಚಟುವಟಿಕೆ ನಡೆಯುತ್ತಿದೆ. ಆದ್ದರಿಂದ ಈ ಕುರಿತು ಪರಿಶೀಲನೆಗೆ ಒಳಪಡಿಸಬೇಕೆಂದು ಕೋರಿ ಗೋಪಾಲ ಸುಬ್ರಮಣಿಯಮ್ ಎಂಬುವರು ಸುಪ್ರೀಂ ಕೋರ್ಟ್‌ನಲ್ಲಿ ಆಮಿಕಸ್ ಕ್ಯೂರಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನಿಧಿಯ ಲೆಕ್ಕ ಪರಿಶೋಧನೆಗೊಳಪಡಿಸಲು ಸುಪ್ರೀಂ ಕೋರ್ಟ್ ತೀರ್ಮಾನಿಸಿತ್ತು.

ಲಕ್ಷಾಂತರ ಕೋಟಿ ರು. ಮೌಲ್ಯದ ನಿಧಿ

ಲಕ್ಷಾಂತರ ಕೋಟಿ ರು. ಮೌಲ್ಯದ ನಿಧಿ

2014ರಲ್ಲಿ ಸುಪ್ರೀಂಕೋರ್ಟ್, ಮಾಜಿ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ವಿನೋದ್ ರಾಯ್ ಅವರ ಮೇಲ್ವಿಚಾರಣೆಯಲ್ಲಿ ಪದ್ಮನಾಭ ದೇವಾಲಯದ ಸಂಪತ್ತಿನ ಪರಿಶೋಧನೆ ನಡೆಸುವಂತೆ ಸೂಚಿಸಿತ್ತು. ಈ ಸಮಿತಿ ನಡೆಸಿದ ಪರಿಶೀಲನೆಯಲ್ಲಿ ದೇಗುಲದಲ್ಲಿ ಲಕ್ಷಾಂತರ ಕೋಟಿ ರು. ಮೌಲ್ಯದ ನಿಧಿ ಇರುವುದು ಪತ್ತೆಯಾಗಿತ್ತು. ಈ ನಿಧಿಯ ರಕ್ಷಣೆಗಾಗಿ ರಾಜ್ಯ ಸರ್ಕಾರವು ಶಸ್ತ್ರಸಜ್ಜಿತ ಪೊಲೀಸರು, ಸಿಸಿಟಿವಿ ಕ್ಯಾಮೆರಾ ಸೇರಿದಂತೆ ಇನ್ನಷ್ಟು ಕ್ರಮಗಳನ್ನು ಕೈಗೊಂಡಿತ್ತು.

ರಾಜಕುಟುಂಬದ ಹಸ್ತಕ್ಷೇಪ

ರಾಜಕುಟುಂಬದ ಹಸ್ತಕ್ಷೇಪ

ದೇವಸ್ಥಾನ ಸಾರ್ವಜನಿಕ ಸಂಪತ್ತಾಗಿದ್ದರೂ ರಾಜ ಕುಟುಂಬ (Travancore royal family) ಇದನ್ನು ಸ್ವಂತ ಸೊತ್ತು ಎಂದೇ ಭಾವಿಸಿದೆ. ದೇವಸ್ಥಾನದ ಆಡಳಿತದಲ್ಲಿ ರಾಜಕುಟುಂಬದ ಹಸ್ತಕ್ಷೇಪವನ್ನು ತಡೆಯಬೇಕು. ಮಾಜಿ ಮಹಾಲೇಖಪಾಲರಾದ ವಿನೋದ್ ರಾಯ್ ಅವರಿಂದ ವಿಸ್ತಾರ ಆಡಿಟ್ ನಡೆಸಬೇಕು ಎಂದು 500 ಪುಟಗಳ ಸುದೀರ್ಘ ವರದಿಯಲ್ಲಿ ಅಮಿಕಸ್ ಕ್ಯೂರಿ ಗೋಪಾಲ ಸುಬ್ರಮಣ್ಯಂ ಕೋರ್ಟ್ ಗಮನ ಸೆಳೆದಿದ್ದಾರೆ.

English summary
Eight diamonds, forming part of the naamam (tilak) of the Sree Padmanabha Swamy idol in the eponymous temple in Thiruvananthapuram, are missing, the amicus curiae reported to the Supreme Court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X