ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ 6-8 ವಾರಗಳಲ್ಲಿ ಕೊರೊನಾ ಮೂರನೇ ಅಲೆ; ಏಮ್ಸ್‌ ಕೊಟ್ಟ ಸೂಚನೆಗಳು...

|
Google Oneindia Kannada News

ನವದೆಹಲಿ, ಜೂನ್ 19: "ದೇಶದಲ್ಲಿ ಕೊರೊನಾ ಮೂರನೇ ಅಲೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಇನ್ನು ಮುಂದಿನ ಆರರಿಂದ ಎಂಟು ವಾರಗಳಲ್ಲೇ ಮೂರನೇ ಅಲೆ ಪ್ರಭಾವ ಕಾಣಿಸಿಕೊಳ್ಳಲಿದೆ," ಎಂದು ಏಮ್ಸ್‌ ಮುಖ್ಯಸ್ಥ ಡಾ. ರಣದೀಪ್ ಗುಲೇರಿಯಾ ಹೇಳಿದ್ದಾರೆ.

ಕೊರೊನಾ ಎರಡನೇ ಅಲೆ ತಗ್ಗುತ್ತಿದ್ದು, ಈಗಷ್ಟೇ ಹಲವು ರಾಜ್ಯಗಳಲ್ಲಿ ಕೊರೊನಾ ನಿರ್ಬಂಧಗಳನ್ನು ಸಡಿಲಿಸಿ ಅನ್‌ಲಾಕ್ ಮಾಡಲಾಗುತ್ತಿದೆ. ಹೀಗೆ ಸಡಿಲಿಕೆ ಮಾಡುತ್ತಿದ್ದಂತೆ ಮೂರನೇ ಅಲೆ ಕುರಿತು ಎಚ್ಚೆತ್ತುಕೊಳ್ಳಬೇಕಾಗಿದೆಯೆಂದು ಕೇಂದ್ರವೂ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದೆ. ಈ ಹಿಂದೆ ಮಾಡಿದ ತಪ್ಪನ್ನು ಪುನರಾವರ್ತನೆ ಮಾಡಬಾರದು. ಕೊರೊನಾ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹೇಳಿದೆ. ಕೊರೊನಾ ಮೂರನೇ ಅಲೆ ಕುರಿತು ಇನ್ನಷ್ಟು ಮಾಹಿತಿಗಳನ್ನು ಗುಲೇರಿಯಾ ಹಂಚಿಕೊಂಡಿದ್ದಾರೆ. ಮುಂದೆ ಓದಿ...

 ಅನ್‌ಲಾಕ್‌ನತ್ತ ಹಲವು ರಾಜ್ಯಗಳು; ಕೇಂದ್ರದಿಂದ ಪತ್ರ ಅನ್‌ಲಾಕ್‌ನತ್ತ ಹಲವು ರಾಜ್ಯಗಳು; ಕೇಂದ್ರದಿಂದ ಪತ್ರ

 ಮೂರನೇ ಅಲೆ ನಿರ್ವಹಣೆಯಲ್ಲಿ ಈಗಿರುವ ಸವಾಲೇನು?

ಮೂರನೇ ಅಲೆ ನಿರ್ವಹಣೆಯಲ್ಲಿ ಈಗಿರುವ ಸವಾಲೇನು?

"ತನ್ನ ಬೃಹತ್ ಜನಸಂಖ್ಯೆಗೆ ಸಂಪೂರ್ಣವಾಗಿ ಲಸಿಕೆ ನೀಡುವುದು ದೇಶದ ಮುಂದಿರುವ ಸದ್ಯದ ಸವಾಲಾಗಿದೆ. ಹೆಚ್ಚಿನ ಜನಸಂಖ್ಯೆಗೆ ವೇಗಗತಿಯಲ್ಲಿ ಲಸಿಕೆ ನೀಡಲು ಕೋವಿಶೀಲ್ಡ್‌ ಎರಡು ಡೋಸ್‌ ಲಸಿಕೆಗಳ ನಡುವಿನ ಅಂತರ ಹೆಚ್ಚಿಸಿರುವುದು ಸದ್ಯಕ್ಕೆ ಅವಶ್ಯಕವೇ ಆಗಿದೆ. ಸೋಂಕಿನಿಂದ ಹೆಚ್ಚು ಜನರನ್ನು ಕಾಪಾಡಲು ಇದು ಉತ್ತಮ ದಾರಿ," ಎಂದು ಗುಲೇರಿಯಾ ವಿವರಿಸಿದ್ದಾರೆ.

