ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೃತೀಯ ರಂಗ ಕಾಂಗ್ರೆಸ್ ಬಿ-ಟೀಮ್ : ಮೋದಿ

|
Google Oneindia Kannada News

ಭುವನೇಶ್ವರ್, ಫೆ.11 : ಸಂದಿಗ್ಧ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸರ್ಕಾರವನ್ನು ಬಚಾವ್ ಮಾಡಲು ತೃತೀಯ ರಂಗ ಹುಟ್ಟಿಕೊಂಡಿದೆ. ತೃತೀಯ ರಂಗವೆಂಬುದು ಕಾಂಗ್ರೆಸ್ ನ ಬಿ-ಟೀಮ್ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಮಂಗಳವಾರ ಒಡಿಶಾ ರಾಜ್ಯದ ಬಾರಮುಂಡಾದಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ನರೇಂದ್ರ ಮೋದಿ, ತೃತೀಯ ರಂಗದ ವಿರುದ್ಧ ಕಿಡಿಕಾಡಿದರು. ತೃತೀಯ ರಂಗ ಕಾಂಗ್ರೆಸ್ ಅನ್ನು ಬಚಾವ್ ಮಾಡುವ ರಂಗ ಅದು ಕಾಂಗ್ರೆಸ್ ಬಿ-ಟೀಮ್ ಎಂದು ಟೀಕಿಸಿದರು.

Modi

ತೃತೀಯ ರಂಗದಲ್ಲಿ 11 ಪಕ್ಷಗಳಿವೆ ಅವುಗಳಲ್ಲಿ 9 ಪಕ್ಷಗಳು ಕಾಂಗ್ರೆಸ್ ಗೆ ಬೆಂಬಲ ನೀಡುತ್ತವೆ. ಆದರೆ, ಅವು ತೃತೀಯ ರಂಗದ ಮುಖವಾಡ ಹಾಕಿಕೊಂಡಿವೆ. ತೃತೀಯ ರಂಗ ಎಂಬುದು ಸಂದಿಗ್ಧ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಅನ್ನು ಬಚಾವ್ ಮಾಡಲು ರಚನೆಯಾಗಿದೆ ಎಂದು ದೂರಿದರು.

ಲೋಕಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹಮತ ದೊರೆಯದಿದ್ದರೆ. ತೃತೀಯ ರಂಗ ಆ ಪಕ್ಷಗಳ ಕೈ ಹಿಡಿಯಲಿದೆ. ತೃತೀಯ ರಂಗದ ಜೊತೆ ಕೈ ಜೋಡಿಸಿರುವ ಪಕ್ಷಗಳು ಮೊದಲು ಒಡಿಶಾ ರಾಜ್ಯಕ್ಕೆ ಬಂದು ಇಲ್ಲಿನ ಪರಿಸ್ಥಿತಿ ಗಮನಿಸಲಿ ಎಂದು ಮೋದಿ ಸವಾಲು ಹಾಕಿದರು.

ಗುಜರಾತ್ ಗೆ ಬರುತ್ತಿದ್ದಾರೆ : ಸಮಾವೇಶದಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ವಿರುದ್ಧ ವಾಗ್ದಾಳಿ ನಡೆಸಿದ ನರೇಂದ್ರ ಮೋದಿ, ಪಟ್ನಾಯಕ್ ಆಡಳಿತದಲ್ಲಿ ಒಡಿಶಾ ರಾಜ್ಯ ಅಭಿವೃದ್ಧಿಯಾಗಿಲ್ಲ. ಆದ್ದರಿಂದ ಒಡಿಶಾದ ಜನರು ಕೆಲಸ ಅರಸಿ ಗುಜರಾತ್‌ ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ಮೋದಿ ಆರೋಪಿಸಿದರು.

ಉದ್ಯೋಗ ಬಯಸುವ ಜನರಿಗೆ ಸ್ವಂತ ಊರಿನಲ್ಲೇ ಉದ್ಯೋಗ ದೊರೆಯುವಂತಾಗಬೇಕು. ಇಂಹತ ಯೋಜನೆಗಳನ್ನು ಕೈಗೊಳ್ಳುವ ಜವಾಬ್ದಾರಿ ರಾಜ್ಯದ ಮುಖ್ಯಮಂತ್ರಿ ಅವರದ್ದು, ಆದರೆ, ಒಡಿಶಾದಲ್ಲಿ ಪಟ್ನಾಯಕ್ ಅವರು ಯಾವುದೇ ಉದ್ಯೋಗ ಖಾತ್ರಿ ಯೋಜನೆಗಳನ್ನು ಕೈಗೊಂಡಿಲ್ಲ ಎಂದು ಮೋದಿ ದೂರಿದರು.

ಸಂಸತ್ ಶುದ್ಧ ಮಾಡಲಿದೆ ಚುನಾವಣೆ : 2014ರ ಚುನಾವಣೆಯಲ್ಲಿ ದೇಶದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬರುವುದು ಮಾತ್ರವಲ್ಲ. ಚುನಾವಣಾ ಫಲಿತಾಂಶದಿಂದ ಸಂಸತ್ ಭವನ ಶುದ್ಧವಾಗಬೇಕು. ಜನರು ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದು ಮೋದಿ ಜನರಿಗೆ ಕರೆ ನೀಡಿದರು.

English summary
PM candidate of Bharatiya Janata Party (BJP) Narendra Modi addressed mega rally in Barmunda of Odisha on Tuesday, Feb 11. In his speech Modi mocked at the Third Front calling it Congress B-Team. Nine of the eleven parties support Congress and wear the mask of the Third Front Modi hit out.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X