 ಆತಂಕ ತಂದಿರುವ ಡೆಲ್ಟಾ ಪ್ಲಸ್ ರೂಪಾಂತರ

ಆತಂಕ ತಂದಿರುವ ಡೆಲ್ಟಾ ಪ್ಲಸ್ ರೂಪಾಂತರ

"ದೇಶದಲ್ಲಿ ಈಚೆಗೆ ಕೊರೊನಾ ಸೋಂಕಿನ ಹಲವು ರೂಪಾಂತರಗಳು ಸೃಷ್ಟಿಯಾಗುತ್ತಿವೆ. ಹೊಸದಾಗಿ ಡೆಲ್ಟಾ ಪ್ಲಸ್ ರೂಪಾಂತರ ಸೃಷ್ಟಿಯಾಗಿದೆ. ಈ ಎಲ್ಲಾ ರೂಪಾಂತರಗಳ ವಿರುದ್ಧ ಹೋರಾಡಲು ಇನ್ನಷ್ಟು ಸಿದ್ಧತೆ ಮಾಡಿಕೊಳ್ಳಬೇಕಿದೆ. ಈ ಡೆಲ್ಟಾ ಪ್ಲಸ್ ರೂಪಾಂತರ ಮತ್ತೆ ಆತಂಕ ಸೃಷ್ಟಿಸಿದೆ. ಅನ್‌ಲಾಕ್‌ನತ್ತ ಹಲವು ರಾಜ್ಯಗಳು ಸಾಗುತ್ತಿರುವ ಈ ಹೊತ್ತಿನಲ್ಲಿ ಈ ರೂಪಾಂತರ ಭಯಕ್ಕೆ ಕಾರಣವಾಗಿದೆ. ಇಂಥ ಸಮಯದಲ್ಲಿ ಅನ್‌ಲಾಕ್ ಆಯಿತೆಂದು ಜನರು ಕೊರೊನಾ ನಿಯಮಗಳನ್ನು ಉಲ್ಲಂಘಿಸಿದರೆ ಪರಿಸ್ಥಿತಿ ಕಠಿಣವಾಗಲಿದೆ," ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕೊರೊನಾ ಲಸಿಕೆಯಿಂದ ವೀರ್ಯೋತ್ಪತ್ತಿ ತಗ್ಗುವುದೇ; ಅಧ್ಯಯನ ವಿಶ್ಲೇಷಣೆಕೊರೊನಾ ಲಸಿಕೆಯಿಂದ ವೀರ್ಯೋತ್ಪತ್ತಿ ತಗ್ಗುವುದೇ; ಅಧ್ಯಯನ ವಿಶ್ಲೇಷಣೆ

 ಮುಂದಿನ 6-8 ವಾರಗಳಲ್ಲಿ ಕೊರೊನಾ ಮೂರನೇ ಅಲೆ

ಮುಂದಿನ 6-8 ವಾರಗಳಲ್ಲಿ ಕೊರೊನಾ ಮೂರನೇ ಅಲೆ

ಕೊರೊನಾ ಮೂರನೇ ಅಲೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಇನ್ನು ಮುಂದಿನ 6-8 ವಾರಗಳಲ್ಲಿ ಕೊರೊನಾ ಮೂರನೇ ಅಲೆ ಆರಂಭವಾಗಬಹುದು. ಆದರೆ ಆಗಲೇ ಜನರು ಒಂದು ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಲು ಆರಂಭಿಸಿದ್ದಾರೆ. ಹೀಗಾದರೆ ಮತ್ತೆ ದೇಶದಲ್ಲಿ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತದೆ. ನಾವು ಹೇಗೆ ಕೊರೊನಾ ನಿಯಮಗಳನ್ನು ಪಾಲಿಸುತ್ತೇವೆ ಎಂಬುದರ ಮೇಲೆ ಕೊರೊನಾ ಮೂರನೇ ಅಲೆ ಪರಿಣಾಮ ಅವಲಂಬಿತವಾಗಿದೆ ಎಂದು ಗುಲೇರಿಯಾ ಎಚ್ಚರಿಕೆ ನೀಡಿದ್ದಾರೆ.

 ಮೂರು ತಿಂಗಳ ಕಾಲ ಮೂರನೇ ಅಲೆ ಪ್ರಭಾವ

ಮೂರು ತಿಂಗಳ ಕಾಲ ಮೂರನೇ ಅಲೆ ಪ್ರಭಾವ

"ಹಲವು ಅಂಶಗಳನ್ನು ಆಧರಿಸಿ ಕೊರೊನಾ ಮೂರನೇ ಅಲೆ ಮೂರು ತಿಂಗಳು ಇರಬಹುದು ಎಂದು ಅಂದಾಜಿಸಲಾಗಿದೆ. ಕೊರೊನಾ ನಿಯಮಗಳ ಪಾಲನೆಯೊಂದಿಗೆ ಹಲವು ವಿಷಯಗಳತ್ತ ಗಮನ ನೀಡುವುದು ಅವಶ್ಯಕವಾಗಿದೆ. ಹಾಟ್‌ಸ್ಪಾಟ್‌ಗಳಲ್ಲಿ ಎಚ್ಚರಿಕೆ ವಹಿಸಲೇಬೇಕಿದೆ. 5% ಗಿಂತ ಹೆಚ್ಚಿನ ಮಟ್ಟದಲ್ಲಿ ಪಾಸಿಟಿವಿಟಿ ದರ ಕಂಡುಬಂದರೆ ಮಿನಿ ಲಾಕ್‌ಡೌನ್ ಮಾಡುವ ಆಲೋಚನೆಯಿದೆ. ಈ ಸಮಯದಲ್ಲಿ ಹೆಚ್ಚಿನ ಮಟ್ಟದಲ್ಲಿ ಲಸಿಕೆ ನೀಡುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುವುದು," ಎಂದು ಭರವಸೆ ನೀಡಿದರು.

English summary
Third Wave "Inevitable, Could Hit India In 6 To 8 Weeks" says AIIMS Chief Dr. Randeep Guleria,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X